Skip to main content

ಅಮ್ಮಾ- ನಾ ನಿನಗೆ ಧನ್ಯವಾದಗಳನ್ನು ಅರ್ಪಿಸಲು ಮರೆತಿದ್ದೆ............

ಇಂದ venkatb83
ಬರೆದಿದ್ದುFebruary 19, 2012
7ಅನಿಸಿಕೆಗಳು

 ಆಗಸ್ಟ್ ೧ ನೇ ತಾರೀಖು  ನೀ ನನ್ನನ್ನ ನಿನ್ನ ಮೃದುವಾದ ಕೈಗಳಿಂದ ಎತ್ತಿ ಎದೆಗಾನಿಸಿಕೊಂಡು ಅಪ್ಪಿ ಮುದ್ದಾಡಿದಾಗ ನಾ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ,

ನನ್ನ ಕಾಲುಗಳ ಮೇಲೆ ನಾ ನಿಲ್ಲಲು- ನಡೆದಾಡಲು ಕಲಿಸಿದಮೊದಲ -ತೊದಲ ನುಡಿ ನುಡಿಯಲು ಸಹಾಯ ಮಾಡಿದ  ನೀಈ ಸುಂದರ ಜಗತ್ತಿಗೆ ಪ್ರವೇಶಿಸಲು  ನನಗೆ ಮಾರ್ಗದರ್ಶಿಯಾದೆ,ಆಗ ನಾ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ
ದಿನಂಪ್ರತಿ ಶಾಲೆಗೆ ಹೋಗ್ವಾಗ ರಚ್ಚೆ ಹಿಡಿದು ಅತ್ತು ಒಲ್ಲೆ -ಒಲ್ಲೆ ಎಂದ ನನಗೆ ನನ್ನ ಬಟ್ಟೆ ತೊಡಿಸಿ ತಲೆ ಬಾಚಿ ಹಣೆಗೆ ಮುತ್ತನಿಟ್ಟುಶಾಲೆವರೆಗೆ ಬಂದು ಕೈ ಬೀಸಿ ಒಲ್ಲದ ಮನಸಿಂದ ಹೊರಟ ನೀನನ್ನ ಶಾಲೆಯ ದಿನಚರಿ ತಪ್ಪದೇ ನೋಡಿ ನಾ  ಸಮಯ ಪರಿಪಾಲಕನಾಗಲು ಕಾರಣ ನೀಈ ಜಗವನ್ನೆದುರಿಸಲು ಧೈರ್ಯ ಸಾಹಸ ತುಂಬಿ -ದೇಶಪ್ರೇಮ ಬಿತ್ತಿದ ನಿನಗೆ ಧನ್ಯವಾದಅರ್ಪಿಸಲು ಮರೆತಿದ್ದೆ
ನಾಟ್ಯ-ಸಂಗೀತ-ಕರಾಟೆ ತರಗತಿಗೆ ನನ್ನೊಯ್ದು ಬಿಟ್ಟ ನೀಅಪೂರ್ಣನಾದ  ನನ್ನ ಪರಿಪೂರ್ಣ ವ್ಯಕ್ತಿಯಾಗಿಸಲು ಹಗಲಿರುಳು ಶ್ರಮಿಸಿದ  ನಿನಗೆನಾ ಧನ್ಯವಾದ ಅರ್ಪಿಸಲು ಮರೆತಿದ್ದೆ
ನನ್ನ ಡೆಂಟಿಸ್ಟ್-ಸ್ಕಿನ್ ಸ್ಪೆಷಾಲಿಸ್ಟ  ಜೊತೆ ತಾಳ್ಮೆಯಿಂದ ಚರ್ಚಿಸಿನನ್ನ ದಂತ-ಚರ್ಮ ರಕ್ಷಣೆ ಆರಿಕೆ ಮಾಡಿದ ನೀ ಸದಾ ಶುಚಿಯಾಗಿದ್ದು ಆರೋಗ್ಯವಂತನಾಗಿರುವುದರ ಕುರಿತು ಜಾಗೃತಿ ಮೂಡಿಸಿದ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ
ಅಗಣಿತ ಸ್ಪರ್ಧೆಗಳಿಗೆ ನನ್ನ ಜೊತೆಯಾಗಿ ಬಂದು ಚಪ್ಪಾಳೆ ತಟ್ಟಿ ಹುರಿದುಂಬಿಸಿನನ್ನ ಗೆಲುವಿಗೆ ಕಾರಣಳಾದೆಹೊಸತನ್ನ ಅನ್ವೇಷಿಸಲು-ಅನುಕರಿಸಲು ಪ್ರಯತ್ನಿಸಲುನನಗೆ ಉತ್ಸಾಹ ತುಂಬಿದ ನೀಸದೃಢ ಸಂಪನ್ನ ಸರಳ ವ್ಯಕ್ತಿಯನ್ನಾಗಿ ಮಾಡಿದೆ ಅಮ್ಮ ಆಗ ನಾ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ
ಶಾಲೆಗೊಗುವಾಗ ಮುದ್ದು ಕಂದನ ಆಹಾರಕ್ಕಾಗಿ ವಿಶೇಷ ಅಸ್ಥೆ ವಹಿಸಿತಿಂಡಿ ಬಾಕ್ಸಿಗೆ ಇಡ್ಲಿ-ವಡೆ  ದೋಸೆಕೇಸರಿ ಬಾತು ಹಾಕಿ ಉದರ ತುಂಬಿಸಿದ ನೀಓದಿನ ತಯಾರಿಯಲ್ಲಿ ಹಗಲಿರುಳು ಓದಿ ಬೆವರಿ ಜ್ವರ ಬಂದು ಮಲಗಿದಾಗ ಧೈರ್ಯ ಹೇಳಿ  ಉತ್ಸಾಹ ಹುಮ್ಮಸ್ಸು ತುಂಬಿದೆ -ಜೊತೆಗಿದ್ದೆಅಮ್ಮಾ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ
ಹಲವರುಬ್ಬೇರಿಸಿದ- ನಾ ಆಯ್ಕೆ ಮಾಡಿದ ಕಲಾ(ಆರ್ಟ್ಸ್) ವಿಭಾಗವನ್ನ  ನೀ ಬೆಂಬಲಿಸಿದ್ದೆ ಹಲವರು ಕನಸು ಅಂದಿದ್ದನ್ನ ನಾ ನನಸಾಗಿಸಲು ನನ್ನ  ಕನಸುಗಳಿಗೆ ಬಣ್ಣ ತುಂಬಿದ ನೀಅಲೆಗಳಿಗೆದುರಾಗಿ ಈಜಲು ಕಲಿಸಿದ ನೀನನ್ನ ಗುರಿ ಮುಟ್ಟಲು -ವಿಜಯಿಯಾಗಲು ನಿಸ್ವಾರ್ಥಿಯಾಗಿ ನೆರವಾದ  ಅಮ್ಮಾ  ನಿನಗೆ ನಾ ಧನ್ಯವಾದ  ಅರ್ಪಿಸಲು ಮರೆತಿದ್ದೆ 
ನನ್ನ ಭವ್ಯ ಭವಿತವ್ವ್ಯಕ್ಕಾಗಿ  ನಿದ್ರೆ- ನೀರಡಿಕೆಲೆಕ್ಕಿಸದೆ ಹಗಲಿರುಳು ನನ್ ಸಾಕಿ ಸಲಹಿನನ್ನ ಶ್ರೇಯೋಭಿಲಾಶೆಯಾಗಿ  ಸದಾ ನನ್ನೊಡನಿದ್ದ ಅಮ್ಮಾ ನಿನಗೆ  ನಾ ಧನ್ಯವಾದ ಅರ್ಪಿಸಲು ಮರೆತಿದ್ದೆ
ಆದರೆ ಇಂದು ಎಲ್ಲ ನೆನಪಾಗುತ್ತಿದೆಅಂದು ಅರ್ಪಿಸದ ಧನ್ಯವಾದಗಳನ್ನಇಂದು ಅರ್ಪಿಸುತ್ತಾನಿನ್ನ ಮುದ್ದಿನ ಮಗನಾಗಿದ್ದಕ್ಕೆ  ಖುಷಿ ಪಡುತ್ತಾಆಮಾ ನಿನಗಿದೋ ನನ್ನ ಧನ್ಯವಾದ ಅರ್ಪಿಸುತ್ತಿರುವೆ -----------------------------------------------------------------ಜಗದ ಸಮಸ್ತ ತಾಯಿಯರೂ ಸದಾ ಸುಖ -ಶಾಂತಿ ನೆಮ್ಮದಿಯಿಂದ ಇರಲಿ  ಎಂದು ಹಾರೈಸುತ್ತಾ ...
 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

ಸ್ಪಂದನ ಮಂಗಳ, 02/21/2012 - 08:24

:) ಹಾಯ್ ವೆಂಕಟ್ಎಷ್ಟು ಚಿಕ್ಕ ವಿಷಯ ಅನ್ನಿಸಿಯೋ ಅಥವಾ ಅಮ್ಮನೊಂದಿಗೇನು ಫಾರ್ಮಾಲಿಟಿ ಎಂದೋ ನಾವಿದನ್ನು ಮರೆತಿದ್ದೇವೆ..ಆದರೆ ಧನ್ಯವಾದ ಹೇಳಿದಾಗ ಆ ತಾಯಿಯ ಮನದಲ್ಲಿ ಸಂತಸ ಆಗೋದು ನಿಜ.. ಈ ನಿಮ್ಮ ಲೇಖನಕ್ಕೆ ಧನ್ಯವಾದಗಳು.ತಾಯಿಯ ಋಣ ತೀರಿಸಲಾಗದ್ದು.. ಕಡೇ ಪಕ್ಷ ಇಷ್ಟಾದ್ರೂ ಮಾಡಬೇಕಾದ್ದು ಕರ್ತವ್ಯ. ಶುಭವಾಗಲಿ  

venkatb83 ಮಂಗಳ, 02/21/2012 - 11:54

ಸ್ಪಂದನ  ----------ನಿಮ್ಮ ಸಹೃದಯ ಪ್ರತಿಕ್ರಿಯೆಗೆ ವಂದನೆಗಳು...ಹೌದು ತಾಯಿ ಪದಗಳಿಗೆ ನಿಲುಕದವಳು,ಭಾವನೆಗಳಿಗೆ  ಗೋಚರವಾಗುವವಳು...ನಿಜ ಹೇಳಬೇಕಂದ್ರೆ  ಅದು ಕವನ, ಆದ್ರೆ ಅದನ್ನು ಹೆಗೆಲಾ ಪ್ರಯತ್ನಿಸಿದರೂ ಕವನದ ತರಹ ಸಾಲು ಸಾಲಾಗಿ ಕೆಳಗೆ ಸೇರಿಸಲು ಆಗದೆ,ಅದು ಲೇಖನದ ತರಹ ಮೂಡಿ ಅಂದಿದೆ!.... :()))ಶುಭ ದಿನ...

panchi (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 02/21/2012 - 12:43

ಅಮ್ಮ ತನ್ನ ಮಕ್ಕಳಿಗಾಗಿ ಮಾಡುವ ಪ್ರತಿ ಕಾರ್ಯವನ್ನು ತುಂಬ ಚೆನ್ನಾಗಿ ಸ್ಮರಿಸಿದ್ದೀರ. ಪ್ರತಿ ಅಮ್ಮಂದಿರ ಮಕ್ಕಳೆಲ್ಲ ನಿಮ್ಮಂತೆಯೇ ಇರಲಿ. ಅಮ್ಮ ಎಂದರೆ ಹಾಗೆಯೇ, ಮಕ್ಕಳ ಅಭ್ಯುದಯಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿ ಇಡುವವಳು, ಅವಳ ಪ್ರೀತಿ ಆಗಾಧ.  ಅವಳಿಗೆ ಧನ್ಯವಾದವನ್ನು ಆಕೆಯ ವಯಸ್ಸಾದ ಕಾಲದಲ್ಲಿ  ಆಕೆಯನ್ನು ನಾವು ಮಗುವಾಗಿ ಕಾಣುವುದರ ಮೂಲಕ ಅರ್ಪಿಸಬಹುದು.

venkatb83 ಶುಕ್ರ, 02/24/2012 - 18:23

  ಪಂಚಿ( ವಿಸ್ಮಯ ಪ್ರಜೆ  ಅಲ್ಲ!!)ಅವರೇ ನಿಮ್ಮ ಸಹೃದಯ ಪ್ರತಿಕ್ರಿಯೆಗೆ ವಂದನೆಗಳು... -------------------------------------------------------------------------------------------------ಅವಳಿಗೆ ಧನ್ಯವಾದವನ್ನು ಆಕೆಯ ವಯಸ್ಸಾದ ಕಾಲದಲ್ಲಿ  ಆಕೆಯನ್ನು ನಾವು ಮಗುವಾಗಿ ಕಾಣುವುದರ ಮೂಲಕ ಅರ್ಪಿಸಬಹುದು.-------------------------------------------------------------------------------------------------- ಹೌದು ಅದು   -  ಸಾಧ್ಯ...

ಸ್ಪಂದನ ಮಂಗಳ, 02/21/2012 - 14:03

ಕ್ಷಮಿಸಿ ನಾನೂ ಸರಿಯಾಗಿ ಗಮನಿಸಲಿಲ್ಲ.. ಆದರೆ ತುಂಬ ಒಳ್ಳೆಯ ಬರಹ..

pavu ಮಂಗಳ, 02/21/2012 - 15:57

ಮಾತಾಯಸ್ಯ ಗೃಹೇ ನಾಸ್ತಿ
ಭಾರ್ಯಾಚ ಪ್ರಿಯವಾದಿನೀ,
ಅರಣ್ಯಂ ತೇನಂ ಗಂತವ್ಯಂ,
ಯಥಾ ಅರಣ್ಯಂ ತಥಾ ಗೃಹಂ||
                           -ಪಂಚತಂತ್ರ
ಈ ನೀತಿಯ ಪ್ರಕಾರ ಯಾರಿಗೆ ಮನೆಯಲ್ಲಿ ವಾತ್ಸಲ್ಯಮಯಿಯಾದ ತಾಯಿಯಿಲ್ಲವೋ,ಪ್ರೀತಿಯಿಂದ ಮಾತನಾಡುವ ಪತ್ನಿಯಿಲ್ಲವೋ ಅಂತವರು ಅರಣ್ಯಕ್ಕೆ ಹೋಗುವುದು ಲೇಸು ಯಾಕೆಂದರೆ ಅವರ ಪಾಲಿಗೆ ಮನೆ ಹೇಗೋ ಅರಣ್ಯವು ಹಾಗೆ.
ಅಮ್ಮನ ನಿಮ್ಮ ಈ ಲೇಖನ ತುಂಬಾ ಚೆನ್ನಾಗಿದೆ ವಂದನೆಗಳು ಇದೇ ರೀತಿಯಾಗಿ ಉತ್ತಮ ಲೇಖನಗಳನ್ನು ಮುಂದುವರೆಸಿ.
 

venkatb83 ಶುಕ್ರ, 02/24/2012 - 18:20

ಪವಿತ್ರ- ಪವಿತ್ರ ಅವ್ರೆಅವರೇ ನಿಮ್ಮ ಸಹೃದಯ ಪ್ರತಿಕ್ರಿಯೆಗೆ ವಂದನೆಗಳು...ನನಗೆ ಆ ಶ್ಲೋಕ ಸ್ವಲ್ಪ ಗೊತ್ತಿತ್ತು   ನೀವು ಅದನ್ನು  ಪೂರ್ತಿಯಾಗಿ  ಇಲ್ಲಿ ಕೊಟ್ಟು ಉಪಕಾರ ಮಾಡಿದಿರಿ... ಆ ಶ್ಲೊಕದಲ್ಲಿ ಅಪಾರ ಅರ್ಥ ಉಂಟು... 
ವಂದನೆಗಳು...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.