Skip to main content

ಕನಸು

ಬರೆದಿದ್ದುFebruary 21, 2012
noಅನಿಸಿಕೆ

ಕನಸಿಗೆ ಲೇಖಣಿ ಕೊಟ್ಟು
ಚಿತ್ತಾರವ ಬರೆಯಲು ಬಿಟ್ಟೆ
ರಂಗಿನ ಕುಂಚಗಳ ಕೊಟ್ಟು
ಬಣ್ಣವ ಹಚ್ಚಲು ಬಿಟ್ಟೆ
ಮೂಡಿದ ಚಿತ್ರಗಳ ನೋಡುತ ನಾ ನಿಂತೆ
ಅದರೊಳಡಗಿಹ ಭಾವಗಳ ಅರಿಯಲು ನಾ ಸೋತೆ
ಕನಸು- ಮನಸಿನಾ ಕನ್ನಡಿಯ ಹಾಗೆ
ಅದರೊಳು ಪ್ರತಿಬಿಂಬವ ಮುಟ್ಟಲಾಗದೊ ಹೇಗೆ
ಮನಸಿನೊಳು ಮೂಡಿದಾ ಆಸೆಗಳು ಹಾಗೆ
ಕನಸಾಗಿ ಕಾಡುವುವು ತೀರದಿರೆ ಬೇಗೆ.

ಲೇಖಕರು

ತ್ರಿನೇತ್ರ

ನಾವಿರೋದೇ ಹೀಗೆ...!

ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.