Skip to main content

ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ- ಭಾಗ-೧

ಇಂದ venkatb83
ಬರೆದಿದ್ದುJanuary 12, 2012
1ಅನಿಸಿಕೆ

 ಪರಮಾತ್ಮ  ೨೫ ಕೋಟಿ ,
ಸಾರಥಿ ೨೫ ಕೋಟಿ- 
ವಿಷ್ಣುವರ್ಧನ ಈಗಾಗಲೇ ೧೦ ಕೋಟಿದಾಟಿದೆ-
ಶೈಲೂ ತೆಗೆದ ನಿರ್ಮಾಪಕನ ಮೊಗದಲ್ಲಿ ಕಿಲ-ಲ,'ಚಿಂಗಾರಿ' ಅದಾಗಲೇ ಎಲ್ಲ ಏರಿಯ ಗೂ   ಒಳ್ಳೆ ರೇಟ್ ಗೆ ಮಾರಾಟ  ಆಗಿ, ಅದಾಗಲೇ ಸಕತ್ ಹಿಟ್ ಆಗಿದೆ ಎಂಬೆಲ್ಲ ಚಲನ ಚಿತ್ರಗಳ  ಲಾಭದ ವಿಷ್ಯ ಕೇಳಿ ಅದ್ಕೆ ಮೊದಲು ಸತತ ಸೋಲುಗಳ ದೆಸೆಯಿಂದ  'ಲಕ್ವ'ಹೊಡೆದನ್ಗಾಗಿದ್ದ ಚಿತ್ರ ರಂಗ ಮತ್ತೆ ಎದ್ದು ನಿಂತಿದೆ, ಹೊಸ ಹೊಸ ನಿರ್ದೇಶಕರು  ನಿರ್ಮಾಪಕರು ತಂತ್ರಜ್ಞರು ಬಂದು ಒಳ್ಳೊಳ್ಳೆ ಚಿತ್ರ ತೆಗೆದು ಕೋಟಿ -ಕೋಟಿ ಕೊಳ್ಳೆ ಹೊಡೆಯುತ್ತಿದ್ದರೆ...?  
 ಹೀಗಾಗಿ ನಮ್ಮ ಹಳ್ಳಿ 'ಪುಟ್ಟನಿಗೆ 'ತಾನೂ ಒಬ್ಬ 'ನಿರ್ದೇಶಕನಾಗಿ' ಒಳ್ಳೆ  'ಅದ್ಧೂರಿ' ಚಿತ್ರತೆಗೆದು 'ಹೆಸರು'ಮಾಡಬೇಕು ಅಂತ ಅಪ್ಪನ ಜೇಬಿಂದ ಆ ತಿಂಗಳ ಸಂಬಳದಲ್ಲಿ  ೫ ಸಾವಿರ  'ಎಗರಿಸಿ'  ಬೆಂಗಳೂರಿಗೆ ಬಸ್ಸು ಹತ್ತಿ ಬಿಟ್ಟ!!
 
  'ಬರೀ' ೫ ಸಾವಿರವಲ್ಲವೆ?
 
ಅಪ್ಪಯ್ಯ ಸಧ್ಯಕ್ಕೆ ನನ್ ಮೇಲೆ ಸಿಟ್ಟು ಆಗಿ ಅಮ್ಮನ ಮೇಲೆ ಮುನಿಸಿಕೊಂಡು ಹಾರಾಡಬಹುದು, ಆದರೆ ಮುಂದೆ 
ನ ಒಬ್ಬ 'ಯೆಶಶ್ವಿ' ನಿರ್ದೇಶಕನಾಗಿ 'ವಿದೇಶಿ'ಕಾರಲ್ಲಿ ಬಂದುಮನೆ ಎದುರು ನಿಂತು, ಜನ ಎಲ್ಲ 'ನನ್ನ' ನೋಡಿ, ಒಹ್ನೋಡಿರ್ಲಾ 'ನಮ್ ಪುಟ್ಟಾ '  ದೊಡ್ ಮಟ್ಟದ ನಿರುದೆಷಕ ಆಗ್ಬುತ್ತವ್ನೆ  ಅವ್ನ ದೆಸೆಯಿಂದಾಗಿ ನಮ್ ಊರ್ಗೆ ಒಳ್ಳೆಪ್ರಚಾರ ಸಿಕ್ಕೈತೆ, ತಂದೆಗೆ ತಕ್ಕ ಮಗ ಹಾಗೆ ಹೀಗೆ ಅಂತೆಲ್ಲ ಅನುವಾಗ ಅಪ್ಪಯ್ಯಗೆ ಸಂತೋಷ -ಎಮ್ಮೆ ಆಗದೆ ಇದ್ದೀತೆ?
ಒಟ್ಟಿನಲ್ಲಿ ನಾ ಒಬ್ಬ ಟಾಪ್ ನಿರ್ದೇಶಕ ಆಗಬೇಕು,ನನ್ ಚಿತ್ರಗಳು ಹಿಟ್ಟು ಆಗ್ ಕೋಟಿ-ಕೋಟಿ- ಬಾಕ್ಸ್ಆಫೀಸ್ 'ಕೊಳ್ಳೆ' ಹೊಡೆಯಬೇಕು:) 
 
ಚಿಕ್ಕಂದಿನಿಂದಲೇ  ಚಲನ ಚಿತ್ರಗಳ ಬಗ್ಗೆ ಅದರಲ್ಲೂ ಕನ್ನಡ ಅತ್ಹ್ರಥ -ಮಹಾರಥ ನಟರಾದ ರಾಜ್ಕುಮಾರು,ಅಮ್ಬರೀಶು,ಅನಂತು, ವಿಷ್ನುವರ್ಧನು, ಶಂಕರ್ ನಾಗು,ಪ್ರಭಾಕರು, ರವಿಚಂದ್ರ  ಹೀಗೆ ಎಲ್ಲರ ಅಭಿನಯ ನೋಡಿ ವಃ ಇದಪ್ಪ  ಯಾಕ್ಟಿ0ಗು ಅಂತ  ಗೆಳೆಯರ ಜೊತೆ ಹೇಳ್ತಿದ್ದ, ಅದೊಮ್ಮೆ ತಮ್ಮ ಮೆಚ್ಹ್ಸಿನ ನಾಯಕನ ಚಿತ್ರಚೆನ್ನಾಗಿಲ್ಲ ಎಂದು ಹೇಳಿದ, 
ತಮಿಳು ಸ್ಲಂ ಹುಡುಗ ಕರೀ ಮಣಿ ಯನ್ನ ಕಣ್ಣ ಮುಂದೆ 'ಕಾಮನ ಬಿಲ್ಲು  'ಕಲರ್' ಕಾಣುವಂತೆ  ಹೊಡೆದಿದ್ದ:) ಈ ಪುಟ್ಟ- ಪುಟ್ಟಾ 
 
ಒಂದೊಂದು ಚಲನ ಚಿತ್ರ ನೋಡಲು ಬ್ಲಾಕ್ ಯಾಂಡ್ವಾಯ್ಟು ಟೀವಿ ಇದ್ದ ಊರಿನ ಏಕ ಮಾತರ 'ಸಾಹುಕಾರ 'ಮುನಿಯಪ್ಪನ ಮನೆಗೆ ಹೋಗಿ
 ಬಾಗಿಲ ಸಂದಿಯಲ್ಲಿ ನಿಂತು ಇಣುಕಿ ಚಿತ್ರ ನೋಡಿ ಖುಷಿಪಡುತ್ತಿದ್ದರು ಪುಟ್ಟು ಯಾಂಡ್ಕಂಪನಿ...
ಅದೊಮ್ಮೆ ಮುನಿಯಪ್ಪ ಅವ್ರು ಹೊರ ಬಂದು ನೋಡಲು, ಪುಟ್ಟು+ ಗ್ಯಾಂಗು ಓಡಲು ಅಣಿಯಾಡಾಗ,ಅವ್ರು ಕರೆದು ಓಡಾ ಬೇಡಿರೋ, ಒಳಗೆ ಬನ್ನಿ ಸಿನಿಮಾ ನೋಡಿಎಂದು ಕರೆದು ಕೂರಿಸಿ, ಅಲ್ಲಿಂದ 
ದಿನನಿತ್ಯ ಸಂಜೆಯಾದರೆ ಊರಿನ ಮುಕ್ಕಾಲು ಚಿಳ್ಳೆ ಪಿಳ್ಳೆ ಗಳೆಲ್ಲ ಸಾಹುಕಾರರ್ಮನೆಯಲ್ಲಿ 'ಟಾಕೀಸು' ನೋಡೋಕೆ ಕುಳಿತಿರುತ್ತಿದ್ದರು!! 
ಆಗೆಲ್ಲ ಪ್ರತಿ ಚಿತ್ರ ನೋಡಿದಾಗಲೂ ಅಭಿನಯ ಚೆನ್ನಾಗಿತ್ತು,ಅದ್ಭುತವಾಗಿತ್ತು, ಕಳಪೆ ಅನಿಸ್ತು, ಇನ್ನಸ್ಟು ಸುಧಾರಿಸಬೇಕು, 
ಕ್ಯಾಮೆರ ಯಾನ್ಗಲ್ಲು  ಕೊಂಚ ಅ ಕಡೆಇತ್ತು,ಹೀಗೆ ತಪ್ಪು-ಒಪ್ಪುಗಳ ವಿಶ್ಲೇಷಣೆಯನ್ನ ಈ ನಮ್ಮ 'ಪುಟ್ಟ'  ಮಾಡುವಾಗ, ಊರಿನ ಚಿಳ್ಳೆ ಪಿಳ್ಲೆಗಳಿಗೆ ಅನ್ನಿಸಿತು. ಓಹೋ ನೋಡಿರ್ಲ 'ನಾ' ಹೇಳ್ತಿವ್ನಿ  
ಈ ನಮ್ಪುಟ್ಟ  ಅವನಲ್ಲ ಅವ್ನು 'ಸಾಮಾನ್ಯದೊನಲ್ ' ಕಂಡಿತ್ವಗ್ಲೂನುವೆ  'ಮುಂದೊಮ್ಮೆ' ನಿರುದೆಶಕನಗ್ತಾನೆ, ಮಗ ಹಂಗೆನಾರ ಆದ್ರೆ 
ನಮಗೆಲ್ಲ ನೀ'ಒಂದು' ಚಾನ್ಸ್ಕೊಡಬೇಕು, ನಾ ಸಿನೆಮದಲ್ಲಿಮಾಡಬೇಕು, ಹೇಳಿದರು ಎಲ್ಲರೂ...
ಒಂದೇ ಎನ್ರಲ 'ನೂರ ಒಂದು' ಚಾನ್ಸ್ ನಾ ಕೊಡ್ವೆ. ಮಗ ನೀ ನೋಡೋಕೆ ಒಳ್ಳೆ 'ವಜ್ರಮುನಿ'  ಹಂಗೆಇದ್ದೀಯ, ನೀ ಖಳ ನಾಯಕನ ಪಾತ್ರಕ್ಕೆ 
ಈಗಲೇ ಬುಕ್ಕು, ಹೇಳಿದ ಹಿಂದಿನ ಮನೆ ಅನಂತೂಗೆ,ಅವನೋ ಆಗಲೇ ಖಳ ನಾಗಿ ನಾಯಕಿಯ 'ವಸ್ತ್ರಾಪಹರಣದ'  ಕಲ್ಪನೆಯಲ್ಲಿ ತೊಡಗಿದ್ದ:( 
 ನೀ ಒಳ್ಳೆ ಸೊಗಸಾಗಿ ಹಾಡ್ತೀಯ ಕಣೆ 'ಪಮ್ಮಿ'  ನಿಂಗೆ ನನ್ನ ಚಿತ್ರದಲ್ಲಿ  ೩ ಹಾಡುಗಳ ಗಾಯನ ನಿಂದೆಕಣೆ, -ತಗೊಳ್ಳಪ್ಪ  'ಪಮ್ಮಿ'ಶುರು ಹಚ್ಚ್ಸಿಕೊಂಡಳು  'ವಂದನೆ-ಅಭಿನಂದನೆ, ಅಸ್ಟರಲ್ಲಿ
ಮ್ಮೋ -ನಿಲ್ಸಂಮಿ  ನಿನ್ನ ಹಾಡನ್ನ  ನಾವ್   ಕಂಡಿದೀನಿ, ವಸಿ ನಮಗೂ ಹೇಳ್ಲೋಕೆ-ಕೇಳೋಕೆ ಬಿಡ್, ನೀಹಾಡ್ನ ಆಮೇಲ್ ಹಾಡ್ವಿಯಂತೆ!! 
 
ಹೀಗೆ ಚಿಕ್ಕಂದಿನಿಂದಾ  ನಿರ್ದೇಶಕನಾಗಬೇಕು ಅಂತ ಕನಸುಗಳ ಬೀಜವನ ಮನದಲ್ಲಿ ಬಿತ್ತಿ -ನೀರೆರೆದು ಅದಕ್ಕಾಗಿ ಆಗಾಗ ಶ್ಕೂಲು ಕಾಲೇಜು  ಎಲ್ಲೆದ್ಯೂನಾಟಕ-ಪಾತ್ರಾಭಿನಯ  ಮಾಡುತ್ತಲೇ ಅದಕ್ಕೆ ತಯಾರಿ ಮಾಡಿಆಡಿ-ಆಡಿಸಿ ಬೇಶ್ ಅನ್ನಿಸಿಕೊಂಡ, ಆದರ್ ಮನೆಲಿ ವಿನೂ ಅಪ್ಪ- ಹೇಳ್ತಾರೆ   'ಆ ಕಲೆ' ಹೊಟ್ಟೆಗ್'ಕೂಳು' ಕೊಡೋಲ್ಲ ಮಗ, ಅದು ತಪಸ್ಸು ತರಹ 
ಮಾಡಬೇಕು ಕಸ್ಟ್ -ನಸ್ಟ ಅನುಭವಿಸಬೇಕು, ಹೊಗಳಿಕೆ-ತೆಗಳಿಕೆ-ಮೂದಲಿಕೆ-ಸಹಿಸಬೇಕು, ಅದೆಲ್ಲ ನಿನ್ನಿಂದಸಾಧ್ಯವಿಲ್ಲ, ಅಲ್ದೆ ನಾವ್'ಮಧ್ಯಂ ವರ್ಗದೊರು' ನಮಗ್ಯಾಕೆ ಅದು?
ಏನಾರ ಒಳೆದ್ ಓದಿ ನೌಕರಿ ಹಿಡಿದು ನಮ್ಮನ್ನ ಉದ್ಧಾರ ಮಾಡು ಅನ್ನೋರು,
ಆದ್ರೆ ಅಮ್ಮ ಮಾತ್ರ ಮಗನಿಗೆ ಬೆಂಬಲ,
ರ್ರೀ ಮೊನ್ನೆ ನಮ್ಮ'ಪುಟ್ಟ;  ಮಾಡಿದ್ದನಲ್ಲ ಆ 'ಪಾತ್ರ' ಅದೇ ಎಂಥದು ಅದು?ಸಂಪತ್ತಿಗೆ ಸವಾಲಿನ 'ಭದ್ರನ'ಪಾರ್ಟು ಎಷ್ಟು ಚೆನ್ನಾಗಿಮಾಡಿದ ಗೊತ್ತೇ?   
ಆ ದರ್ಪದ ಸಾಹುಕಾರ ಸಿದ್ದಪ್ಪನನ್ ನಮ್ಮ 'ಪುಟ್ಟ  ಅಕ ಭಧ್ರ  ತನ ಕೈಯಲ್ಲಿನ ಕೊಡಲಿಯಿಂದ ಹೊಡೆಯ ಹೋಗಿದ್ದು ಅವ್ನು ಭಯ ಬಿದ್ದದ್ದು ಜನ 
ಚಪ್ಪಾಳೆಹೊಡೆದದ್ದು ಅಹ! 
ನೋಡಬೇಕಿತ್ತು ನೀವು,
 -ಸಾಕು ಸುಮ್ನಿರೆ ಕಂಡಿದೀನಿ-
ಇವ್ನು  ಕೊಡಲಿಯಲ್ಲಿ 'ಹೊಡೆಯ' ಹೋದಾಗ ಆ ಕೊಡಲಿ ಅದರ 'ಹಿಡಿಕೆಯಿಂದ' ಹೊರ ಬಂದು ಸಾಹುಕಾರನ ಪಾತ್ರದಾರಿಯತ್ತ 'ದಾವಿಸಿದಾಗ' 
ಅವನು ಭಯ ಪಡದೆಇನ್ನೇನು ಮಾಡಿಯಾನು?
 ನೀ ಒಬ್ಳು ಸಾಕು ಅವ್ನಂನ್ ಹಾಳು ಮಾಡೋಕೆ
ಅದೆಲ್ಲ ಬೇಡ ಅವಿಗ್ನಿಗ್ ಒಳ್ಳೆ  ಓದೋಕೆಳು.
ಸ್ಸರೀನ..?
 
ಪೇಲವವಾದ ಮಗನಿಗೆ ನೀ ಯಾನು ಯೋಚನೆ ಮಾಡಬೇಡ ಮಗ, ಮೊದಲಿಗ ಹಂಗೆಯ, ಈಗೀಗ ಯಾರೆಲ್ಲ ಒಳ್ಳೆ ದೊಡ್ಡ ನಟ ಅನ್ನಿಸ್ಕೊಂದವ್ರೋ ಅವರಿಗೂಅವ್ರ ತಂದೆ ತಾಯಿ ಹಿಂಗೆ ಹೇಳಿದ್ದು, ಆದರೂ ಅವ್ರು ದೊಡ ಹೆಸರು ಮಾಡಲಿಲ್ಲವೇ? 
ತಂದೆ ತಾಯಿಗ್ ಹೆಮ್ಮೆ ಅನ್ನಿಸಲಿಲ್ಲವೇ? 

ಇಲ್ಲೂ ಅಸ್ತೆಯ ನಿಮ್ಮಪ್ಪ ಆಮೇಲೆ ಯಾವತ್ತೋ ಒಪ್ತಾರೆ,ನೀ ಮಾತ್ರ ಒಳ್ಳೊಳ್ಳೆ ಪಾರ್ಟುಮಾಡಿ ಹೆಸರು ಗಳಿಸು 
ನಾ ಇವ್ನಿ ಕಣ್ಲ  ಅಂದ್ರು..
 ಹೀಗೆ ಕಾಲೇಜು ಮುಗಿಸಿ 
 ಮುಂದೇನು ಅನ್ನುವಾಗ ಅಪ್ಪಯ್ಯ ನ ಚಿತ್ರ ತರಬೇತಿ ಗೆ 
ಸೇರ್ತೀನಿ ಅಂದಾಗ, ತಂದೆ ಅಯ್ಯೋ ಅಯ್ಯೋ  
ಅದ್ರ  ಬಡ್ಲಿಗ್ 'ಹಾಳು ಬಾವೀಗ್ ಬೀಳು' ಹೋಗಿ,ಬೇರೆ ಏನರ ಮಾಡ್ಲ, 
ಅದ್ಯಾಕ್ 'ಮೂರ್ ತಾಸು' ಚಿತ್ರ ರಂಗ ಚಿತ್ರ ರಂಗ -ನಟನೆ -ತರಬೇತಿ ಅನ್ದೀಯೇ? 
ಆಗ್ಲೇ ಚಿತ್ರ ರಂಗದಲ್ಲಿ ನೂರಾರು ಜನ ಅವ್ರೆ, ಎಲ್ರೂ ನಾ -ನೀ ಅನ್ತಿರ್ವಾಗ, 
ನೀ ಒಬ್ಬ ಹೋಗ ಅಲೆನು ಮಹಾ ಕಿಸಿಯೋದ್? ಅಪ್ಪಯ್ಯ ಎಲ್ರ್ರೋನುವೆ ಇರಬಹುದು
 ಆದ್ರೆ'ನಾ' ಇಲ್ವಲ್ಲ!!
 
ನಾ ಹೋಗಿ ಒಂದು ಚಿತ್ರ ತೆಗೆದರೆ ಆಮೇಲೆ ನೋಡಿ ..
ಹೊಗೊಗೋ ಕಂಡಿದೀನಿ, ಬಡಿವಾರಾದ್ ಮಾತ್ವ...
 

ಆಗಲೇ ಡೀಸೈಡು ಮಾಡಿದ್ದು  ನಾ ಮನೆಯಿಂದ ಓಡಿ ಹೋಗಬೇಕು ಅಲ್ಲಿ ತರಬೇತಿಗೆ ಸೇರ್ಕೊಬೇ ಕು. ಆಮೇಲೆ ಯಾರಾರ ಒಳೆನಿರ್ದೇಶಕರ ಕೈ ಕೆಳಗೆ ಕೆಲಸ ಮಾಡಿ ಒಳ್ಳೆ ಚಾನ್ಸ್ ಸಿಕ್ಕಾಗ ನಿರ್ದೇಶಕನಾಗಬೇಕು  ಹೆಸರು ಮಾಡಬೇಕು... 
 ರಾತ್ರಿ ಅಮ್ಮನಿಗೆ ಈ ವಿಷ್ಯ ಹೇಳಿ ನೀ ಯಾನು ಚಿಂತೆ ಮಾಡ ಬೇಡನಾ ತರಬೇತಿ ಮುಗ್ಸಿ  ಕೆಲಸಕ್ ಸೇರಿ  ಆಮೇಲೆ ನಿರ್ದೇಶಕ ಆಗಿ 
 ನಿಮ್ಮನ್ನೆಲ್ಲ ಬೆಂಗಳೂರಿಗೆ ಕರೆಸಿಕೊಳ್ಳುವೆ -ಚೆನಾಗಿ ನೋಡಿಕೊಳ್ಳುವೆ ಅಂದ..
 
ತಾಯಿ ಅವನನ ಅಪ್ಪಿಕೊಂಡು -ಮುದ್ದಾಡಿ  
ಮಗನೆ ನನ್ನ ಆಶೀರ್ವಾದ ಯಾವತ್ತೋ ಇರ್ತೆ,
ನೀ  ಯಾನು ನಮ್ ಬಗ್ಗೆ ಚಿಂತಿಸಬೇಡ, 
ಸ್ವಲ್ಪ ದಿನ ನಿಮ್ಮಪ್ಪಯ ಹಾರ್ಯಾಡನು 
ಆಮೇಲ್ ಸರಿ ಹೋಗ್ತೆ ಆದ್ರೆ 'ನೀ' ಮಾತ್ರ ಹುಷಾರಾಗಿರಬೇಕು, ದೊಡ್ಡ ಪಟ್ಟಣ, 
ಒಳೆವ್ರು -ಕೆಟ್ಟ ಜನ ಇರ್ತಾರು ,  ಶ್ರದ್ಧೆಯಿಂದ ನಿನ್ ಗುರಿ ಮುಟ್ಟ ಬೇಕು ತಿಳೆತ?
ಹೊರಡು ಅಂದು ವಿನೂ ಅಪ್ಪನ ಜೇಬಿಂದ ೫೦೦೦ ಕೊಟ್ಟು ಕೊಟ್ಟಿದ್ದರು.... 
 
-------------------------------------------------------------
ಹಾಗೆಲ್ಲ ಸುಖಾಸುಮನೆ ಯಾವ 'ತರಬೇತಿಯೂ' ಇಲ್ಲದೆ'  ದರಬೇಶಿ  'ಪುಟ್ಟ' ,  ಗಾಂಧಿ ನಗರಕ್ಕೆ ಹೋಗಿ ಟಾಪ್ ನಿರ್ದೇಶಕ ಆಗಲು ಸಾಧ್ಯವೇ? ಆದರೆ 'ಅವನೊಂಥರಾ 'ಹುಟ್ಟಿಸಿದ ದೇವ್ರು ಹುಲ್ಲು ಮೆಯಿಸೋಲ್ಲ  
ಅನ್ವಜಾಯಮಾನದವನು...!!
--------------------------------------------
ಬೆಂಗಳೂರಿಗೆ ಬಂದು ,ಬೆಳಗ್ಗೆ ಮೆಜೆಸ್ಟಿಕ್ ನಲ್ಲಿ 
ಬಸ್ನಿಂದ ಇಳಿದು  ಅಲ್ಲೇ ಹೊರಗಡೆ  ರಸ್ತೆ ಬದಿಯೇ 
ತಯಾರ್ಗ್ತಿದ  'ತಳ್ಳು ಬಂಡಿಯ'ಪೂರಿ ಸಾಗು ತಿಂದು 
ಚಹಾ ಕುಡಿದು, 
ಅಬ್ಬೋ ಏನ್ ಚಳೀ ಮಾರಾಯ ಈ 'ಬೆನ್ಗ್ಲುರಲಿ' ಅಂದ, 
ಆ ತಳ್ಳು ಬಂಡಿಯವನು ಇವನ ಮುಖನೋಡಿ, 
ಏನೋ 'ಹಳ್ಳಿಯಿಂದ'
 ಬಂದಿದೀಯ? ಕೆಲಸ ಹುಡುಕೊಂಡ ಅಂದ? 
ಹೌದಣ್ಣೋ , ನಾ ಇಲ್ಲಿ 'ನಿರುದೇಷಕ' ' ಆಗ್ಬೇಕು ಅಂತ ಬಂದಿವ್ನಿ, ಆ!! 'ಎಂಥಾದ್ದೋ' ಅದು ನಿರುದೇಷಕ ಕೆಲಸ? 
ಆಯೋ ಪೆದ್ದ ಮುಂಡೇದೆ  'ನಿರುದೇಷಕ' ಅಂದ್ರೆ ಗೊತ್ತಿಲ್ವೆ? 
ಇವ ಜೀವನದಲ್  'ಒಂದಾರ' ಪಿಚರ್ ನೋಡವನ ಇಲ?  ಅಂತ ಸಂದೇಹ ಪಡ್ತಾ, 
ಅಣ್ಣೋ  ನಿರುದೇಷಕ ಅಂದ್ರೆ 'ಪಿಚರ್' ತೆಗಿತರಲ ಅವ್ರೇಯ, 
ನಾ ಅದೇ ಆಗಾಕ್ ಬಂದಿವ್ನಿ.. 
ಓಹೋ ಹಾಗೋ!! 
 
 
 
ಆದ್ರೆ ಅದಾಗಲೇ 'ಹಿಂಡುಗಟ್ಟಲೇ ಜನ -ಖಂಡುಗ-ಖಂಡುಗ'  ಕಥೆ ಹಿಡಿದು 
ನಾ ಪಿಚರ್ ಮಾಡ್ತೀನಿ ಅಂತ ಅಲೆಲ್ಲ  ಬೇಜಾನ್ಓಡಾಡ್ತವ್ರಲೋ  'ಚಪ್ಪಲಿ' ಸವೆಸಿಕೊಂಡು, 
ನೀನೋಬ್ 'ಕಮ್ಮಿ' ಇದ್ದ್ದೆ ನೋಡು:) ನಾ ದಿನಾಲುವೆ ಅದೆಸ್ಟೋ ಜನ ಹುಡುಗರು 'ನಾಹೀರೋ' ಆಗ್ತೆನಿ ಅಂತ ಹೇಳಿದ್ ಕೇಳಿದ್ದೆ, 
ಸಧ್ಯ ನಂ ಪುಣ್ಯಕ್ಕೆ ನೀನೊಬ್ಬ 'ನಿರುದೇಷಕ' ಆಗ್ತೀನಿ ಅಂದೆಯಲ್ಲ:(
 
ಊರಲ್ಲಿ ಒಳ್ಳೆ ಆಸ್ತಿ - ಗೀಸ್ತಿ ಮಡಗಿದ್ಯೋ? 
ಒಳ್ಳೆ ಸಿರಿವನ್ತರ್  ಮಗಾ ಏನೋ ನೆ? 
ಒಮ್ಮೆ ಪುಟ್ಟ ನನ ಮೇಲಿಂದ ಕೆಳಗೆ ಅಂದಾಜು ಮಾಡುತ್ತ ಕೇಳಿದಾಗ, 
ಪುಟ್ಟ ನಿಗೆ ಆ ತಳ್ಳು ಗಾಡಿ ಯವನು ,ಕಳ್ಳನೋ 
ಇನ್ಯಾವನೋ ತರಹ ಕಾಣಿಸಿ, ಅಣ್ಣ  ಈ ಕಾಸು ತೊಗೋ ನಾಬರ್ವೆ ಅಂದ...
ಮುಂದೊಮ್ಮೆ ನಾ 'ಟಾಪ್ ನಿರುದೇಷಕ'  ಆದಾಗ ಇಲ್ಲಿ ಬಂದು ನಿನ್ನ ತಳ್ಳು ಬಂಡಿಯಲ್ಲಿ ನಮ್  ಕಥಾ ನಾಯಕ 'ಪೂರಿತಿನ್ನೋ' ಸೀನ್ ತೆಗಿತೇನೆ 
ಅಂದ, 'ಹೋಗೊಲೋ  ಸೀನ್ ತೆಗಿತಾನಂತೆ ಸೀನು!! 'ಸಧ್ಯ ಕಾಸು ಎಲ್ಲ ಖಾಲಿ ಮಾಡಿ ನಂ ಹತ್ರ ಬಂದು ಅಣ್ಣ'ವಸಿ' ತಿಂಡಿ ಕೊಡ್ತೀಯ?ಅನ್ದಿದ್ರೆ ಸಾಕು :)  
ಪುಟ್ಟ ಕೊಂಚ್ ಮುಂದೆ ಹೋದ ಮೇಲೆ- 
ಆ ತಳ್ಳು ಬಂಡಿಯವನು, 
ಈಗೀಗ ಹುಡುಗರಿಗ್ ತಾ ಹೀರೋ ಆಗ್ಬೇಕು, 
ಅದಗ್ಬೇಕು ಇದಾಗ್ಬೆಕು ಅಂತೆಲ್ಲ  'ಏನೇನೋ' ಕನ್ಸ್ಗಳು, 
ಆದ್ರೆ ಅದೆಸ್ತು ಕಷ್ಟ ಇವ್ರಿಗೆನ್ ಗೊತ್ತು? 
ನಾ ಅದೊಮ್ಮೆ ಇಲ್ಲಿ 'ಯಾಕ್ಚನ್ '  ಹೀರೋ ಆಗೊಕ್ ಬಂದು, ಇಲ್ಲಿತಳ್ಳು ಬಂಡಿಯಲ್ಲಿ ಪೂರಿ ಹಿಟ್ಟು 'ನಾದುತ' ಯಾಕ್ಚನ್ ಹೀರೋ ಆಗಿದಿನಿ:(  ಈ ಬಂಡಿ ನಂಬಿ ದಿನಾಲುವೆ  ಒಳ್ಳೆ ಕಾಸು ಸಂಪದಿಸ್ತಿದೀನ್, ಆ'ಥಳುಕ್ -ಬಳುಕಿನ್'  ಲೋಕ ನಂಗ್ ಯಾಕ ಗುರುವೇ ? ಅಂದ ಸ್ವಗತಕ್ಕೆ!!
 
ಪುಟ್ಟ ಸ್ವಲ್ಪ ದೂರ ಕೈನಲ್ಲಿ ಅದ್ದ್ರೆಸ್ಸಿನ ಚೀಟಿ ಹಿಡಿದು  ಗಾಂಧಿನಗರ ಎಲ್ಲಿ ಎಲ್ಲಿ ಅಂತ  ಕೇಳಿ ಕೆಲವರು '
ದಿಕ್ಕು ತಪ್ಪಿಸಿದಾಗ' ಸೋತು ಸೊರಗಿ ಕುಕರು ಬಡಿಯ ಹೋದಾಗ, ದಾರಿಯಲ್ಲಿ ಟೀಕು ಟಾಕ್ ಆಗಿ ಡ್ರೆಸ್ಸು ಮಾಡಿದ್ದ  ಒಬ್ಬ ಬರ್ತಿರೋದು ಕಾಣಿಸಿ  
ಮರಳುಗಾಡಲ್
 ನೀರ್ ಸಿಕ್ಕಂಗೆ ಖುಷಿ ಆಗ್, 
ಅಣ್ಣ  ವಸಿ ಎ ಅದ್ದ್ರೆಸ್ಸು ಎಲ್  ಬರ್ತೆ ಹೇಳುವಿಯ ಎಂದ.. 
ಅವ್ನು ಇವನನ್ ಮೇಲೆ ಕೆಳಗೆ ನೋಡಿ, ಓಹೋ ಇದಾ?
ನಂಗೊತ್ತು, ನಾ 'ಅಲ್ಲೇ' ಇರೋದು ಎಂದ.. ಹೌದ? 
ಅಣ್ಣ  ಹಾಗಾದ್ರೆ 'ಅವ್ರು' ನಿಂಗೆ ಗೊತಿರ್ಬೇಕು, 
ಮತ್ತೆ ಗೊತಿಲ್ದೆ ಏನು? ಅವ್ನು ಒಂಥರಾನಂಗೆ ಚಡ್ಡಿ ದೋಸ್ತು,
 
ನಾ ನಿನ್ನನ್ನ ಅವ್ರಿಗ್ ಪರಿಚಯ ಮಾಡಿಸಿತೀನಿ, 
ಕಾಸು ಏನರ ಮಡಗಿದಿಯ? 
ಆ ಹೋಟೆಲಿಗೆ ಹೋಗಿ ವಸಿ ಕಾಫೀ ಕುಡಿದು ಅಲ್ಲಿಗ್ ಹೋಗಿ ಆ ನಿರ್ದೆಶಕ್ರಿಗ್ ನಿನ್ನ ಪರಿಚಯಿಸ್ತಿನಿ, ಓಹೋ ದೇವ್ರೇ - 
ನಾ ಹುಡುಕುತ್ತಿದ್ದ ಬಳ್ಳಿ ಕಾಲ್ಲಿಗ್ ತಗುಲಾಕೊಳದಿದ್ರೂ  ಹತ್ತಿರದ 'ಲಿಂಕು' ಸಿಕ್ಕಿತಲ್ಲ: ಕಾಫೀ ಕುಡಿದು  ಹೊರಗೆ ಬಂದು ಪುಟ್ಟ
ಹತ್ತಿರವೇ ಕಾಸು ಇಸ್ಕೊಂಡು ಸಿಗರೆಟ್ ತಗಂಡು ದಂ ಹೊಡೀತ ನಿಂತ ಆ ಆಗಂತುಕ. ಪುಟ್ಟನಿಗೆ ಯಾವಾಗ ನಾ ಆ ಟಾಪ್ ನಿರ್ದೇಶಕರನ್ನ ನೋಡ್ತಿನೋ? ಅವ್ರ ಆಶೀರ್ವಾದ ಪಡೆದು ಸಹಾಯಕ ಆಗ್  ಕೆಲಸಕ್ ಸೇರ್ತಿನೋ ಎನ್ನೋಚಿಂತೆ...
 
ಅಣ್ಣ ಹೋಗೋಣ್ವಾ ಅಂದ , 
ಹಾ! ಹೋಗುವ, 
ಗಾಂಧಿನಗರದ ಮೂಲೆ ಮೂಲೆ ಸುತ್ತು ಹಾಕಿಸಿ, 
ಅದು ಅವ್ರ ಆಫೀಸು ಇದು ಇವರ ಆಫೀಸು,ಅಂತೆಲ್ಲ ತೋರ್ಸಿ  ಯಾರ್ಯಾರಿಗೋ ಕೈ  ಮಾಡಿ ಹೆಂಗಿದ್ರಿ ?
ಅಂತ ಕೇಳಿ ಅವ್ರು ಮುಖ ವಿಚಿತ್ರ ಮಾಡಿದ್ದು ಆಯ್ತು, 
ಅದನ್ನು ನೋಡಿ ಪುಟ್ಟ, ಏನ್ ಅಣ್ಣ ವರು ಗುರ್ತೆ ಇಲ್ದಂಗೆ ಹೋಗ್ತವ್ರೆ, ವಸಿ ನಿಂತು ಮಾತಾಡೋಕೆ ಏನ್ ರೋಗ ಅವ್ರಿಗ್? 
ಈ 'ದುನಿಯಾ'  ಹಿಂಗೆ ಕಾಣಲ!! 
ನಮ್ಸಹಾಯ ತಗಳೋದು, ಆಮೇಲೆ  'ಪಾರಗೊವರ್ಗೆ ಗಂಗಮ್ಮ- ಪಾರದ್ಮೇಲೆ ಪಿ0ಗಮ್ಮ'  ನೀ ಏನೂ ಚಿಂತಿಸ ಬೇಡ  ಅದು ಮಾಮೂಲಿ, ನೀ ಇಂಥದೆಲ್ಲ ಇನ್ನು ಎಸ್ಟೋ ನೋಡೋದ್ ಇದೆ ಗೊತ್ತ?
 
ಒಂದು ಭವ್ಯವಾದ ಬಿಲ್ಡಿಂಗ್ ನ ಎದುರಿಗ ನಿಂತು, 
ಇದೆ ಕನ್ಲಾ ಆ ಟಾಪ್ ಡೈರೆಕ್ಟ್ರು - ಆಫೀಸು  ಮತ್ತು  ಮನೆ,
 ನೀ ಇಲ್ಲೇ ಇರು ನಾ ಅವ್ರು ಇದಾರ ಅಂತ ಕೇಳಿ ಬಂದು 
ನಿನ್ನ ಕರೆದೊಯ್ತೀನಿ, ಪುಟ್ಟ ನಂ ಒಂದೆಡೆ ನಿಲ್ಲಿಸಿ  ಗೇಟು ಹತ್ತಿರ ಹೋಗಿ ವಾಚ್ಮೆನ್ ಹತ್ತಿರ ಪಿಸ ಪಿಸ ಅಂತ ತಮಿಳಲ್ಲಿ ಮಾತಾಡಿ  ಬಂದು, 
ಲೋ ಹುಡುಗ ಏನೋ ನಿನ್ನ ಹೆಸರು? 
ಅಣ್ಣ ಪುಟ್ಟ ಅಂತ!! 
ನೋಡು ಪುಟ್ಟ -ಅವ್ರು ಈಗ ಇಲ್ಲಿ ಇಲ್ವಂತೆ, ಆ  ಖ್ಯಾತ ಹೀರೋ ಗೆ ಕಥೆ  ಹೇಳೋಕೆ  ಹೀರೋ ಮನೆಗ್ ಹೋಗವರಂತೆ, ಅದ್ಕೆ ನೀ 'ಇಲ್ಲೇ' ಕೂತಿರು, 
ನಾ ಇನ್ನೊಂದು ಕಡೆ ಹೋಗಿ ಅಲ್ಲಿ'ಇನ್ನೊಬ ಡೈರೆಕ್ಟ್ರು' ಇದಾರ ಅಂತ 
ಹಿಂಗ್ ಹೋಗ್- ಹಾಂಗ್ ನೋಡಿಕೊಂಡು ಬರ್ತೀನಿ, 
ಇನ್ನು ಕಾಸು ಎಷ್ಟು ಮಿಕೈತೋ? 
ಅಣ್ಣ ಇನ್ನು೪೫೦೦ ಇದೆ ಅಣ್ಣ, 
ಓಹೋ ಬೇಜಾನ್ ಆಯ್ತು, ಅದ್ರಲ್ಲಿ ಒಂದು ೪ ಈ ಕಡೆ ತಳ್ಳು,ಅಲ್ಲಿ ಗೇಟು ಕಾಯ್ವ ಅವ್ನ ಕೈ 'ಬೆಚ್ಚಗೆ' ಮಾಡಿ ಬರ್ತೀನಿ ಎಂದ, 
ಅಣ್ಣ ಅಂತ ಸಂಶಯ ದ್ವಂದ್ವ  ಗೊಂದಲದಲ್ಲಿ ನೋಡಿದ ಪುಟ್ಟನಿಗೆ, ನೋಡೋ ನಿರ್ದೇಶಕ ಅಂದ್ರೆ ಸುಮ್ನೆ ಅಲ್ಲ, ನಾ ನಿನ್ನ ನಿರ್ದೆಶಕ್ರಿಗ್ ತೋರ್ಸಿ ಎಲ್ಲ ಹೇಳಿ, ಕೆಲಸಕ್ ಸೇರ್ತಿನ್, ಅದ್ಕೆ ವಸಿ ಕಾಸು ಬಿಚ್ಲೆಬೇಕ್, ನಿನ್ನಿಸ್ಟ ಅಂದ, ಸ್ಸರಿ ಅಣ್ಣ ಅಂತ ಮುಗ್ದ ಪುಟ್ಟ  
೪ಸಾವಿರ  ಆಗಂತುಕನ ಕೈಗೆ ಕೊಟ್ಟ, ಅಣ್ಣಾ ನಿಮ್ಮ 'ಹೆಸರೆ' ಹೇಳಲಿಲ್ಲ, -ನಂದಾ?
 ನಂದಾ,  ಒಳ್ಳೆ ಹೆಸರು ಅಣ್ಣ!!
 
ಅವ್ನು ನಗ್ತಾ ಈಗ ಬರ್ವೆ ಅಂತ ಹೋದ, 
ಪುಟ್ಟ  ಕ್ಕಾಯ್ತ..ಕಾಯ್ತಾ. ಕಾಯ್ತಾ.  ಕಾಯ್ತಾ  .............................!! ಕುಳಿತೆ ಇದ್ದ,  
ಸೂರ್ಯ  ಪೂರ್ವದಿಂದ ಪಶ್ಚಿಮಕೆಮುಣುಗಿ 'ಗಾಂಧೀ ನಗರ ಕ್ಕೆ ,ಇನ್ನೊಂದು 'ಕತ್ತಲ ಕಲರ್' ಬಂದು ಚಿತ್ರ -ವಿಚಿತ್ರ ಜನ ಎಲ್ಲ ಪ್ರತ್ಯಕ್ಚ ಆದರು, ಪುಟ್ಟ ಹಿಂಗೂ ಆಯ್ತಾ  ಅಂತಅಚ್ಚರಿ ಪಡುತಿರಲು ಆಮನೆ ಕಾಯುವ ಗಾರ್ಡು ಬಂದು , 
ಲೋ ಯಾರೋ ನೀನು? ಇಲ್ಲಿ ಯಾಕೆ ಕುಲಿತಿದಿಯ? ಎಂದ.. ಅಣ್ಣಾ ನಾ ಪುಟ್ಟಅಂತ ಹಳ್ಳಿಯಿಂದ ಬಂದಿವ್ನಿ, ನಾ ನಿರುದೇಷಕ ಆಗ್ಬೇಕು ಎಂದ, 
ಡೈರೆಕ್ಟ್ರು? ಹಿಂಗೆ ಹಳ್ಳಿ ಬಿಟ್ಟು ಬಂದು ನಾ ನಿರ್ದೇಶಕ ಆಗ್ಬೇಕು ಅಂದ್ರೆಅದೆಂಗ್ಲ ಆಗ್ತೈತೆ? ಅದ್ಕೆ ಶ್ರಮ ಪಡಬೇಕು, ಕೋರ್ಸು ಮಾಡಬೇಕು,  
ಪಾಸು ಆಗಬೇಕು, ಒಳ್ಳೊಳೆ ವಿಭಿನ್ನ ಆಯ ದಿ ಯಾ ಇರ್ಬೇಕು,ಯಾರದ್ರೂ ಒಳ್ಳೆ ಟಾಪ್ ನಿರ್ದೇಶಕನ ಕೈ ಕೆಳಗಡೆ ಕೆಲಸ ಮಾಡಬೇಕು, 
ಅವ್ರ ಕೆಲಸದ ಶೈಲಿ ನೋಡಬೇಕು ಅರಿಯಬೇಕು, ನೆ ನೋಡಿದ್ರೆಅದೇನೂ ಮಾಡಿದ ಹಾಗ ಏನೊಂದು ಮಾಡಿದ ಹಾಗ ಅನ್ಸ್ತಿಲ್ಲ.. 
ಅಣ್ಣಾ ನನ್ನಂ ಇಲ್ಲಿಗ್ ಒಬ್ರು ಕರೆದ್ಕೊಂದೂ ಬಂದು  ದೈರೆಕ್ತ್ರಿಗ್  ಮೀಟ್ಮದ್ಸ್ತೀನಿ ಅಂದ್ರು, ಇನ್ನಿಬ್ಬ ದಯಾರೆಕ್ತ್ರನ್  ನೋಡ್ ಬರ್ತೀನಿ ಅಂತ 
ಹೋದವರು ಇನೂ ಬಂದಿಲ್ಲ ಎಂದ.. ಓಹೋ 'ಅವ್ನ'? ಅವ್ನಿಗ್ ಯಾವಡೈರೆಕ್ಟ್ರು ಗೊತ್ತೋ?
ಅವ್ನು  ನಿನ್ನ ಹಾಗೇ 'ಹೀರೋ' ಆಗಬೇಕು ಅಂತ  ಇಲ್ಲಿ ಬಂದು ಚಪ್ಪಲಿ ಸವೆಸಿಕೊಂಡು ಹೀರೋ ಆಗದೆ, 
ನಿನ್ನ ತರಹ ಇಲ್ಲಿಗ್ ಬರೋರ ಕಾಸು ಇಸ್ಕೊಂಡು ಎಸ್ಕೇಪ್ ಆಗ್ತಾನೆ, 
ನೀ ಅವ್ನಿಗ್ ಕಾಸು ಗೀಸು ಏನು ಕೊಟ್ಟಿಲ್ಲವಸ್ಟೇ ?
 ಅಯ್ಯೋ ನಾ ಕೆಟ್ಟೆ ನಾ ಕೆಟ್ಟೆ!! 
ಈಗ ಏನು ಮಾಡೋದು? 
ಏನೋ ಏನಾಯ್ತೋ?  
ಅಣ್ಣಾ ಅವ್ನು ಅವ್ನು ನನ್ ಹತ್ತಿರ ೪ ಸಾವಿರ್ ಇಸ್ಕೊಂಡು ಹೋದ ಎಂದ ಅಳು ಮುಖಮಾಡಿಕೊಂಡು.. 

ಹೋಗ್ಲಿ ಬಿಡು ಇಲ್ಲಿ ಇದೆಲ್ಲ ಕಾಮನ್ನು, ನೀ ವಸಿ ಜಾಗ್ರತೆಯಗಿರ್ಬೇಕು, ಮೊದಲು ಎಲ್ಲಿಯರ ಕೆಲಸಕ್ ಸೇರ್ಕೋ ಕಾಸುಸಂಪದ್ಸಿ ಯಾವ್ದಾರ ಕೋರ್ಸು ಮಾಡಿ ಆಮೇಲ್  ನ್ನಿರ್ದೆಷಕರ ಸಹಾಯಕ ಆಗು, ಏನೋ ನಾ ನಿರ್ದೇಶಕರ 
ಮನೆ ಗೇಟು ಕಾಯ್ವದರಿಂದನಂಗೆ ಈ ಬಗ್ಗೆ ವಸಿ ಗೊತ್ತು  ಎಂದ..  

ಅಲ್ಲೇ  ಗಾಂಧಿನಗರದ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿ 'ನಮ್ಮ ಹುಡುಗ' ಇವ್ನಿಗ್ ಒಂದುಕೆಲಸ ಕೊಡಿ ಅಂತ  ಕೇಳಿ, ಅವ್ನಿಗ್ ದೋಸೆ ಹಿಟ್ಟು ರುಬ್ಬೋ ಮಶಿನಿಗೆ ಹಾಕಿ ಅದ್ನ ಎತ್ತೋ ಕೆಲಸ ಕೊಟ್ರು..
ಮೊದಲ  ಬೆಂಗ್ಳೂರು  ಅನುಭವವೇ 'ಕಹಿ' ಆದರೂ ಅದ್ನೆಲ್ಲ ಮರ್ತು 'ಹಿಟ್ಟು' ಎತ್ತುತ್ತಾ, ಮುಂದೊಮ್ಮೆ ಟಾಪ್ ನಿರ್ದೇಶಕ್ ಆಗಲೇಬೇಕು ಅಂತ 
ನಿರ್ಧಾರ ಗಟ್ಟಿ ಮಾಡಿಕೊಂಡ...
 
ಸಶೇಷ... ಮುಂದಿನ ಭಾಗದಲ್ಲಿ...
ದೋಸೆ  ಹಿಟ್ಟು ರುಬ್ಬುತ,
ನಿರ್ದೇಶಕ ಆಗೋ ಕನಸು ಕಾಣೋ 'ಪುಟ್ಟ' :
 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

According to my investigation, billions of people all over the world receive the business loans from various banks. So, there's a good possibility to get a car loan in all countries.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.