Skip to main content

ಒಂದು ಸಾವಿನ ಸುತ್ತಾ..!!

ಬರೆದಿದ್ದುMay 27, 2012
noಅನಿಸಿಕೆ

ಆ ದಿನ ಸಂಜೆ ಕಾರ್ಮುಗಿಲಂತ ದಟ್ಟ ಮೋಡಗಳು ಆವರಿಸಿ ಸುತ್ತಲೂ ಮಂಕು ಕವಿದ ವಾತಾವರಣ ಜೊತೆಗೆ ಅವನ ಮನಸ್ಸಿನಲ್ಲಿಯೂ ಕೂಡ... ಅದನ್ನೆ ನೋಡುತ್ತಾ ಕಿಟಕಿಯತ್ತ ಮುಖ ಮಾಡಿ ಕುಳಿತ್ತಿದ್ದ ಆ ವ್ಯಕ್ತಿಗೆ ತಕ್ಷಣ ಏನ್ ಅನ್ನಿಸಿತೋ ಏನೋ ಅಲ್ಲೇ ಒಂದು "ಲೆಟರ್" ಅನ್ನು ಬರೆಯಲು ಶುರು ಮಾಡಿದ....

ಆ ಕಾಗದದ ಸುತ್ತಾ ತಯಾರಾಗಿದ್ದೆ ಈ ಒಂದು ಸಾವಿನ ಸುತ್ತಾ ಅನ್ನೋ ಲೇಖನ..!!!!

ಆ ವ್ಯಕ್ತಿ ಕಾಗದದ ಪೂರ್ತಿ ತನ್ನ ಮನಸ್ಸಿನ ಭಾವನೆಗಳನ್ನ ಹೇಳಿ ಕೊಂಡಿದ್ದಾನೆ...
ನೋವುಗಳನ್ನ ತೋಡಿಕೊಂಡಿದ್ದಾನೆ...
ಅವನು ಬರೆದ ಆ ಕಾಗದದಲ್ಲಿ ಹೃದಯ ಕಲಕುವಂತ ಮಾತುಗಳು ತುಂಬಿವೆ..!!
ಸಾವಲ್ಲೂ ತನ್ನ ಪ್ರೀತಿಯನ್ನು ಎಲ್ಲರಿಗೂ ತಿಳಿಸಿದ್ದಾನೆ..!!
ಹಾಗಾದರೆ ಆ ಪತ್ರದಲ್ಲಿ ಇರೋದಾದರೂ ಏನೂ ಅಂತಾ ತಿಳಿಯೋಣ ಬನ್ನಿ....!!

ಹೇ ಮಂಕು ಕವಿದ ಸಂಜೆಯೇ.., ನಿದ್ದೆ ಬರದ ಕ್ಷಣಗಳೇ, ಸುತ್ತ ಮುತ್ತಲು ಕಾಡುತ್ತಿವೆ ಬರೀ ನನ್ನದೆ ಪ್ರತಿ ಬಿಂಬಗಳು.. ಇನ್ನೆಂದು ನನ್ನನ್ನು ಶ್ವೇತ ವರ್ಣದ ಹೂಗಳು ಹೀಯಾಳಿಸೋಲ್ಲ..!! ಯಾಕೆಂದರೆ ನಾನೂ ದುಃಖವನ್ನು ಮಿರಿದ ಜಾಗಕ್ಕೆ ಹೋಗುತ್ತಿದ್ದೀನಿ..!! ನನ್ನನ್ನು ಬದುಕಿಸುವ ಬಗ್ಗೆ ದೇವತೆಗಳು ಯಾವತ್ತು ಯೋಚಿಸೋಲ್ಲ.., ಯಾಕೆಂದರೆ ನಾನು ನಿನ್ನನ್ನು ಸೇರುತ್ತೇನೆಂದರೆ ದೇವತೆಗಳಿಗೆ ಕೋಪ ಬರುತ್ತೆ..!!

ಈ ಮಂಕು ಸಂಜೆಯಲ್ಲಿ ನನ್ನ ಜೊತೆಗೆ ಯಾರೂ ಇಲ್ಲ.., ಕೇವಲ ನನ್ನ ಪ್ರತಿಬಿಂಬಗಳನ್ನು ಬಿಟ್ಟು..!!
ಅವುಗಳ ಜೊತೆಯಲ್ಲೇ ನಾನು ಬದುಕುತ್ತಿದ್ದೇನೆ... ಅದಕ್ಕೆ ಈ ಬದುಕು ಸಾಕು.., ಎಂದು ಇದಕ್ಕೊಂದು ಅಂತ್ಯ ಬರೆಯಲು ನಾನು ಮತ್ತು ನನ್ನ ಹೃದಯ ನಿರ್ಧರಿಸಿ ಆಗಿದೆ...!!!

ಇನ್ನು ಕೆಲವೇ ಕ್ಷಣಗಳಲ್ಲಿ ಇಲ್ಲಿ ಕ್ಯಾಂಡಲ್ ಗಳು ಬೆಳಗುತ್ತವೆ..!! ಪ್ರಾರ್ಥನೆಗಳ ಧ್ವನಿ ಕೇಳುತ್ತದೆ..!! ಅದೂ ನನಗೆ ಗೊತ್ತಿದೆ... ಆದರೆ ಯಾರೂ ನನಗಾಗಿ ಕಣ್ಣೀರು ಹಾಕುವುದು ಬೇಡ.., ಯಾರು ಬೇಸರಪಟ್ಟುಕೊಳ್ಳುವ ಅಗತ್ಯ ಇಲ್ಲ..!! ಯಾಕೆಂದರೆ ನಾನು ಖುಷಿಯಾಗೆ ಹೋಗುತ್ತಿದ್ದೇನೆ..!! ಅದು ಎಲ್ಲರಿಗೂ ಗೊತ್ತಿರಲಿ...!!

ಈ ಸಾವು ಅನ್ನೋದೆ ಒಂದು ಕನಸು.., ಆದರೆ ಆ ಸಾವಲ್ಲೂ ನಾನು ನಿನ್ನನ್ನು ತುಂಬಾ ಪ್ರೀತಿ ಮಾಡ್ತೀನಿ..!! ನನ್ನ ಕೊನೆಯ ಉಸಿರಲ್ಲೂ ನಾನು ನಿನ್ನನ್ನು ಹರಸುತ್ತೇನೆ..!!
ಇನ್ನು ನಾನು ಕನಸು ಕಾಣುವುದನ್ನು ಬಿಟ್ಟು ಬಿಡ್ತಾ ಇದ್ದೀನಿ -!! ಕಾರಣ ನನ್ನ ಕನಸೇ ಈ ಸಾವು..!!

ಓ ಪ್ರಿಯೆ..., ನಾನು ಎದ್ದಾಗ ನನ್ನ ಹೃದಯದಲ್ಲಿ ನೀನು ಇನ್ನೂ ಮಲಗೆಕೊಂಡೆ ಇದ್ದೆ..!! ನನ್ನ ಕನಸು ನಿನಗೆ ತೊಂದರೆ ಕೊಟ್ಟಿಲ್ಲ ಅನ್ನೋ ವಿಶ್ವಾಸ ನನಗೆ ಇದೆ..!! ನನ್ನ ಹೃದಯ ಹೇಳುತ್ತಿದ್ದೆ ನಾನು ನಿನ್ನನ್ನು ಎಷ್ಟು ಇಷ್ಟ ಪಡ್ತೀನಿ ಅಂತಾ..!! ಆದರೆ ನಿನಗದು ಎಂದು ಅರ್ಥವಾಗಲೇ ಇಲ್ಲಾ..!! ಆದರೂ ಈ ಸಾವಲ್ಲೂ ನನ್ನ ಪ್ರೀತಿ ಅಮರ...!!

ಹೇ ಮಂಕು ಕವಿದ ಸಂಜೆಯೇ ನೀನು ಕೂಡ ಅರ್ಧ ಸತ್ಯ ಈ ಸಾವಿಗೆ...!!

ಲೇಖಕರು

simple gal nethra

ಕನಸು ಕಾಣುವಂತ ಕಣ್ಠಿಗೆ ಕತ್ತಲೆಯೂ ಕೂಡ ಒಂದು ಕವನ

☻ಕನಸುಗಳಿಗೆ ಭಾವನೆಗಳಿಗೆ ನನ್ನಲಿ ತುಂಬಾ ಜಾಗವಿದೆ☻
☻ಹೀಗೆ ಇರಬೇಕು ಅನ್ನೊ ಆಸೆಗಳಿದೆ☻
☻ಇಲ್ಲದ್ದಿದರು ಅನುಸರಿಸಿ ಕೊಂಡು ಹೊಗುವ ತಾಳ್ಮೆನೂ ಇದೆ☻
...........
☻ನನಗೆ ಹತ್ತಿರ ವಾದವರು ನನ್ನ ಜೊತೆಲೇ ಇರಬೇಕು ಅನ್ನೊ ಸ್ವಾರ್ಥಿ ನಾನು...☻

☻ಕೇವಲ ಕಲ್ಪನೆಯಲ್ಲೆ ಬದುಕುವ ಆಸೆಗಳಿಲ್ಲ..! ದುಡ್ಡಿಗಿಂತ ಪ್ರೀತಿಗೆ, ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತೀನಿ..! ಅಪ್ಪ ಅಮ್ಮ ನಾ ಮುದ್ದಿನ ಮಗಳಾಗಿ.., ತಮ್ಮ ತಂಗಿಯರ ಪ್ರೀತಿಯ ಅಕ್ಕನಾಗಿ.., ಗೆಳೆಯ ಗೆಳತಿಯರಿಗೆ.., ನನ್ನ ಪ್ರೀತಿಸುವ ಜೀವಕ್ಕೆ.., ನಾನ್ ಇರುವ ತನಕ ಈ ಸಂಬಂಧ ಹೀಗೆ ಇರಬೇಕು ಅನ್ನೊ ಆಸೆಯಲ್ಲೆ ಬದುಕುತಿರುವ ಜೀವ ನನ್ನದು...☻

☻ನನಗಾಗಿ ನಾನು ಬದುಕಿ ಗೊತ್ತಿಲ್ಲ.., ಬೇರೆಯವರಲ್ಲೆ ನನ್ನ ಖುಷಿಯನ್ನು ಹುಡುಕುತ್ತೆ ನನ್ನ ಮನಸು..! ನನಗೆ ಈ ಪ್ರಪಂಚದಲ್ಲಿ ಪ್ರೀತಿ, ಸ್ನೇಹ ಬಿಟ್ಟು ಬೇರೆ ಏನು ಗೊತ್ತಿಲ್ಲ..!☻

☻ನನಗೆ ಕೊಪ ಜಾಸ್ತಿ... ಸ್ವಲ್ಪ ಮೊಂಡು... ಅಂತ ಫ್ರೆಂಡ್ಸ್ ಜೊತೆ ಅಪ್ಪನೂ ಅಂತರೆ... ಅದು ನನಗೆ ಗೊತ್ತಿಲ್ಲ... ತುಂಬಾ ಮಾತಾಡ್ತೀನಿ ಅಂತ Bt ಅವರೇ ಬಂದು ನನ್ನ ಹತ್ತರ ಮಾತ್ ಕೇಳ್ಸ್ ಗೊಂಡು ಹೋಗ್ತಾರೆ☻

☻ಚಿಕ್ಕ, ಪುಟ್ಟ ಕನಸು ಕಾಣೋದು ಅಂದ್ರೆ ತುಂಬಾ ಇಷ್ಟ... ಅದರ ಜೊತೆಗೆ ಮಳೆಯಲ್ಲಿ ನೆನೀತಾ ಐಸ್ ಕ್ರೀಮ್ ತಿನ್ನೋದು.., ಇಬ್ಬನಿಯಲ್ಲಿ ವಾಕ್ ಮಾಡೋದು.., ಆಕಾಶ ನೋಡ್ತಾ ಕನಸು ಕಾಣೋದು.., ರಾತ್ರಿ ನಕ್ಷತ್ರ ಏಣಿಸೋದು.., ಮಕ್ಕಳ ಜೊತೆ ಆಟ ಆಡೋದು... ಇವೆಲ್ಲಾ ತುಂಬಾ ಇಷ್ಟ...☻

☻ಕನಸುಗಳಿಲ್ಲದ ಕ್ಷಣ ನನ್ನ ಕನಸಿನಲ್ಲೂ ಇಲ್ಲ..! ಭಾವನೆಗಳಿಲ್ಲದ ಬದುಕು ತೀರಾ ಅಸಾಧ್ಯ ಹಾಗೂ Waste ಕೂಡ...
ಏನಂತೀರಾ..?☻

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.