Skip to main content

ನೋವು

ಬರೆದಿದ್ದುFebruary 27, 2012
2ಅನಿಸಿಕೆಗಳು

ಎಲ್ಲೋ ಒಂದು ಕಡೆ ಮನದ ಮೂಲೆಯಲಿ
ಅವಿತು ಕುಳಿತಿಹುದು ಹೃದಯದಾಳದಲಿ
ನೆತ್ತರೊಳು ಒಂದಾಗಿ ಹರಿಯುತಾ ದೇಹದಲಿ
ಏನೋ ಒಂದು ನೋವು ನೆಲೆಸಿಹುದು ನನ್ನಲಿ.
 
ಆ ನೋವ ಮೂಲವನು ನೆನೆಸಿದಾ ವೇಳೆಯಲಿ
ಯಾರದೋ ನೋವನು ಸಂತೈಸುವ ಕಾಲದಲಿ
ಅದನೆ ಹೋಲುವಾವಸ್ಥೆ ಮತ್ತೆ ಮರುಕಳಿಸಿದಲಿ
ಆ ನೋವು ನೀರಾಗಿ ಹರಿವುದು ಕಣ್ಣಂಚಿನಲಿ.
 
ದಿನ ದಿನವು ಹೆಚ್ಚುತಲಿಹುದು ನೋವಿನಾ ಬಿಂದು
ಈ ನೋವಿಗೆ ಕೊನೆಯಿಲ್ಲವೆ ಮುಂದೂ ಎಂದೆಂದೂ
ಶೃಷ್ಠಿಸಿದೆಯಾ ಜಗನ್ನಿಯಾಮಕನೇ ನೀನಿದನಂದು
ನಿಜವಾದ ನಲಿವಿನಾ ಮಹತ್ವವ ತಿಳಿಸಲೆಂದು
ಬೇಡಿಹುದು ನನ ಹೃದಯ ದುಖಃದಿಂದ ನೊಂದು
ಕನಿಕರಿಸಿ ಈ ನೋವಿಂದ ಮುಕ್ತಿಯಾ ನೀಡೆಂದು.

ಲೇಖಕರು

ತ್ರಿನೇತ್ರ

ನಾವಿರೋದೇ ಹೀಗೆ...!

ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!

ಅನಿಸಿಕೆಗಳು

shubha ಮಂಗಳ, 02/28/2012 - 14:01

 ನಮಸ್ಕಾರ ಸರ್.....ತುಂಬಾ ಚೆನ್ನಾಗಿದೆ ನಿಮ್ಮ ಕವನದ ಸಾಲುಗಳುವಾಸ್ತವಕ್ಕೆ ಹತ್ತಿರವಾಗಿ ಬಲು ಸೊಗಸಾಗಿದೆ...ವಂದನೆಗಳು.......

ತ್ರಿನೇತ್ರ ಗುರು, 03/01/2012 - 13:51

ನಮಸ್ಕಾರಾ... ಮನಸ್ಸಿಗೆ ಹಿಡಿಸಿದ್ದರೆ ನನ್ನ ಪ್ರಯತ್ನ ಸಾರ್ಥಕ ಎಂದುಕೊಳ್ಳುತ್ತೇನೆ, ಧನ್ಯವಾದಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.