Skip to main content

ಕರುನಾಡು -ಬರ ನಾಡು- (ತೋಚಿದ್ದು -ಗೀಚಿದ್ದು)...!!

ಇಂದ venkatb83
ಬರೆದಿದ್ದುMay 7, 2012
4ಅನಿಸಿಕೆಗಳು

ಭವ್ಯ ಭಾರತ ದೇಶದೋಳಿರೆ
ಎಮ್ಮ  ಯಮ್ಮೆಯ 
ಇಂದಿನ -ಕರುನಾಡ ಕಥೆ ಕೇಳಿರಿ
ಜನ-ಜಾನುವಾರುಗಳು
ನೀರು-ಮೇವಿಗ್ ಬಾಯ್ದೆರೆದು
ಆಕಾಶವ ನೋಡ್ತಿರೇ
 
ಬಿದ್ದ ಮಳೆಯ  ನೀರ್ ಸದ್ಭಳಕೆ  ಮಾಡದ್
ದಡ್ಡ ಜನರೇ ನಿಮಗೆ ಪಾಠ ಕಲಿಸುವೆ ಅಂತ
ನಿಷ್ಕರುಣಿಯಾಗಿ ಮಳೆ ರಾಯ
ತಾ ಮುನ್ಸಿಕೊಂಡಿರೆ
 
ಕೆರೆ ಕಟ್ಟೆ-ಬಾವಿಗಳೆಲ್ಲ ಒಣಗಿರೆ 
ನೆಲವ ಬಗೆದು ನೀರು ಹಿಡಿಯಲು
ಪಾತಾಳಕೆ ಇಳಿದರೂ ತೊಟ್ಟು ನೀರು ಸಿಗದಿರೆ!
ಹನಿ ನೀರೂ ಸಿಗದೆ ಜನ -ಜಾನ್ವಾರು ಸೊರಗಿರೆ
ಎತ್ತೂ ನೀರಿಗೆ-ಕೋಣವೂ ನೀರಿಗೆ ಹುಡುಕಿರೆ!!
ನೇತಾರರಿಗೆಲ್ಲ ಬರೀ ಕುರ್ಚಿ ಕನಸೇ ತುಂಬಿರೇ
ಅಧಿಕಾರದ ವ್ಯಾಮೊಹ್ದಲ್ ಬಿದ್ದ್ದಿರೆ
ಗೋವುಗಳು ಕಸಾಯಿ ಖಾನೆಗೊಯ್ಯಲು
ಲಾರಿಗಳಲಿ ತುಮ್ಬ್ತಿರೆ
ರೈತರು ಹಗ್ಗ ಹಿಡಿದು ಮರದ ಕಡೆಗೆ ನಡೆದಿರೇ
ಖುರ್ಚಿ ಕಡೆಗೆ ಕಣ್ಣು ಇಟ್ಟು ಕುಳಿತಿಹ
ಹಿರಿ- ಕಿರಿ-ಮರಿ-ಹಾಲಿ-ಮಾಜಿ ನೇತಾರೆಲ್ಲ 
ಅಧಿಕಾರ ಹಿಡಿಯಲು ಇದ್ಸುಸಮಯ ಅಂತಾ
ಧುತ್ತನೆದ್ದು ಹಳ್ಳಿ ಕಡೆಗೆ ಹೆಜ್ಜೆ ಇಡುತಿರೆ
ಬಿಸ್ಲೆರಿ ನೀರ್ ಕುಡಿದು ಬೆವರ್ ಸುರ್ಸುತ
ಬಾರದಿರ್ವ  ಮಳೆರಾಯನ ಶಪಿಸುತಿರೆ!
'ಎಲ್ಲೆಲಿಂದಲೋ' ನಿಮಗೆ ನೀರ್ ಹರ್ಸ್ವೆವು
ಎಂದು ಪೊಳ್ಳು ಭರ್ವಸೆ ಕೊಡ್ತಿರೇ
 
ಯಾವ ಘೋಷಣೆ ಕಿವಿಗ್ ಬೀಳದೇ
ಹಾರ ತುರಾಯ್ ಕಣ್ನಿಗ್ ಕಾಣಿಸ್ದೇ
ನೇತಾರರೆಲ್ಲ 'ಏನೋ' ಕಾದಿದೆ ಅಂತ ಭಯ ಪಡುತಿರೆ
'ಬಡ ಬೋರನ'ಸೌಖ್ಯ ವಿಚಾರ್ಸಲು 
'ಎಂದೋ' ಬರ್ವವರು ಇಂದೇ ಬಂದರೆಂದು
ಹಳ್ಳಿ ಜನ ತಾವೇನೂ 'ಪ್ರೀತಿ' ತೋರದೇ
ಹಾರ-ತುರಾಯಿ ಹಾಕದೆ -ಏನೂ ಘೋಷಣೆ ಕೂಗದೇ 
'ಖಾಲಿ ಬಿಂದಿಗೆ'ನ ನೇತಾರರ ಕಾರಿಗೆಸೆದು 
ಕಸ್ಪೊರಕೆ-ಸೌಟ್ ಹಿಡ್ದು, 
ನೊಂದು-ಬೆಂದು ಸಿಟ್ಟಿನಿಂದ ಪೆಟ್ಟು ಕೊಡಲು
ಅಟ್ಟಿಸಿಕೊಂಡು  ಬರುತಿರೆ
ಜೀವ ಕೈನಲಿ ಹಿಡಿದು
 ನೇತಾರರು ಓಡ್ತಿರೆ!
'ಸ್ವಾರ್ತಿ ' ದೊರೆ ತಾ ಕೊಡುವ 'ಮೂರ್' ಕಾಸು 
ತುಂಬ್ಸೀತು ಹೊಟ್ಟೆ ಎಸ್ಟ್ ದಿನ?
'ಕರುಣಾಮಯಿ' ಮಳೆರಾಯ ತಾ 
ಧೊ -ಧೊ ಎಂದು ಭೋರ್ಗರೆದು 
ಸುರಿದೆಡೆ ,
 
ತುಂಬಿ ತುಳಕ್ವದು-
ಕೆರೆ-ಕಟ್ಟೆ ,ಮೈ -ಮನ
 ದವಸ ದಾನ್ಯ-ಧನ =======================

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

praveen.kulkarni ಧ, 05/09/2012 - 21:51

ತುಂಬಾ ಚೆನ್ನಾಗಿ ಬರೆದಿದ್ದೀರಾ ಸಪ್ತಗಿರಿಗಳೇ.ಮಳೆರಾಯನ ಮುನಿಸು,ರಾಜಕಾರಣಿಗಳ ಕಪಟ ನಾಟಕ,ದಡ್ಡ ಜನರಾದ ನಮ್ಮ ಬಗ್ಗೆ ಚುಟುಕಾಗಿ ಚಾಟಿ ಬಿಸಿದ್ದಿರಾ..

venkatb83 ಧ, 05/09/2012 - 23:22

  ಪ್ರವೀಣ್ ಅವ್ರೆನೀವ್ ಅಲ್ಲಿಯೂಇಲ್ಲಿಯೂ ಸಕ್ರಿಯ ಅಂತ ನಿಮಂ ಬರಹಗಳು ಮತ್ತು ಅನಿಸಿಕೆಗಳನ ನೋಡಿ ಗೊತಾಯ್ತು..  ನಿಮ್ಮ ಅನಿಸಿಕೆ ಪ್ರತಿಕ್ರಿಯೆಗೆ ವಂದನೆಗಳುಹೌದು ನಾವ್ ಬದಲಾಗಬೇಕಿದೆ... ಮುಂದೊಮ್ಮೆ ಅವರು ಮತ ಕೇಳಲು ಬಂದಾಗ ಯೋಚಿಸಿ ಯೋಗ್ಯರಿಗೆ ಮತ ಚಲಾಯಿಸಿಇದೆ ನನ್ ಮನವಿ ನಿಮಗೆ...

ಶುಭವಾಗಲಿ...

ವಿನಯ್_ಜಿ ಶನಿ, 05/19/2012 - 20:01

ವೆಂಕಟ್ ರವರೆ,
ನಿಮ್ಮ ಕವನದ ಆಶಯದಂತೆ ನಾಡಿನಲ್ಲಿ ಮಳೆ-ಬೆಳೆ ಸಮೃದ್ಧವಾಗಿ ಆಗಿ "ಅನ್ನದಾತರು" ಸುಖ ನೆಮ್ಮದಿ ಕಾಣಲಿ ಎಂದು ನನ್ನ ಅಶಯ. ದೇವರು ಅನ್ನದಾತರನ್ನ ಸದಾ ಕಾಪಾಡಲಿ, ಸುಖ ಸಮೃದ್ಧಿ ಕೊಡಲಿ ಎಂದು ಬಯಸುವೆ..  --ವಿನಯ್

venkatb83 ಶನಿ, 05/19/2012 - 20:42

ವಿನಯ್ ತಮ್ಮ ಆತ್ಮೀಯ ಪ್ರತಿಕ್ರಿಯೆಗೆ
ಮತ್ತು   ರೈತರ ಬಗೆಗಿನ ಕಾಳಜಿಗೆ 
ನನ್ನಿ ಶುಭವಾಗಲಿ  \।/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.