Skip to main content

   ಅಂತರ್ಜಾತಿಯ  ವಿವಾಹ  ಪ್ರೊತ್ಸಾಹ  ಯೊಗ್ಯವೇ ?  ಇದರಲ್ಲಿ  ಧಾರ್ಮಿಕ   ನಂಬಿಕೆಗಳಿಗೆ ಮತ್ತು  ಆಚರಣೆಗಳಿಗೆ  ಅಡಚಣೆಆಗುವುದಿಲ್ಲವೇರ್?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ತ್ರಿನೇತ್ರ ಸೋಮ, 06/04/2012 - 18:34

ಈ ವಿಷಯದ ಬಗ್ಗೆ ಒಂದೇ ಮಾತಿನಲ್ಲಿ ಅಭಿಪ್ರಾಯ ತಿಳಿಸುವುದು ಬಹಳ ಕಷ್ಟಸಾಧ್ಯ. ನನ್ನ ಪ್ರಕಾರ ಅಂತರ್ಜಾತೀಯ ವಿವಾಹಗಳಿಂದ ಅನುಕೂಲಕ್ಕಿಂತಾ ಅನಾನುಕೂಲಗಳೇ ಹೆಚ್ಚು ಎನ್ನಿಸುತ್ತದೆ. ಬಹಳ ಹಿಂದೆ ಶ್ರೀ ಜಗಜ್ಜ್ಯೋತಿ ಬಸವೇಶ್ವರರು ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ... ಎಂದು ವಚನ ರಚಿಸಿ ಹಾಡುತ್ತಾ ಸರ್ವಧರ್ಮ ಸಮನ್ಯವಯ ತತ್ವವನ್ನು ಭೋಧಿಸುತ್ತಾ.. ಎಲ್ಲಾ ಧರ್ಮ ಮತ್ತು ಜಾತಿಗಳನ್ನು ನಿರ್ಮೂಲನ ಮಾಡಿ ಒಂದೇ ಮಾನವ ಧರ್ಮ ಎಂದು ಪ್ರತಿಪಾಧಿಸುವತ್ತ ಮುನ್ನಡಿಯಿಟ್ಟು ಕೊನೆಗೆ ಮತ್ತೊಂದು ಜಾತಿ ಶೃಷ್ಠಿಸುವಲ್ಲಿ ಅಂತ್ಯಗೊಂಡರು.


ಇನ್ನು ಪರಸ್ಪರರ ಧರ್ಮಗಳನ್ನು ಒಪ್ಪಿ ಇಬ್ಬರಿಗೂ ಪರಸ್ಪರರ ನಂಬಿಕೆ ರೀತಿ ನೀತಿ ನಿಯಮಗಳನ್ನು ಪಾಲಿಸುವಲ್ಲಿ ಪರಸ್ಪರ ಸಹಕಾರ ನೀಡುತ್ತೇವೆ ಎಂದು ಅಂತರ್ಜಾತೀಯ ಅಥವಾ ಧರ್ಮೀಯ ವಿವಾಹವಾಗಿರುವವರು ಮುಂದೊಮ್ಮೆ ಯಾಕಾದರೂ ಈ ಅಂತರ್ಜಾತೀ ವಿವಾಹಕ್ಕೆ ಸಮ್ಮತಿಸಿದೆವೋ ಎಂದು ತಮ್ಮನ್ನು ತಾವೇ ಶಪಿಸುತ್ತಾ ಪರಿತಪಿಸುವುದರಲ್ಲಿ ಸಂದೇಹವೇ ಇಲ್ಲ ಎನ್ನಿಸುತ್ತದೆ. ಅಂತಹಾ ಇಬ್ಬರ ಮಿಲನದಿಂದ ಹುಟ್ಟಿದ ಮಗುವಿನ ಹೆಸರು ಇಡುವುದರಿಂದಾ ಹಿಡಿದು ಮುಂದೆ ಶಾಲಾ ಕಾಲೇಜುಗಳಲ್ಲಿ ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಾಕು ಸಾಕಾಗಿ ಎಳೇವಯಸ್ಸಿನ  ಮುಗ್ಧ ಮನಸ್ಸಿನ ಮಗುವಿಗೆ ಅಮ್ಮ ಸರಿಯೋ ಇಲ್ಲಾ ಅಪ್ಪಾ ಸರಿಯೋ... ಅವರ ಧರ್ಮ ಸರಿಯೋ ಇವರ ಧರ್ಮ ಸರಿಯೋ ಎಂದು ತಿಳಿಯಲಾಗದೆ ಅವರು ಹೇಳಿದಂತೆ ಪಾಲಿಸಿದರೂ ಮುಂದೆ ಬೆಳೆದು ದೊಡ್ಡವನಾ(ಳಾ)ಗಿ ಯೋಚಿಸುವ ಬುದ್ಧಿ ಬಂದಾಗ ಯಾವುದು ಸರಿ ತಪ್ಪು ನಿರ್ಧರಿಸಲಾಗದೇ ಮನಸ್ಸಿನಲ್ಲಿ ನಿರ್ಧರಿಸಲಾಗದ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಯಾರು ಹೆಚ್ಚು ಪ್ರಭಾವಶಾಲಿ ಮತ್ತು ಬಲವಂತರಾಗಿರುತ್ತಾರೋ ಅವರ ಧರ್ಮ ಅಥವಾ ಜಾತಿಯ ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಮಗೆ ಯಾವ ಜಾತಿಯೂ ಇಲ್ಲ ಧರ್ಮವೂ ಇಲ್ಲಾ ಎಂದಾಗಲೀ ಅಥವಾ ಎರಡೂ ಜಾತಿ/ಧರ್ಮಗಳ ಸಮ್ಮಿಲನದಿಂದ ಹುಟ್ಟಿದ ಜಾತಿ/ಧರ್ಮ ಎಂದು ಮೂರನೇ ಧರ್ಮವನ್ನು ಪಾಲಿಸುವುದು ಸಥ್ಯಕ್ಕೆ ದೂರಾದ ಮಾತು.


ಜಾತಿ, ಧರ್ಮ ಎನ್ನುತ್ತಾ ಅದರ ಸಮರ್ಥಕರು ದಿನದಿಂದ ದಿನಕ್ಕೆ ತಮ್ಮ ತಮ್ಮ ಜಾತಿಗಳ ಸಂಘ ಸಂಸ್ಥೆಗಳನ್ನು ಕಟ್ಟಿ ಅದಕ್ಕೊಬ್ಬರು ಧರ್ಮಗುರುಗಳನ್ನು ನೇಮಿಸಿ ತಮ್ಮ ತಮ್ಮ ಜಾತಿ ಧರ್ಮಗಳ ಅಸ್ಥಿಥ್ವ ಮತ್ತು ಉಳಿಕೆಗಾಗಿ ಹೊಡೆದಾಡುತ್ತಾ ರಾಜಕೀಯ ಮಾಡುತ್ತಿರುವ ಇಂದಿನ ಕಾಲದಲ್ಲಿ ಈ ಅಂತರ್ಜಾತೀ ವಿವಾಹ ಖಂಡಿತಾ ಜಾತಿಗಳನ್ನು ಒಂದು ಮಾಡುವುದರಲ್ಲಾಗಲೀ ಅಥವಾ ಜಾತಿ ಪದ್ಧತಿ ನಿರ್ಮೂಲನ ಮಾಡುವುದಕ್ಕಾಗಲೀ ಸಹಕಾರಿಯಾಗುವುದಿಲ್ಲ ಬದಲಾಗಿ ಮತ್ತೊಂದು ಗೊಂದಲ ಪರಿಸ್ಥಿಥಿಗೆ ಕಾರಣ ವಾಗುತ್ತದೆ ಎಂದು ನನ್ನ ಅನಿಸಿಕೆಯಾಗಿರುತ್ತದೆ.   

ಮುನೀರ್ ಅಹ್ಮದ್ … ಸೋಮ, 06/04/2012 - 19:17

  ತ್ರಿನೆತ್ರರವರೆ  ನಿಮ್ಮದು  ಸರಿಯಾದ  ಉತ್ತರ ಆಗಿದೆ.  ಅಂತರ್ಜಾತಿಯ  ವಿವಾಹಗಳು   ಪರಸ್ಪರ  ಪ್ರೀತಿಸುವವರು ಒಂದಾಗುವುದರಲ್ಲಿ  ತಪ್ಪೇನಿದೆ ಯೆಂದು  ಕೇಳುವವರು  ಇದ್ದಾರೆ, ಆದರೇ  ಇದರಲ್ಲಿ  ಅನಾಹುತಗಳೆ  ಹೆಚ್ಚಾಗಿವೆ  ,  ಅನುಭವಿಸುವವಳು  ಹೆಣ್ಣು ಮಾತ್ರ,ಹಾಗು  ಸ್ವಧರ್ಮಕ್ಕೆ  ಅವಮಾನವಾಗುವುದನ್ನು

  ಯಾರು  ಸಹಿಸುವುದಿಲ್ಲ,  ಮೊದಲು  ಪ್ರೀತಿಯ  ಅಮಲಿನಲ್ಲಿ  ಸಹಿಸಬಹುದೇ  ವಿನಹ ,  ಸತ್ಯದ  ಅರಿವು  ಆದಾಗ  ಯಾರು  ಸಹಿಸುವುದಿಲ್ಲ,  ಸ್ರೀಮಂತಿಕೆಯಲ್ಲಿ

  ಅಲ್ಲಿ  ಸಿಗುವ  ಭೋಗಕ್ಕೆ  ಬಲಿಯಾದವರಲ್ಲಿ  ಇದು  ನಿಲ್ಲಬಹುದು  ಅಷ್ಟೆ.  

surya prakash ಸೋಮ, 07/02/2012 - 23:34

 ತ್ರಿನೇತ್ರರವರೇ ನಿಮ್ಮ ಅನಿಸಿಕೆಯನ್ನು ಬದಲಾಯಿಸಿಕೊಳ್ಳಿ ಎಂದು ಹೇಳಲು ನನಗೆ ಹಕ್ಕಿಲ್ಲ..! ಆದರೆ ನಿಮ್ಮ ಅನಿಸಿಕೆಯನ್ನು ಒಮ್ಮೆ ಪರಾಮರ್ಷಿಸಿಕೊಳ್ಳಿ ಎಂದು ಮಾತ್ರ ಹೇಳಬಲ್ಲೆ.

   ಜಾತಿ ಎನ್ನುವುದು ಮನುಷ್ಯನಿಂದಲೇ ಹುಟ್ಟಿದ್ದು. ಅದು ನಾಶವಾಗಬೇಕಿರುವುದು ಕೂಡ ಮನುಷ್ಯನಿಂದಲೇ.. ನಿಮಗೆ ನೆನಪಿರಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಕೂಡ ಅಂತರ್ಜಾತಿ ವಿವಾಹವನ್ನೇ ಜಾತಿ ಎಂಬ ಮಾರಿಯ ನಾಶಕ್ಕೆ ಮದ್ದು ಎಂದು ನಂಬಿದ್ದರು.. ಹಾಗು ಪ್ರತಿಪಾದಿಸಿದ್ದರು ಕೂಡ. ಇನ್ನು ಪ್ರಖ್ಯಾತ ಸಮಾಜವಾದಿ ರಾಮ್ ಮನೋಹರ್ ಲೋಹಿಯಅವರಂತೂ ಜಾತಿ ಆಧಾರದ ಮೇಲೆ ಮೀಸಲಾತಿ ನೀಡುವುದಕ್ಕಿಂತ ಅಂತರ್ಜಾತಿ ವಿವಹವಾದವರ ಮಕ್ಕಲಳಿಗೆ ಮೀಸಲಾತಿ ನೀಡಬೇಕು ಎಂದಿದ್ದರು..ಇನ್ನು ನಮ್ಮ ದಲಿತ ಕವಿ ಸಿದ್ದಲಿಂಗಯ್ಯನವರು ಅಂತರ್ಜಾತಿ ವಿವಾಹಿತರಿಗೆ ಮೀಸಲಾತಿ ನೀಡಬೇಕೆಂಬುದನ್ನು ಪ್ರತಿಪಾದಿಸುತ್ತಾರೆ.

       ಅಷ್ಟಕ್ಕೂ ಅಂತರ್ಜಾತಿ ವಿವಾಹಗಳಿಂದ ಮಾತ್ರ ಜಾತಿ ಎಂಬ ಎರಡಕ್ಷರದ ಮಾನಸಿಕ ರೋಗವನ್ನು ಗುಣಪಡಿಸಲು ಸಾಧ್ಯ. ನಿಜವಾದ ಜಾತ್ಯಾತೀತರೆಂದರೆ ಅಂತರ್ಜಾತಿ ವಿವಾಹಿತರು ತಾನೆ!!??  ಜಾತಿ ಎಂಬ ಸಂಕೀರ್ಣ ವ್ಯವಸ್ತೆಯನ್ನು ಹಾಳುಮಾಡಲು ಸರಳ ಅಂತರ್ಜಾತಿ ವಿವಹಗಳಿಂದ ಮಾತ್ರ ಸಾಧ್ಯ..

     ಇನ್ನು ಅಂತರ್ಜಾತಿ ವಿವಾಹಿತರ ಮಕ್ಕಳ ವಿಷಯಕ್ಕೆ ಬರೋಣ.. ಶಾಲಾ ಮಕ್ಕಳ ಪ್ರಾಂಜಲ, ನಿಷ್ಕಲ್ಮಶ ಮನಸ್ಸಿನಲ್ಲಿ ಜಾತಿ ಎಂಬ ವಿಷಬೀಜ ತಾನಾಗೆ ಹುಟ್ಟಲು ಅದು ಹೇಗೆ ಸಾಧ್ಯ? ಜನ್ಮತಃ ಅಂತೂ ಜಾತಿ ಎಂಬುದು ಮನಸ್ಸಿನಲ್ಲಿ ಹುಟ್ಟಿರಲಿಕ್ಕೆ ಸಾಧ್ಯವೆ ಇಲ್ಲ ಅಲ್ಲವೇ?? ಹಾಗಾದರೆ ಜಾತಿ ಎಂಬ ಪದವನ್ನು ಮಕ್ಕಳ ಮನಸ್ಸಿನಲ್ಲಿ ಮೊದಲು ಬಿತ್ತುವವರು ಯಾರು? ಸ್ವತಃ ಪೋಷಕರೇ ಅಲ್ಲವೆ..???

      ಹಾಗದರೆ ಜಾತಿ ಎಂಬ typical evil  concentrate ಆಗಿರೋದು ಎಲ್ಲಿ.. ಮತ್ತೆ ನಮ್ಮ ನಿಮ್ಮಂತಹ ಪ್ರಬುದ್ದ(ಸ್ವಘೋಷಿತ) ಮನಸ್ಸುಗಳಲ್ಲಿ.. ಹಾಗಾದ್ರೆ ಸರಿಯಾಗಬೇಕಿರುವವರು ಯಾರು..?? ಮತ್ತದೇ ನಾವು..!?? ಹಳಬರನ್ನು ಬಿಡಿ... ನಾವಾದರು ಜಾತಿ ಎಂಬ ವಿಷವರ್ತುಲದಿಂದ ಹೊರಬಂದು ಬದುಕಲು ಸಾಧ್ಯವಿಲ್ಲವೇ?? ಏಕಿಲ್ಲ??? ಖಂಡಿತಾ ಸಾಧ್ಯವಿದೆ. ಮನಸ್ಸು ಮಾಡಬೇಕಷ್ಟೆ..!!??

ತ್ರಿನೇತ್ರ ಮಂಗಳ, 07/03/2012 - 10:36

ಮಾನ್ಯ ಸೂರ್ಯ ಪ್ರಕಾಶ್ ಅವರೇ,


ಅವರವರ ಭಾವಕ್ಕೆ ಅವರವರ ಬಕುತಿಗೆ.... ಎಂಬಂತೆ ಈ  ಲೇಖನದಲ್ಲಿ ಬರೆದಿರುವುದು ಕೇವಲ ನನ್ನ ಅಭಿಪ್ರಾಯವಾಗಿದೆ ಅಷ್ಟೇ... ಅಂದ ಮಾತ್ರಕ್ಕೆ ಎಲ್ಲರೂ ಅದನ್ನು ಒಪ್ಪಲೇಬೇಕು ಅದೇ ಸರಿ ಎಂಬ ಮೊಂಡು ವಾದಕ್ಕಿಳಿಯುವುದು ನನ್ನ ಉದ್ದೇಶವಲ್ಲ. ಈ ವಿಚಾರಗಳಲ್ಲಿ ಹೆಚ್ಚು ತಿಳಿದು ವಿವರಾತ್ಮಕ ಸಂಶೋಧನೆ ಮಾಡಿ ತಮ್ಮ ವಾದವನ್ನು ಎತ್ತಿಹಿಡಿದು ಪ್ರತಿಪಾದಿಸುವ ಗುಂಪಿಗೂ ಸೇರಿದವನಲ್ಲ. ನಾನೊಬ್ಬ ಸಾಮಾನ್ಯ ಜ್ನಾನವುಳ್ಳ ಅತೀ ಸಾಮಾನ್ಯ ಪ್ರಜೆಯಾಗಿದ್ದು ನನ್ನ ಸುತ್ತ ಮುತ್ತಲ ಪರಿಸರದಲ್ಲಿ ಅಕ್ಕಪಕ್ಕದವರ, ಮಿತ್ರರ, ಸಂಭಂಧಿಗಳ ಮನೆಗಳಲ್ಲಿ ಹಿಂದೆ ನಡೆದಿರುವ ಇಂದಿಗೂ ನಡೆಯುತ್ತಿರುವ  ಕೆಲವು ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವೆ. ಹಾಗೆಂದು ಹೇಳಿ ಶ್ರೀ ಮುನೀರ್ ಅಹ್ಮದ್ ಅವರ ಸಹಮತಿಯನ್ನೂ ಅಲ್ಲಗೆಳೆಯಲಾಗುವುದಿಲ್ಲ ಅಥವಾ ತಮ್ಮ ಹಾಗೂ ಇತರರ ಅಭಿಪ್ರಾಯಗಳನ್ನೂ ತಪ್ಪೆಂದು ಪರಿಗಣಿಸಲಾಗುವುದಿಲ್ಲ.


ತಾವೂ ತಿಳಿಸಿರುವಂತೆ ಅಂಬೇಡ್ಕರ್, ರಾ.ಮ.ಲೋಹಿಯಾ ರಂತಹಾ ಮಹಾನ್ ಸಮಾಜ ಸುಧಾರಕ ವ್ಯಕ್ತಿಗಳೂ ಕೂಡಾ ಅಂತರ್ಜಾತೀಯ ವಿವಾಹವೇ ಜಾತಿ ಪದ್ಧತಿ ನಿರ್ಮೂಲನೆ ಮಾಡಲು ಒಂದು ಅಸ್ತ್ರ ಎಂದು ನಂಬಿದ್ದರು ನಿಜ. ಆದರೆ ಪ್ರತಿಯೊಬ್ಬ ಪ್ರಜೆಗೂ ಅವರದೇ ಆದ ವ್ಯಕ್ತಿತ್ವವಿದ್ದು ಎಲ್ಲವೂ ಅವರವರ ನಂಬಿಕೆ ಹಾಗೂ ಜೀವನ ಶೈಲಿಯನ್ನು ಆಧರಿಸಿದೆ. ಆದ್ದರಿಂದ ಮುಖ್ಯವಾಗಿ ಈ ಜಾತೀಯತೆ ಯನ್ನು ಹಂತ ಹಂತವಾಗಿ ನಿರ್ಮೂಲನ ಮಾಡಬೇಕಾದರೆ ಸರಕಾರದಿಂದ ಒಂದು ಕಟ್ಟಾಜ್ನೆ ಹೊರಡಿಸಿ ಅವುಗಳನ್ನು ಅಕ್ಷರಷಃ ಪಾಲನೆಗೆ ತರಬೇಕು. 


೧) ಇನ್ನು ಮುಂದೆ ಯಾವುದೇ ಶಾಲೆ ಕಾಲೇಜುಗಳಲ್ಲಿ 'ಜಾತಿ-ಉಪ ಜಾತಿ- ಪಂಗಡ' ಇತ್ಯಾದಿ ಕಲಮ್ ಗಳನ್ನು ಅಳಿಸಿಹಾಕಬೇಕು (ಈಗಾಗಲೇ ಆ ಕಾನೂನು ಇದೆ ಎಂದು ತಿಳಿದಿರುವೆ); 


೨) ಸೆನ್ಸನ್ ಮಾಡುವಾಗಲೂ ಆ ಜಾತಿ ಪಂಗಡಗಳ ಬಗ್ಗೆ ಮಾಹಿತಿಗಳ ಬಗ್ಗೆ ಕಲಮ್ ಇರಲೇಬಾರದು (ಆಧಾರ್ ಗಾಗಿ ಮಾಹಿತಿ ಕಲೆಹಾಕುವಾಗ ಈ ನಿಟ್ಟಿನಲ್ಲಿ ಏನೆಲ್ಲಾ ಆವಾಂತರ ಆಯಿತು ಎಂಬುದನ್ನು ನೆನೆಸಿಕೊಳ್ಳಿ);


೩) ಯಾವುದೇ ಜನರ ಬಗ್ಗೆ ವಿವರ ಸಂಗ್ರಹಿಸುವಾಗ ಅವರ  ವಾರ್ಷಿಕ ಆಧಾಯವನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಆವರ ಆರ್ಥಿಕ ಅಭಿವೃದ್ಧಿ ಮತ್ತು ಉನ್ನತಿಗಾಗಿ ಅನ್ವಯಿಸುವಂತೆ ಮೀಸಲಾತಿ ಪದ್ಧತಿಯನ್ನು ಪರಿಸ್ಕೃತಗೊಳಿಸಿ ಹಂತ ಹಂತವಾಗಿ ಜಾರಿಗೆ ತರಬೇಕು;


೪) ಈಗಾಗಲೇ ಮೀಸಲಾತಿ ಸೌಲಭ್ಯಗಳನ್ನು ಪಡೆಯುತ್ತಿರುವ ಪರಿಶಿಷ್ಟ ಜನ ಜಾತಿ ಮತ್ತು ಪಂಗಡಗಳ ಜನರಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸ್ವಾತಂತ್ರ ಪೂರ್ವ ದಿನಗಳಿಗೆ ಹೋಲಿಸಿ ಇಂದಿನ ದಿನಗಳಲ್ಲಿ ಕಂಡಿರುವ ಅಭಿವೃಧ್ಧಿಯ ಅಂಕಿ ಅಂಶಗಳ ಆಧಾರದ ಮೇಲೆ ಅದನ್ನೂ ಕೂಡಾ ಪರಿಷ್ಕರಿಸಿ ಜಾರಿಗೆ ತರಬೇಕು;


೫) ತಾವು ತಿಳಿಸಿರುವಂತೆ ಅಂತರ್ಜಾತೀ ವಿವಾಹ ಮಾಡಿಕೊಳ್ಳುವವರಿಗೆ ಪ್ರೋತ್ಸಾಹ ನೀಡುವುದಷ್ಟೇ ಅಲ್ಲದೇ ಅವರ ಮಕ್ಕಳಿಗೆ ಶಾಲೆ ಕಾಲೇಜುಗಳಲ್ಲಿ ಖಡ್ಡಾಯವಾಗಿ ಸೀಟು ಲಭಿಸುಬವಂತೆ ನಿಯಮ ಮಾಡಬೇಕು;


೬) ಆರೀತಿ ಮದುವೆ ಮಾಡಿಕೊಂಡು ಯಾವುದೇ ತಂಟೆ ತಕರಾರುಗಳಿಲ್ಲದೇ ಕನಿಷ್ಟ ಪಕ್ಷ ಹತ್ತು ವರ್ಷ ಜೀವನ ನಡೆಸಿದಂತಹವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡಬೇಕು;


೭) ಜಾತಿ ಮತಗಳ ಹೆಸರಿನಲ್ಲಿ ಹುಟ್ಟು ಹಾಕುತ್ತಿರುವ ಮಠ ಮತ್ತು ಸಂಘ ಸಂಸ್ಥೆಗಳಿಗೆ ಸರಕಾರ ಯಾವುದೇ ರೀತಿಯ ಪ್ರೋತ್ಸಾಹ ನೀಡಬಾರದು, ಬದಲಾಗಿ ಜಾತ್ಯಾತೀತ ನಿಳಲುವುಳ್ಳ ಸಂಘ ಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.


ಇವಷ್ಟೇ ಅಲ್ಲದೇ ಸಾಮಾಜಿಕ ಹಿತಾಸಕ್ತಿಗಾಗಿ ಶ್ರಮಿಸುತ್ತಿರುವ ಕೆಲವು ಪ್ರಮುಖ ಸಂಘ ಸಂಸ್ಥೆಗಳ ವಿಚಾರಗಳನ್ನೂ ಗಣನೆಗೆ ತೆಗೆದುಕೊಂಡು ಇನ್ನೂ ಹೆಚ್ಚು ಹೆಚ್ಚು ಪ್ರೋತ್ಸಾಹಕಕಾರೀ ನಿಲುವು ನಿಯಮಗಳನ್ನು ಸರಕಾರ ಜಾರಿಗೆ ತಂದಲ್ಲಿ ಅದು ಜಾತಿ ಪದ್ಧತಿಯ ನಿರ್ಮೂಲನೆಯತ್ತ ಒಂದು ಮಹತ್ವದ ಹೆಜ್ಜೆ ಆಗಬಹುದು ಎಂದೆನಿಸುತ್ತದೆ.  

ಪಿಸುಮಾತು ಮಂಗಳ, 07/03/2012 - 15:31


ನಿಮ್ಮ ಈ ಹೇಳಿಕೆಗಳು ಸರಿಯಾಗಿವೆ. ಜಾತಿಯನ್ನು ಹೋಗಲಾಡಿಸಲು ಕಾನೂನು ರೀತ್ಯಾ ಕ್ರಮ ಕೈಗೊಳ್ಳದಿರುವುದೇ ಜಾತಿಯ ವಿಷ ಬೀಜ ಇಂದು ದೊಡ್ಡ ಮರವಾಗಿ ಬೆಳೆದಿರುವುದು. ಸರ್ಕಾರದ ಪ್ರತಿಯೊಂದು ಕೆಲಸಕ್ಕೂ ಜಾತಿಯೇ ಮಾನದಂಡವಾಗಿದೆ. ಇದೆಲ್ಲಾ ತೊಲಗಿ ಕೇವಲ ಬಡತನದ ಆಧಾರದಲ್ಲಿ ಸರ್ಕಾರಿ ಸವಲತ್ತು ಸಿಗುವಂತಾಗಬೇಕು.

ತ್ರಿನೇತ್ರ ಧ, 07/04/2012 - 11:20

ಎಲ್ಲೆಲ್ಲೂ ಜಾತಿ ಜಾತಿ ಜಾತಿ ಎಂದು ಹೇಳುತ್ತಾ ಜಾತಿ ಮತ ಗಳನ್ನೇ ಆಧಾರವಾಗಿಟ್ಟುಕೊಂಡು ರಾಜಕೀಯ ನಡೆಸುತ್ತಿರುವ ನಮ್ಮ ಸರ್ಕಾರಗಳು (ರಾಜ್ಯ ಅಥವಾ ಕೇಂದ್ರ) ಒಂದು ರೀತಿ ದೊಂಬರಾಟ ಆಡುವ ಸರ್ಕಸ್ ಕೇಂದ್ರಗಳಾಗಿವೆ ನಾಟಕ ಕಂಪನಿಗಳಾಗಿವೆ. ಇನ್ನು ನಮ್ಮ ರಾಜ್ಯದ ಪರಿಸ್ಥಿತಿಯನ್ನಂತೂ ಕೇಳಲೇಬೇಡಿ, ದಿನ ಬೆಳಗಾದರೆ ನಾಯಕತ್ವ ಬದಲಾವಣೆ ಮಾಡಬೇಕು.. ನನಗೆ ಮತ್ತೆ ಸೀಟು ಬೇಕು ಎಂದು ಒಬ್ಬ ಮಾಜಿ ಮಂತ್ರಿ ಹೇಳಿದರೆ ಮತ್ತೊಬ್ಬ ನಾನೇನು ಕಡಿಮೆಯಿಲ್ಲ ಎನ್ನುತ್ತಾ ಅವರವರ ಜಾತಿಯವರನ್ನು ಗುಂಪುಕಟ್ಟಿಕೊಂಡು ನಮ್ಮ ಜನ ಶೇಕಡಾ .... ಇಷ್ಟು ಇದ್ದು ನಮ್ಮವರ ಬೆಂಬಲ ಕಳೆದುಕೊಂಡರೆ ಪಕ್ಷವೇ ಉಳಿಯುವುದಿಲ್ಲಾ ಎಂದೆಲ್ಲಾ ಬಹಿರಂಗವಾಗಿ ಒದರುತ್ತಾ ಮಾತೆತ್ತಿದರೆ ದೆಹಲಿಗೆ ದೌಡಾಯಿಸಿ ಪಕ್ಷಗಳ ಮೇರು ನಾಯಕರಿಗೆ ಮನವರಿಕೆ ಮಾಡಿಕೊಡಲು ಸರ್ಕಸ್ ಮಾಡುತ್ತಿದ್ದಾರೆ.


ದೆಹಲಿಯ ವಿವಿಧ ಪಕ್ಷಗಳ ನಾಯಕರೂ ಕೂಡಾ ಇಂತಹಾ ಜಾತಿಯವರನ್ನು ಕಳೆದುಕೊಳ್ಳಬಾರದು... ಅಂತಹಾ ಜಾತಿಯ ಜನರ ವಿಶ್ವಾಸ ಗಳಿಸಲೂ ಬೇಕು 'ಹಾವೂ ಸಾಯಬಾರದು ಕೋಲೂ ಮುರಿಯಬಾರದು' ಎನ್ನುವ ರೀತಿಯಲ್ಲಿ ಅದಕ್ಕೆ ತಕ್ಕಂತೆಯೇ ಉಲ್ಬಣಿಸಿರುವ ಪ್ರಸ್ತುತ ಸಮಸ್ಯೆಗೆ ರಾಜಕೀಯ ಪರಿಹಾರದ ಸೂತ್ರಗಳನ್ನು ರಚಿಸುತ್ತಿದ್ದಾರೆ...! ಅಂದಮೇಲೆ ಈ ಜಾತಿಯೆಂಬ ಪಿಡುಗು ರಕ್ತಬೀಜಾಸುರನಂತೆ ನಿರ್ಮೂಲನೆ ಮಾಡಲು ಪ್ರಯತ್ನಿಸಿದಷ್ಟೂ ಮತ್ತಷ್ಟು ದೊಡ್ಡ ವಿಷ ವೃಕ್ಷವಾಗಿ ಬೆಳೆಯುತ್ತಲಿದೆ. ಪರಿಸ್ಥಿತಿ ಹೀಗಿರುವಾಗ ನಮ್ಮ ನಿಮ್ಮಂತಹಾ ಸಾಮಾನ್ಯ ಜನರು ಮಾತ್ರಾ ಬಡಕೊಳ್ಳಬೇಕು ಹಾಗೆ ಮಾಡಿದರೆ ಸರಿಹೋಗುತ್ತೆ ಹೀಗೆ ಮಾಡಿದರೆ ಸರಿಹೋಗುತ್ತೆ ಎಂದು... ಆದರೆ ನಿಜವಾಗಿ ಮಾಡಬೇಕಾದವರು ಕೈಯ್ಯಲ್ಲಿ ಶಕ್ತಿಯಿರುವವರು ಅದರ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ ಮುಂದೆ ಯೋಚಿಸುವುದೂ ಇಲ್ಲ ಅನ್ನಿಸುತ್ತೆ. ಯಾವ ಆಧಾರದ ಮೇಲೆ ಬೆಳೆದು ವೃಕ್ಷವಾಗಿರುವುದೋ ಆ ಆಧಾರಕ್ಕೇ ಕೊಡಲಿ ಹಾಕಲು ಯಾವ ಪಕ್ಷದವರು ತಾನೇ ಬಯಸಿಯಾರು ಹೇಳಿ...!

ಪಿಸುಮಾತು ಮಂಗಳ, 07/03/2012 - 15:27


ನಿಮ್ಮ ಮಾತು "ನನ್ನ ಪ್ರಕಾರ" ಸಂಪೂರ್ಣ ಸತ್ಯ. ಆದರೆ ನಮ್ಮ ಜನರ ಮನಸ್ಸು ಜಾತಿಯ ಕಶ್ಮಲ ನೀರಿನ ಕೆರೆಯಾಗಿ ಹೋಗಿದೆ. ಆ ದೊಡ್ಡ ಕೆರೆಯನ್ನು ಖಾಲಿ ಮಾಡುವುದು ಅಸಾಧ್ಯವೇ ಆಗಿ ಹೋಗಿದೆ. ಅವರವರಿಗೇ ತಾವು ಕೊಳಚೆಯ ಕೆರೆಯಲ್ಲಿ ಈಜಾಡುತ್ತಿದ್ದೇವೆ ಎಂಬ ಜ್ಞಾನ ಮೂಡುವವರೆಗೂ ಇದು ಹೀಗೇ ಸಾಗುತ್ತದೆ.

ಪಿಸುಮಾತು ಧ, 06/13/2012 - 15:46

ಅಂತರ್ಜಾತಿಯ ವಿವಾಹವನ್ನು ನಾನು ಬೆಂಬಲಿಸುತ್ತೇನೆ. ಸಮಸ್ಯೆಗಳಿಗೆ ಅಂತರ್ಜಾತಿಯ ವಿವಾಹಗಳು ಕಾರಣವಲ್ಲ. ಮನುಷ್ಯನ ಮೇಲರಿಮೆ, ಕೀಳರಿಮೆಗಳೇ ಕಾರಣ. ಅಂತರ್ಜಾತಿಯ ವಿವಾಹವಾದ ಎಷ್ಟೋ ಜನ ಸುಖವಾಗಿ ಬಾಳಿದ್ದಾರೆ. ಹಾಗೆಯೇ ಸ್ವಜಾತಿಯ ವಿವಾಹವಾದವರಲ್ಲೂ ಅನೆಕರ ಸಮಬಂಧ ಮುರಿದು ಬಿದ್ದಿದೆ. ಮನುಷ್ಯನ ಮನಸ್ಸಲ್ಲಿರುವ ಜಾತಿಯ ಕೊಳೆ ಹೋಗದ ಹೊರತೂ ಯಾವ ವಿವಾಹವಾದರೂ ವ್ಯರ್ಥ. 

ಶಾಲೆಗೆ ಸೇರುವಾಗ ಸಮಸ್ಯೆಯಾಗುತ್ತದೆ ಅನ್ನುವುದೆಲ್ಲಾ ಸಬೂಬು ಅಷ್ಟೇ. ನಮ್ಮ ಜಾತಿಯನ್ನು ತಿಳಿಸಲೇ ಬೇಕು ಅನ್ನುವುದು ಕಾನೂನು ಪ್ರಕಾರ ಕಡ್ಡಾಯವಿಲ್ಲ. ಇದನ್ನು ಸುಪ್ರೀಮ್ ಕೋರ್ಟ್‌ ಸಹ ತಿಳಿಸಿದೆ. ಕೇವಲ ಭಾರತೀಯ ಅಥವಾ ತಮ್ಮ ಧರ್ಮವನ್ನು ಮಾತ್ರ ತಿಳಿಸಿದರೂ ಸಾಕು. ಅಂತರ್ಜಾತಿಯ ವಿವಾಹಗಳು ಅತಿ ಹೆಚ್ಚು ನಡೆಯಬೇಕು.

ಬಸವಣ್ಣನವರ ಮಹತ್ಕಾರ್ಯ ವಿಫಲವಾಗಲು ಕಾರಣ ಮೇಲ್ವರ್ಗದವರೇ ಹೊರತೂ ಬಸವಣ್ಣನವರ ಯೋಜನೆ ಕಾರಣವಲ್ಲ. ಇವನನ್ನು ಹೀಗೇ ಬಿಟ್ಟರೆ ಎಲ್ಲರನ್ನೂ ಒಂದು ಮಾಡಿ ತಮಗಿರುವ "ಮೇಲು" ಎಂಬ ಅಹಂಕಾರಕ್ಕೆ ಕೊಡಲಿ ಏಟು ಹಾಕುತ್ತಾನೆ ಎಂದು ಬಸವಣ್ಣನನ್ನು ಮುಗಿಸಿದರು. ಇದು ಬಸವಣ್ಣನವರ ಸೋಲಲ್ಲ. ಸಮಾಜದ ಸೋಲು. "ಜಾತಿಗಳೇ ಬೇಡ, ಶಿವನ ಭಕ್ತರೆಲ್ಲಾ ಒಂದೇ" ಎಂಬ ಸದುದ್ದೇಶದಿಂದ ಶುರುವಾದ ಅವರ ಕ್ರಾಂತಿಯನ್ನೂ ಮುಟ್ಠಾಳರು ಒಂದು ಜಾತಿಯನ್ನಾಗಿಸಿ ಬಸವಣ್ಣನವರ ಮಹತ್ಕಾರ್ಯಕ್ಕೆ ಮಸಿ ಬಳಿದರು. ಈ ದೇಶದ್ ಕಥೆ ಇಷ್ಟೇ!

Vinaya.g ಶನಿ, 01/11/2014 - 14:38

ಪ್ರಿಯ ಒದುಗರೇ,

ಜಾತಿ ಎಂದರೇನು? ಅದು ಹೇಗಿರುತ್ತದೆ? ಯಾವ ಬಣ್ಣ ? ಯಾವ ಆಕಾರ ?

ದಯವಿಟ್ಟು ತಿಳಿಸಿ

  • 2185 views