Skip to main content

ಡಾ: ರಾಜ್ಕುಮಾರ್-೮೪ ನೇ ಹುಟ್ಟು ಹಬ್ಬ....

ಇಂದ venkatb83
ಬರೆದಿದ್ದುApril 23, 2012
noಅನಿಸಿಕೆ

ಪದ್ಮಭೂಷಣ ,ಕರ್ನಾಟಕ ರತ್ನ ಡಾ; ರಾಜ್‍ಕುಮಾರ್ ಅವರ ೮೪ ನೇ ಹುಟ್ಟು ಹಬ್ಬ ನಾಳೆ. (ಜನನ ಎಪ್ರಿಲ್ ೨೪-೧೯೨೯) ಈ ಸಂದರ್ಭದಲ್ಲಿ 'ಅಣ್ಣಾವ್ರು' ಕುರಿತು ಈ ಲೇಖನ... 'ಅಣ್ಣಾವ್ರು' ನಮ್ಮನ್ನು ಆಗಲಿ ೦೬ ವರ್ಷ ಸಂದವು(ಮರಣ ಎಪ್ರಿಲ್ ೧೨ -೨೦೦೬ )... ಬೇಡರ ಕಣ್ಣಪ್ಪ ಆಗಿ ಅಮೋಘ ನಟನಾ ಸಾಮರ್ಥ್ಯ ಪ್ರದರ್ಶಿಸಿ,ಮೊದಲ ಚಿತ್ರದಿಂದಲೇ ಭರವಸೆಯ ನಟನಾಗಿ ಹೊರ ಹೊಮ್ಮಿ 'ರಾಜ್‍ಕುಮಾರ' ಎಂದು ನವ ನಾಮಕರಣ ಹೊಂದಿ ಹೆಸರಿಗೆ ಮಾತ್ರ 'ರಾಜ್‍ಕುಮಾರ್' ಆಗದೆ ಜನ ಸಾಮಾನ್ಯರ ಬಾಯಲ್ಲಿ 'ಅಣ್ಣಾವ್ರು' ಆಗಿ, ಜನ ಮಾನಸದ ರಾಜ್ಯಕ್ಕೆ ರಾಜಕುಮಾರ ಆದರು...... ಬೇಡ-ಕಳ್ಳ-ಪೋಲೀಸ್-ಪತ್ರಕರ್ತ-ಸೈನಿಕ-ರೈತ-ಧನಿಕ-ಬಡವ-ಬಾಂಡ್-ದೊರೆ- ಹೀಗೆ ಯಾವುದೇ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿ ತಮಗೆ ಸಿಕ್ಕ ಅವಕಾಶಗಳನ್ನೆಲ್ಲ ಸಮರ್ಥವಾಗಿ ಬಳಸಿಕೊಂಡವರು.. ನಿರ್ಮಾಪಕರನ್ನ 'ಅನ್ನದಾತರು' ಎಂದು ಅಭಿಮಾನಿಗಳನ್ನ 'ದೇವರು' ಎಂದು ಸ0ಬೋಧಿಸಿದವರು.. ಕಪ್ಪು ಬಿಳುಪಿನ ಚಿತ್ರಗಳಿಂದ ಬಣ್ಣದ ಪರದೇವರೆಗೂ ಅವರು ಅಭಿನಯಿಸಿದ್ದು ತಮ್ಮ ಕೊನೆಯ ಚಿತ್ರ ಶಬ್ಧವೇಧಿ ತೆಗೆದಾಗ ವಯಸ್ಸು ೭೪ ಆದರೆ ಅದನ್ನು ನೋಡಿದವರಿಗೆ ಅವರ ಅಭಿನಯ ಕಂಡು ಅವರಿಗೆ ಇನ್ನೂ ೨೪ ಅನ್ನಿಸಿದ್ದಾರೆ ಅಚ್ಚರಿ ಇಲ್ಲ... ನಯ-ವಿನಯ-ಸೌಜನ್ಯದ ಮೂರ್ತಿ, ಓದಿದ್ದು ನಾಲ್ಕೇ ಕ್ಲಾಸು ಆದರೂ ಅದ್ಯವಾದೂ ಅವರ ಹಾಡುಗಾರಿಕೆಗಾಗಲಿ ( ಲವ್ ಮೀ ಆರ್ ಹೆಟ್ ಮೀ ಕೇಳಿದ್ದೀರಾ?) ಅಭಿಯನಾಯಕ್ಕಾಗಲಿ (ಷೇಕ್ ಹ್ಯಾಂಡ್ ಕೊಡುವಾಗ- ಸೂಟ್ ಹಾಕಿ ನಡೇವಾಗ ಗಮನಿಸಿದ್ದೀರಾ?) ಯಾವ ಅಡ್ಡಿಯೂ ಆಗಲಿಲ್ಲ.. ಇದ್ದರೆ ಇಂತಾ ಮಗನಿರಬೇಕು ಅಂತ ಪೋಷಕರು, ಇದ್ದರೆ ಇಂತಾ ಅಣ್ಣ ಇರಬೇಕು ಅಂತ ಹುಡುಗಿಯರು, ಹುಡುಗರೂ ಅಂದುಕೊಂಡಿದ್ದು ಸುಳ್ಳಲ್ಲ... ಶೂಟಿಂಗ್ ಹೊರತಾಗಿ ಬಿಡುವಿನ ವೇಳೆಯಲ್ಲಿ ಶುಭ್ರ ಬಿಳಿ ಬಣ್ಣದ ಅಂಗಿ- ಪಂಚೆ ದರಿಸಿರುತ್ತಿದ್ದ ಅವರನ್ನ ನೋಡೋದೇ ಒಂದು ಸೊಗಸು.. ತೆರೆ ಮೇಲೆ ಹೇಳಿದ್ದನ್ನ ತೆರೆ ಹಿಂದೆ ಜನರ ಮುಂದೆ ಸಹಾ ಪಾಲಿಸಿದ್ದು ಅವರ ಹೆಗ್ಗಳಿಕೆ.. ಕೆಲ ನಿರ್ಮಾಪಕರು ಅದೊಮ್ಮೆ ತಮ ಬೆನ್ನ ಹಿಂದೆ ಅಣ್ಣಾವ್ರ ಚಿತ್ರ ಮಾಡಿ ತಮಗೆ ನಸ್ಟ ಆಗಿದೆ ಅಂತ ಹೇಳಿಕೊಂಡು ತಿರುಗಾಡಿದಾಗ ಅವರ ಲಿಸ್ಟ್ ತಯಾರು ಮಾಡಿ ಅವ್ರಿಗೆಲ್ಲ ಮತ್ತೊಮ್ಮೆ ಕಾಲ್ ಶೀಟ್ ಕೊಟ್ಟು ಸಿನೆಮಾ ತೆಗೆಸಿದವರು.. ಲಾಭ -ನಸ್ಟ ಆದರೆ ತಮಗೆ ಆಗಲಿ ಅಂದುಕೊಂಡು ಸ್ವಂತ ಬ್ಯಾನರ್ ಹುಟ್ಟು ಹಾಕಿದ್ರು.. ಕೆಲ ನಿರ್ಮಾಪಕರಿಂದ ಸಂಭಾವನೆಯನ್ನು ತೆಗೆದುಕೊಳ್ಳದೇ ಕಾಲ್ ಶೀಟ್ ಕೊಟ್ಟು ತಮ್ಮ ಹೆಸರಿನ ಜನಪ್ರಿಯತೆಯ ಕಾರಣದಿಂದ ಹಣ ಹೊಂದುವ ಹಾಗೆ ಮಾಡಿ ಸಿನೆಮಾ ಹಿಟ್ ಆಗಿ ನಿರ್ಮಾಪಕನಿಗೆ ಹಣ ಹೂಡದೆಯೇ ಸಿರಿವಂತನನ್ನಾಗಿ ಮಾಡಿದವರು.... ತಮ್ಮ ಹಾಡುಗಾರಿಕೆಯಿಂದ ಬಂದ ಹಣವನ್ಣ ಹಲ ಬಡ ಬಗ್ಗರಿಗೆ -ಅಬಲಾಶ್ರಮ-ಅನಾಥಾಶ್ರಮ -ಸಂಘ ಸಂಸ್ಥೆಗಳಿಗೆ ದಾನ ನೀಡಿದವ್ರು, ಆ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದೇ ಇದ್ದವರು.. ಬರೀ ಕನ್ನಡ ಚಿತ್ರಗಳಲ್ಲಿ ನಟಿಸುತ ತಾವಾಯ್ತು ತಮ ಕೆಲ್ಸವಾಯ್ತು ಅಂತ ಇರದೆ ಜನ ಸಾಮಾನ್ಯರ ಅಭಿಮಾನಿಗಳ ಒತ್ತಾಸೇ ಮೇರೆಗೆ ಅವರಿಗಾಗಿ ಏನಾರಾ ಮಾಡಬೇಕು ಅಂತ ಹಲ ಚಳುವಳಿಗಳಿಗೆ ಧುಮಿಕಿದವರು, ಗೋಕಾಕ್ ಚಳುವಳಿಯಲ್ಲಿ ನಾಡಿನ ಹೆಸರಾಂತ ಸಾಹಿತಿಗಳು ಲೇಖಕರು ಇದ್ದರೂ ರಾಜ್‍ಕುಮಾರ್ ಆವ್ರು ಬಾಗವಹಿಸಿದ ಮೇಲೆಯೇ ಆ ಹೋರಾಟದ ಕಿಚು ಹೆಚ್ಚಿದ್ದು... ರಾಜ್‍ಕುಮಾರ್ ಚಳುವಳಿಗೆ ಇಳಿದರೆ ಅಲ್ಲಿ ಸೇರುತ್ತಿದ್ದ ಜನ ಸಂಖ್ಯೆ ತಲೆ ಗಿಮ್ಮೆನಿಸುವಸ್ತು ಇರುತ್ತಿತ್ತು, ಆ ತರಹದ ಒಂದು ಸಂದರ್ಭಾವನ್ ನಾ ಪ್ರತ್ಯಕ್ಷ ಕಂಡದ್ದು ಅವರು ಟೌನ್ ಹಾಲ್ ಮುಂದೆ ಒಮ್ಮೆ ಪ್ರತಿಭಟಿಸಿದಾಗ, ಅಬ್ಬಬ್ಬ ಎಲೆದ್ಯೂ ಜನವೋ ಜನ.. ಅದೇ ಈಗಿನ ಸ್ಥಿತಿ ನೋಡಿ ಸಾರಥ್ಯ ವಹಿಸಿಕೊಳ್ಳುವ ಸಾಮರ್ಥ್ಯ ಮತ್ತು ಜನರನ್ನ ಸೆಳೆವ ಜನರನ್ನ ನಿಯಂತ್ರಿಸುವ ಒಬ್ಬರಾದರೂ ಸಿಗುವರೆ? ಆಮೇಲೆ ನಾಡು ನುಡಿ ನೆಲ ಜಲ ಪ್ರಶ್ನೆ ಬಂದಾಗಲೆಲ್ಲ ಬೀದಿಗಿಳಿದು ಹೋರಾಟ ಮಾಡಿದವರು..ಹಲ ನೆರೆ-ಬರ-ಯುದ್ಧ ಸ್ಥಿತಿಗಳಲ್ಲಿ ಖುದ್ದು ಸಾರಥ್ಯ ವಹಿಸಿ ದೇಣಿಗೆ ಸಂಗ್ರಹಿಸಿ ಸಹಾಯ ಮಾಡಿದವರು.. ಅಭಿಮಾನಿಗಳಿಗಂತೂ ಅವರ ಹುಟ್ಟು ಹಬ್ಬ ಜಾತ್ರೆಯ ಸಂಭ್ರಮ , ನಾಡಿನ ಮೂಲೆ- ಮೂಲೆಯಿಂದ ವಾರಕ್ಕೆ ಮೊದಲೇ ಆಗಮಿಸಿ ಅವರ ಮನೆ ಮುಂದೆ ನೆರೆಯುತ್ತಿದ್ದರು, ಪಟಾಕಿ ಸಿಡಿಸಿ ಜಯಕಾರ ಹಾಕಿ ಖುಷಿ ಪಡುತ್ತಿದ್ದರು,ಅವರ ಹುಟ್ಟು ಹಬ್ಬಕ್ಕೆ ಇಡೀ ನಾಡೆ ಸಿಂಗಾರಗೊ೦ಡು ಎಲ್ಲೆದೆಯೂ ಅವರು ಹಾಡಿದ ಹಾಡುಗಳೇ... ನಮ್ಮ ನಾಡಿನ ನಾಡ ಗೀತೆಗಿಂತ ಅವರು ಹಾಡಿದ 'ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು'- ನಾವಾಡುವ ನುಡಿಯೆ ಕನ್ನಡ ನುಡಿ ಗಳಿಸಿದ ಖ್ಯಾತಿ ಹೆಚ್ಚು. ಬಡವ -ಧನಿಕ -ಕಾರ್ಮಿಕ -ನೌಕರ ಎಲ್ಲರಿಗೂ ಇಸ್ತವಾಗಿದ್ದು ಅವರ ವಿಶೇಷತೆ.. ನಾಡು ನುಡಿ ಧರ್ಮ ಗಾಡಿ ವ್ಯಾಪ್ತಿ ಮೀರಿ ಬೆಳೆದದ್ದು ಅವರ ಹಿರಿಮೆ.... ಅಂದಿಗೂ- ಇಂದಿಗೂ- ಮುಂದೂ ರಾಜ್‍ಕುಮಾರ್ ಅವರು ಪ್ರಸ್ತುತರಾಗುವುದು - ಅವರ ಕುರಿತು ಪ್ರಸ್ತಾಪಿಸಲ್ಪಡುವುದು ನಡೆಯುತ್ತಲೇ ಇರುವುದು... ಇಂದಿನ ಕನ್ನಡ ನಾಡು-ನುಡಿಗೆ ಗರ ಬಡಿದ ಸ್ಥಿತಿ ನೋಡಿದಾಗ ಅವರ ಉಪಸ್ಥಿತಿ ಅವಶ್ಯವಿತ್ತು ಅನ್ನಿಸುತ್ತಿದೆ, ಚಿತ್ರ ರಂಗ ದಿಕ್ಕೆಟ್ಟಿದೆ- ನಿರ್ಮಾಪಕ ನಿರ್ದೇಶಕ ನಟರ ನಡುವೆ ಸಮನ್ವಯದ ಕೊರತೆ ಇದೆ.. ವೆಂಕ ನಾಣಿ ಶೀನಿ ಗಳೆಲ್ಲಾ ನಿರ್ಮಾಪಕ -ನಿರ್ದೇಶಕ- ನಟ ಆಗುತ್ತಿರುವದು ದುರಂತ,..... ಅಣ್ಣ ನಾವೆಲ್ಲ ನಿಮ್ಮನ್ನು ಬಹು ಮಿಸ್ ಮಾಡಿಕೊಳ್ಳುತ್ತಿರುವೆವು... ನಿಮ್ಮ ಜನನ ಮತೊಮ್ಮೆ- ಮಗದೊಮ್ಮೆ ಕರು ನಾಡಲ್ಲಿ ಆಗಲಿ.. ಅಣ್ಣ ನೀವ್ ನಿಮ್ಮ ಅಭಿನಯ- ಹಾಡು-ಮೂಲಕ ಸದಾ ನಮ್ಮ ನೆನಪಲ್ಲಿ ಅಮರ... ***************ರಾಜ್ ಅಣ್ಣ ನಿಮಗೆ ೮೪ ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು****************** ಅವರ ಬಗ್ಗೆ ಬರೆಯ ಹೊರಟರೆ ಮುಗಿಯುವುದೇ ಇಲ್ಲ, ಅವರ ಕುರಿತು ಕೆಲ ಕುತೂಹಲಕಾರಿ ಆಪ್ತ ಬರಹಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ.... http://www.gandhadagudi.com/forum/viewtopic.php?f=18&t=3479&view=print http://prajavani.net/include/story.php?news=7890§ion=54&menuid=13 ಚಿತ್ರಮೂಲಗಳು: www.annavru.com http://www.annavaru.com/dr-rajkumar-movies/ http://www.annavaru.com/dr-rajkumar-interesting-facts/ ನಿಮಗೆ ಅಣ್ಣಾವ್ರು ಹಾಡಿದ ಹಿಟ್ ಹಾಡುಗಳನ್ನು ನೋಡುವ ಆಶೆಯೇ ಇಲ್ಲಿ ಕ್ಲಿಕ್ಕಿಸಿ http://www.youtube.com/watch?v=1jcakqbeCQg&feature=relmfu ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ http://www.youtube.com/watch?v=Gc_Q4K8PLAQ ನಿನದೆ ನೆನಪು ದಿನವೂ ಮನದಲ್ಲಿ ನೋಡುವ ಆಶೆಯೂ ತುಂಬಿದೆ ನನ್ನಲ್ಲಿ - ಗೊತ್ತಲ್ಲ, ಎಂದೆಂದೂ ನಿನ್ನನು ಮರೆತು http://www.youtube.com/watch?v=TwKVyj9hf7k&feature=related http://www.youtube.com/watch?v=vc5wLNl5dKQ&feature=related ನಾ ನಿನ್ನ ಮರೆಯಲಾರೆ ಹಾಗೆಯೇ ನನ್ನಾಸೆಯ ಹೂವೇ http://www.youtube.com/watch?v=08bYcYWVPiA ಎಲೆಲ್ಲಿ ನಾ ನೋಡಲಿ- ನಿನ್ನನೇ ಕಾಣುವೆ http://www.youtube.com/watch?v=wMaMGtqckS0&feature=relmfu ಏನೇನೋ ಆಶೆ-ನೀ ತಂದ ಭಾಷೆ http://www.youtube.com/watch?v=jehnvjyQn5Q&feature=relmfu ನಾ ಹೇಳಲಾರೆ- ನಾ ತಾಳಲಾರೆ http://www.youtube.com/watch?v=UeaKYuUJxuA&feature=relmfu ಕಾವೇರಿ ಏಕೆ ಓಡುವೆ ? http://www.youtube.com/watch?v=qxchHriJgUI ಮೇರಿ ಮೇರಿ ಐ ಲವ್ ಯೂ http://www.youtube.com/watch?v=YwIjrWWnVr8&feature=relmfu http://www.youtube.com/watch?v=KR08LOrH-0Q ಕಣ್ಣೀರ ಧಾರೆ ಇದೇಕೆ -ಇದೇಕೆ? ಹಾಡು ನೆನಪಿದೆಯೇ? ಅವರೇ ಹಾಡಿದ http://www.youtube.com/watch?v=7WmX-vhDcVM ಬಾನಿಗೊಂದು ಎಲ್ಲೇ ಎಲ್ಲಿದೆ? ನಿನ್ನಾಸೆಗೆಲ್ಲಿ ಮಿತಿ ಇದೆ ಮತ್ತು http://www.youtube.com/watch?v=kjD6lHGWf38 ಬಾಳುವಂತ ಹೂವೇ ಬಾಡುವಾಸೆ ಏಕೆ? http://www.youtube.com/watch?v=pMzwFxQFtmA&feature=related ಎಲ್ಲಿಗೆ ಪಯಣ ? ಯಾವುದೋ ದಾರಿ? ಏಕಾಂಗಿ ಸಂಚಾರಿ ಬೊಂಬೆಯಾಟವಯ್ಯ ಇದು ಬೊಂಬೆಯಾಟವಯ್ಯ http://www.youtube.com/watch?v=dt4DtM5br0I&feature=relmfu http://www.youtube.com/watch?v=ykYbiBFk-Qw&feature=relmfu ಹಾಗೆಯೇ ಜನಕನ ಮಾತಾ ,ಶಿರದಲಿ ಧರಿಸಿದ ಆಡಿಸಿದಾತ ಬೇಸರ ಮೂಡಿ http://www.youtube.com/watch?v=f9rNhrSP7Tc&feature=related ಆಡಿಸಿ ನೋಡು ಬೀಳಿಸಿ ನೋಡು http://www.youtube.com/watch?v=y2C1EUNmMfA&feature=related ಮೂಗನ ಕಾಡಿ ದರೇನು ? http://www.youtube.com/watch?v=5bNmsCklE7U ನಗುತ ನಗುತ ಬಾಳು ನೀನು ೧೦೦ ವರುಷ http://www.youtube.com/watch?v=ykYbiBFk-Qw&feature=relmfu ಹೊಸ ಬೆಳಕು ಮೂಡುತಿದೆ... http://www.youtube.com/watch?v=gVx2dBaFcTc&feature=relmfu

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.