Skip to main content

  ಸುವರ್ಣ  ನ್ಯೂಸ್  ಚಾನೆಲ್ ನಲ್ಲಿ  ಸತತವಾಗಿ  ಪ್ರಸಾರಗೋಂದ ಬಿಡದಿಯ  ಆಶ್ರಮದ  ಸ್ವಾಮಿ  ನಿತ್ಯಾನಂದ  ನಿಂದ ಅತ್ಯಾಚಾರಕ್ಕೆ  ಬಲಿಯಾದ,  ಒಬ್ಬ  ನೊಂದ  ಮಹಿಳೆಯ  ಕಥೆ  ಮನಮಿಡಿಯುವಂಥಾದ್ದು,  ಧರ್ಮಾಚರಣೆಯ  ಹೆಸರಲ್ಲಿ   ಹೆಣ್ಣುಮಕ್ಕಳನ್ನು  ಮರಳುಮಾಡಿ  , ತನ್ನ  ತೃಷೆಗಾಗಿ  ಉಪಯೋಗಿಸಿಕೊಳ್ಳುವ  ಇಂಥವರನ್ನು

  ಈ  ಸಮಾಜ  ಒಪ್ಪಿಕೊಳ್ಳುವುದಾದರೂಹೇಗೆ?  ಇವರಿಗೆ  ಶಿಕ್ಷೆ ಬೇಡವೆ  ?  ಮನುಷ್ಯ  ದೇವಮಾನವನಾಗಲು  ಸಾಧ್ಯವೇ ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಚಂದ್ರ ಧ, 06/13/2012 - 15:29

ದೇವಮಾನವನಾಗಲು  ಸಾಧ್ಯವೇ ?

e buddi janrige irbeku sir

ಮುನೀರ್ ಅಹ್ಮದ್ … ಗುರು, 06/14/2012 - 17:15

 

  ನಮಗೆಲ್ಲ  ಯಾರು  ದೇವರು  ಅಂದರೆ  ಯಾರು  ಹುಟ್ಟಿಲ್ಲವೋ  , ಯಾರು  ಸಾಯುವುದಿಲ್ಲವೋ, ಯಾರಿಗೆ  ರೂಪಇಲ್ಲವೋ,  ಯಾರಿಗೆ  ಹಸಿವು  ಇಲ್ಲವೋ,  ಯಾರಿಗೆ  ಯಾವುದೇಸಂಭಂದಗಳಿಲ್ಲವೋ,ಯಾರಿಗೆ  ನಿದ್ದೆ  ಇಲ್ಲವೋ,  ಆಯಾಸವಾಗುವುದಿಲ್ಲವೋ,  ಯಾರಿಗೆ  ನಿದ್ರೆ  ಇಲ್ಲವೋ, ಯಾರು  ಈಸೃಷ್ಟಿಯ  ಒಡೆಯನೋ,  ಯೆಲ್ಲಾರಿಗಿಂತ  ಶಕ್ತಿಶಾಲಿ,  ಶ್ರೇಷ್ಠ,  ಜ್ನಾನಿ,  ಮೋಡ  ಆಕಾಶ,  ಭೂಮಿ, ನಕ್ಷತ್ರೆ,  ಚಂದ್ರ  ಸೂರ್ಯ,  ಹುಟ್ಟುಸಾವಿನ  ಒಡೆಯನೋ  ಅವನೇ  ನಮ್ಮ  ನಿಮ್ಮ  ವಿಧಾತ

  ಆರಾಧ್ಯ,ಭಗವಂತ,  ಅಲ್ಲಹ್  .  ಇದನ್ನು  ಬಿಟ್ಟು  ಮನುಷ್ಯರಿಗೆ ದೇವರು  ಯೆಂದು  ಹೇಳಲಾದೀತೆ  ? ಸಾಧ್ಯವಿಲ್ಲ.   ಉತ್ತಾರಕೊಟ್ಟ  ನಿಮಗೆ  ಧನ್ಯವಾದಗಳು

 

ಪಿಸುಮಾತು ಶುಕ್ರ, 06/15/2012 - 10:16

ದೇವರು ಅನ್ನುವುದು ಒಂದು ಅವರವರ ನಂಬಿಕೆ ಅಷ್ಟೇ. ಅದಕ್ಕೆ ಯಾವುದೇ ಪುರಾವೆ ಇಲ್ಲ.

ದೇವರನ್ನು ಕಾಣಬೇಕೆ ?  ಈ  ಸೃಶ್ಥಿಯನ್ನೊಮ್ಮೆ  ನೋಡಿ,  ಇದನ್ನು  ಸೃಶ್ಥಿಸಿದವರು  ಯಾರು,?  ಒಣಗಿದ  ಬೀಜವನ್ನು  ನೀರಿನಿಂದ ತೇವಗೊಳಿಸಿ  ಚಿಗುರಿಸಿ,  ಸಸಿಯಾಗಿಸಿ,  ಮರವಾಗಿಸಿ  ,  ಫಲವನ್ನು  ನೀಡಿ  ಮನುಷ್ಯರು  , ಪ್ರಾಣಿಗಲು,  ಪಕ್ಷಿಗಳಿಗೆ  ಅಹಾರವೊದಗಿಸುವವರಾರು ? ಸೂರ್ಯ ಚಂದ್ರರನ್ನು ನಿಯಂತ್ರಣದಲ್ಲಿರಿಸಿಕೊಂಡವರಾರು  ?  ಇದು  ಮನುಷ್ಯರಿಂದ  ಸಾಧ್ಯವೇ ? ಹೇಳಿ 

ಈವೆಲ್ಲಾವನ್ನು  ಸೃಶ್ಥಿಸಿ  ತನ್ನ  ನಿಯಂತ್ರಣದಲ್ಲಿ    ಇರಿಸಿಕೊಂಡವನೇ  ವಿಧಾತ  ,  ದೇವೆರು,  ಪ್ರಭು,  ನಮ್ಮನಿಮ್ಮೆಲ್ಲಾರ   ಒಡೆಯ.

ಪಿಸುಮಾತು ಗುರು, 07/12/2012 - 17:57

ನೀವು ಹೇಳುತ್ತಿರುವುದು ನೂರಾರು ವರ್ಷದ ಹಿಂದಿನ ಮಾತು. ಅದನ್ನೇ ಈಗಲೂ ನಂಬುವುದು ಅವರವರ ವೈಯಕ್ತಿಕ ವಿಷಯ. ನೀವು ಹೇಳುವ ವಿಷಯಗಳು ಸೃಷ್ಟಿ ನಿಜ. ಆದರೆ ಅದು ದೇವರ ಸೃಷ್ಟಿ ಅಂತ ಹೇಳಲು ಸಾಧ್ಯವಿಲ್ಲ. ಸ್ವಾಭಾವಿಕ ಸೃಷ್ಟಿಯಾಗಿರಬಹುದು. ಇದನ್ನೆಲ್ಲಾ ದೇವರು ಸೃಷ್ಟಿಸಿದ ಅನ್ನವು ಕತೆಯನ್ನು ಸೃಷ್ಟಿಸಿದ್ದೇ ಮನುಷ್ಯ.

ಪಿಸುಮಾತು ಧ, 06/13/2012 - 15:36

ಮಾನವ ದೇವರಂತಹ ಗುಣಗಳನ್ನು ರೂಢಿಸಿಕೊಳ್ಳಬಹುದು. ಅದಕ್ಕೆ ಈ ಸ್ವಾಮೀಜಿಗಳೇ ಆಗಬೇಕೆಂದಿಲ್ಲ. ಇದಕ್ಕೆ ನಿತ್ಯಾನಂದ ಮಾತ್ರ ಹೊರತಲ್ಲ. ಅವನು ಕಾಮುಕನಾಗಿದ್ದರೆ, ಉಳಿದ ಎಷ್ಟೋ ಸ್ವಾಮೀಜಿಗಳು ಜಾತಿಕಾರಣ ಮಾಡುತ್ತಾ ದುಡ್ಡು ಮಾಡಿಕೊಂಡು ಸರ್ಕಾರವನ್ನೇ ಅಲ್ಲಾಡಿಸುತ್ತಾ ಮಜವಾಗಿದ್ದಾರೆ. 

ಮನುಷ್ಯ ದೇವರಾಗಲು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ ದೇವರು ಎಂಬುದೇ ಮಿಥ್ಯೆ. ದೇವರಂತಹಾ ಮನುಷ್ಯನಾಗಬಹುದು ಅಷ್ಟೇ. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿದಾಗ ಅದುವೇ ದೇವತಾ ಗುಣ. ಅದಕ್ಕಾಗಿ ಕಾವಿ, ಮಠ, ಅಕ್ಕ ಪಕ್ಕ ಸನ್ಯಾಸಿನಿಯರು ಏನೂ ಬೇಡ. ಈಗಿರುವ ಎಲ್ಲಾ ಮಠಾಧೀಶರೂ ಅಷ್ಟಿಷ್ಟು ಬೂಟಾಟಿಕೆಯವರೇ. ನಿಜವಾದ ಸನ್ಯಾಸಿಗಳು ಯಾರೂ ಇಲ್ಲ. 

ತ್ರಿನೇತ್ರ ಧ, 06/13/2012 - 17:30

ಸರಿಯಾಗೇ ಹೇಳಿದ್ದೀರಿ ಶ್ರೀಪತಿಯವರೇ...! ಈ ನಿತ್ಯಾನಂದನ ಆಶ್ರಮದಲ್ಲಿ ತೀರ್ಥದ ಹೆಸರಿನಲ್ಲಿ ಮಾಧಕ ಧ್ರವ್ಯಗಳು ಇತ್ಯಾದಿಗಳನ್ನು ಒಳಗೆ ಸೇರಿಸಿ ಮೈಮೇಲೆ ಪ್ರಜ್ನೆಯಿದ್ದರೂ ಇಲ್ಲದವರಂತೆ ವರ್ತಿಸುತ್ತಾ ಹುಚ್ಚು ಬಂದವರಂತೆ ಎಲ್ಲರೆದುರೂ ಕುಣಿದು ಕುಪ್ಪಳಿಸಿ ಬಿದ್ದು ಒದ್ದಾಡುವ ಮಹಿಳೆಯರಿಗೆ ಯಾರು ಏನೇ ಮಾಡಿದರೂ ಅದು ಲೆಕ್ಕಕ್ಕೆ ಬರುವುದಿಲ್ಲ ಎನ್ನಿಸುತ್ತದೆ. ಅದಕ್ಕೆ ಹೊರತಾದ ಕೇವಲ ಒಬ್ಬರೋ ಇಬ್ಬರೋ ತಮಗೆ ಅನ್ಯಾಯ ಆಗಿದೆ ಸರಿಪಡಿಸಿ ಎಂದು ಜನರ ಮುಂದೆ ಈಗ ಗೋಗರೆಯುತ್ತಾರೆ. ಇದೆಲ್ಲಾ ಆಗುವ ಮುನ್ನ ವಿವೇಚನೆ ಇರಬೇಕಾದದ್ದು ಅಲ್ಪ ಸ್ವಲ್ಪ ಬುದ್ಧಿ ತಿಳಿದ ಜನಸಾಮಾನ್ಯರ ಕರ್ತವ್ಯ. ಇಂತಹಾ ಹತ್ತು ಹಲವಾರು ಹೆಸರಾಂತ ಸ್ವಾಮೀಜಿಗಳು ಆಶ್ರಮ, ಧರ್ಮ ಇತ್ಯಾದಿಗಳ ಹೆಸರಿನಲ್ಲಿ ಸಾಮಾನ್ಯ ಜನರನ್ನು ಸುಲಿದಿದ್ದಾರೆ ಆರ್ಥಿಕವಾಗಿ, ಮಾನಸಿಕವಾಗಿ ದೈಹಿಕವಾಗಿ ಎಲ್ಲಾ ರೀತಿಯಿಂದಲೂ ಸುಲಿಯುತ್ತಿರುವುದು ತಿಳಿದೂ ತಿಳಿಯದವರಂತೆ ಮತ್ತೆ ಮತ್ತೆ ಅದೇ ಪ್ರಮಾದ ಎಸಗುವವರಿಗೆ ಅದ್ಯಾವಾಗ ಬುದ್ಧಿ ಬರುತ್ತೋ ನಾನಂತೂ ಕಾಣೆ....!   

  • 1118 views