Skip to main content

ಸುಬ್ಬ 'ಹೆಣ್ಣು' ನೋಡಲು ಹೋಗಿದ್ದು- (ಹಾಸ್ಯ ಬರಹ)-ಕೊನೆ ಭಾಗ .....

ಇಂದ venkatb83
ಬರೆದಿದ್ದುJanuary 8, 2012
2ಅನಿಸಿಕೆಗಳು

ಸುಬ್ಬನ ಜೊತೆಗೆ ಹೊರಟವರಲ್ಲಿ ಸುಂದರನ ಬಗ್ಗೆ  ಅದಾಗಲೇ ನಮಗೆ ಗೊತ್ತಾಗಿದೆ!! ಈ ಕೃಷ್ಣ(ಪಾ) , ವಿನಾಯಕ(ಗ)  ಯಾವ್ತರಹದವರು?ಕೃಷ್ಣ(ಪಾ) - ಸಾಧು, ಸರಳ-ನಿರಾಧಮ್ಭರ -ನಿರ್ಘವಿ-ನಿಷ್ಟುರ ಆದರೂ ತಿಳಿ ಮಾತಲ್ಲಿ ಹೇಳುವ  ಒಂಥರಾ   'ಹಿಂದೆ ಬಂದರೆ.................ರು.. ಕೆಲಸ-ಕಾರ್ಯ-ಶ್ರದ್ಧೆ ,ಎಲ್ಲದರಲ್ಲೂ ಶಿಸ್ತುಬದ್ಧ -ಸಮಯ ಪರಿಪಾಲಕ ವ್ಯಕ್ತಿ..ಒಂಥರಾ 'ಕಟ್ಟು  ನಿಟ್ಟಿನ'   ವ್ಯಕ್ತಿ..ವಿನಾಯಕ(ಗ) - ಅಷ್ಟಾಗಿ ಗೊತ್ತಿಲ್ಲ, ಆದರೆ ಸ್ವಭಾವತಃ  'ತಿಂಡಿ ಪೋತ'!! 'ಕಲ್ಲನ್ನು' ಬೇಕಾರೆ ತಿಂದು ಅರಗಿಸಿ ಕೊಳ್ಳಬಲ್ಲ 'ವಾತಾಪಿಜೀರ್ನೋಭವ ' ಎಂದ ವರಿಗಿಂತ ಹೆಚ್ಚಿನ ಶಕ್ತಿ ಉಳ್ಳವ:) ಇನ್ನು 'ದೇಹಾಕಾರದ' ವಿಷಯಕ್ಕೆ ಬಂದರೆ'ಹೆಚ್ಚು - ಕಡಿಮೆ' ಭೀಮನಿಗಿಂತ ಕೊಂಚ 'ಕಮ್ಮಿ'  ಆದರೆ ನರಪೇತಲ ನಾ.... ಗಿಂತ 'ತುಸು' ಹೆಚ್ಚು!!ಹೆಣ್ಣಿನ ಮನೆಯಲ್ಲಿ  ತಂದಿಟ್ಟ, ಬಿಸ್ಕೆಟ್ಟು ಗಳ ಪಾಕೆಟ್ಟು, ನೋಡಿ 'ಭಯವಾಗಿ' ಅದನ್ನೆಲ್ಲ ಹೇಗಪ್ಪ ತಿನ್ನುವುದು? ಎನ್ನುವ ಚಿಂತೆಯಲ್ಲಿರ್ವ 'ಸೂಪರ್' ಸುಬ್ಬನಿಗೆ, ಅಭಯವನ್ 'ಕಣ್ಣು' ಧೃಸ್ಟಿ  'ಸನ್ನೆ' ಮಾತ್ರದಲ್ಲಿ ನೀಡಿ, 'ನಾ ಇರ್ವೆ' ಅವುಗಳ  ಜವಾಬ್ಧಾರಿ!! ನನಗೆ ಬಿಡಿ, ನಾ 'ಕ್ಚನಾ'ಮಾತ್ರದಲ್ಲಿ ಅವನ್, ಈ 'ಕೊಂಚ' ಹೊತ್ತಿಗ್ ಮುಂಚೆ ಅಲ್ಲಿದ್ದವು ಎಂಬುದನ್ನು  'ಇಲ್ಲವಾಗಿಸುವೆ' ಎಂದ ಶ್ರೀ ವಿನಾಯಕ:) ಏನಾರ ಮಾಡು,ನಿನ್ನ 'ಹೊಟ್ಟೆ' ಗೆ ಏನರ ಆದರೆ ಎಂಬ ಚಿಂತೆನಿಂಗೂ  ಇಲ್ಲ, ನಮಗೂನೂ!!  ಆದರೆ ನನ್ನ(ಮ್ಮ) ಮಾ ... ಕಾಪಾಡು ಗುರುವೇ!! ಸುಬ್ಬನ ಧೈನ್ಯತೆಯವಿನಂತಿಒಂದೋ ಎರಡೋ ಬಿಸ್ಕೆತ್ತನ್ನು 'ಕಾಟಾಚಾರಕ್ಕೆ' ಎಂಬಂತೆ ಬಾಯಿಗೆ ಹಾಕಿದ ಕೃಷ್ಣ-ಸುಬ್ಬರು  ಇನ್ನೊಂದಕ್ಕೆ ಕೈ ಹಾಕಲು ಹೋದರೆ?ಏನಿದೆ ಅಲ್ಲಿ? ಖಾಲಿ ಪ್ಲೇಟು!! ಪ್ಲೆಟಲ್ಲಿದ್ದ ಎಲ್ಲ ಬಿಸ್ಕೆಟ್ಟುಗಳು ಕ್ಚ್ಹನ್ ಮಾತ್ರದಲ್ಲಿ ವಿನಾಯಕನ 'ಉದರ' ಸೇರಿ ಹೊರಗಡೆ ನಾ -ನೀ ಬೇರೆಬೇರೆ ಆದರಿಲ್ಲಿ 'ಒಂದೇ' ಎನ್ನುತ್ತಾ 'ಸಮಾನತೆಯ' ಸಂದೇಶವನ್ನ  ಸಾರುತ್ತಿದ್ದವು:) ಎದುರಿಗೆ ಕುಳಿತಿದ್ದ ಸ್ವರ ಳ ಪಿತ-ಮಾತಾ -ಇಬ್ಬರು ಮಕ್ಕಳು ಮತ್ತು ಕಿಟಕಿ ಅಲ್ಲಿ -ಇಲ್ಲಿ 'ಎಲ್ಲೆಲ್ಲಿ' ಸಾಧ್ಯವೂ ಅಲ್ಲೆಲ್ಲ 'ಇಣುಕಿ' ನೋಡುತ್ತಿದ್ದ  ಸ್ವರಳ ಸ್ನೇಹಿತೆಯರು  ಎಲ್ಲರೂ ಈ ವಿನಾಯಕನ'ಸ್ವಾಹ'   ಶೈಲಿ ನೋಡಿ 'ಧಂಗಾಗಿ'ಬಾಯಿ-ಕಣ್ಣು ಬಿಟ್ಟುನೋಡುತ್ತಿದರ! ಅದು 'ಉದರಕ್ಕೆ' ಏನೇನೂ ..........ಲ್ಲ ಎಂಬಂತೆ ಒಮ್ಮೆ ಎದುರು ಕುಲಿತಿದ್ದವರತ್ತ ನೋಡಲು, ಸ್ವರಳ  ತಂದೆ ತನ್ನ ಪತ್ನಿಗೆ ಕಣ್ಣು 'ಸನ್ನೆ' ಮಾಡಿದರು, ಅವರು ಹೊಳ ಹೋಗಿ, 'ದೊಡ್ಡ' ಪ್ಲೇಟಿನಲ್ಲಿ(ಹರಿವಾಣವೇ?) 'ಬಿಸಿ-ಬಿಸಿ' ಅವರೆಕ್ಕಾಳಿನ  'ಕಾಂಕ್ರೀಟನ್ನು' ಹಾಕಿಕೊಂಡು ಬಂದು  ಅವರೆಲ್ಲರಿಗೂತಿಂಡಿ  ತಿನ್ನಿ ಎಂದು ಇಟ್ಟರು.. ಅವರು ತಂದು ಮುಂದೆ ಇಟ್ಟ  'ಕಾಂಕ್ರೀಟು  ನೋಡಿದ ಕೂಡಲೇ ಸುಂದ್ರು ಮತ್ತು  ಸುಬ್ನ ಮುಖ 'ಸುಟ್ಟ ಬದನೆ.............. ಪೇಲವವಾಯ್ತು....!!  ಸುಬ್ಬ-ಸುಂದ್ರು- ಮುಖ -ಮುಖ ನೋಡಿಕೊಂಡರು,  ಮತ್ತೆ ನೋಡದೆ ಏನು? ಅವರಲ್ಲಿ ಸುಂದ್ರ ಮತ್ತು  ಸುಬ್ಬನಿಗೆ  ಉಪ್ಪಿಟ್ಟು ಅನ್ದರೆ   ..........ಕೆ !!  ಕೃಷ್ಣ ನ ತುಟಿ ಮೇಲೆ ನಗೆ, ವಿನಯಕನದೋ  'ಜೆಲ್ಲಿ ಕ್ರಷರ್' ಉದರ, ಹೀಗಾಗಿ ನೋ ಎಮೊಷನ್ನು, ಎಕ್ಷ್ಪ್ರೆಸ್ಶನ್ನು :)  ಸುಬ್ಬ ಸುಂದ್ರು ಮನದಲೀ ಈಗ ಒಂದೇ ಪ್ರಶ್ನೆ- ಹೆಣ್ಣು ನೋಡ ಹೋದಾಗಎಲ್ಲೆಡೆಯೂ  ಹೆಹ್ಚಾಗಿ ಈ  ಕಾ0ಕ್ರೀಟು -ಶಿರಾ  ಕೊಡ್ವ ಕಾರಣ ಏನು? ಮುಂದೆ ಸಂಬಂಧ ಕಾಂಕ್ರೀಟು ಹಾಕಿದ ಗೋಡೆಯಂತೆ  'ಗಟ್ಟಿ' ಆಗಿ ಇರಲಿ ಎಂಬ  ಆಶೆಯೂ?:( ಯಾರಿಗ್ಗೊತ್ತು ಇರಬಹುದು!!ಇಸ್ಟಕೂ ಉಪ್ಪಿಟ್ಟು- ಶಿರಾ ಕೊಡಬೇಕು ಅನುವುದು ಯಾವ 'ಅಲಿಖಿತ' ನಿಯಮ?ಯಾರು ಮಾಡಿದ್ದು?ಅಪ್ಪ ಹಾಕಿದ ಆಲದ ಮರಕ್ಕೆ.................... ಕೆ? ಈಗಲಾದರೂ  ಅದನ್ನು ಬದಲಿಸಿ  ಅನ್ನ- ಸಾಂಬಾರು, ಇಡ್ಲಿ -ವಡೆ,ದೋಸೆ (!!) ಒಬ್ಬಟ್ಟು,  ಮಂಡಕ್ಕಿ  ಕೊಟ್ಟರೆಏನು ಕಷ್ಟ?ಇದಕ್ಕೆ ಉತ್ತರಿಸುವವರು ಯಾರು?  ಸುಬ್ಬ-ಕೃಷ್ಣ ಮುಂದಾಗುವ ಅನಾಹುತವನ್ನ 'ಊಹಿಸಿ' ಲೋ ವಿನೂ ಅದು 'ಉಪ್ಪಿಟ್ಟು'  ಕಣೋ ಏನಾದರು, ಸುಮ್ಕಿರ್ರ್ರ ಲೇ  ನಾ ನೋಡದೆ -ತಿನ್ನದೇ ಇರೋದ? ಉಪ್ಪಿಟ್ತೋ? ಕಾಂಕ್ರೀಟು -ಕಟ್ಲಟ್ಟೋ-ಗಿರ್ಮಿಟ್ಟೋ ನಂಗೆ ಎಲ್ಲವೂ ಒಂದೇಯ ಎಂದ:(  ಸುಬ್ಬ ಮತ್ತು ಕಂಪನಿಯ   ಹೊಯ್ದಾಟ- ನೋಡಿ  ಸ್ವರಳ ಅಪ್ಪನಿಗೆ ಗೊತ್ತಾತು , ಓಹೋ ಇವರು(ವಿ-ಬಿಟ್ಟು!!)  ಸಧ್ಯಕ್ಕೆ ಹುಡುಗೀನ ನೋಡಲೇ 'ಕಾತರರಾಗಿದ್ದಾರೆ' ತಿಂಡಿ ತಿನ್ನಲು ಅಲ್ಲ!! ಈಗ ಬಂದೆ,ಅಂತ ಒಳ  ಹೋಗಿ ಹೆಂಡತಿಗೆ ಪಿಸು ಮಾತಲ್ಲಿ  ಹೇಳಿದರು, ಹುಡುಗ ಪಸಂದಾಗವ್ನೆ!!ಅವಳನ್ನ ಅವ್ರುತಿಂಡಿ ತಿಂದಾದಮೇಲೆ  ಕಾಫೀ ಜೊತೆ ಕರ್ಕೊಂಡು  ಬರಲು ಅವಳ ಸ್ನೇಹಿತೆಯರಿಗೆ ಹೇಳು... ಅದ್ಕೂಮೊದಲು ಅವಳು ಕಾಫೀ ಹೇಗೆ ಕೊಡಬೇಕು, 'ಎಷ್ಟು' ಮಾತ್ರ ಹೇಗೆ  ಮಾತ್ರ  ನೋಡಬೇಕು? ಏನುಮಾತಾಡಬೇಕು? ಹೇಗೆ ನಡೆದು ಬರಬೇಕು-ವಾಪಸ್ಸುಹೋಗಬೇಕು ಅಂತೆಲ್ಲ ಶಾರ್ಟ್ ಟರ್ಮ್ತರಭೇತಿ  ಕೊಡು ಅಂದ್ರು... ಸ್ವರಳ ರೂಮಿಗೆ ಬಂದು ತಾಯಿ,  ನೋಡೇ  ಆ ಸೀರೆನ ಇನ್ನೂ ಕೊಂಚ ಮೇಲಕ್ಕೆ ಕಟ್ಟಿಕೋ, ಆಮೇಲೆ ಅಲ್ಲಿಗ್ ಬಂದು 'ಅವನನ್ನ' ನೋಡಿ  .....ಸೀರೆ.....ಕಾಲಿಗೆ ಸಿಕ್ಕು .....!!  ತಲೆ ತಗ್ಗ್ಸೀಕೊಂಡೆ  ಬಾ,ಹಾ !! ಅಂದ ಮಗಳಿಗೆ, ಲೇ 'ಸಧ್ಯಕ್ಕೆ' ಮಾತ್ರ ಕಣೆ, ಆಮೇಲೆ ಹೆಂಗೂ 'ಅವ್ನು' ಸದಾ  ನಿನ್ ಮುಂದೆ ತಲೆ ತಗೀಸಿ ಹೇಳಿದ್ದಕ್ಕೆ ಹೂ -ಹೂ  ಎಸ್ಮ್ಯಾಡಂ ಅನೋದ್ ಇದ್ದೆ ಇದೆ, ಛೀ ಹೋಗಮ್ಮ ನೀ!! ನಾ ಇನ್ನು 'ನೋಡೇ 'ಇಲ್ಲ, ಆಗಲೇ ನೀ ,ನಮಗೆ 'ಮದ್ವೆ' ಮಾಡಿರೋ ಹಾಗ್ಆಡ್ತಿದಿಯ..ಹ್ಹಿ ಹ್ಹಿ !! ಅಂತ ಹಲ್ಕಿರಿದು  'ಸುಬ್ಬ' ಮತ್ತು ಕಂಪನಿ ಕಡೆ  ನೋಡ್ತಾ  ,ಸ್ವರಳ ತಂದೆ  ಹೇಳಿದರು, ಆಯ್ತು ಇನ್ನೇನು ಬಂದು ಬಿಡ್ತಾಳೆ, ನೀವ್ತಿಂಡಿ ತಿಂದು ಮುಗ್ಸಿ, ಕಾಫೀ -ಜ್ಯೂಸ್ ಜೊತೆ ಬರ್ತಾಳೆ ಅಂದ್ರು... ಆಗಲಿ-ಆಗಲಿ ಅಂಕಲ್ ಅದ್ಕೆನಂತೆ - ಸುಬ್ಬನ  ಪ್ರತ್ಯುತ್ತರ.. ನೋಡೇ- ನೀ ಅಲ್ಲಿಗ್ ಬಂದ ಕೂಡಲೇ -ಬರ್ವಾಗಲೇ ಆ ಹುಡುಗ ಮತ್ತು ಜೊತೆಗೆ ಇರ್ವವರು  ನಿನ್ನೆ  ಧಿಟ್ಟಿಸಿ ನೋಡ್ತಾ ಇರ್ತಾರೆ, ಆದ್ರೆ ನೀಮಾತ್ರ  ಯಾವದೇ ಕಾರಣಕ್ಕೂ  ಅವರನ್ನ ನೋಡಬಾರದು , ಮೊದಲು 'ಹುಡಗನಿಗೆ', ಆಮೇಲೆ  ಸ್ನೇಹಿತರಿಗೆ ಕಾಫೀ ಜ್ಯೂಸ್  ಯಾವ್ದುಬೇಕೋ ಅದು ಕೊಡು.. ಆದ ಸ್ಸರಿ ಅಮ್ಮ  ನಂಗೆ 'ಅವ್ನೆ' ಹುಡುಗ ಅಂತ 'ಹೇಗೆ' ಗೊತ್ತಾಗೋದು?  ಅದಕ್ಯಾಕೆ  ಚಿಂತೆ ?  ನೋಡು ನೀಹೋಗಿ ಅವರ ಮುಂದೆ ನಿಂತಾಗ, ಮಿಕ್ಕವರೆಲ್ಲ  ಮನೆ ಹೊಳಗಡೆ ಏನಿದೆ? ಇನ್ನು ಯಾರಿದ್ದಾರೆ ಅಂತ ನೋಡುತ್ತಿರಬೇಕಾದರೆ, 'ಅವ್ನು'ಮಾತ್ರ ಇನ್ನೇನೂ ನೋಡದೆ 'ನಿನ್ನೆ' ನೋಡ್ತಾ  ಉಗುಳು ನುನ್ಗ್ತಿರ್ತಾನೆ, 'ಅವ್ನೆ'  ಆ 'ಅವ್ನು' :( ಗೊತ್ತಾಯ್ತ? ಒಂದು ವೇಳೆ 'ಎಲ್ಲರೂ' ನನ್ನೇ ನೋಡಿದರೆ? ಹೌದಲ್ವ? ಯಾರಿಗ್ಗೊತ್ತು ಹಾಗೂ ಆಗಬಹುದು,  ಆಗೆನ್ರ ಆದ್ರೆ ನಿಮ್ಮ ತಂದೆ ಕಡೆ ನೋಡು ಆಗ ಅವ್ರೆ ಹೇಳ್ತಾರೆ 'ಅವ್ನಿಗ್' ಕೊಡು ಅಂತ...ಮತ್ತೆ  'ಮೆಲ್ಲಗೆ' ಹೆಜ್ಜೆ ಇಡ್ತಾ ಹೋಗಿ ಅವ್ರ ಮುಂದೆ ನಿಂತು ಮೆಲ್ಲಗೆ ತಲೆ ಎತ್ತಿ  'ಚಕ್ಕನೆ' ನೋಡಿ  ತಕ್ಚನ ಮುಖ ಕೆಳಗೆ ಹಾಕು!!  ಆಮೇಲೆ ನಿಮ್ಮ ಅಪ್ಪ ಅಲ್ಲಿ ಕೂರು ಅಂದ್ರೆ ಕೂರು ಇಲ್ಲವಾದರೆ ಇಲ್ಲಿಗೆ ಬಾ, ಮತ್ತೆ ಮತ್ತೆ-ಏನೇ? ಅಮ್ಮ  ನೀ ಸಹಾ ಅಲ್ಲಿ ಬಾ, ಅಲ್ಲಿ ಎಲ್ರೂ  'ಗಂಡಸರೇ' ಇದ್ದಾರೆ ನನ್ನ 'ಮನೋ ಬೆಂಬಲಕ್ಕೆ' ಒಬ್ಬ ಹೆಣ್ಣು ಬೇಡವೇ?ಅದ್ಕೆನಂತೆ ನಾನೂ ಬರ್ತೀನಿ, ಅಮ್ಮ ಹೌದು 'ಅವ್ರು' ನಾನಾ ಏನಾರ ಕೆಳ್ತಾರ? ಅಂದ್ರೆ? ಅಂದ್ರೆ ಅದೇ ಹಾಡೂ -ಗೀಡೂ ನೃತ್ಯ-ಪರ್ತ್ಯ,ಇತ್ಯಾದಿ!! ಏ ಅದೆಲ್ಲ ಈಗೆಲ್ಲ ಯಾರೇ ಕೇಳ್ತಾರೆ? ಯಾರು ಹಾಡ್ತಾರೆ? ಯಾರು ನೋಡ್ತಾರೆ? ಅದೆಲ್ಲ ನಮ್ ಕಾಲಕ್ಕೆ ಕೊನೆ ಆಯ್ತು:(  ಈಗಏನೋ ಕೇಳಿದರೆ ನೀ ಏನು ಓದಿದ್ದು? ಏನು ಇಷ್ಟ? ಇಲ್ಲ? ಯಾಕೆ? ಮುಂದಿನ ಗುರಿ ಏನು ಅಂತೆಲ್ಲ ಕೇಳಬಹುದು ಅಸ್ಟೇ ಕಣೆ..ಈಗ ನಾ ಹೋಗಿರ್ತೀನಿ,  ನೋಡ್ರೆ ಇವಳಣನ್ ಕರೆದು ಕೊಂನೀವೆಲ್ಲ ಬನ್ನಿ, ಅವಳನ್ನ ಬಿಟು  ನೀವ್ ಮತ್ತೆ ರೂಮಿಗೆ ಬನ್ನಿ ,ಮತ್ತೆ ಮತ್ತೆಆಂಟೀ ನಾವೂನುವೆ  'ಹುಡುಗನ್ನ' ನೋಡಬೇಕಲ್ಲ, ಹೌದಾ? ಅದ್ಕೆನಂತೆ  ಇಲ್ಲಿಂದಲೇ 'ಕಿಟಕಿಯಲ್ಲಿ' ಇಣುಕಿ ನೋಡಿ!! ಆದ್ರೆ ಹುಷಾರು 'ಯಾರ್' ಕಣ್ಣಿಗೆನರ ಬಿದ್ರೆ  ಅಸ್ಟೇ? ಆಂಟೀ ಏನು ಅಸ್ಟೇ?ಅಸ್ಟೇ ಅಂದ್ರೆ, ಅವರಲ್ಲಿ ಇನ್ನು 'ಇಬ್ರಿಗೂ' ಮದ್ವೆ ಆಗಿಲ್ಲ!! ನೀವೇನಾರ ಇಷ್ಟ ಆದ್ರೆ ?'ಗೊಳ್' ಅಂತ ಎಲ್ರೂ ನಕ್ಕಿದ್ದಯ್ತು..ಇದೋ ನಾ ಹೊರಟೆ, ೧ ನಿಮಿಷ ಬಿಟ್ಟು ಅವಳನ ಕರೆ ತನ್ನಿ ಸ್ಸರೀನ ?ಅದಾಗಲೇ ತಿಂಡಿ ತಿಂದು ನೀರು ಕುಡಿದು  ಕುಳಿತಿದ್ದರು 4ವರೂ, ಆದರೆ ಶ್ರೀ ವಿನಾಯಕ ನಿಗೆ ಮಾತ್ರ'ಇನೂ'  ಉದರದಲ್ಲಿ ಕೊಂಚ 'ಖಾಲಿ'   ಜಾಗ ಇದೆ, ಅದನ್ನು ತುಂಬಿಸಿದ್ದಾರೆ ಚೆನ್ನಿತ್ತು ಅನಸ್ತು:(  ಅದನ್ನಕ್ಯಾಚ್  ಮಾಡಿದ  ಕೃಷ್ಣ ಮತ್ತು  ಸುಬ್ಬ ಉರಿಗಣ್ಣು ಬಿಡಲು , ವಿನಾಯಕ  ಸಣ್ಣಗೆ ಮುಲುಗಿ ಪ್ಚ್! ಅಂತತೆಪ್ಪಗಾದ!! ಸ್ವರಳ ತಾಯಿ ಬಂದು  ಇವರ ಎದುರಿನ ಚೇರಲ್ ಕುಳಿತು  ಸುಬ್ಬಾ ಬಗ್ಗೆ ಏನು ಎಂತ ಎಲ್ಲಕೇಳಿ, ಸಮಾಧಾನವಾಗಿ,  ತಮ್ಮ ಮಗಳ 'ಗುಣ ಗಾನ' ಮಾಡಿ, ಹಾಗೆ  ಒಮ್ಮೆ ಬಾಗಿಲತ್ತ ನೋಡಿದರು...ಅದನ್ನು ನೋಡಿದ  ಕೃಷ್ಣ- ಸುಬ್ಬನ 'ಪಕ್ಕೆ'  ತಿವಿದು, ನೆಟ್ಟಗೆ ಕೂರೋ, 'ಅವ್ಳು' ಬರ್ತಾಳೆ  ಎಂದ 'ತಿವಿ ಸಜ್ಞ' ಭಾಷೇಲಿ!!  ಅದೋ ಅಲ್ಲಿ ಬಂದಳುಹುಡುಗಿ, ನಾಚುತ್ತ!! ಧುತ್ತನೆ  ಅಲ್ಲಿ 'ವಿದ್ಯುತ್' ಸಂಚಾರವಾದಂತೆ ಆಗಿ  ಸುಬ್ಬನ ಮೈ ಎಲ್ಲ  ಕಂಪಿಸಿ  ಮೈ ಎಲ್ಲ 'ಒಂಥರಾ' ನವಿರು ಭಾವನೆಲಿ ಹಾರಾಡ್ತಾ ಇತ್ತು:) ತಲೆ ತಗ್ಗಿಸಿ ಬರ್ತಿದ್ದ 'ಅವಳು' ಒಮ್ಮೆ ಚಕ್ಕನೆ ಇವರೆಲ್ಲರೆದೆ ನೋಡಿ 'ಸ್ಕ್ಯಾನ್' ಮಾಡಿ , ಕೂತಲ್ಲೇ ಮಿಸುಕಾಡ್ತಾ  ಬಿಟ್ಟಗಣ್ಣು - ಬಾಯಿ ಯಿಂದ ನೋಡ್ತಾ  ಇದ್ದ 'ಸುಬ್ಬನನ್ನ'  ಕ್ಚನಾ ಮಾತ್ರದಲ್ಲಿ ಪತ್ತೆ ಹಚ್ಚ್ಚಿದಳು .ಆದರೂ ಥಟ್ಟನೆ ತಲೆ ತಗ್ಗಿಸಿ ಹಾಗೆ ಮುಂದೆ ಬಂದು  'ಅವನ' ಮುಂದೆ ನಿಂತು ನಡುಗುವ ಕೈಗಳಿಂದ ಅವನ ಮುಂದೆ ಟ್ರೆ ತಂದಳು,ಕಾಫೀನೋ? ಜ್ಯೂಸೋ ? ಯೋಚಿಸದೆ 'ಅವಳನ್ನೇ' ನೋಡ್ತಿದ್ದ, ಸುಬ್ಬನಿಗೆ ಕೃಷ್ಣ  ಮತ್ತೊಮ್ಮೆ ತಿವಿದ,  'ಸ್ವರಳ' ತಂದೆ ಒಮ್ಮೆ ಕೆಮ್ಮಿದರು!!ಥಟ್ಟನೆ  ಈ ಲೋಕಕ್ಕೆ ಬಂದ 'ಸುಬ್ಬ' ನಾಚುತ್ತ ಅವಳನ್ನೇ ನೋಡ್ತಾ  ಟ್ರೇ  ಗೆ ಕೈ ಹಾಕಲು ಹೋಗಿ  ಅವಳ 'ಕೈ ನೆ ' ಹಿಡಿದ:( ಇದ್ದಕ್ಕಿದ್ದಂತೆ'ಅವಳ' ಮುಖದ ಬಣ್ಣ ಇನ್ನಸ್ಟು 'ಕೆಂಪಾಗಲು' ಕಾರಣ್ ಏನು ಅಂತ ಒಮ್ಮೆ ನೋಡಲು ಗೊತ್ತಾಯ್ತು, ತಾ ಅವಳ ಮುಂಗೈ ಹಿಡಿದಿದ್ದ್ನೆ!! ಛೆಎಂತ ಕೆಲಸ ಆಗೋಯ್ತು? ಅವಳೇನು ತಿಳಿದಿರಬಹುದು? ಜ್ಯೂಸ್ ನ ತೆಗೆದುಕೊಂಡು  ಥಾಂಕ್ಸ್  ಅಂದ ನಗ್ತಾ... ಕೃಷ್ಣ -ವಿನಾಯಕ  ಮತ್ತು ಸುಂದ್ರು  ಕಾಫೀ ತೆಗೆದು ಕೊಂಡರು.. ಆಗ 'ಸ್ವರಳ' ತಂದೆ ಬಾಮ್ಮ ಇಲ್ಲಿ  ಕೂರು ಅನ್ನಲು, ಅವಳು ಹೋಗಿ  ತಾಯಯ ಪಕ್ಕ ತಲೆ ತಗ್ಗಿಸಿ ಕೂತಳು.. ಹೊಳಗಡೆ  ಕಿಟಕಿಯಲ್ಲಿ ಇಣುಕಿ ನೋಡ್ತಿದ್ದ ಗೆಳತಿಯರಲ್ಲಿ ಒಬ್ಬಳು- ನೋಡ್ರೆ ಅಲ್ಲಿ ಕೂತಿದಾನಲ್ಲ  ಆ 'ದಡಿಯ' ಒಳ್ಳೇ ಧಾಂಡಿಗ ನ    ಹಾಗ್ ಕಾಣ್ತಾನೆ, ಅವ್ನು ತಿಂದದ್ದು ನೋಡಿದಿರಾ?ಮೈ ಗಾಡ್  ನಮಗೆ ಒಂದು ವರ್ಷ- ಅವನಿಗೆ  ಒಂದೇ ನಿಮಿಷ:(  ಹೌದು ಅವ್ನ  ಪಕ್ಕ ಕುಲಿತವನ್ಲ್ಲ, ಸುಂದರನ ಕಡೆ ಕೈ ಬೆರಳು ತೋರಿಸುತ್ತಹೇಳಿದಳು,  ಅವ್ನು ಒಳ್ಳೇ  'ಗುಳ್ಳೆ ನರಿ' ತರಹ ಕಾಣ್ತಾನೆ!!ಬಹು ಚಾಲಾಕೂ ಅನ್ಸಲ್ಲವೇ? ಹೇಯ್ ಅಲ್ನೋಡೇ  'ಇನ್ನೊಬ್ಬ '- ಕೃಷ್ಣ ನ ತೋರಿಸಿ,ಅವ್ರು !! ಮಾತ್ರ ಬಹು ಸಾಧು ಅನ್ಸುತ್ತೆ, ಹೊಯ್ ಮಹಾರಾಣಿ 'ಸುಮ್ಕಿರೆ' ಕಂಡಿದೀನಿ,ಆ  .....ಆನಂದ  ನೋಡೋಕೆ ಸಾಧೂ ನೆ ... ಆದರೆ..............!!ಹೇಯ್ ಸಾಕೆ ನಿಲ್ಲಿಸೆ ಎಲ್ರೂ 'ಹಂಗೆ' ಇರಲ್ಲ,ಓಹೋ ಏನು ಅಮ್ಮಾವ್ರು, 'ಅವನನ್ನ' ಇಷ್ಟ ಪಡ್ತಿರೋ ಹಾಗಿದೆ!!ಛೆ ಛೀ  ಇಲ್ಲ ಕಣೆ ಹಾಗೇನು ಇಲ್ಲ, 'ಒಳ್ಳೇವ್ರ' ಬಗ್ಗೆ ಯಾವಾಗಲೂ ಒಳ್ಳೇದೆ ತಾನೇ ಹೇಳ್ಬೇಕಾಗೋದು?ಅದೇನೋ ಸ್ಸರಿ ಆದ್ರೆ ಒಮ್ಮೆ ಮಾತ್ರ ನೋಡಿ ಅದೇಗೆ ಅವ್ರು ಒಳ್ಳೆವ್ರನ್ಸ್ತು?ಏನೋಪ್ಪ ನಂಗ್ ಹಾಗನ್ಸ್ತೆ!!ಬಿಡು- ಅವ್ರು ವಾಪಸ್ಸು ಹೋಗ್ವಾಗ ನಾ 'ಆ' ಹುಡುಗನ ಬಗ್ಗೆ ಎಲ್ಲ ಡೀಟೇಲ್ಸ್ ಕೇಳಿ  ನಿಂಗ್ ಹೇಳ್ತೀನಿ ಆಮೇಲೆ 'ಆ' ಹುಡುಗನ ಮನೆಗ್ಹೋದ್ರಾಯ್ತು!! ಸುಮ್ಕಿರೆ ಸಾಕು -ನಿಂಗೆ ತಮಾಷೇನೆ....!!ಆ ಹುಡುಗ ನಮ್ ಸ್ವರಳಿಗೆ 'ಹೇಳಿ ಮಾಡಿಸಿದ' ಹಾಗಿಲ್ಲವೇ? ಒಳ್ಳೇ ಜೋಡಿ ಆಗ್ತೆ ಬಿಡು, ಹೌದು ನಾವೇನೋ  ಅವ್ನು , ಕಾಫೀ ಕೊಡುವಾಗ ನಿನ್ನ ಕೈ ಹಿಡಿಬಹುದು ಅಂತಾ 'ಹಾಗೇ' ಹೇಳಿದ್ವಪ್ಪ, ಆದ್ರೆ ಅವ್ನು ನಿಜ್ವಾಗ್ಲೂನುವೆ  'ಕೈ ' ಹಿಡಿಯೋದ? ಅಲ್ಲ ಕಣೆ 'ಹುಡುಗ' ಭಲೇ 'ಫಾಸ್ಟ್' ಅನ್ಸುತ್ತೆ!!  ಮದ್ವೇಯಾಗೊವರ್ಗೆ  ಕಾಯ್ದೆ - ಈಗಲೇ 'ಕೈ' ಹಿಡಿಯೋದ? ಸಧ್ಯ ಸ್ವರ ಅಪ್ಪ-ಅಮ್ಮ ನಿಗೆಅದು ಕಾಣಲಿಲ್ಲ!! ಹೌದು ಆ ಹುಡುಗ ಇನ್ನೂ ಅವ್ರಿಗ್ ಹೇಳಲೇ ಇಲ? ಏನೇ? ಅದೇ ಕಣೆ ' ನಾ ಹುಡುಗಿ' ಜೊತೆ ಕೊಂಚ ಮಾತಾಡಬೇಕು ಅಂತ!! ಒಹ್ ಅದಾ? ಇರು ನೋಡೋಣ ಏನಾಗ್ತೆ..ಅಸ್ತು ಜನರ ಮಧ್ಯೆ 'ಹೃದಯ' ತಾಳ ತಪ್ಪಿ ಏನೇನೋ ಮ್ಯೂಸೀಕು  ಬರ್ತಿದ್ದವ್ರು ಇಬ್ಬರೇ , ಸುಬ್ಬ ಮತ್ತು ಸ್ವರ!! ಇಬ್ಬರ ಹೃದಯವೂ 'ಹಗುರ'ಆದಂತೆ, ಮೈ ಎಲ್ಲ 'ಒಂಥರಾ'ಫೀಲಿಂಗು, ಆಗಲೇ ಹಗಲು ಗನಸು ಶುರು:( ಮೌನವೇ ಅಲ್ಲಿ ನೆಲೆಸಿದಾಗ ,ಅದನ್ನ ನಾ ತಾಳೆ ಎಂಬಂತೆಒಮ್ಮೆ ವಿನಾಯಕನೂ- ಸುಂದ್ರು ವೂ  ಕೆಮ್ಮಿ  ಗಂಟಲು ಸರಿ ಮಾಡಿಕೊಂಡರು , ಆಗ ಸುಬ್ಬ ನ ಕಡೆ  ನೋಡ್ತಾ ,ಸ್ವರಳ  ಅಪ್ಪ- ಅಮ್ಮ ಕೇಳಿದರು . ಏನಪ್ಪಾ ಹುಡುಗಿ ಇಷ್ಟ ಆದ್ಲ? ಏನಾರ ಕೇಳೋದು ಹೇಳೋದು ಇದೆಯಾ? ಹಾ ಹಾ!!  ಅಂಟೀ ನಾ 'ಕೊಂಚ'  ನಿಮ ಮಗಳಜೊತೆ ಮಾತಡಬೇಕಿತ್ತಲ್ಲ..  ಒಹ್ ಅದ್ಕೆನಂತೆ ಧಾರಾಳವಾಗಿ , ಸ್ವರ  ಹೋಗಮ್ಮ ಅವರನ್ನ ಕರ್ಕೊಂಡು  'ನಮ್ಮ' ಕೋಣೆಗೆ ಹೋಗು ಯಾವುದು ಬೇಡ ಅಂತ  ಮನದಲ್ಲಿ ದೇವ್ರಿಗ್ ಪ್ರಾರ್ಥನೆ ಮಾಡುತ್ತಿದ್ದಳೋ , 'ಅದೇ' ಆಗಿ ಹೋಯ್ತು.. ಡವಗುಟ್ಟುವ  ಹೃದಯದೊಡನೆ  ಒಮ್ಮೆ ಸುಬ್ಬನ ನೋಡಿ ನನನ್ 'ಫಾಲ್ಲೋ'ಮಾಡಿ  ಎಂಬಂತೆ ಹೋದಳು ಪಾಲಕರ ಕೋಣೆಯತ್ತ.... ಮೆಲ್ಲಗೆ ಎದ್ದು ಅವಳ ಹಿಂದೆ ಹೊರಟ ಸುಬ್ಬನ್ನನೋಡಿ, ಸುಂದ್ರೂ ಕೃಷ್ಣ - ವಿನಾಯಕ ಮುಸಿ ಮುಸಿ ನಗ್ತಾ ಕಣ್ಣಲ್ಲೇ  ಹೇಳಿದರು ಒಬ್ಬರಿಗೊಬ್ಬರು- ಆಹಾಹೆಂಗ್ ಹೋಗ್ತವ್ನೆ ನೋಡು ಅವಳ ಹಿಂದೆ ಅವಳು ಬಾ ಅಂದ ಕೂಡಲೇ  'ನಮ್ಮನ್ನು' ಬಿಟ್ಟು!!  ಮಗಾಅವ್ನಿಗ್ ಮದ್ವೆ ಆಗ್ತಿದ್ ಹಾಗೆ ನಾವೆಲ್ಲಾ 'ಅನಾಥ' ಆಗ್ತಿವ್ ಕಣೋ:) ಲೋ  'ಕೃಷ್ಣ ' ನಿಂಗೇನೋ ಪ್ರಾಬ್ಲಂಇಲಾ ಬಿಡ್ ಕಣ ಮಗ , ಆದ್ರೆ 'ನಂಗೆ'  ಬಿಟ್ಟಿ ತಿಂಡಿ -ದಮ್ಮು ಕೊಡ್ಸೋರು ಯಾರು? ವಿನಾಯಕ-ಸುಂದ್ರು ಗಳ  ತಮ್ಮ ಭವಿಷ್ಯದ  'ಆರ್ಥಿಕ  ಸ್ಥಿತಿಯ '  ಬಗ್ಗೆ  ಯೋಚ್ನೇ ....!!ಒಳ ಹೋಗಿ ಕೊನೆ ಸೇರಿ ಅಲ್ಲಿ ಎದುರು-ಬದುರಾಗಿ  ಕುಳಿತರು  ಚೇರಿನಲ್ಲಿ ... ಕುಳಿತಲ್ಲೇ ಮಿಸುಕಾಡುತ್ತ,ಮಾತನ್ನು ಹೇಗೆ ಶುರು ಮಾಡುವುದೋ ಗೊತ್ತಾಗದೆ  'ಇಬ್ಬರೂ' ಮುಖ-ಮುಖ ನೋಡಲು ಏನೂಹೇಳಲು ತೋಚದೆ ಇಬ್ಬರು ಒಮ್ಮೆ 'ಪೆಕರು-ಪೆಕರಾಗಿ'  ನಕ್ಕರು, ಮನ ಕೊಂಚ್ 'ರೀಲಾಕ್ಸ್' ಆದಂಗಾಗೀ, ನೋಡಿ ನಂಗೆ ಇದು 'ಹೊಸದು' ಅದ್ಕೆ ಏನು ಮಾತಾಡೋದೋ ಗೊತ್ತಾಗುತ್ತಿಲ್ಲ, ಆಮೇಲೆ 'ಏನೋ'ಮಾತಾಡಲು ಹೋಗಿ 'ಇನ್ನೇನೋ' ಮಾತಾಡಿ 'ಮತ್ತೇನೋ' ಆಗಿ..... !! ಸುಬ್ಬನ ಮಾತನ್ನ ಮಧ್ಯದಲ್ಲೇತಡೆದು,   ನಂಗೂ ಇದ್ 'ಹೊಸದೆನೆ' !! ನಾ ಇನ್ನು ಓದುತ್ತಿದ್ದು ಅದೂ ಮುಗಿದು ಜಾಬ್ ಹಿಡಿಯೋವರ್ಗೆ ಮದ್ವೆ ಬೇಡ ಅಂದೇ . ನಮ್  'ಪಾ'   ಈಗಿಂದ  ಗಂಡು ನೋಡಲು  'ಶುರು' ಹಚ್ಚಿದರೆ  'ಅಲ್ಲಿಗ್'  ಬರ್ತೆ ,ಅನ್ತಾ ಹೇಳಿ 'ನಿಮಗೆ' ನನ್ನ 'ನೋಡಲು ' ಬರ ಹೇಳಿದ್ದಾರೆ ಎಂದಳು... ಒಹ್ ಅಂದ್ರೆ ನಿಮಗೂ-ನನಗೂ ಇದು ಮೊದಲವಧು-ವರ ಮುಖಾಮುಕಿ, ಹೌದು ನಿಮಗೆ ಏನು ಇಷ್ಟ? ಯಾಕೆ? ಏನು ಇಷ್ಟ ಇಲ್ಲ? ಯಾಕಿಲ್ಲ? ಮಿಮ್ಮಗುರಿ ಏನು? ಅದೇ ಯಾಕೆ?  ಆಶೆ -ಆಕಾಂಕ್ಚೆ  ಏನು?  ರ್ರೀ ರೀ!! ಇರ್ರೀ  ನೀವು ಆ ತರಹ ಒಂದರ-ಮೇಲೆ ಒಂದು ಪ್ರಶ್ನೆ ಕೇಳಿದ್ರೆ ನಾ 'ಎಂಥ' ಹೇಳುದು?   ನಂಗೆ 'ಉಪ್ಪಿಟ್ಟು' ಅಂದ್ರೆ  ಪಂಚ ಪ್ರಾಣ (ಮೈಗಾಡು!! ನಾ ಕೆಟ್ಟೆ- ಸುಬ್ಬನ ಮೌನ ಆರ್ಥ ನಾದ:)ಸಸ್ಯಾಹಾರಿ (ಅಯ್ಯೋ ದೇವ್ರೇ ನಾ ಜೀವಂತ ಇರೋ ಎಲ್ಲವನ್ನೂ 'ತಿನ್ನದೇ' ಸಧ್ಯ ಕೋಳಿ-ಕುರಿ ಮೊಟ್ಟೆಮಾತ್ರ ತಿನೋದು- ಸುಬ್ಬನ ಮೌ-ಆ) ನಂಗೆ  ಆ ಬಣ್ಣ -ಈ ಬಣ್ಣ ಅಂತೇನೂ ಇಲ್ಲ, ಎಲ್ಲ ಬಣ್ಣವೂ ಇಷ್ಟ!! ಕೊಡಗು- ಮಂಗಳೂರು, ಹಾಸನ್, ಮೈಸೂರು ಹಳೇಬೀಡು-ಬೇಳೂರು ಹಂಪೆ ಬಾದಾಮಿ  ಹೀಗೆ ಎಲ್ಲಪ್ರವಾಸೀ ತಂಗಳೂ ಇಷ್ಟ, ಓದೋದು ಬರೆಯೋದು  ಇಷ್ಟ, ಅದರಲ್ಲೂ  ಕಾಮಿಕ್ಸ್ ಅಂದ್ರೆಇಷ್ಟ(ಕಾಮಿಕ್ಸ್!) ಕಾರ್ಟೂನ್ಸ್ ಇಷ್ಟ(!!) ಟಾಮ್ ಯಾಂಡ್ ಜೆರಿ  ಬಹಳ ಇಷ್ಟ( ಹಃ  ನಮ್  ...ಅಸ್ಟೇನೆ !)ದೆವ್ವ -ಭಯಂಕರ ಪ್ರಾಣಿಗಳ ಚಿತ್ರಗಳು ಅಂದ್ರೆ ಭಯ(ಸಧ್ಯ ಅದ್ಕಾರ ಭಯ ಆಗುತ್ತಲ್ಲ!!)ಸುಳ್ಳು ಹೇಳೋದು ನಂಗೆ ಆಗೋಲ ಹಾಗೆ ಕೇಳೋದು ಸಹ(ಮೈ ಗಾಡ್ ! ಸುಳ್ಳು ಅಂದ್ರೆ?) ಮುಂದೆಓದು ಮುಗ್ಸಿ  ಸೀ ಏ ಮಾಡೋಣ ಅಂತಿದ್ದೆ ಆದರೆ.....  ಹೋಗಲಿ ಬಿಡಿ ಅದ್ರ ಬಗ್ಗೆ 'ಆಮೇಲೆ'ಯೋಚಿಸಿದರೆ ಆಯ್ತು!!... ಹೌದು ನಿಮ್ಮದೇನು?  ಹ್ಹೀ ಹೀ  ನಂದಾ?  ನಂಗೂ ಅಸ್ಟೇ ಇಂಥಾದ್ದೇ ಕಲರ್ಅಂತಿಲ್ಲ  ಎಲವೂ ಇಷ್ಟವೆ (ಕಾಪಿ ಕ್ಯಾಟ್!)  ನಾನೂ ಸಸ್ಯಾಹಾರೀನೆ ಆದರೆ 'ಆಗಾಗ' ಏನೋಒತ್ತಾಯಕ್ಕೆ ಸ್ವಲ್ಪ ಚಿಕನ್ನು ತಿಂತೀನಿ ಅಸ್ಟೇ , ನಂಗೂ ನೀವೆಳಿದಿರಲ್ಲ  ಆ ಎಲ್ಲ ಸ್ಥಳಗಳು ಇಷ್ಟ, ಎಸ್ಟೋಸಾರಿ ಹೋಗಿದೀನಿ... (ಆ ಕಡೆ ಇನ್ನು ತಲೇನೆ ಹಾಕಿಲ್ಲ!!) ಬಹಳ ಒಳ್ಳೆ ಪ್ಲೆಸಸ್..ನಂಗೂ ಅಸ್ಟೇ ಸುಳ್ಳು ಅಂದ್ರೆ ಆಗಲ್ಲ( ಸುಳ್ಳು ಹೇಳದವರು ಯಾರವರೆ ?)  ನಾ ಗುಂಡು ಹಾಕೋಲ್ಲ-ಸಿಗರೆಟ್ಟು 'ಸೇದೊಲ್ಲ'(ಆದರೆ ಹೊಗೆ ಬಿಡುತೀನಿ !!) ನಾ ಆಯಿತು ನನ್ನ ಪಾಡು ಆತ್ಯ್ತು ಅಸ್ಟೇ!! ಅಲ್ಲಿನನನ್ ಜೊತೆ ಇದ್ರಲ್ಲ ಅವ್ರು  ನ ಕ್ಕ್ಲೋಸ್ ಅಸ್ಟೇ.  ನಾ ಅದಾಗಲೇ ಕೆಲಸ ಮಾಡುತ್ತಿದ್ದು 'ಏನೋ'ಅಧ್ರುಸ್ಟ ಇದ್ರೆ -ಒದ್ದು ಬಂದ್ರೆ  'ಮ್ಯಾನೇಜರ್' ಆಗಬಹುದು!!  ಒಬ್ಬ್ಬಲೇ ತಂಗಿ ನಾ ಒಬ್ಬನೇ ಮಗ, ಅಲ್ಲಿಗೆಇನಗೆ ಯಾವ್ 'ನಾದಿನಿ' -'ವಾರಿಗೆಯವಳ'  ಪ್ರಾಬ್ಲಮ್ಮು ಇಲ್ಲ:) ಇನ್ನು ಅಪ್ಪ ಅಮ್ಮ ಬಹಳಹೊಂದಿಕೊಂಡು ಹೋಗ್ವವರು, ಅವರಿಂದಲೂ ನಿನಗೆ ತೊಂದ್ರೆ ಇಲ್ಲ, ಇಷ್ಟು ನನ 'ಬೈಒಡಾಟ'!!.... ಇನ್ನೆನಾರ ಹೇಳೋದು-ಕೇಳೋದು ಇದೆಯಾ?  ಹಾ!! ಏನೂ ಇಲ್ಲ, ಏನರ ಇದ್ರೆ ನಿಮಗೆ ಕೇಳ್ತೀನಿ...ನಂಗಾ ಹೇಗೆ? 'ಅವಳ' ಪ್ರಶ್ನೆ, ಸಿಂಪಲ್ಲು ನಿಮ್ಮ ಮೊಬೈಲು ನಂಬರ್ ಕೊಡಿ, ಮಾತಾಡೋಣ!!  ಹ್ಹ!ಹಾ೦ - ಅದು ನಮ್ಮಪ್ಪಗೆ  ಕೇಳಿ ಇಸ್ಕೊಳ್ಳಿ ನಾ ಹಂಗೆಲ್ಲ ಕೊಡೋಲ್ಲ, ಈಗಲೇ ಎಲ್ಲ ಮಾತಾಡಿದಿವಲ್ಲ'ಮತ್ತೇನು' ಇನ್ನು ಉಳಿದಿದೆ ಮಾತಾಡೋಕೆ? ಅಯ್ಯೋ ನಿಮಗೆ 'ಅದೆಲ್ಲ' ಗೊತ್ತಾಗೊಲ್ಲ ಕಣ್ರೀ!!  ಸ್ಸರಿನಾ ,  ನಿಮ್ಮ ಅಪ್ಪ್ಯ್ಯಗೆ ಹೇಳಿ ಇಸ್ಕೊತಿನಿ  ಆದ್ರೆ ನಂಜೊತೆ ಈ ಮಾತಾಡ್ತೀಯ ಅಲ್ವ?ಯಾಕಿಲ್ಲ ಖಂಡಿತ, ಆದರೆ -ಆದರೆ? ಏನು ಆದರೆ?  ಮನೇಲಿ ಇದ್ದಾಗಲೇ ನಾ ಮಾತಾಡೋದು, ಮತ್ತಮತ್ತೆ ನೀವು ನಾ ಕಾಲೇಜಲ್ಲಿ ಇರ್ವಾಗ ಹೊರಗಡೆ ಇರ್ವಾಗ ಮಾಡಿದ್ರೆ  ನಾ ಮಾತಡೋಕೆ ಒಲ್ಲೆ.. ಸ್ಸರಿಸ್ಸರಿ   ಅಸ್ಟು ಸಾಕು ಸಧ್ಯಕ್ಕೆ!!ಸುಬ್ಬನ  ಅಂತರಂಗ ಕುಣಿದಾಡಿತು.. ಇನ್ಯಾಕೆ ಅವ್ರು'? ಇವಳೇ ಸಾಕು,ಈ ವಧು ಅನ್ವೇಷಣೆಯನ ಇವಳಿಗೆ 'ಕೊನೆ' ಮಾಡೋಣ... ಮತ್ತೆ ,ಮತ್ತೇ --   ಏನು ಹೇಳಿ?ಅದೇ ನಾ ನಿಮಗೆ ಇಷ್ಟ ಅದೆನ?ನೀವೇನೂ ಹೇಳಲಿಲ್ಲ!!ಎಗಲೇ ಹೇಗೆ ಹೇಳಲಿ? ಮೊದಲು ಮನೆಗೆ ಹೋಗಿ ನಮ ಅಮ್ಮ ಅಪ್ಪ  ತಂಗಿ ಇಲ್ಲಿ ಬಂದು ನಿನ್ನ ನೋಡಿ,ಇಷ್ಟ ಪಟ್ಟು  ಆಮೇಲೆ ನನ್ನ ಅಭಿಪ್ರಾಯ ಹೇಳುವೆ:)ಅವ್ರು -'ಅವ್ರ' ಅಭಿಪ್ರಾಯ ಆಮೇಲೆ ಹೇಳಲಿಆದರೆ ನೀವಾರ 'ನಿಮ್ಮ ' ಅಭಿಪ್ರಾಯ ಈಗಲೇಹೇಳಬಾರದೆ?ಹೌದು ನಾ ಈಗಲೇ ಯಾಕೆ ಹೇಳಬೇಕು?ಯಾಕೆ ಅಂದ್ರೆ?ಯಾಕೆ ಅಂದ್ರೆ ಮತ್ತೇ ನೀವು ಇಷ್ಟ ಅಂತ ಹೇಳಿದ್ರೆ, ನಮಗೆ'ಸಮಾಧಾನ' ಆಗಿ  ನಂಗೂ ನೆಮ್ಮದಿ ಆಗಿ,ಇರಬಹುದು, ಇಲ್ಲವಾದರೆ ಹೀಗೆ ಬಂದು ಹೋದವರ್ಗೆ ಎಲ್ಲ ತಿಂಡಿ-ತೀರ್ಥ  ಕೊಟ್ಟು  ಏಕಾಂತಮಾತಾಡಿ..... ಅದ್ಕೆ!!ಓಹೋ ಹಾಗೋ>>!!  ಆದರೋ ನಾ  'ಈಗ' ಹೇಳಲ್ಲ, 'ಆಮೇಲೆ' ಹೇಳುವೆ....!!ನೋಡು ನಾ ಬೇಕಾರೆ ಇಷ್ಟ ವೋ ಇಲ್ಲವೋ ಅಂತ ಹೇಳಬಹುದು, ಇಷ್ಟ ಆದರೆ  ನಿ ಏನೆಲ್ಲ 'ಕನಸು'ಕಾಣಬಹುದು,ಇಷ್ಟ ಇಲ್ ಅಂದ್ರೆ  ಬೆಜರಗಬಹುದು, ಅದ್ಕೆ ಇಷ್ಟ -ಅಥವಾ ಇಲ್ಲ ಅಂತ ಆಮೇಲೆ ನಾನೇಹೇಳುವೆ.. ಹೌದು  ನಿಮಗೆ ನಾ ಇಷ್ಟ ಆದೆನ?ಅದ್ನ ನಾ ಈಗ ಹೇಳೋಲ್ಲ, ಆಮೇಲೆ ಹೇಳ್ತೀನಿ- ಅವಳ ಉತ್ತರ...ನೋಡು ನಾ ಇಷ್ಟ ಅಂತ ಹೇಳಿದರೆ ಕುತೂಹಲ-ಮಜಾ ಇರೋಲ್ಲ!! ಅದ್ಕೆ 'ಅದು' ರಹಸ್ಯವಾಗಿರಬೇಕು,ಮುಂದೆ 'ಏನಾಗುತೆ' ಅಂತ ಅನ್ನಿಸಬೇಕು ಅದ್ಕೆ -ಅದ್ಕೆ ನಾ ಈಗ ಹೇಳೋಲ್ಲ... ಬನ್ನಿ ಈಗ ಹೋಗೋಣ  .. ಮೊದಲು ಅವನು ನಂತರ ಅವಳು  ಸಂಕೋಚ ಪಡ್ತಾ ಬಂದು ಕುಳಿತರು....ತಂದೆ ತಾಯಿ ಪ್ರಶ್ನಾರ್ಥಕವಾಗಿ ನೋಡಲು, 'ಫಿಕ್ಸ್' ಅನ್ನೋ ಹಾಗೆ  ನೋಡಿದ್ಲು ಸ್ವರ:)...... ಕೃಷ್ಣ-ಸುಂದ್ರ- ವಿನಾಯಕ  ನಮ್ಮ ಸುಬ್ಬನ ಕಡೆ ನೋಡಲು ಅವನಿಗೆ ಎಲ್ಲಿಲ್ಲದ 'ಸಂಕೋಚ' ನಾಚಿಕೆ ಎಲ್ಲಬಂದು ಆಮೇಲೆ ಹೇಳುವೆ ಎಂಬಂತೆ  ಸನ್ನೆ ಮಾಡಿದ.. ಅಂಕಲ್ ನಾವೆಗ ಹೋಗ್ತಿದಿವಿ  ಒಂದು ವಾರದಲ್ಲಿವಿಷ್ಯ ಏನು ಅಂತ ಹೇಳುವೆ.. ಆಮೇಲ್  ಅಮ್ಮ -ಅಪ್ಪ  ಬರಬಹುದು... ಸ್ಸರಿ ಸ್ಸರಿ ಅದ್ಕೆನಂತೆ? ಸಾವಕಾಶವಾಗಿ ಎಲ್ಲವೂ ಸಾಗಲಿ... ಜೋಪನ್ವಾಗ್ ಹೋಗ್ ಬನ್ನಿ , ಹೋಗ್ರೋ ಚಿಂಟು-ಪಿಂಟು , ಅಂಕಲ್ಲುಗಳನ್ನ   ಮುಖ್ಯ ರಸ್ತೆಗ್  ಬಿಟ್ಟು ಬನ್ನಿ... ಹೇಳಿದರು ಯೆಜಮನರು. ತಮ್ಮಮುದ್ದು ಮಕ್ಕಳಿಗೆ.. ಹಿಂದೆ ಬಂದು ಕೈ ಬೀಸಿ  ಬೀಳ್ಕೊಟ್ಟ  ಭಾವಿ ಅತ್ತೆ ಮಾವನ್ನ  ನೋಡದೆ ನಮ್ಮ ಸುಬ್ಬ  ಮನೆ ಒಳಗಡೆಕಿಟಕಿ  ಹತ್ತಿರ ನಿಂತು ತನ್ನತ್ತ 'ಒಂಥರಾ' ನೋಡ್ತಾ, ಕೈ ಬೀಸಿದ 'ಸ್ವರಲ' ಕಡೆ ನೋಡ್ತಾ ಕೈ ಬೀಸಿದ, 'ಭಾರವಾದ' ಮನಸ್ಸಿಂದ(!!) ಮತ್ತೇ ಮತ್ತೇ ತಿರ್ಗಿ ತಿರ್ಗಿ ನೋಡ್ತಾ ಬೈಕು  ಶುರು ಮಾಡಿ  ಇನ್ನೇನುಹೊರಡಬೇಕು, ಅಸ್ಟರಲ್ಲಿ  ಗೆಳೆಯ ಸುಂದ್ರು ಕೇಳಿದ -  ಮಗಾ ಇನ್ನು ನೀ ಅವಳ ನಂಬರ್ ತಗೊಂಡಿಯೋ ಹೆಂಗೆ? 'ಅವರನ್ನ;' ನಂಬರ್ ಕೊಡಿ ಅಂತ ಹೇಗೆ ಕೇಳೋದು?ಬೇಡ ಮಗಾ ಆಮೇಲೆ ಬೆಂಗಳೂರಿಗೆ ಹೋಗಿ, ನಮ್ ತಾಯಿ ಕೈಲಿ ಮಾತಾಡಿಸಿ  ಅವಳ ನಂಬರ್ ತೆಗೆದುಕೊಳ್ಳೋಣ .. ಇನ್ನೇನು ಮುಖ್ಯ ರಸ್ತೆಗೆ  ಬಂದು ಹೊರಡಬೇಕು, ಅಸ್ಟರಲ್ಲಿ, ಸುಂದ್ರು ಮತ್ತುವಿನಾಯಕ, ಲೋ ಚಿಂಟು -ಪಿಂಟು ಗಳ, ಏನ್ರೋ ನೀವು ಓದೋದು?  ವಿನಾಯಕ ಮತ್ತು ಸುಂದ್ರೂ ನ'ಕೆಕ್ಕರಿಸಿಕೊಂಡು' ನೋಡಿ  , ನಾ  ೭  ಅವನು  ೯ ನೆ ಕ್ಲಾಸು  'ಇಂಗ್ಲಿಷು'  ಮೀಡಿಯಮ್ಮು  ಅಂತಇಂಗ್ಲಿಷಲ್ಲೇ  ಉಳಿದಾಗ, ಸುಂದ್ರು ವಿನೂ  ಕಿಮಕ್ ಅನ್ನಲಿಲ್ಲ, ಬಾಯ್ ಬಿಟ್ರೆ ಬಣ್ಣಗೆಡು!! ಮೊದಲೇನಮಗೆ ಇಂಗ್ಲಿಷು ನಾಲೆಜು ಅಸ್ಟಕಸ್ಟೇ  ಯಾಕೆ ರಿಸ್ಕು, ಈ ಹುಡುಗರೋ ಭಲೇ ಚಲಾಕಿಗಳು, ಅನ್ಸುತ್ತೆ,ನೋಡೋದ್  ನೋಡು:)ಸುಬ್ಬನ ಕಥೆ ಅಸ್ಟೆಯೇ :( ಓದಿನ ಬಗ್ಗೆ ಕೇಳಿದರೆನೆ  ಹಿಂಗೆ, ಇನ್ ಅವರ ಅಕ್ಕನ ಬಗ್ಗೆ ಏನರ ಕೇಳಿದರೆಹೆಂಗೆ?  ಆಮೇಲೆ ಆ ಚಿಂಟು- ಪಿಂಟು ವನ್ನ  ಸುಬ್ಬ ಮಾತಾಡಿಸಿ  ಚೆನ್ನಾಗಿ ಓದಬೇಕು ಎಂದಾಗ,  ಭಯ-ಭಕ್ತಿಯಿಂದ ತಲೆ ತಗ್ಗಿಸಿ   ಆಯ್ತು  ಅಂದ್ರು, ಅದ್ಕೆ   ಸುಂದರ ಕೃಷ್ಣ ಮತ್ತು ವಿನಾಯಕ ನಕ್ಕು, ನೋಡಿದ್ರ?ನಮಗೆ ಗುರಾಯ್ಸಿ ಮಾತಾಡಿ, ಅವ್ರ ಭಾವೀ  ಮಾವಂಗೆ  ಈಗಲೇ ಏಷ್ಟು ಭಯ --ಭಕ್ತಿ -ಗೌರವತೋರಿಸ್ತವ್ರೆ!! ಹ್ಹ ಹ್ಹ.... ಆಮೇಲೆ ಚಿಂಟು ಪಿಂಟು ಗೆ ಮನೆಗೆ ಹೋಗಲು ಹೇಳಿ,  ಅವರಿಬ್ಬರೂ ಹೊರಟಮೇಲೆ, ಅಲ್ಲೇ ಪಕ್ಕದಲ್ಲಿ ಇದ್ದ  ಬೀಡಾ ಅಂಗಡಿ ಹತ್ತಿರ ಹೋಗಿ,  ತಲಾ ಒಂದೊಂದು  ಸಿಗರೆಟ್ಟು ತೆಗೆದುಕೊಂಡು ಭುಸ್ ಭುಸ್ ಅಂತ 'ಹೊಗೆ ಬಂಡಿ' ಬಿಡುತಿರಲು, ಆ 'ಅನಾಹುತ' ಆಗೇ ಹೋಯ್ತು?...... ಏನು ಅನಾಹುತ ಆಗಿದ್ದು?  ಈ ನಾಲ್ವರೂ ಧಂ  ಹೋದೀತ ಇರೋದನ್ನ  ದೂರದಲ್ಲಿ  ಅಡಗಿನೋಡುತ್ತಿದ್ದ  ಚಿಂಟು ಪಿಂಟು ಎಂಬ 'ಸೀ ಆಯ್ ಡೀ ' ಸಹೋದರದ್ವಯರಿಗೆ ಕಾಣಿಸಿ, ಅವರು ಅದನ್ನುಹೋಗಿ  ಅವರ ಅಕ್ಕ-ಅಪ್ಪ-ಅಮ್ಮ ನಿಗೆ ಹೇಳಿ.................!!  ಮೊದಲೇ ನಂಗೆ ಯಾವದೇ ದುಶ್ಚಟ್ ಇಲ್ಲ  ಎಂದ ಸುಬ್ಬನ ಕಥೆ ಏನಾಗಬೇಡ?  ಸುಬ್ಬ ಓದ್ತಾ ಓದ್ತಾ  ಲೋ ಚಿಂಟು ಪಿಂಟು ದಮ್ಮಯ್ಯಅಂತೀನಿ ಕಣ್ರೋ ಈ ವಿಷ್ಯ ನಿಮ್ಮನೇಲಿ ಯಾರ್ಗೂ ಹೇಳಬೇಡಿ, ನಿಮ್ಗ್ ಏನು ಬೇಕೋ ಅದ್ನಕೊಡಿಸ್ತೀನಿ... ಪ್ಲೀಜ್ ಕಣ್ರೋ.. ಭಾವೀ ಮಾವನ ಅಂಗಲಾಚುವಿಕೆಗೆ  ಕಿಂಚಿತ್ತು ಕರಗದೆ ಅವರಿಬ್ಬರು ಮನೆ ಕಡೆ ಓಡಿ ಹೋಗಿ, ವಿಷ್ಯತಿಳಿಸಿಯೇ ಬಿಟ್ಟರು, ಆದರೆ ಮೊದಲೇ ಸುಬ್ಬನ ತುಟಿ  ನೋಡಿ(!!) ಸಂಶಯ ಬಂದರೂ ಪ್ರಮಾಣಿಸಿನೋಡಬೇಕು ಅಂತ ತಮ್ಮಂದಿರನ್ನ ಗೂಡಾಚಾರಿಕೆಗೆ ಬಿಟ್ಟಿದ್ದಳು  ಸ್ವರ:)  ಮ್ಲಾನವದನನಾಗೆ  ಮನೆಗೆಬಂದ  ಸುಬ್ಬ  ಮುಂದೇನಾಗುತ್ತೋ ಅಂತ.  ಮಾರನೆ ದಿನ ಸಂಜೆ  ಅವನ ಫೋನಿಗೆ ಒಂದು ಕರೆ ಬಂದುಒಂದು ಹೆಣ್ಣು ಸ್ವರ  ಉಲಿದಾಗ , ಆ ಸ್ವರ  ತಾನು ನೋಡಿ ಬಂದ ಸ್ವರಳ ಸ್ವರ ವೆ  ಅಂತ ಗೊತ್ತಾಗಿ ಮನಹಿಗ್ಗಿ   ಬ್ಬೆ ಬ್ಬೆ ಎಂದ... ಹೇಗಿದ್ದೆರಿ? ಅವಳ ಪ್ರಶ್ನೆ  ನಾ ಚೆನ್ನಗಿವ್ನಿ, ನೀವ್ ಹೆಂಗೆ? ನಾ ಸೂಪರ್.. ಹೌದುನೀವ್ ದಂ ಹೊಡಿತೀರ  ,ಮತ್ತೆ ಸುಳ್ಳು ಹೇಳ್ತೀರಾ,  ನನಗೆ ಅವತ್ತೇ ಆಗಲೇ ಸಂಶಯ ಬಂತು  ಆದರೂ.... ಆದರೆ ಏನು?.... ನೀವುಇನ್ನು ಮುಂದೆ ಯಾವತ್ತು  ದಂ ಹೊಡೆಯಬಾರದು, ಗುಂಡು ಹಾಕಬಾರದು.. ಗೊತ್ತಾಯ್ತ?  ಹೀ ಹ್ಹೀ ಒಂದೇ ಸರಿ ಬಿಡೋದು ಅಂದ್ರೆ ಕಷ್ಟ ಕಣ್ರೀ, ಏನರ ರಿಯಾಯ್ತಿ ತೋರ್ಸಿ.... ಎಂಥದ್ದು ಇಲ್ಲ, ಬಿಡಬೇಕುಅಸ್ಟೇ, ಇಲ್ಲವಾದರೆ......... ಬೇಡ ಬೇಡ, ನ ಬಿಡುವೆ.... ಆಮೇಲೆ ಇಬ್ಬರ ಮನೆಯವರು ಒಪ್ಪಿ  ಮದುವೆಯನ್ನ  ಒಂದು ವರ್ಷಕ್ಕೆ ಮುಂದೆ ಹಾಕಿ ಅವಳ ಓದು'ಮುಗಿದ' ಮೇಲೆ  ಮಾಡುವ ಅಂತ ತೀರ್ಮಾನಿಸಿದರು .... ಆವತ್ತಿಂದ ಸ್ವರ- ಸುಬ್ಬ ಹಗಲು ರಾತ್ರಿಫೋನಲ್ಲಿ ಮಾತಾಡಿ -ಮಾತಾಡಿ -ಮಾತಾಡಿ-............................. ಮೊಬೈಲು ಕಂಪನಿಗಳ'ವರಮಾನ' ಜಾಸ್ತಿಯಾಗಿ, ಅವರೆಲ್ಲ ಈಗ ದೇವರಲ್ಲಿ ಬೇಡುತ್ತಿದ್ದಾರಂತೆ ' ಇನ್ನು ಮುಂದೆ ಮಾಡುವೆಆಗುವವರೆಲ್ಲ ಮೊದಲು  'ನಿಶ್ಚಿತಾರ್ಥ'  ಮಾಡಿ  ಆಮೇಲೆ ಒಂದೋ-ಎರಡೋ' ವರ್ಷ ಆದ ಮೇಲೆ  'ಮದುವೆ'  ಆಗಲಿ....:) ಈಗೀಗ, ಸುಬ್ಬ ಗೆಳೆಯರ ಜೊತೆ ಸೇರುವುದು ಕಡಿಮೆ ಆಗಿದೆ(ಮದುವೆನೇ ಆಗಿಲ್ಲ!!) ಗುಂಡು- ತುಂಡು-  ದಮ್ಮು  ಎಲ್ಲದಕ್ಕೂ ಯಾವತ್ತೋ ' ಟಾ- ಟಾ  ' ಹೇಳಿ   ಆಗಿದೆ .....   ಸುಂದ್ರ- ವಿನೂ-ಕೃಷ್ಣ ಸದಾ ಆಪಾದನೆ ಮಾಡ್ತಾ ಇರ್ತಾರೆ,  ಸುಬ್ಬ ಬಡ್ಡಿ ಮಗ  ಚೇಂಜ್ ಆದ ಕನ್ರಲೇ ಆದರೂ ಮದುವೆ 'ಅದಮೆಲ್ ' ಚೆ0ಜ್ ಆಗೊರನ್ನ  ನೋಡಿದಿವಪ್ಪ , ಇವನೆನೋ ಮದುವೆಗೆ ಮುಂಚೆನೇ...:(ಈಗೀಗ ಸುಬ್ಬ ಆಫೀಸಿಂದ ಸೀದಾ ಮನೆಗೆ ಬರುವುದು  ಕೈ ಕಾಲು ಮುಖ ತೊಳೆದು ಮೊಬೈಲು ಹಿದಿಉ ಟೆರೆಸು  ಹತ್ತುವುದು ಘಂಟ್ಗಟ್ಟಲೆ 'ಮಾತಾಡುತ್ತಾ-ತ್ತ -ತ್ತಾ '   ಕುಳಿತುಕೊಳ್ಳುವುದು  ' ಅಮ್ಮ' ಬಂದುಊಟಕ್ಕೆ ಎಬ್ಬಿಸುವವರೆಗೆ:)  ನಿಮಗೆ ಇನ್ನೊಂದು ಗೊತುಂಟ? ಸ್ವರ ಮತ್ತು ಈ ನಮ್ಮ ಸುಬ್ಬ ಮಾತಾಡುತ್ತಿರಬೇಕಾದರೆ, ಅಲ್ಲಿ ಅವಳಮನೆಯಲ್ಲಿ ಯಾರಿಗೂ, ಇಲ್ಲಿ ಇವನ ಮನೆಯಲ್ಲಿ ಯಾರಿಗೂ 'ಅವರಿಬ್ಬರೂ' ಮೇಲು ಧ್ವನಿಯಲ್ಲಿ ನಮಗೂಕೇಳಿಸದಂತೆ  ಅದೇನು ? ಅಸ್ಟೋತ್ತು  ಮಾತ ಡುತ್ತಾರೆ ? ಅದೂ ಇಸ್ಟೆಲ್ಲಾ 'ದಿನ'  ಮಾತಾಡಿ ಆದಮೇಲೂ ಇವರಿಗೆ ಮಾತಾಡಲು 'ಯಾವ ವಿಷ್ಯ' ಸಿಗುತ್ತೆ?  ಅಂತ ತಿಳೀದೆ ತಲೆ ಕೆರೆದುಕೊಳ್ಳುತ್ತಿದರೆ..!!ಇವರಿಬ್ಬರ ಮಾತು-ಕಥೆ--- ಸಾಗುತ್ತಲೇ ......ಇದೆ.... ಆದರೆ ಇವರಿಬ್ಬರು ಮಾತ್ರ  'ಯಾವುದಕ್ಕೂ' ತಲೆ ಕೆಡಿಸ್ಕೊಳ್ಳದೆ  ' ಯಾರೇ ಕೂಗಾಡಲಿ -ಊರೇಹೋರಾಡಲಿ ನಮ್ಮ ನೆಮ್ಮದಿಗೆ ಭಂಗವಿಲ್ಲ' ಅಂತ  ಮಾತಾಡುತ್ತಲೇ  ಇರ್ವರು....ಹೌದು ಅವ್ರು 'ಸದಾ' ಏನು ಮಾತಾಡುತ್ತಿರುತ್ತಾರೆ?ನನಗೂ ಗೊತ್ತಿಲ್ಲಪ್ಪ!!ನನಗೆ ಇದು ಮಾತ್ರ ಕಿವಿಗೆ ಬಿದ್ದಿದೆ, ಏನು? ಅದೇ... ಊಟ ಆಯ್ತಾ  ಆನುವ ಪ್ರಶ್ನೆಯನ್ನ ಕಡಿಮೆ ಅಂದರೂ......೧೦ ಸಾರಿ ಕೇಳಿರುತ್ತಾರೆ......") ಇಲ್ಲವಾದರೆ ಮತ್ತೆ? ಮುಂದೆ? ಇದು ಸಹಾ  'ನೂರೊಂದುಸಾರಿ ' ಕೇಳಿರುತ್ತಾರೆ.... ಇಲ್ಲಿಗೆ ನಮ್ಮ ಸೂಪರ್ ಸುಬ್ಬನ  ವಧು ಅನ್ವೇಷಣೆ ಕಂ  ನಿಶ್ಚಿತಾರ್ಥದ  ಕಥೆ ಸಮಾಪ್ತಿಯಾಯ್ತು.. ಕೆಲವರು ಒಂದು- ಎರಡು- ಮೂರು, ೧೦೦ ನೋಡಿಯೂ  ಯಾವ ಹೆಣ್ಣೂ ಮನಸಿಗೆ ಹಿಡಿಸದೆ  ಇನ್ನೂನೋಡುತ್ತಿರುವಾಗ ನಮ್ಮ ಈ ಸುಬ್ಬ    ಮೊದಲ ಪ್ರಯತ್ನದಲ್ಲೇ ಮೊದಲ ಹುಡುಗಿಗೆ  ಕ್ಲೀನ್ ಬೋಲ್ಡ್ಆದದ್ದು......!!  ಸುಬ್ಬನ ಮದುವೆ ಗೆ ತಮಗೆಲ್ಲ ಆದರದ 'ಆಮಂತ್ರನವನ್' ಕಲಿಸಲಾಗುವುದು, ಬಂದು.......................... ಡು  ಆಶೀರ್ವದಿಸಿ...  

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

pavu ಮಂಗಳ, 01/10/2012 - 14:22

ವೆಂಕಟೇಶ ರವರೇ ನಿಮ್ಮ ಹಾಸ್ಯಬರಹ 2 ನೇ ಭಾಗವನ್ನು ಓದಿದೆ ಸುಬ್ಬು ಹೆಣ್ಣು ನೋಡಿದ ರೀತಿಯನ್ನು ಚೆನ್ನಾಗಿ ವರ್ಣಿಸಿದ್ದೀರಾ.

venkatb83 ಧ, 01/11/2012 - 12:29

ನಿಮ್ಮ ಸಹೃದಯ ಪ್ರತಿಕ್ರಿಯೆಗೆವಂದನೆಗಳು. ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.