Skip to main content

ಡಬ್ಬಿ

ಇಂದ nimma.gelathi
ಬರೆದಿದ್ದುJuly 2, 2012
noಅನಿಸಿಕೆ

ನಾ ಹೊರಟಿದ್ದೆ ದಾರಿಯಲ್ಲಿ

ಕಂಡಿತು ಒಂದು ಡಬ್ಬಿ ಕಣ್ಣಂಚಿನಲ್ಲಿ 
ಅದು ಉಡುಗೊರೆಯ ಡಬ್ಬಿ ,ಕಾಣುತ್ತಿತ್ತು  ತುಂಬಾ ಸುಂದರವಾಗಿ ,
ಅದಕಾಗಿ ಎತ್ತಿಕೊಂಡೆ ಕೈಯಲ್ಲಿ,
ಮನ ಕೇಳಿತು  ಏನಿರಬಹುದು ಇದರಲ್ಲಿ?
ಬುದ್ಧಿ  ಹೇಳಿತು ಬೇರೆಯವರ ವಸ್ತು ನಿನಗೆ ಬೇಡ,ಬಿಸಾಕು ಅದೇ ಜಾಗದಲ್ಲಿ
ಮನ ಕೇಳಬೇಕಲ್ಲ,ಡಬ್ಬಿ ತೆಗೆದುಕೊಂಡು  ಹಾಕಿಕೊಂಡೆ bagನಲ್ಲಿ.
ಮನೆಗೆ ನಡೆದೇ ಭರದಲ್ಲಿ,
ಡಬ್ಬಿ ತೆಗೆದು ನೋಡುವ ಆತುರದಲ್ಲಿ,
ಎಡವಿ ಬಿದ್ದೆ ಕಲ್ಲಿಗೆ ತಾಗಿ, ಅಂಗಳದಲ್ಲಿ
ಬುದ್ಧಿ ನಕ್ಕಿತು ,ಹ ಹ ಹಾ ನಾನು ಹೇಳಿದ ಮಾತು ಕೇಳದೆ ,ಬಿದ್ದುಹೊದೆಯಲ್ಲ .
ಮನಸ್ಸು ಹೇಳಿತು ಚಿಂತೆಯಿಲ್ಲ,ಒಂದನ್ನು ಪಡೆಯಬೇಕಾದರೆ ಒಂದನ್ನು ಕಳೆದುಕೊಲ್ಲಬೇಕಲ್ಲ
ಕಾಲಿನ ಗಾಯಕ್ಕೆ ಔಷಧಿ ಪಡೆದು ,ಇನ್ನೂ ತಡಮಾಡಲಿಲ್ಲ ,
ಡಬ್ಬಿ ತೆರೆದು ನೋಡಿದೆ ,ಅದರಲ್ಲಿ ಏನು ಇಲ್ಲ !!
ಅದರಲ್ಲಿ ಏನೂ ಇಲ್ಲ .

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.