Skip to main content

ಮೈಕ್ರೋಸಾಫ್ಟ್ ನಿಂದ ವಿಂಡೋಸ್ ೮ ಟ್ಯಾಬ್ಲೆಟ್ ಬಿಡುಗಡೆ

ಬರೆದಿದ್ದುJune 19, 2012
2ಅನಿಸಿಕೆಗಳು

ಮೈಕ್ರೋಸಾಫ್ಟ್ ಈ ಹೆಸರು ಸಾಫ್ಟವೇರ್ ರಂಗದಲ್ಲಿ ಚಿರಪರಿಚಿತ. ಅದರ ವಿಂಡೋಸ್, ಆಫೀಸು ಕಂಪನಿಗಳಲ್ಲಿ ಮನೆಮನೆಯಲ್ಲಿ ಬಳಕೆ ಆಗುತ್ತಿದೆ. ಆದರೆ ಮೊಬೈಲು ಹಾಗೂ ಟ್ಯಾಬ್ಲೆಟ್ ರಂಗದಲ್ಲಿ ಅದು ಜನಪ್ರಿಯ ಆಗಿರಲಿಲ್ಲ. ವಿಂಡೋಸ್ ಮೊಬೈಲು ತಕ್ಕ ಮಟ್ಟಿಗೆ ಜನಪ್ರಿಯವಾದರೂ ಐಫೋನ್ ಬಿಡುಗಡೆಯೊಂದಿಗೆ ಅದರ ಜನಪ್ರಿಯತೆ ಕಡಿಮೆ ಆಯ್ತು. ಹೊಸತಾಗಿ ತಂದ ವಿಂಡೋಸ್ ಫೋನು ನಿದಾನವಾಗಿ ಜನಪ್ರಿಯವಾಗುತ್ತಿದೆ.

ಟ್ಯಾಬ್ಲೆಟ್ ರಂಗದಲ್ಲಿ ಎಪಲ್ ಐಪಾಡ್ ನದ್ದು ದೊಡ್ಡ ಶೇರ್ ಹಾಗೂ ಅಮೇಜಾನ್ ಕಡಿಮೆ ಹಣದಲ್ಲಿ ಕೊಡುತ್ತಿರುವ ಕೈಂಡಲ್ ಫೈರ್ ನದ್ದು. ಸ್ಯಾಮಸಂಗ್ ಗ್ಯಾಲಕ್ಸಿ ಸ್ವಲ್ಪ ಪ್ರಮಾಣದ ಮಾರುಕಟ್ಟೆ ಹೊಂದಿದೆ. ಆದರೆ ನೂರಾರು ಅಂಡ್ರಾಯಿಡ್ ಟ್ಯಾಬ್ಲೆಟ್ ಗಳು ಬಂದರೂ ಎಪಲ್ ನ ಐಪಾಡ್ ಗೆ ಕಾಂಪಿಟೇಶನ್ ಕೊಡಲು ಆಗದೇ ಸೋತಿವೆ. ಬ್ಲಾಕ್ ಬೆರ್ರಿ ಅವರ ಪ್ಲೇ ಬುಕ್ ಸಹಾ ಯಶಸ್ವಿಯಾಗಿಲ್ಲ.

ಈ ವರ್ಷಾಂತ್ಯದಲ್ಲಿ ಬಿಡುಗಡೆ ಆಗಬೇಕಿರುವ ವಿಂಡೋಸ್ ೮ ಜೊತೆಗೆ ತನ್ನದೇ ಆದ ಟ್ಯಾಬ್ಲೆಟ್ ಅನ್ನೂ ಸಹ ಮೈಕ್ರೋಸಾಫ್ಟ್ ಬಿಡುಗಡೆ ಮಾಡಲಿದೆ.

ಇದಕ್ಕೆ ಸರ್ಫೇಸ್ ಎಂಬ ಹೆಸರು. ಈ ಟ್ಯಾಬ್ಲೆಟ್ ಗಳು ಎಆರ್ ಎಂ ಹಾಗೂ ಇಂಟೆಲ್ ಚಿಪ್ ಅವತರಣಿಕೆಯಲ್ಲಿ ಬರಲಿದೆ. ಇದಲ್ಲದೇ ಡೆಲ್. ಎಚ್ ಪಿ, ಲಿನೋವೋ, ಏಸರ್ ಮೊದಲಾದ ಕಂಪನಿಗಳಿಂದಲೂ ಟ್ಯಾಬ್ಲೆಟ್ ಬರಲಿವೆ.

ಈ ಪ್ರಯತ್ನ ಯಶಸ್ವಿಯಾಗುವದೇ? ಏಪಲ್ ಐಪಾಡ್ ನ ಜೊತೆಗೆ ಯಶಸ್ವಿಯಾಗಿ ಸ್ಪರ್ಧಿಸುವದೇ? ಕಾಲವೇ ಇದಕ್ಕೆ ಉತ್ತರ ಹೇಳಲಿದೆ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

meghariya ಸೋಮ, 11/12/2012 - 18:29

ಯಾವಾಗ ಟ್ಯಾಬ್ಲೆಟ್ನಲ್ಲಿ ಮಲ್ಟಿಪಲ್ ವಿಂಡೋಸ್ ತೆರೆದು ಕಾರ್ಯನಿರ್ವಹಿಸಬಹುದೋ ಅಂದು ಟ್ಯಾಬ್ಲೆಟ್  ಲ್ಯಾಪ್ ಟಾಪ್ಗೆ ರಜೆ ಕೊಡಬಹುದು ಇಲ್ಲದಿದ್ದರೆ ಟ್ಯಾಬ್ಲೆಟ್ ಒಂದರ ಒಟ್ಟಿಗೆ ಇನ್ನೊಂದು ಸಾದನವಾದೀತು.

meghariya ಸೋಮ, 11/12/2012 - 18:29

ಯಾವಾಗ ಟ್ಯಾಬ್ಲೆಟ್ನಲ್ಲಿ ಮಲ್ಟಿಪಲ್ ವಿಂಡೋಸ್ ತೆರೆದು ಕಾರ್ಯನಿರ್ವಹಿಸಬಹುದೋ ಅಂದು ಟ್ಯಾಬ್ಲೆಟ್  ಲ್ಯಾಪ್ ಟಾಪ್ಗೆ ರಜೆ ಕೊಡಬಹುದು ಇಲ್ಲದಿದ್ದರೆ ಟ್ಯಾಬ್ಲೆಟ್ ಒಂದರ ಒಟ್ಟಿಗೆ ಇನ್ನೊಂದು ಸಾದನವಾದೀತು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.