Skip to main content

ಅರ್ಥವಿಲ್ಲದ ಆಚಾರಗಳು

ಬರೆದಿದ್ದುJanuary 6, 2012
10ಅನಿಸಿಕೆಗಳು

ಇಂದು ಮುಂಜಾನೆ ಜಾಗ್ ಮಾಡಿ ಬರುವಾಗ ಹಾಗೇಯೇ ಮೈಸೂರು ಮಿತ್ರ ದಿನಪತ್ರಿಕೆಯನ್ನು ನೋಡುತ್ತಿದ್ದೆ, ನೋಡುವಾಗ ಮೊದಲನೆ ಪುಟದಲ್ಲಿಯೇ   ಒಬ್ಬ ಮಹಿಳೆಯ ಆತ್ಮಹತ್ಯೆ ಸುದ್ದಿ, ಕಾರಣ ನೆನ್ನೆ ಏಕಾದಶಿಯಂತೆ ಆ ದಿನ ಸತ್ತರೆ ಸ್ವರ್ಗ ಪ್ರಾಪ್ತಿಯಂತೆ ಅದಕ್ಕೆ ಸತ್ತಿರುವುದು ಏನಿದು ವಿಚಿತ್ರ ಮನೋಭಾವಗಳು ಯಾಕೆ ಈ ರೀತಿಯ ಮನೋಭಾವ ಬರುವುದೋ ತಿಳಿಯದು,,ಅದರಲ್ಲು ಈ ರೀತಿಯ ಮನಸ್ತಿತಿ ಮಹಿಳೆಯರಲ್ಲೆ ಅಧಿಕ,, ಆ ತಾಯಿ ಸಾಯುವಾಗಲಾದರೂ ತನ್ನ ಮಕ್ಕಳು, ಗಂಡ ನೆನಪಿಗೆ ಬರಲ್ಲಿಲ್ಲವೇ?ಸತ್ತ ಮೇಲೆ ಸಿಗುವುದು ಸ್ವರ್ಗ ನರಕವಲ್ಲ ಆರಡಿ ಮೂರಡ ಜಾಗ ಎಂಬುದುಆ ತಾಯಿಗೆ ಗೆ ಅರಿವಾಗಲಿಲ್ಲವೇ? ಯಾಕೇ ಹೀಗಾಗುತ್ತದೆ ತಿಳಿಯುವುದೆ ಇಲ್ಲ.ದೇವರ ಹೆಸರಿನಲ್ಲಿ ಮಾನವರು ಮಾಡುವ ಈ ರೀತಿಯ ಅಜ್ನಾನದ ಕೆಲಸಗಳಿಗೆ ಯಾವ ರೀತಿಯಲ್ಲಿ ಹೇಳಬೇಕೋ ತಿಳಿಯದು,,ಭಾರತದಲ್ಲಿ ಲೆಕ್ಕವಿಲ್ಲದಷ್ಟು ದೇವರುಗಳು,ಜಾತಿಗಳು,ಮತಗಳು ಆಚಾರ ವಿಚಾರಗಳು ಹೀಗೆ ಹತ್ತು-ಹಲವು ಮನಸ್ಸನ್ನು ಭಾಧಿಸುತ್ತದೆ, ಈ ಉಪವಾಸ,ವ್ರತ,ಹರಕೆ ಹೀಗೆ ಹಲವು ಚಟುವಟಿಕೆಗಳು ನಡೆಯುತ್ತಿರುತ್ತವೆ,ಕೆಲವೊಂದು ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಮತ್ತೆ ಕೆಲವು ಮೂಡನಂಬಿಕೆಯ ಹೆಸರಿನಲ್ಲಿ ನಡೆಯುತ್ತವೆ,,, ಅದರಲ್ಲು ಮಹಿಳೆಯರಲ್ಲಿಈ ರೀತಿಯ ನಂಬಿಕೆಗಳು ಸಾಯುವಂತಹ ಮಟ್ಟಕ್ಕೆ ಬೆಳೆದಿರುತ್ತವೆ.ಏಕಾದಶಿ,ದ್ವಾದಶಿ, ಚತುರ್ಥಿ, ಸಂಕಷ್ಟಿ ಹೀಗೆ ಲೆಕ್ಕಕ್ಕೆ ನಿಲುಕದಷ್ಟು ನಂಬಿಕೆಗಳು(ಮೂಢನಂಬಿಕೆಗಳು?) ಉಪವಾಸ ಮಾಡಲಿ ಆರೋಗ್ಯಕ್ಕೆ ಒಳ್ಳೆಯದೆ ಆದರೆ ಅದರಿಂದ ಸ್ವರ್ಗ, ಒಳ್ಳೆಯ ಗಂಡ, ಕೆಲಸ ಸಿಗುತ್ತದೆ ಎಂಬುದು ಯಾವ ರೀತಿಯಲ್ಲಿ ಸರಿಯೋ ತಿಳಿಯದು,,ಇಲ್ಲೆ ಸ್ವರ್ಗ-ಇಲ್ಲೆ ನರಕ ಅನ್ನೊ ಸತ್ಯವ ತಿಳಿದವನೇ ಜಾಣ,ಈ ಜೀವನವೆಂಬ ಹೋರಾಟದಲಿ ಸಮಚಿತ್ತ ಎಲ್ಲವನ್ನು ಎದುರಿಸುವವನೆ ನಿಜವಾದ ಮನುಷ್ಯ,,,, ಈಸಬೇಕು ಇದ್ದು ಜೈಸಬೇಕು,,,  

ಲೇಖಕರು

ನವೀನ್ ಚ೦ದ್ರ

ನೆನಪಿನ೦ಗಳ

ನನ್ನ ಬಗ್ಗೆ ಹೇಳಿಕೊಳ್ಳುವಂತಹದೇನೂ ಇಲ್ಲ,ಏಕೆಂದರೆ ಅಂತಹ ಮಹಾಸಾಧನೆ ಏನೂ ನಾನು ಮಾಡಿಲ್ಲ ...ಮಾಡಿದ ಮೇಲೆ ಎಲ್ಲವನ್ನು ಹೇಳುತ್ತೇನೆ...........

ಅನಿಸಿಕೆಗಳು

ಸ್ಪಂದನ ಶನಿ, 01/07/2012 - 10:15

ನವೀನ್ ಅವರೇ ನೀವು ಹೇಳಿರುವುದರಲ್ಲಿ ತಪ್ಪಿಲ್ಲ.. ಆದರೆ ಯಾವುದೇ ಆಚಾರಗಳನ್ನು ಅರ್ಥವಿಲ್ಲದೆ ಅಥವಾ ಕಾರಣವಿಲ್ಲದೆ ನಮ್ಮ ಪೂರ್ವಜರು ಮಾಡಿಲ್ಲ ಅಲ್ವ? ಅದು ಮಾನಸಿಕವಾಗಿ ಒಳ್ಳೆಯ ಪ್ರಭಾವ ಬೀರಲಿ ಅಂತಾಗಲಿ ಅಥವಾ ಸೈನ್ಸ್ ನ ಹಿನ್ನೆಲೆಯಾಗಲಿ ಒಟ್ಟಿನಲ್ಲಿ ಸಮಾಜಕ್ಕೆ ತೀರಾ ಕೆಡಕಾಗುವ ಆಚಾರಗಳು ಎಂದು ಯಾವುದು ಇಲ್ಲ. ಆದರೆ ಈಗಿನ ನಮ್ಮ ಜೀವನ ಶೈಲಿಗೆ ಕೆಲವು ಆಚರಣೆಗಳು ಸೂಕ್ತವಲ್ಲ ಅಷ್ಟೆ.ಒಂದು ಆ ಕಾರಣಗಳು ನಮಗೆ ಗೊತ್ತಿಲ್ಲ ಇನ್ನೊಂದು ಆಚಾರ-ವಿಚಾರಗಳು ಮೌಢ್ಯವಾಗಿ ಬದಲಾಗುತ್ತಿರುವುದರಿಂದ ಸಮಾಜದಲ್ಲಿ ಹೀಗೆಲ್ಲ ಆಗ್ತಿದೆ ಅನ್ಸುತ್ತೆ. ಅಲ್ಲದೆ ಉಪವಾಸ ವ್ರತ ಎಲ್ಲ ವೈಯಕ್ತಿಕವಾದದನ್ನು ಎನ್ನುವುದು ನನ್ನ ಅಭಿಪ್ರಾಯಅದರಿಂದ ಮಾನಸಿಕ ನೆಮ್ಮದಿ ಸಮಾಧಾನ ಸಿಗುವುದಾದರೆ ತಪ್ಪೇನು? ಕಣ್ಣಿಗೆ ಕಾಣದ ದಿವ್ಯ ಶಕ್ತಿಯಿದೆ ಎಂಬುದು ಪ್ರಕೃತಿಯ ವಿಸ್ಮಯಗಳನ್ನು ಕಂಡಾಗಲಾದರೂ ಒಪ್ಪಲೇಬೇಕು.. ಆ ಶಕ್ತಿಯಲ್ಲಿನ ನಂಬಿಕೆಯಿಂದ ಒಳ್ಳೆಯದಾಗುತ್ತದೆ ಎಂಬ ಮನೋಭಾವ ಇದ್ದಲ್ಲಿ ಆ ಭಾವನೆಯಿಂದಾದರೂ ಒಳಿತಾಗಬಹುದು. ಎಲ್ಲವೂ ಮಿತಿಯಲ್ಲಿದ್ದು ಸರಿಯಾದ ರೀತಿಯಲ್ಲಿ ಈಗಿನ ಕಾಲಕ್ಕೆ ಅನುಗುಣವಾಗಿ ಸಾಧ್ಯವಾದಷ್ಟೇ ಶಿಸ್ತಿನಿಂದ ಆಚರಿಸಿದರೆ ಸಾಕು.ನೀವು ಹೇಳಿದಂತೆ ಯಾವ ದೇವರೂ ತನ್ನನ್ನು ಹೀಗೇ ಆರಾಧಿಸಬೇಕೆಂದು ನಿಯಮಗಳನ್ನು ಹಾಕಿಲ್ಲ, ಉಪವಾಸ ವ್ರತ ಇಲ್ಲದಿದ್ದರೂ ನಡೆಯುತ್ತೆ:)

ನವೀನ್ ಚ೦ದ್ರ ಸೋಮ, 01/09/2012 - 22:40

ನನ್ನ ಲೇಖನಕ್ಕೆ  ಸ್ಪಂದನೆ ನೀಡಿರುವ ಭಾವನ ರವರೆ, ದೇವರು ಒಂದು ಮಾಯೆ,, ಅದು ಅವರಿಸಿಕೊಂಡರೆ ಕಷ್ಟ,,, ನಂಬುವುದೊ ಬಿಡುವುದೊ ಹೀಗೆ ಹಲವಾರು ರೀತಿಯಲ್ಲಿ ಕೊರೆಯುತ್ತಲೆ ಇರುತ್ತದೆ,, ಸ್ಪಂದನ ರವರೆ ಪೂರ್ವಜರು ಕೆಲವು ಆಚಾರಗಳನ್ನುಅರ್ಥಗರ್ಭಿತವಾಗಿ ಮಾಡಿದ್ದರು.ಆದರೆ ಇಂದಿನವರಿಗೆ ಅವರು ಮಾಡಿರುವ ಆಚಾರಗಳು ಯಾವ ಕಾರಣಕ್ಕೆ ಯಾವ ಸಂದರ್ಭಕ್ಕೆ ಸರಿಯಾಗಿತ್ತು ಎಂದು ವಿವೇಚಿಸುವ ಮನೋಭಾವ ಯಾರಿಗಿದೆ ಸ್ಪಂದನ. ಅಪ್ಪ ಹಾಕಿದ ಆಲದ ಮರ ಎಂದು ಎಲ್ಲರು ನೇತು ಹಾಕಿಕೊಂಡರೆ ಎನೂ ಪ್ರಯೋಜನ ಸ್ಪಂದನ?  ಉಪವಾಸ ಮಾಡೆಂದು ಅಥವಾ ತನಗೆ ಪೂಜೆ ಮಾಡೆಂದು ಕೂಡ ನಿಮ್ಮ ದೇವರು ಹೇಳೊಲ್ಲ ಅಲ್ವಾ ಭಾವನಾ? ಹಾಗಾದರೆ ಅವನನ್ನು ಏಕೆ ಆರಾಧಿಸಬೇಕು???ಪ್ರಕೃತಿ ವಿಸ್ಮಯ ಇವೆಲ್ಲ ಸಾಮಾನ್ಯ,, ಏಕೆಂದರೆ ನಮ್ಮ ದೇಹಕ್ಕೆ ಹಲವು ಖಾಯಿಲೆಗಳು ಬಂದಂತೆ ಪ್ರಕೃತಿಗೂ ಕೂಡ ಆಗಾಗ ಆರೋಗ್ಯಹದಗೆಡುತ್ತದೆ,ಅದು ಅದಾಗ ದೇವರೆಂದು ಹೊಣೆ ಮಾಡುವುದು ತರವೇ ಭಾವನಾ?ನನ್ನ ಈ ಅಭಿಪ್ರಾಯ ಸ್ವಲ್ಪ ಅಧಿಕ ಪ್ರಸಂಗತನ ಎನಿಸಬಹುದು ಆದರೆ ಇದರಲ್ಲು ನೈಜತೆ ಇದೆ ಎಂಬುದು ನನ್ನ ಭಾವನೆ ಅಷ್ಟೆ ಸ್ಪಂದನ.ಧನ್ಯವಾದಗಳೊಂದಿಗೆ,,,,, 

pavu ಶನಿ, 01/07/2012 - 15:24

ನವೀನ್ ಮೂಢನಂಬಿಕೆಗಳು ನಮ್ಮಿಂದ ಅಥವಾ ನಮ್ಮ ತಂದೆ ತಾಯಿಯರಿಂದ ಉದ್ಬವಿಸಿಲ್ಲ ನಮ್ಮ ಹಿರಿಕರಿಂದ ಉದ್ಬವಿಸಿರುವ ಆಚಾರಗಳು ಇವುಗಳನ್ನು ತಡೆಯುವು ಕಷ್ಟಸಾಧ್ಯ ನಮ್ಮ ಜನರು ಯಾವುದೇ ವಿಷಯಕ್ಕೆ ಪ್ರಶ್ನಿಸದೇ ಮೂಕವಾಗಿ ಆ ವಿಷಯಗಳನ್ನು ಒಪ್ಪಿಕೊಳ್ಳುವುದೇ ಇಂತಹ ದುರಂತಗಳಿಗೆ ಕಾರಣವಾಗುವುದು.ಯಾವ ದೇವರುತ್ತಾನೆ ನನಗೆ ಉಪವಾಸವಿದ್ದು ನೀನು ಪೋಜೆ ಮಾಡಬೇಕು ಎಂದು ಹೇಳಿದ್ದಾನೆ ಹೇಳಿ.ಮೂಢನಂಬಿಕೆ ಅಂದಾಗ ನನಗೆ ಒಂದು ಘಟನೆ ನೆನಪಾಗುತ್ತದೆ.ಏನು ಅಂದರೆ ಯಾರೋ ಒಬ್ಬ ಮನುಷ್ಯ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಆಕಸ್ಮಾತ್ ಆಗಿ ಬಿದ್ದನಂತೆ ಆಗ ಆತ ಎದ್ದು ಬಿದ್ದ ಸ್ಥಳಕ್ಕೆ ಕೈ ಮುಗಿದು ಉಗಿದು ಹೋದನಂತೆ ಇತನ ಹಿಂದೆ ಬರುತ್ತಿದ್ದ ಇನ್ನೋಬ್ಬ ಮನುಷ್ಯ ಆ ಜಾಗಕ್ಕೆ ಕೈ ಮುಗಿದು ಉಗಿದನಂತೆ ಇದೇ ರೀತಿಯಾಗಿ ಅಲ್ಲಿ ಬರುತ್ತಿದ್ದ ಜನರು ಮಾಡಿತ್ತಿದ್ದರಂತೆ  ಆದರೆ ಆತ ಯಾಕೆ ಕೈ ಮುಗಿದು ಉಗಿದ ಎಂದು ಯಾರೂ ಪ್ರಶ್ನಿಸಲಿಲ್ಲ ಅದರ ಬದಲು ಅವನನ್ನೆ ಅನುಕರಿಸಿದರು.ಇದೇ ನಮ್ಮ ಜನರಲ್ಲಿ ಇರುವ ಮೂಡ ನಂಬಿಕೆ.

ನವೀನ್ ಚ೦ದ್ರ ಸೋಮ, 01/09/2012 - 15:45

ಹಾಯ್ ಪವು,ನೀವು ಹೇಳುವ ನಾನು ಕೂಡ ಬಾಲ್ಯದಲ್ಲಿ ನನ್ನ ಗೆಳತಿಯೊಂದಿಗೆ ಶಾಲೆ ಮುಗಿಸಿ ಮನೆಗೆ ಹೋಗುವಾಗ ನನ್ನ ಗೆಳತಿ ಎಡವಿದ ನಂತರ ದೇವರನ್ನು ನೆನೆದು ಕೈಗಳನ್ನು ಕಣ್ಣಿಗೆ ಒತ್ತಿಕೂಂಡು ನಮಸ್ಕರಿಸಿ ಮುಂದೆ ನೆಡೆದಳು ಆಗ ನನಗೂ ಕೂಡ ಆ ಒಂದು ಹವ್ಯಾಸ ನನಗೆ ಅರಿವಿಲ್ಲದಂತೆ ಶುರುವಾಯಿತುಪವು, ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳೆ ಸಿಗುವುದಿಲ್ಲ ಕೆಲವರು ಉತ್ತರ ಗೊತ್ತಿಲ್ಲದಿದ್ದರೂ ತಪ್ಪು ದಾರಿಗೆ ಎಳೆಯುತ್ತಾರೆ,,, ದೇವರು ಶಾಂತಸ್ವರೂಪಿಅವನ ಸ್ವಭಾವ ಯಾವಾಗಲು ಶಾಂತವೇ,,ಯಾಕೆಂದರೆ ದೇವರು ಒಳ್ಳೆಯವ.................,

ನವೀನ್ ಚ೦ದ್ರ ಸೋಮ, 01/09/2012 - 22:30

ನನ್ನ ಲೇಖನಕ್ಕೆ  ಸ್ಪಂದನೆ ನೀಡಿರುವ ಭಾವನ ರವರೆ, ದೇವರು ಒಂದು ಮಾಯೆ,, ಅದು ಅವರಿಸಿಕೊಂಡರೆ ಕಷ್ಟ,,, ನಂಬುವುದೊ ಬಿಡುವುದೊ ಹೀಗೆ ಹಲವಾರು ರೀತಿಯಲ್ಲಿ ಕೊರೆಯುತ್ತಲೆ ಇರುತ್ತದೆ,, ಸ್ಪಂದನ ರವರೆ ಪೂರ್ವಜರು ಕೆಲವು ಆಚಾರಗಳನ್ನುಅರ್ಥಗರ್ಭಿತವಾಗಿ ಮಾಡಿದ್ದರು.ಆದರೆ ಇಂದಿನವರಿಗೆ ಅವರು ಮಾಡಿರುವ ಆಚಾರಗಳು ಯಾವ ಕಾರಣಕ್ಕೆ ಯಾವ ಸಂದರ್ಭಕ್ಕೆ ಸರಿಯಾಗಿತ್ತು ಎಂದು ವಿವೇಚಿಸುವ ಮನೋಭಾವ ಯಾರಿಗಿದೆ ಸ್ಪಂದನ. ಅಪ್ಪ ಹಾಕಿದ ಆಲದ ಮರ ಎಂದು ಎಲ್ಲರು ನೇತು ಹಾಕಿಕೊಂಡರೆ ಎನೂ ಪ್ರಯೋಜನ ಸ್ಪಂದನ?  ಉಪವಾಸ ಮಾಡೆಂದು ಅಥವಾ ತನಗೆ ಪೂಜೆ ಮಾಡೆಂದು ಕೂಡ ನಿಮ್ಮ ದೇವರು ಹೇಳೊಲ್ಲ ಅಲ್ವಾ ಭಾವನಾ? ಹಾಗಾದರೆ ಅವನನ್ನು ಏಕೆ ಆರಾಧಿಸಬೇಕು???ಪ್ರಕೃತಿ ವಿಸ್ಮಯ ಇವೆಲ್ಲ ಸಾಮಾನ್ಯ,, ಏಕೆಂದರೆ ನಮ್ಮ ದೇಹಕ್ಕೆ ಹಲವು ಖಾಯಿಲೆಗಳು ಬಂದಂತೆ ಪ್ರಕೃತಿಗೂ ಕೂಡ ಆಗಾಗ ಆರೋಗ್ಯಹದಗೆಡುತ್ತದೆ,ಅದು ಅದಾಗ ದೇವರೆಂದು ಹೊಣೆ ಮಾಡುವುದು ತರವೇ ಭಾವನಾ?ನನ್ನ ಈ ಅಭಿಪ್ರಾಯ ಸ್ವಲ್ಪ ಅಧಿಕ ಪ್ರಸಂಗತನ ಎನಿಸಬಹುದು ಆದರೆ ಇದರಲ್ಲು ನೈಜತೆ ಇದೆ ಎಂಬುದು ನನ್ನ ಭಾವನೆ ಅಷ್ಟೆ ಸ್ಪಂದನ.ಧನ್ಯವಾದಗಳೊಂದಿಗೆ,,,,,  

anjali n n ಧ, 01/11/2012 - 14:17

ನಿಜ ನವಿನ್ ಇಂತಹ ನಂಬಿಕೆಗಳು ಮನುಷ್ಯರಲ್ಲಿ ಬಲವಾಗಿ ಬೇರೂರಿವೆ, ಉಸಿರುಗಟ್ಟುವ ವಾತವರಣವನ್ನು ನಮ್ಗೆ ನಾವೇ ಸೃಷ್ಟಿ ಮಾಡ್ಕೊಂಡಿವೀ, ಇಂತಹ ನಂಬಿಕೆಗಳು ನಮ್ಮಲ್ಲಿ ಭಯ, ದೌರ್ಬಲ್ಯತೆಯನ್ನು ಉಂಟು ಮಾಡುತ್ತಿವೆ, ನಮ್ಮ ಸಮಾಧಿ ನಾವೇ ತೋಡ್ಕೋತಿದಿವೀ.

ನವೀನ್ ಚ೦ದ್ರ ಗುರು, 01/12/2012 - 21:06

ಹೌದು ಅಂಜುರವರೆ ಯಾವಾಗ ನಮ್ಮ ಜನರಲ್ಲಿ ವೈಚಾರಿಕ ಮನೋಭಾವ ಚಿಂತಿಸುವಂತ ಗುಣ ಬರುವುದೋ ತಿಳಿಯದು,, ಧನ್ಯವಾದಗಳೊಂದಿಗೆ,,,,,

Pattar ಶುಕ್ರ, 01/13/2012 - 11:29

ನವೀನ್...ಮೂಢನ೦ಬಿಕೆಯ ಬಗ್ಗೆ ತು೦ಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಾ...ಮಾನಸಿಕ ಬಲಹೀನತೆಯುಳ್ಳ ಪ್ರತಿಯೊಬ್ಬ ಮನುಷ್ಯನ ಹೃದಯವು ಸದಾ ಅತ೦ತ್ರವಾಗಿರುತ್ತದೆ..ಅವರ ವಿಚಾರ ಭಾವಗಳೂ ಎಲ್ಲರಿಗಿ೦ಥ ಭಿನ್ನ. ಅವರು ಅವರದೇ ಆದ೦ಥ ಪ್ರಪ೦ಚವನ್ನು ಸೃಷ್ಟಿಸಿಕೊ೦ಡು...ಆ ಪ್ರಪ೦ಚಕ್ಕೇ ಅವರೇ ಅಧಿಪತಿ ಅ೦ಥ ಭಾವಿಸಿಕೊ೦ಡು ತಾವು ಮಾಡಿದ್ದೇ ಸರಿ ಎ೦ಬ ನಿರ್ಧಾರ ಮನೋಭಾವ ರೂಪಿಸಿಕೊ೦ಡಿರುತ್ತಾರೆ.ಅದಕ್ಕೆ ಅವರ ಅ೦ತ್ಯ ಕ೦ಡುಕೊಳ್ಳಲು ಕೂಡ ಅವರು ಮಾನಸಿಕವಾಗಿ ಸಭಲರು....ಭಯವನ್ನು ಮೆಟ್ಟಿ, ಧೈರ್ಯವನ್ನು ಛೇದಿಸಿ, ಸಾಯುವ ನಿರ್ಧಾರ ತೆಗೆದುಕೊಳ್ಳುವ ಅವರ ಮನಸ್ಥಿತಿಯನ್ನು ಬದಲಾಯಿಸಲು..ಸದಾ ಭಯದಲ್ಲೇ ಬದುಕುವ ನಮ್ಮ ನಿಮ್ಮ೦ಥ ಸಾಮಾನ್ಯ ಮನಸ್ಸಿನವರಿಗೆ ಸಾಧ್ಯವೇ? 

ನವೀನ್ ಚ೦ದ್ರ ಶುಕ್ರ, 01/13/2012 - 20:10

ಹೌದು ಪತ್ತಾರ್,, ನಾವು ಸ್ವಲ್ಪ ಮಟ್ಟ್ಟಿಗೆ ಮಾತ್ರ ದೈರ್ಯ ತುಂಬಬಹುದಷ್ಟೆ ಆದರೆ ಪೂರ್ಣವಾಗಿ ತಿದ್ದಲು ಯಾರಿಗೂ ಸಾದ್ಯವಿಲ್ಲಧನ್ಯವಾದಗಳೊಂದಿಗೆ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/20/2012 - 15:42

hinge athmahatye madkollornella gundittu sayusbeku Tongue out , adu ekadashi, ramzan, good friday anthella madkollrnella kallu hodedu sayusbeku Wink

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.