ಕನ್ನಡ ಡಬ್ಬಿಂಗ್ ಬೇಕು..!

1 post / 0 ಹೊಸತು
N PRAVEEN KUMAR
N PRAVEEN KUMAR's picture
ಕನ್ನಡ ಡಬ್ಬಿಂಗ್ ಬೇಕು..!

ನಮಸ್ತೆ ..! ನಾನು  ಪರಮ ಕನ್ನಢ ಅಭಿಮಾನಿ .. ಕೆಲವು  ಕ್ರಾಂತಿಕಾರಿ ಲೇಖಕರು ಕನ್ನಡ ಡಬ್ಬಿಂಗ್ ವಿರೋಧಿಸುತ್ತಿರುವುದು ಪರಮ ಆಶ್ಚರ್ಯವೇ ಸರಿ..! ಕನ್ನಡ ಭಾಷೆಗಿಂತ ಕನ್ನಡ ಚಿತ್ರೋದ್ಯಮವೇ ಹೆಚ್ಚಾ..? ಕನ್ನಡ ಬಾಷೆ ಕನ್ನಡ ಚಿತ್ರ ರಂಗದಿಂದಲೇ  ಹಾಳಾಗುತ್ತಿರೋದು..! ಮೊದಲು ಕನ್ನಡ ಭಾಷೆಗೆ ಉತ್ತೇಜನ ಕೊಡಿ..ಕನ್ನಡ ಭಾಷೆ ಬೆಳೆದರಷ್ಟೇ ಕನ್ನಡ ಚಿತ್ರ ರಂಗಕ್ಕೆ ಮಾರುಕಟ್ಟೆ ಉಳಿಯೋದು..  ಮೊದಲು ಡಬ್ಬಿಂಗ್ ಗೆ ಅವಕಾಶ ಕೊಡಿ..ಬೇರೆ ಯಾವುದೇ ಭಾಷೆಯ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ತೆರೆ ಕಾಣಲಿ..ಜನರಲ್ಲಿ ಕನ್ನಡ ಭಾಷೆ ಜಾಗೃತವಾಗಲಿ...ಆಗ ಕನ್ನಡದ ಮಾರುಕಟ್ಟೆ ಕರ್ನಾಟಕದಲ್ಲಾದ್ರು ವಿಸ್ತಾರವಾಗಿ ಬೆಳಿಯುತ್ತೆ...ಮೊದ ಮೊದಲು ಕನ್ನಡ ಚಿತ್ರ ರಂಗಕ್ಕೆ ಹೊಡೆತ ಬಿಳುತ್ತೆ ನಿಜ...ಆದ್ರೆ ಭವಿಷ್ಯದ ಬೆಳವಣಿಗೆ ಗಮನದಲ್ಲಿಟ್ಟು ಆ ಹೊಡೆತವನ್ನು ಸಹಿಸಿಕೊಳ್ಳಲೇ ಬೇಕು... ನಂತರ ನಿಧಾನವಾಗಿ ಬೇರೆ ಚಿತ್ರಗಳಿಗೆ ಸರಿ ಸಮಾನವಾಗಿ ಸ್ಪರ್ಧಾರ್ಥಕ ಕನ್ನಡ  ಚಿತ್ರಗಳನ್ನು ನಿರ್ಮಿಸಲಿ ...ಆಗ ನೋಡೋಣ ಕನ್ನಡದ ಮಾರುಕಟ್ಟೆ ಹೇಗೆ ಸೀಮಿತವಾಗಿರುತ್ತೆ ಅಂತ..! ತಮಿಳು ತೆಲುಗು ಮಾರುಕಟ್ಟೆ ವಿಸ್ತಾರವಾಗಿ ಇರೋದಕ್ಕೆ ಅಲ್ಲಿ ಭಾಷೆ ಕೂಡ ವಿಸ್ತಾರವಾಗಿ ಬೆಳೆದಿರುವುದೇ ಕಾರಣ.. ಯಾರೋ ಕೆಲವು ಪಟ್ಟ ಭದ್ರರ ಹೀತಾಸಕ್ತಿಗೊಸ್ಕರ  ನಮ್ಮ ಭಾಷೆನ ಬಲಿ ಕೊಡೋದು ಯಾವ ನ್ಯಾಯ..? ಮೊದಲು ಭಾಷೆ... ಆಮೇಲೆ ಚಿತ್ರೋದ್ಯಮ... ಭಾಷೇನೆ ನಶಿಸಿ ಹೋದ್ರೆ ಇವರು ಇಡಿ ಕರ್ನಾಟಕವನ್ನೇ ಹಾಳು ಮಾಡಿ ಬಿಟ್ಟಾರು..! ಈಗಾಗಲೇ ಚಿತ್ರರಂಗದವರ ಮೊಂಡುತನದಿಂದ ಭಾಷೆಗೆ ತುಂಬಾನೇ ಪೆಟ್ಟು ಬಿದ್ದಿದೆ.. ಇನ್ನಾದ್ರು ಅವ್ರು ಬುದ್ದಿ ಕಲಿಯಲಿ..! ಒಂದು ವೇಳೆ ಡಬ್ಬಿಂಗ್ ನಿಂದ ಕನ್ನಡ ಚಿತ್ರ ರಂಗಕ್ಕೆ ಅಪಾಯ ಅನ್ನೋದಾದ್ರೆ ಅಂಥಾ  ಚಿತ್ರೋದ್ಯಮವೇ ಬೇಡ..! ಕನ್ನಡ ಭಾಷೆಯಿಂದಾಗಿ ಕನ್ನಡ ಚಿತ್ರ ರಂಗ ಅಸ್ಸ್ತಿತ್ವಕ್ಕೆ ಬಂದಿರೋದು.. ಅಂತ ಕನ್ನಡ ಭಾಷೆಗೆ ಚಿತ್ರ ರಂಗವೇ ಮಾರಕ ಅನ್ನೋದಾದ್ರೆ ಕನ್ನಡಿಗರಾದ ನಾವು ಹೇಗೆ ತಾನೇ ಸಹಿಸೋದು...!   ಇನ್ನೂ ಕನ್ನಡ ಸಂಸ್ಕೃತಿ ಬಗ್ಗೆ ಕನ್ನಡಿಗರು ಚಿತ್ರ ರಂಗದಿಂದೆನು ಪಾಠ ಕಲಿಯ ಬೇಕಾಗಿಲ್ಲ.. ! ಕೇವಲ ಸ್ವಹಿತಾಸಕ್ತಿಗೊಸ್ಕರ ಭಾಷೆನ ಬಲಿ ಕೊಡುವಂತವರು..ಇನ್ನೆಂತಹ ಸಂಸ್ಕೃತಿ ಹೇಳಿ ಕೊಟ್ಟಾರು..?  ಪ್ರಗತಿಪರರು,ಬುದ್ದಿ ಜೀವಿಗಳು,ಸಾಹಿತಿಗಳು ಈ ಬಗ್ಗೆ ಯೋಚಿಸಲಿ..!

ವಿಸ್ಮಯದಲ್ಲಿ ಬರೆಯಿರಿ

ನೀವೂ ಸಹ ವಿಸ್ಮಯ ನಗರಿಯಲ್ಲಿ ಬರೆಯಬಹುದು. ನಿಮ್ಮ ಒಳಗಿನ ಬರಹಗಾರನನ್ನು ಪರಿಚಯಿಸಿ.
ಲೇಖನ ಸೇರಿಸು

ವಿಸ್ಮಯ ಸಿಂಡಿಕೇಟ್

Subscribe to ವಿಸ್ಮಯ ಸಿಂಡಿಕೇಟ್