Skip to main content

ನೆನಪಿದೆಯಾ..?

ಬರೆದಿದ್ದುJanuary 13, 2012
3ಅನಿಸಿಕೆಗಳು

[img_assist|nid=21432|title=ನೆನಪಿದೆಯಾ|desc=|link=node|align=center|width=624|height=608]
ಕಣ್ಣಸನ್ನೆಯಿಂದ ನೀ ನನ್ನ ನೋಡಿದ ಕ್ಷಣ,
ಮಾತಿಲ್ಲದೆ ಎನ್ನ ಕರೆದೆ ಆ ದಿನ...
ನಗುವಿನ ಮುತ್ತಿನ ಮಳೆಯ ಸುರಿಸಿ ಸೆಳೆದೆ..
ನೆನಪಿದೆಯಾ...?

ಕೈಹಿಡಿದು ಒಟ್ಟಾಗಿ ನೆಡೆದು...
ಬಹುಕಾಲ ಪ್ರೇಮದ ಗುಂಗಲ್ಲೇ ಕಳೆದು..
ಅಣೆ-ಪ್ರಮಾಣವ ಮಾಡಿ ಒಂದಾದೆವು ಅಂದು ನೀಲಿ ಆಗಸದ ಕೆಳಗೆ..
ನೆನಪಿದೆಯಾ..?

ಇರುವೆನು ನಿನ್ನೊಂದಿಗೆ ಎಂದೂ ಜೊತೆ,
ಇಡುವೆನು ಮುಳ್ಳಿನ ಹಾದಿಯಲ್ಲೂ ಹೆಜ್ಜೆ..
ನನ್ನ ಜೀವ ನೀನು ನಲ್ಲ ಎಂದು ಕೂಗಿ-ಕೂಗಿ ಹೇಳಿದೆಯಲ್ಲ..
ನೆನಪಿದೆಯಾ..?

ಕಾರಣವಲ್ಲದ ಕಾರಣಕ್ಕೆ ತೋರಿದೆ ಮುನಿಸು,
ನಿನಗಿಂತ ನನ್ನ ಕುಟುಂಬವೇ ಹೆಚ್ಚು..
ಇಂದೇ ಮರೆತು ಬಿಡು ನಮ್ಮ ಪ್ರೀತಿಯನ್ನು ಎಂದ್ಹೇಳಿ..
ಕಣ್ಣೀರ್ ಹಾಕಿಸಿ ನಡೆದುಬಿಟ್ಟೆಯೆಲ್ಲಾ..
ನೆನಪಿದೆಯಾ..?

ಕಳೆದ ಒಂದು ಸಂವತ್ಸರ, ನೀನಿಲ್ಲದ ಅ ಸಾವಿರ ಕ್ಷಣ..
ಇನ್ನು ಮರೆಯದ ನನ್ನ ಮನ.. ನೋವು ಪ್ರತಿ ದಿನ...
ಆದರೂ ಹೇಳುವುದಿಲ್ಲ ನಾ.. ನೀ ಏಕೆ ತೊರೆದೆ ಯೆನ್ನ..
ಏಕೆಂದರೆ ನಾ ತಿಳಿದೆ.. ಹೆಚ್ಚು ಬಯಸಿದ ವಸ್ತುವೇ ನೋಯಿಸುವುದು ನನ್ನ..
ನೆನಪಿದೆಯಾ..?

ಲೇಖಕರು

ವಿನಯ್_ಜಿ

ಮನದ ಮಾತು...

ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) )

ಅನಿಸಿಕೆಗಳು

Pattar ಸೋಮ, 01/16/2012 - 11:58

ಹಲೋ ವಿನಯ್....ಏಕೆ ಉತ್ತರವಿಲ್ಲದ ಪ್ರಶ್ನೆಯನ್ನು ನೀವು ಸೃಷ್ಟಿಸುತ್ತಿರುವಿರಿ?ನೆನಪು ಇದೊ೦ದು ಘೋರ ಶಬ್ಧ.... ಇದನ್ನು ಮರೆವು ಎ೦ಬ ಅಸ್ತ್ರದಿ೦ದ ಮಾತ್ರ ನಾಶ ಮಾಡಲು ಸಾಧ್ಯಮರೆಯಲೇಬೇಕಾದ ವಿಷಯವನ್ನು ನೆನಪಿಸಿಕೊಳ್ಳುವುದರಲ್ಲಿ..................... 

ವಿನಯ್_ಜಿ ಧ, 01/18/2012 - 14:02

ನಿಮ್ಮ ಪ್ರತಿಕ್ರಿಯೆಗೆ ಬಹಳ ಧನ್ಯವಾದಗಳು ನಾಗರಾಜು ರವರೆ, ಹೌದು ನೆನಪು ಒಂದು ಘೋರ ಶಬ್ದವೇ.., ಅದರೆ ನಾವು ಸವೆಸಿದ ಜೀವನದ ದಾರಿದೀಪ -- ಅದೇ ಕೆಲವೊಂದು ಸವಿ ಮಧುರ ನೆನಪುಗಳು... ಒಂದು ಮಾತು ನಿಜ, ನೀವು ಹೇಳಿದಂತೆ ಕೆಟ್ಟ ನೆನಪುಗಳನ್ನ ಮರೆಯುವುದೇ ಒಳಿತು...

bharat ಧ, 02/15/2012 - 11:08

ಮನುಷ್ಯನಿಗೆ ಮರೆವು ಒಂದು ವರ.ಆದರೂ ಕಹಿ ಘಟನೆಗಳು ಮನದಿಂದ ಬೇಗ ಕಳಚಿಕೊಳ್ಳೋಲ್ಲ.ಮರೆವಿಗೆ ಅದ್ಬುತ ಚೈತನ್ಯವಿದೆ ಎನಂತಿರಿ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.