Skip to main content

ಸುಬ್ಬ 'ಹೆಣ್ಣು' ನೋಡಲು ಹೋಗಿದ್ದು- (ಹಾಸ್ಯ ಬರಹ)- ಭಾಗ -೧

ಇಂದ venkatb83
ಬರೆದಿದ್ದುJanuary 6, 2012
2ಅನಿಸಿಕೆಗಳು

ಬೆಳಗ್ಗೆ ತಿಂಡಿ ತಿನ್ನಲು ಡೈನಿಂಗ್ ಟೇಬಲ್ ಮುಂದೆ   ಕುಳಿತ ನಮ್ಮ ಕಥಾ ನಾಯಕ 'ಸೂಪರ್ ಸುಬ್ಬ'  ತಲೆ ತಗ್ಗಿಸಿ ಮೌನವಾಗಿ  ತಾಯಿ ತಂದಿಟ್ಟಇಡ್ಲಿ -ವಡೆಯನ್ನ ಸಾಂಬಾರ್ ಕಲಿಸಿಕೊಂಡು ಸಶಭ್ದವಾಗಿ  ತಿಂತಾ  ಯೋಚಿಸ್ತಿದ್ದ ' ಇವತ್ತೇಕೋ'  ಮನೇಲಿ 'ಒಂಥರಾ' ವಾತಾವರಣವಿದೆ,ಎಲ್ಲರ ಆ 'ದಿವ್ಯ  ಮೌನಕ್ಕೆ' ಕಾರಣವೇನು? ಎಲ್ಲ ಸೇರಿ ನಂಗೆ ಏನೋ 'ಸ್ಕೀಮ್'  ಹಾಕಿರೋ  ಹಾಗಿದೆ..

 

ಸುಬ್ಬನ ತಾಯಿ ಒಮ್ಮೆ 'ಕೆಮ್ಮಿ' ಗಂಟಲು ಸರಿ ಮಾಡಿಕೊಂಡರು, ಸುಬ್ಬ- ಸುಬ್ಬನ ತಂದೆ- ತಂಗಿ ಗೆ ಗೊತ್ತಾಯ್ತು ಓಹೋ- ಈಗ ಅವ್ರು 'ಏನೋ' ಹೇಳೋಕೆ ಅಣಿಯಾಗುತ್ತಿದ್ದಾರೆ- ಆ ಕೆಮ್ಮು  -ಗಂಟಲು  ಸರಿಪಡಿಸುವಿಕೆ  ಎಲ್ಲ ಅದಕ್ಕೆ ಪೂರ್ವ ತಯಾರಿ!!

 

ಒಂದು ಗ್ಲಾಸು ನೀರನ  ತಂದು 'ಸುಬ್ಬನ' ಮುಂದೆ ತಂದಿಟ್ಟು-ಆ ಡೈನಿಂಗ್ ಟೇಬಲ್ ಮುಂದೆ ಕುಳಿತು ಮಗನನ್ನೇ ಧಿಟ್ಟಿಸಿ ನೋಡುತ್ತಾ ಹೇಳಿದ್ರು

ನಿನ್ನೆ  ಆ 'ಬ್ರೋಕರ್'     ಪರಂಧಾಮಯ್ಯ  ಬಂದಿದ್ರು, ಎಸ್ಟೊಂದು  'ಹುಡ್ಗೀರ' ಫೋಟೋ ತಂದಿದ್ರು ಗೊತ್ತ? ಒಬ್ರಿಗಿಂತ ಒಬ್ರೂ ಸೂಪರ್ ಕಣೋ! ಅದ್ರಲ್ಲಿ 'ನಂಗೆ ಇಷ್ಟ'  ಆದ ೫ ಹುಡ್ಗೀರ ಫೋಟೋ  ಇಲ್ಲಿದೆ- ನೋಡಿ  ನಿನ್ನ ಅಭಿಪ್ರಾಯ ತಿಳಿಸು... ಆದಸ್ಟು ಬೇಗ ತಿಳೀತ?

 

ಮನದಲ್ಲೇ 'ಸುಬ್ಬನಿಗೆ'  ಅನಿಸ್ತು, ಆ ಪರಂಧಾಮಯ್ಯ  ಆದಸ್ಟು ಬೇಗ 'ಪರಂಧಾಮಕ್ಕೆ' ಹೋಗಿ ಶಿವ ಅಂತಾ ಸೇರ್ಕೊಬಾರ್ದ?  ಈ ಭೂಲೋಕದಲ್ಲಿದ್ದು  ನನ್ನ  ಪ್ರಾಣ ಹಿನ್ದಬೆಕ? ಅದ್ಯಾರ್ಯಾರ್ದೋ ಫೋಟೋ ತಂದು  ನನ್ನ ಜೀವ ಹಿಂಡ್ತಾನೆ:)     ಆ ವಯ್ಯನಿಗೆನೋ 'ಜಗದ''ಸಕಲ 'ಅವಿವಾಹಿತ' ಕನ್ಯೆಯರ ಮದುವೆ  ಮಾಡಿ 'ಕನ್ಯಾ ಸೆರೆ' ಬಿಡಿಸೋ  'ಜವಾಬ್ಧಾರಿ' ತಂದೇ ಅನ್ನುವ ಭಾವನೆ ಇದೆ, ಆದರೆ  'ಅ ವಯ್ಯಂಗೆ'  ಯಾವಾಗಲೂ ನಾನೇ ಸಿಗ್ತೀನ? ನಮ್ಮನೆಗೆ ಬಂದು ಫೋಟೋ ಕೊಟ್ಟು  ಆಮೇಲೆ ಅಮ್ಮನ ಕೈಲಿ  ನನಗೆ ಮದುವೆ ಬಗ್ಗೆ ದಿನ ಪೂರ್ತ ಕ್ಲಾಸು ! 

ತಿಂಡಿ ತಿಂದು ಕೈ ನ ಸಿನ್ಕಲ್ಲಿ ತೊಳೆದು ಬಂದು ಟವೆಲ್ ನಿಂದ ಕೈ ಒರೆಸಿಕೊಂಡು ಒಮ್ಮೆ  ಅಮ್ಮನತ್ತ  ನೋಡಿ  'ಅಮ್ಮ'  ನಾ ಅದಾಗಲೇ ನೂರ್ ಸಾರಿ ಹೇಳಿದೀನಿ ,ಈಗಲೇ ನಂಗೆ ಮದ್ವೆ ಬೇಡ, ಇಸ್ಟಕೂ  ನಂಗೆ ಅದೇನು 'ಮಹಾ' ವಯಸ್ಸಾಗಿದೆ ಅಂತ? ಬರೀ ೨೮ ಅಸ್ಟೇ ೭೮ ಆದವ್ರೆ ಇನ್ನೂ 'ಆರಾಮಾಗಿ' ಇಲ್ವೆ? ಲೋ ಅಪ್ಪ 'ಬೃಹಸ್ಪತೀ'  ೭೮ ಆದವರ ಬಗ್ಗೆ ಇಲ್ಲಿ ಚರ್ಚೆ ಬೇಡ, ಈಗೇನು ನೀ ಆ ಫೋಟೋದಲ್ಲಿರೋ  ಹುಡ್ಗೀರ್ನ ನೋಡಿ ಬರ್ತೇಯೊ ಇಲ್ಲವೋ?  ಇದೆ  ನಾ ನಿನಗೆ 'ಕೊನೆದಾಗಿ' ಕೇಳೋದು ಆಮೇಲೆ ನಿನ್ನಿಸ್ಟ....

 

 

ಸುಬ್ಬನಿಗೆ ಗೊತ್ತಾತು - ಈ ಸಾರಿ ಅಮ್ಮ ಭಲೇ 'ಸ್ಟ್ರಿಕ್ಟ್' ಆಗವ್ರೆ ಈ ವಿಷಯದಲ್ಲಿ 'ಚೌಕಾಶಿಗೆ'  ಅವಕಾಶ ಇಲ್ಲ ಅನುಸ್ತ್ತೆ!!  ಅಮ್ಮ ನಾ ಈಗ ಆಫೀಸಿಗೆ ಹೋಗಬೇಕು,  ಅಲ್ಲಿ ಮಧ್ಯಾನ ಬ್ರೇಕ್ ಇರತಲ್ಲ.  ಆಗ ಯೋಚಿಸಿ  ನನ್ನ 'ನಿರ್ಧಾರ' ಹೇಳ್ತೀನಿ, ಆ ಫೋಟೊಗಳನ್ನ ನನ ಬ್ಯಾಗಿಗೆ ಹಾಕು..ಸುನಂದಮ್ಮ ಅವ್ರಿಗ್ ಭಲೇ ಖುಷಿ  ಆಯ್ತು, ಓಹೋ ನನ್ಮಗ  ಅಂತೂ ಕೊನೆಗೂ ಮದ್ವೆಗ್   ಅಲ್ಲದಿದ್ದರೂ - ಹೆಣ್ಣು ನೋಡೋಕೆ ಒಪ್ಪಿಕೊಂಡನಲ್ಲ....ದೇವ್ರೇ ನಿಂಗೆ ಜೋಡು ಕಾಯ್ ಹೊಡೆಸ್ತಿನಿ:)

 

 

ಅಫೀಸಲಿ  ತನ್ನ ಕೆಲಸದಲ್ಲಿ ಮಗ್ನನಾದರೂ 'ಸುಬ್ಬನಿಗೆ' ಅದೇ ಚಿಂತೆ ಆಯ್ತು, ಈಗ ಏನಾರ ಮಾಡಿ ನಾ 'ಒಬ್ಬನೇ' ಹೋಗಿ ಈ ಹೆಣ್ಣು ನೋಡೋ  'ತಾಪತ್ರಯ' ದಿಂದ ಪಾರಾಗಬೇಕಲ್ಲ, ಜೊತೆಗೆ 'ಯಾರಾರ' ಬಂದ್ರೆ ಚೆನ್ನಿರ್ತೆ ನಂಗೂ ವಸಿ 'ಧೈರ್ಯ' ಇರ್ತೆ ? ಯಾರು ನನಗೆ ಸಹಾಯ ಮಾಡುವರು?  ಓಹೋ ಹೊಳೀತು!!  ಇದಕ್ಕೆ 'ಅವನೇ' ಸರಿ... ಸರಿ  'ಅವನನ್ನ' ಹುಡುಕಿಕೊಂಡು ಹೊರಟ ಕ್ಯಾಂಟೀನತ್ತ..

 

ಆಫೀಸಲ್ಲಿ ಕೆಲಸ ಇದ್ದರೂ ಕ್ಯಾಂಟೀನ್ ಗೆ ಬಂದು 'ಹರಟೆ' ಹೊಡೀತಾ ಕುಳಿತಿದ್ದ 'ಐಡಿಯಾ ಸುಂದ್ರ'  ದೂರದಿಂದಲೇ ತನ್ನತ್ತ ಬರ್ತಿರೋ ಸುಬ್ಬನ್ನ ನೋಡಿ  'ಭಲೇ' ಖುಷಿಯಾಗಿ  ಓಹೋ ಇವತ್ತು ಮಧ್ಯಾಹ್ನದ ಊಟ ಕಾಫೀಗಾಗಿ -ದಂಮಿಗೆ  ಕಾಸು ಮಿಕ್ಕಿತು:(

ಅಲ್ಲೊಂದು 'ಮಿಕ'-'ಬಕ್ರಾ' ಬರ್ತಿದೆ...!!

 

ಉಸ್ಸಪ್ಪ !ಅಂತ 'ಐಡಿಯಾ' ಸುಂದರನ ಮುಂದೆ ಬಂದು ಚೆರೆಳೆದು ಕೊಂಡು ಕುಳಿತ ಸುಬ್ಬ  ಹೇಳಿದ- ಲೋ ಸುಂದ್ರ ನಾ ಒಂದು ತಪತ್ರಯದಲ್ಲಿ ತಗಲಕೊಂಡಿದಿನಿ  ನನ್ನ ಅದರಿಂದ ನೀನೆ ಬಚಾವ ಮಾಡಬೇಕು ಮಾರಾಯ!  ನಂಗೆ ಈಗ ನೀನೆ ದಿಕ್ಕು ಕಣೋ , ಆಯ್ತು ಬಿಡೋ  ಸುಬ್ಬಾ  'ಅದ್ಕ್ಯಾಕ್' ಚಿಂತೆ ಮಾಡ್ತೀಯ? ಮೊದ್ಲು  'ಕೊಂಚ' ತಿಂಡಿ ತಿಂದು -ಕಾಫೀ ಕುಡಿದು, ಒಂದು ದಂ ಹೊಡೆದು ನಿನಗೊಂದು 'ಒಳ್ಳೆ' ಐಡಿಯಾಕೊಡ್ತೀನಿ ಎಂದ!! 

 

ಮೊದಲೇ 'ಸುಂದರನ' ಈ ವರಸೆ ಗೊತ್ತಿದ್ದ  ಸುಬ್ಬಾ ಮಾಣಿಯನ್ನ ಕರೆದು  ಮಗಾ  ಇಡ್ಲಿ-ವಡೆ , ಪೂರಿ-ದೋಸೆ ಎಲ್ಲವನ್ನೂ ಒಂದಾಮೇಲೆ ಒಂದು ತರದೇ 'ಒಟ್ಟಿಗೆ' ತೆಗೆದುಕೊಂಡು  ಬಾ  ಬೇಗನೆ ಎಂದ..

 

ಇಡ್ಲಿ-ವಡೆ-ಪೂರಿ ದೋಸೆಯನ್ನ  'ಸ್ವಾಹಾ' ಮಾಡಿ ಪ್ಲೆಟಲ್ಲಿದ್ದ ಚಟ್ನಿ  ಎಲ್ಲವನ್ನೂ  ನುಂಗಿ ನೀರು ಕುಡಿದು   'ಡರ್ರ್ ' ಅಂತಾ ತೇಗಿದ:)ಅವನು ಅದನ್ನೆಲ್ಲ ತಿನುವವರೆಗೆ ಅದ್ನ ನೋಡ್ತಾ ಕುಳಿತಿದ್ದ ಸುಬ್ಬನಿಗೋ 'ಈ ವಯ್ಯ' ಅದ್ಯಾವಾಗ  ಮುಗಿಸ್ತಾನೋ ಅಂತ ಕಾಯ್ತಾ ಕುಳಿತಿದ್ದ ಕಾತರದಿಂದ- ತನ್ನ ಸಮಸ್ಯೆಯ ಪರಿಹಾರಕ್ಕಾಗಿ !!

ಪ್ಲೇಟ್ ನಲ್ಲಿ ನಲ್ಲಿ ಇನ್ನು ಏನಾರ ತನ್ನ 'ದಿವ್ಯ ಧ್ರುಸ್ಟಿಗೆ' ಬೀಳದೆ ಉಳಿದಿದೆಯೇ ಎಂಬಂತೆ ನೋಡಿದ ಸುಂದ್ರುಗೆ ಅಲ್ಲಿ ಪ್ಲೇಟು ಗಳೆಲ್ಲ ''ತೊಳೆದಿಟ್ಟಂತೆ' ಕ್ಲೀನ್  ಇದ್ದದ್ದು ನೋಡಿ  ಇನ್ನು 'ಏನೂ' ಎಳ್ಳಿನ ಕಾಳಸ್ಟು   ಉಳಿದಿಲ್ಲ, ಅಂತಾ ನಿರಾಶೆಯಾಗಿ -ಒಮ್ಮೆ ಸುಬ್ಬನ ಮುಖ ನೋಡಿದ,ಸುಂದ್ರು ತಿಂದ ಆ  ತಿಂಡಿಗಳ ಬಿಲ್ಲು  ಕೊಡಲೇ  'ಅದೆಸ್ಟು  ಕಾಸು ಬಿಚ್ಚಬೇಕಾಗುತ್ತೆ ಅಂತಾ ಯೋಚಿಸ್ತಿದ್ದ  ಸುಬ್ಬನಿಗೆ ಆ ಸುಂದರನ  ಆ ನೋಟ  'ಇನ್ನೂ ಸಮಾಧಾನವಾಗಿಲ್ಲ' ಇನ್ನೂ ಬೇಕು ಎಂಬಂತಿತ್ತು!!

ಸುಬ್ಬನಿಗೆ  ರೇಗಿ ಹೋಯ್ತು ಅಲ್ಲ ನನಗೆ ಒಂದು ಚಿಂತೆ ,ಇವನಿಗೆ 'ತಿನ್ನೋದೇ' ಚಿಂತೆ, ಆದರೂ ಸಮಾಧಾನ್ಸೀಕೊಂಡು ಮಗ ತಗೋಈ ಕಾಫೀ ಕುಡಿ ಬೇಗ, ಅಂಗಡಿ ಹತ್ರ ಹೋಗಿ  ದಂ ಹೊಡೀತ ಮಾತಾಡೋಣ ಅಂದ. ಸುಬ್ಬಾ 'ಇನ್ನಸ್ಟು' ಏನಾರ ಕೊಡಿಸಬಹುದು ಅಂತಾಕಾಯ್ದಿದ್ದ ಸುಂದ್ರುಗೆ ನಿರಾಶೆ ಆಯ್ತು, ಆದರೂ ಸಧ್ಯ 'ಸಂಜೆವರಗೆ' ತೊಂದ್ರೆ ಇಲ್ಲ, ಆಮೇಲೆ ಸಂಜೆ ಒಂದಪ ಸುಬ್ಬಂಗೆಮತ್ತೆ 'ಟ್ಯಾಕ್ಸು' ಹಾಕಿದ್ರಾಯ್ತು:(

ಬೀಡಾ  ಅಂಗಡಿ ಹತ್ತಿರ ಹೋಗಿ ತಲಾ ಒಂದೊಂದು ಸಿಗರೆಟ್ ನ  ತೆಗೆದುಕೊಂಡು  ಬದಿಯಲ್ಲಿದ್ದ ಮರದ ಕೆಳಗೆ -ಕಲ್ಲಿನ ಮೇಲೆ ಕುಳಿತರು,ಹಾ -ಈಗ ಹೇಳೋ ಸುಬ್ಬಾ ಏನು ನಿನ್ನ ಸಮಸ್ಯೆ? ಎಂದ ಸುಂದ್ರ..

ಮಗಾ  ನಿಂಗೆ ಗೊತ್ತಲ್ಲ ನನ್  ಮದ್ಬ್ವೆ ಮಾಡೋಕ್ ಮನೇಲಿ  ಸಕತ್  'ಒತ್ತಡ' ಹಾಕ್ತವ್ರೆ,  ನಿನ್ನೆ -ಇವತ್ತು ಬೆಳಗ್ಗೆ  ಅಮ್ಮ ಮತ್ತೆ  ಮತ್ತೆ ಹೇಳ್ತಾವ್ರೆ ಒಂದು ೫ ಹುಡ್ಗೀರನ್ನ ನೋಡಿದೀನಿ  ಆ ಹುಡ್ಗೀರು ಇಷ್ಟ ಆಗಿವೆ,ಒಮ್ಮೆ ಹೋಗಿ 'ಅವರಲ್ಲಿ' ಇಷ್ಟ ಆಗೋರ್ನ  ನೋಡಿಕೊಂಡು ಬಾ ಅಂತವ್ರೆ,ಆದರೆ ನನಗೆ ಈಗ ನಾ ಒಬ್ನೇ ಹೇಗ್ ಹೋಗ್ಲಿ ಅಂತಾ ?

ನೀ ನನ್ ಜೊತೆ ಬಂದ್ರೆ  ಇನ್ನು ಎರಡೋ ಮೂರು ಜನರನ್ ಕರೆದ್ಕೊಂಡು  ಹೋಗಿ  ಹುಡ್ಗೀನ ನೋಡಿ ಬರಬಹ್ದೂ ಎಂದ...  ಬಂಧು ಬಳಗ ಎಲ್ಲ  ನೋಡೋದು  ಆಮೇಲೆ , 'ಮೊದಲು' ನಾವೇ ನೋಡಬೇಕು ಹುಡುಗಿ ಜೊತೆ  'ಏಕಾಂತವಾಗಿ' ಮಾತಾಡಬೇಕು, ಅವಳ ಇಷ್ಟ - ಇರೋದ್-ಇಲ್ದೇ ಇರೋದ್  ಎಲ್ಲವನ್ನೂ ತಿಳಿದುಕೊಳ್ಳಬೇಕು ಅಂದ... ಅದಿರ್ಲಿ ಮೊದ್ಲು ಆ ಹುಡುಗೆರ ಫೋಟೋ ತೋರಿಸು ಮಾರಾಯ ಆಮೇಲೆ'ಮುಂದಿನದರ' ಬಗ್ಗೆ ಯೋಚ್ಸೋಣ, ನೀ ಮಾತಾಡೋ ಸ್ಪೀಡು ನೋಡಿದರೆ ಆಗಲೇ ಮದ್ವೆನೂ ಆಗಿ....... !!

ಜೇಬಿಂದ ಫೋಟೋಗಳ ಕವರ್  ತೆಗೆದು ಅವನ ಕೈಗೆ ಕೊಟ್ಟ ಸುಬ್ಬಾ...  ಎಲ್ಲ ೫ ಫೋಟೋ ಗಳಲ್ಲಿರುವ  ಹುಡುಗೀರು ಒಬ್ಬರಿಗಿಂತ ಒಬ್ಬರು ಚೆನ್ನಾಗಿದ್ದರು   ಹೀಗಾಗಿ ಸುಬ್ಬನಿಗೆ ಆದಂತೆ  -ಸುಂದ್ರುಗು  ಗೊಂದಲವಾಯ್ತು, ಯಾವ ಹುಡುಗಿ ನ ಮೊದಲು ನೋಡೋಣ?

ಹುಡುಗಿರ ಈ ಫೋಟೋ ನೋಡಿ  ನೀ ಎನು ಅಸ್ಟು ಖುಷಿ ಆಗಬೇಡ ಮಗಾ - ನಿನಗೆ ಗೊತ್ತಲ್ಲ ಈಗೀಗ ಕಂಪ್ಯೂಟರ್ ಇಂದ ಕಪ್ಪಗೆ ಇರೋರ್ನ ಬೆಳ್ಳಗೆ- ತೆಳ್ಳಗೆ ಇರೋರ್ನ ದಪ್ಪಗೆ- ಹೀಗೆ ಏನೇನೋ ಮಾಡಿ ಬದಲಿಸಿ  'ಯಾಮರ್ಸಿ' ಬಿಡ್ತಾರೆ!! ಅದ್ಕೆ ನಾವು ಮೊದಲು ಆ ಹುಡುಗೀರು ಒಂದು ವೇಳೆ ಓದುತ್ತಿದ್ದರೆ  ಅವ್ರ ಕಾಲೇಜಿಗೆ, ಬಸ್ ಸ್ಟಾಪಿಗೆ  ಹೋಗಿ ಅವರನ್ನ ಫಾಲೋ  ಮಾಡಿ ತಿಳಿದುಕೊಳ್ಳೋಣ ಅಂದ.  ಅದೇನೋ ಸ್ಸರಿ   ಸುಂದ್ರು, ಆದ್ರೆ ನಾವ್ ಹಿಂದೆ ಹೋಗಿ ಆ ಹುಡುಗೀರು ಅದ್ನ ತಪಾಗಿ ಅರ್ಥ ಮಾಡ್ಕೊಂಡು ರಾಧಾಂತ್ ಆಗಿ ರಸ್ತೇಲಿಹೋಗೋ-ಬರೋರ ಕೈಲಿ ಧರ್ಮದೇಟು'  ಬಿದ್ರೆ? ಈ ಐಡಿಯಾ ಬಿಟ್ಟು ಬೇರೆ ಯಾವ ಬದಲಿ ಐಡಿಯಾ ಇಲ್ಲವೇ?

ಯಾಕಿಲ್ಲ ? ಇದೆಯಲ್ಲ ಫೆಸ್ಬುಕ್ಕು-ಟ್ವಿಟ್ತರು-ಆರ್ಕುಟ್ -ಗೂಗಲ್ ಪ್ಲಸ್, ಅಲ್ಲಿ ಹುಡುಗೀರ ಎಸ್ಟೋ ಫೋಟೋಗಳ ಜೊತೆ  ಅವ್ರ 'ಫ್ರೆಂಡ್ಸು'ಅದೂ -ಇದೂ ಎಲ್ಲ ಮಾಹಿತಿ ಇರ್ತೆ, ಅದು ಹೆಂಗೆ? ಏ ಹೋಗೋ ಮಾರಾಯ ಅದು 'ನಮಗಲ್ಲ', ನಾವ್ ಆ ಹುಡುಗೀರ 'ಮನೆಗೆ' ಹೋಗೋಣ ನೋಡೋಕೆ -ಅದೇ ವಸಿ ಸೇಫು:)

ಮೊದಲ ಹುಡುಗಿಯ ಹೆಸರು- ಸ್ವರ - ಒಹ್ ಹೆಸರೂ ಚೆನ್ನಿದೆ

ಹುಡುಗಿಯೂ

ವಯಸ್ಸು ೨೨ ,

ಓದುತ್ತಿರುವುದು -ಬೀ ಏ -ಜರ್ನಲಿಸಂ  ತೃತೀಯ  ವರ್ಷ

ಮೊದಲು ನಾಳೆ ಹೋಗಿ ಈ ಹುಡುಗಿಯನ್   ನೋಡುವ ,ಆಮೇಲೆ ಉಳಿದವರನ್ ಅಂತಾ ತೀರ್ಮಾನಿಸಿ ಆಯ್ತು.

ಮಾರನೆ ದಿನ ಬೆಳಗ್ಗೆ ಎದ್ದು  ಲಗು ಬಗೆಯಿಂದ  ಸ್ನಾನ ಮಾಡಿ  ತಿಂಡಿ ತಿಂದು  ಆಫೀಸಿಗೆ ಹೊರಡಲು ಆಣಿಯಾದ ಮಗನಿಗೆ ತಾಯಿ ಹೇಳಿದರುಲೋ 'ಅವ್ರು' ನಿನ್ನೆ ಫೋನು ಮಾಡಿದ್ದರು ಕಣೋ,   ನೀ ನೆನ್ನೆ ಮದ್ಯಾಹ್ನ  ಅವರಿಗೆಲ್ಲ ಫೋನು ಮಾಡಿ ಅವ್ರ ಮಗಳ ಬಗ್ಗೆ ಎಲ್ಲ  ವಿಚಾರಿಸಿದೆಯಂತೆ? ನೋಡೋಕೆ ಬರ್ತೀನಿ ಅನ್ದೆಯಂತೆ? ಯಾವಾಗ್ ಹೋಗ್ತೀಯ? ಜೊತೆಗೆ ಯಾರ್ಯಾರನ್ನೆಲ್ಲ ಕರ್ಕೊಂಡು ಹೋಗ್ತೀಯ? 

ಮತ್ತೆ 'ನಾವೆಲ್ಲಾ'  ಯಾವಾಗ್ ಹೋಗೋಣ ನೋಡಿ ಬರಲು? ಅಮ್ಮ ಮೊದಲು ನಾ ಹುಡುಗಿ ಹೆಂಗೆ ಏನು ಅಂತೆಲ್ಲ ಸ್ವತಹ ನೋಡಿ ಮಾತಾಡಿ ಆಮೇಲೆ ನಿಮಗ ಹೇಳ್ತೀನಿ ಸಧ್ಯಕ್ ನನ ಬಿಟ್ ಬಿಡಿ ಎಂದ. ಹುಷಾರು ಕಣೋ ಆಮೇಲೆ  ಹುಡುಗಿ ಜೊತೆ ಮಾತಾಡುವಾಗ -----ಇನ್ನೇನೋ ಹೇಳ ಹೊರಟ ಅವ್ರ ಮಾತನ ತಡೆದು -ಅಮ್ಮ  ಒಳ್ಳೆ ಕೆಲಸಕ್ ಹೋಗ್ವಾಗ  ನೀ ಹಿಂಗ್ ಹೇಳ್ಬಹುದ?  ಸ್ಸರಿ ನಾ ಬರ್ತೀನಿ ಎಂದಾಗ್ 'ಹುಷಾರು' ಕಣೋ ಮಗಾ, ಅಂದ್ರು ಸುಬ್ಬನ  ತಾಯಿ...

ಹಿಂದಿನ ದಿನವಸ್ಟೇ  ತನ್ನ 'ಬಾಸಿಗೆ' ಹೇಳಿ  ೫ ದಿನ  ತಾ  ಮನೆವ್ರ ಜೊತೆ ಟೂರ್ ಹೋಗ್ತಿರ್ವದಾಗಿಯೂ  ಅದ್ಕೆ ರಜೆ ಬೇಕು ಅಂದು ರಜಾ ಗಿಟ್ಟಿಸಿದ್ದ... ಆ ಬಾಸೋ 'ಹಾಗೆಲ್ಲ' ಕೋಲೇ ಬಸವನ ತರಹ  ರಜೆ ಮಂಜೂರು ಮಾಡುವವರಲ, ಇವನನ್ನೇ ಧಿಟ್ಟಿಸಿ  ನೋಡುತ್ತಾ 'ಏನ್ ಮಾರಾಯ ಮದ್ವೆ -ಗಿದ್ವೆ? ಎಂತ ಉಂಟೋ? ಹೆಣ್ಣು  ನೋಡೋಕೆ ಹೋಗ್ತಿರೋದ? ಎಂದೆಲ್ಲ ಕೇಳಲು 'ಸುಬ್ಬನಿಗೆ' ಭಲೇ ಸಂಕೋಚವಾಗಿ ಹ್ಹಿ ಹ್ಹಿ ಹಾಗೇನು ಇಲ್ಲ ಸ್ಸಾರ್ 'ಟೂರ್' ಹೋಗ್ತಿರೋದು ಪ್ಲೀಜ್ ರಜೆ ಕೊಡಿ ಅಂದ.. ಸ್ಸರಿ ಸ್ಸರಿ ಮದ್ವೆಗ್ ನಮಗೆ ಕರ್ದು 'ಬಾಯ್ ಸಿಹಿ' ಮಾಡೋದ್ ಮರಿಬಾರ್ದೂ ಮಾರಾಯ್ರೆ ಅಂದ್ರು:) 

 

ಆ ದಿನ  ಬೆಳಗ್ಗೆ  ಎದ್ದು ತಿಂಡಿ ತಿಂತಿದ್ದ  ಮಗಳು 'ಸ್ವರ' ಗೆ  ಹೇಳಿದರು  ತಂದೆ  ನೋಡೇ ನಿನ್ನೆ ಅದೇ ಆ ಹುಡುಗ ಫೋನ್ ಮಾಡಿ ನಿನ್ನ ಬಗ್ಗೆಆಗ್ಗೆ ಎಲ್ಲ ಕೇಳಿ ತಿಳಿದುಕೊಂಡಿದಾನೆ, ಈಗ ಇಲ್ಲಿಗ್ ನೋಡೋಕ್ ಬರ್ತವ್ರೆ ಸ್ನೇಹಿತರ ಜೊತೆಗೆ  ಅದ್ಕೆ ನೀ  ಅವ್ನೆನಾರ ನಿಂಜೊತೆ ಪರ್ಸ್ನಲ್ಲಾಗ್  ಮಾತಾಡಬೇಕು ಅಂದ್ರೆ    'ಸಿಂಪಲ್ಲಾಗಿ' ಮಾತಾಡು ಅಂದ್ರು... ಪಪ್ಪಾ ನಾ ಇನ್ನು ಓದುದುಂಟು  ಆಗ್ಲೇ ಮದ್ವೆಗ್ ತಯಾರೀನ? ಇಲ್ಲ ಮಗಳೇ ಈಗಿಂದ 'ಶುರು' ಹಚ್ಚಿಕೊಂಡರೆ ಅದು 'ಅಲ್ಲಿಗೆ' ಬರ್ತೆ.. ನೀ ಚಿಂತಿಸಬೇಡ ಎಲ್ಲ ಒಳ್ಳೇದೆ ಆಗ್ತೆ.. ನೀ ಅದ್ಕೆ ತಯಾರಿ ಮಾಡ್ಕೋ ಹೋಗೋಗು...

 

ಸ್ಸರಿ ಸುಬ್ಬನಿಗೆ ಜೊತೆಯಾದವರು ಕೃಷ್ಣ (ಪಾ) - ವಿನಾಯಕ(ಗ)- ಸುಂದ್ರು .  ಅವರೆಲ್ಲ ಬೈಕು ತೆಗೆದುಕೊಂಡು  ಹೊರಟರು ತುಮಕೂರಿಗೆಸಮೀಪದ ಹಳ್ಲ್ಲಿಯೊಂದಕ್ಕೆ ..  ದಾರಿ ಮಧ್ಯದಲ್ಲಿ ಸುಬ್ಬನನ್ನ ಎಲ್ರೂ ಕಿಚಯಿಸಿದ್ದೆ ಕಿಚಾಯಿಸಿದ್ದು  ಓಹೋ ಮಗ ನಮಗಿಂತ ಮುಂಚೆ  ಮದ್ವೆ ಅಗ್ತವ್ನೆ!! ಒಹ್ ಮುಖ ನೋಡು ಎಷ್ಟು 'ಕಳೆ' ಬಂದಿದೆ? ಅಹ ಆ ಸಂಕೋಚ ಬೇರೆ:) ಬಿಡೋ  ಮಗ ಆ ಸಂಕೋಚ- ನಾಚಿಕೆ- ಬಿಗುಮಾನ ಏನಿದ್ದರೂ 'ಹೆಣ್ಣಿಗೆ ಅಸ್ಟೇ' ಸೂಟ್ ಆಗೋದು ನಮಗಲ್ಲ... ಗೆಳೆಯರ ಮಾತಿಗ್ ನಗ್ತಾ ಏನೇನೋ ಕನಸು ಕಾಣ್ತಿದ್ದ ಸುಬ್ಬ.. 

ಹುಡುಗಿಯ  ಹಳ್ಳಿಗೆ ದೂರದಲ್ಲೇ ಗಾಡಿ ನಿಲ್ಲಿಸಿ ತಲಾ ಒಂದೊಂದು ದಂ ಹೊಡೆದು 'ಮೌತ್ ಫ್ರೆಶ್ನೆರ್'  ಇಂದ ಬಾಯನ್ನು 'ಅದನ್ನೇ' ಉಪಯೋಗಿಸಿ ಕೈಯನ್ನು  ಸುವಾಸನೆಗೊಳಿಸಿದರು:(

ಮಗಾ ನೀ ಹೆಣ್ಣು ನೋಡೋ ಪ್ರೋಗ್ರಾಮ್ 'ಬೇಗ್' ಮುಗಿಸಬೇಕು, ನಮಗೆ ಅರ್ಧ ಘಂಟೆಗೊಂದು ದಂ ಹೊಡಿಯದೆ ಇದ್ರೆ ಅಸ್ಟೇ!! ನೆನಪಿರಲಿ,ಲೋ ಮಕ್ಳ ನಿಮಗೆ ಮಾತ್ರವೇನೋ? ನಂಗೂ 'ದಂ' ಹೊಡೀದೆ ಇದ್ರೆ' ಹೆಂಗೆಂಗೋ' ಆಗ್ತೆ.. 

ಬ್ಬೆ-ಬ್ಬೆ ಅಂತ ಏನೇನೋ ಕೊರೀತ ಕೂರಬೇಡ, ಇವ್ರು 'ಆರ್ಡರ್ ' ಮಾಡ್ತವ್ರೋ 'ರಿಕ್ವೆಸ್ಟ್'   ಮಾಡ್ತವ್ರೋ? ಸುಬ್ಬನ ಸಂದೇಹ... ಅವಳ ಮನೆಗೆ ಫೋನಾಯ್ಸಿ  ನಾವು ಬರುತ್ತಿರುವುದಾಗಿಯೂ  ಇನ್ನು ಹತ್ತು -ಹದಿನೈದು ನಿಮಿಷದಲ್ಲಿ ಅಲ್ಲಿ ಇರ್ವದಾಗಿಯೂ ಹೇಳಿದ ಸುಬ್ಬ...

 

ಬೆಳಗ್ಗೆ ಸ್ನಾನ ಮಾಡಿ ತಲೆಗೂದಲನ್ನು ಹರವಿಕೊಂಡು  ಬಿಸಿಲಿಗೆ ಕೂತಿದ್ದ 'ಸ್ವರ' ಳಿಗೆ ಅವಳ ತಾಯಿ ,ಕೂಗಿ ಬೇಗ ತಲೆಗೆ ಎಣ್ಣೆ ಹಚ್ಚಿಕೊಂಡು ಬಾ - ಬಾಚುವೆ ಎಂದಳು.. ತಲೆ ಬಾಚಿ ನೀಟಾಗಿ ಉದ್ದಕ್ಕೆ ಒಂದು ನೀಳ ಜಡೆ ಹೆಣೆದು ಅದಾಗಲೇ ಅಲ್ಲಿ ಬಂದು ಇದ್ದ 'ಸ್ವರಳ' ಸ್ನೇಹಿತೆಯರಿಗೆ ,ಅವಳಿಗೆ 'ಚೆನ್ನಾಗಿ' ಮೇಕಪ್ ಮಾಡಲು ಹೇಳಿ ತಾಯಿ ಹೋದರು ಅಡುಗೆ ಮನೆಗೆ ಕಾಫೀ  ರೆಡಿ  ಮಾಡಲು.. ಪೌಡರ್ -ಸ್ನೋ- ಎಲ್ಲ ಹಾಕಿ ಚೆನ್ನಾಗಿ ತಿದ್ದಿ ತೀಡಿ 'ಮೊದಲೇ' ಸಹಜ  ಸುಂದರವಾಗಿದ್ದ ಅವಳನ್ನ ಇನ್ನಸ್ಟು 'ಸುಂದರಿಯಾಗಿಸಿದರು'.. ಹಿಂದಿನ ದಿನವಸ್ಟೇ  ಕೈಗೆ ಮೆಹಂದಿ ಹಾಕಂಡು ಉಗುರುಗಳಿಗೆ ನೇಲ್ ಪಾಲಿಶ್ ಮಾಡಿದ್ದಳು..

 

ಉದ್ದ ಕೂದಲಿಗೂ 'ಸ್ವರಳಿಗೂ' ಅಸ್ಟಕ್ಕಸ್ಟೇ  ಹಲ ಬಾರಿ ತಾಯಿ ಯೊಡನೆ ಜಗಳವಾಡಿ ತಾ ಕೂದಲು ಕತ್ತರಿಸಿ ಹೆಗಲಿಗೆ ಬೀಳುವಸ್ಟು ಮಾತ್ರಕೂದಲು ಸಾಕು ಎಂದರೆ, ತಾಯಿ, ಬೇಡ ಕೂದಲು ಉದ್ದವಾಗಿದ್ದು ನಿತಮ್ಬದವರೆಗೆ ಇದ್ದರೆ, ನೋಡಲೂ ಚೆನ್ನ, ಅದು ಹೆಣ್ಣಿಗೆ ಮತ್ತಸ್ತು ಅಂದ ತರ್ತೆ ಎಂದು ಬಾಯಿ ಮುಚ್ಚಿಸಿದ್ದಳು, ಆದರೂ ಸ್ನಾನ ಮಾಡಿ ಆ ಕೂದಲನ್ನ ಒಣಗಿಸುವಾಗ, ತಲೆ ಬಾಚಿಕೊಳ್ಳುವಾಗ ತನ್ನ ಸ್ನೇಹಿತೆಯರೆಲ್ಲ 'ಬಿಂದಾಸ್'ಆಗಿ ಮಾಡರ್ನ್ ಉಡುಪಲ್ಲಿ 'ಚೋಟ' ಹೇರ್ ಸ್ಟೈಲಲ್ಲಿ  ಗಾಳಿಗೆ ಕೂದಲು ಹೊಯ್ದಾದಿಸುತ್ತ ಬರವಾಗ ಇವಳಿಗೆ ಅಸೂಯೆ -ಮುಜುಗರ ಆಗ್ತಿತ್ತು,ಛೆ ನಾ 'ಹಾಗಿದ್ದರೆ' ಎಷ್ಟು ಚೆನ್ನಿತ್ತು? ಆದರೆ ಇವಳ ಉದ್ದ ಕೂದಲು ನೋಡಿ ಆದರೆ ಇವಳ ಉದ್ದ ಕೂದಲು ನೋಡಿ ಅಸೂಯೆ ಪಟ್ಟವರೂ -ಕೂದಲು ಸ್ಪರ್ಧೆಗೆ ಬಿದ್ದು ಬಿಟ್ಟರು  ,ಆದರೆ 'ಮೇನ್ಟೇನ್' ಮಾಡಲಾಗದೆ  ಮತ್ತೆ ಕತ್ತರಿಸಿದವ್ರೂ ಇದ್ದರು.

 

 

 

ಕನ್ನಡಿ ಮುಂದೆ ನಿಂತು ಆ ಕಡೆ ಈ ಕಡೆ ಎಲ್ಲ ತಿರುಗುಇ ತನ್ನನ್ನೇ ತಾ ನೋಡುತ್ತಿದ್ದ ಸ್ವರ ಳಿಗೆ ಅನ್ನಿಸಿತು 'ಆ ನೀಳ ಜಡೆ' ಅಂದ ಹೆಹ್ಚ್ಚಿಸಿದೆ. ಬಿಟ್ತಿದಕ್ಕೂ ಸಾರ್ಥಕ ಆದಂಗಿದೆ.. ಸ್ನೇಹಿತೆಯರೋ ಓಹೋ ಮಹಾರಾಣಿ ಅವ್ರು ಅದಾಗಲೇ ಹುಡುಗನನ್ನ 'ಪಟಾಯಿಸಲು' ತಾಲೀಮು ಮಾಡ್ತಾವ್ರೆ, ಟೀ- ಕಾಫೀ ಬಿಸ್ಕತ್ತು -ತಿಂಡಿ ಕೊಡುವಾಗ ಜಾಗ್ರತ್ತೆ ಕಣೆ, ಕಾಫೀ ಕಪ್ಪು ಬಿಟ್ಟು 'ಕೈ' ನೆ ಹಿಡಿಯೋ 'ಜನ' ಇರ್ತಾರೆ, ನೀ ತತ್ತರಗೊಂಡು ಕಪ್ಪನ್ನ ಅವ್ರ ಮೇಲೆ ಬಿಸಾಕೀಯ ಅಂತ ಛೇಡಿಸಿ ನಗೋರು, ಹೋಗ್ರೆ, ನಿಮಗೆ ಮಾತ್ರಾ ಇದು ಆಗದೆ ಇರೋದ?  ನಿಮಗೂ ಮುಂದೆ ಇದೆ ಸಂದರ್ಭ ಬರ್ತೆ ಆಗ ನೀವು ಹಿಂಗೆ ಆಡ್ತೀರ..

ಅಡುಗೆ ಮನೇಲಿ ತಿಂಡಿ ರೆಡಿ ಮಾಡುತ್ತಿದ್ದ ತಾಯಿಗೂ ಈ ಮಾತುಗಳು ಕೇಳಿಸ್, ತಮ್ಮ 'ಫ್ಲಾಶ್ ಬ್ಯಾಕು' ನೆನಪಿಗೆ ಬಂದು  ತುಟಿಯ ಮೇಲೆ ನಗೆ ಲಾಸ್ಯವಾಡಿತು...

 

ಸ್ವರಳ 'ತಂದೆಯೋ' ಅದಾಗಲೇ ತಮ್ಮ 'ಇಬ್ಬರು' ಸೀ ಆಯ್ ಡೀ  ಹುಡುಗರನ್ನ ಮನೆಯಿಂದ ದೂರದಲ್ಲಿ ನಿಲ್ಲಿಸಿ ಮೊಬೈಲು ಕೊಟ್ಟು ಅವ್ರು ಬಂದ ಕೊಡಲೇ ಹೇಳಿ  ಅಂತ ಕಳ್ಸಿ, ಮನೆ ಮುಂದಿನ ಖಾಲಿ ಜಾಗದಲ್ಲಿ ದುಗುಡ ದೊಂದಿಗೆ ಅಡ್ಡಾಡುತ್ತಿದ್ದರು , ಹುಡುಗ ಹೆಂಗವ್ನೋ ಏನೋ? ಫೋಟೋ ಏನೋ ನೋಡಿದಿನಿ , ಆದರೂ ಏನರ 'ಐಬು' ಇದ್ರೆ? ದುಶ್ಚಟಗಳು ಇದ್ರೆ? ಮೊದಲೇ ನಗರದೊರು!! ತಃ ಥ್  ನ0ಗೆ 'ಸದಾ' ಬರೀ ಸಂಶಯವೇ- ಅಂಥದ್ದೇನೂ  ಇರಲಿಕ್ಕಿಲ್ಲ, ಸ್ವಯಂ ಸಮ್ಧಾನಿಸಿಕೊಂಡರು. ದೇವ್ರೇ ಹೆಂಗೋ 'ಅವ್ನು' ನಮ್ ಹುಡುಗೀನ ಒಪ್ಪಿಕೊಂಡರೆ ಸಾಕಸ್ಟೆ ... 

ಹೊರಗಡೆ 'ದುಗುಡದಲ್ಲಿ' ಓಡಾಡುತ್ತಿದ್ದ ತನ್ನ ಪತಿಯನ್ನ ಕರೆದು, ರ್ರೀ ಇಲ್ಲಿ ಕುಳಿತು ಕೊಳ್ಳಿರಿ, ಟೆನ್ಸನ್ ಆಗ್ಬೇಡಿ, ಮೊದಲೇ ಹಾಯ್ ಬಿ .ಪೀ ಇದೆ!! ಎಲ್ಲ ಒಳಿತಾಗ್ತೆ   ಈ ಎಳನೀರು ಕುಡೀರಿ... ತನಗೆ ಸಮಧಾನ ಹೇಳ್ತಿರೋ ಹೆಂಡ್ತಿ ಮುಖ ನೋಡಿ ನಕ್ಕರು , ಅವಳಿಗೂ 'ದುಗುಡ' ಇದೆ, ಆದರೂ.... ಫೋನು ರಿಂಗಣಿಸಿತು ..ಎತ್ತಿ , ಹಾ ಹಲೋ ..ಹಾ ಹೌದ?  ಆಯ್ತು ನೀವು ಅವರನ್ನ  ಕರೆದುಕೊಂಡು 'ಸಾವಕಾಶವಾಗಿಯೇ' ಬನ್ನಿರೋ, ನಾ ಇಲ್ಲಿ ವ್ಯವಸ್ತೆ ಮಾಡುವೆ... ಲೇ 'ಅವ್ರು' ಬಂದ್ರು ಕಣೆ, ಅವಳನ್ನ ರೆಡಿ ಮಾಡಿ ಇಕ್ಕಿರು, ತಿಂಡಿ ಕಾಫೀ ಎಲ್ಲ ರೆಡೀನ? ಹಾ ಇದೇರಿ... ಸ್ಸರಿ ಈಗ ನೀ  ಹೊಳ ಹೋಗು ನಾ ಕರೆದಾಗ ಬಾ ಆಯ್ತಾ? ... 

ದುಗುಡ ಆತುರ-ಕಾತುರ-ದ ಮುದ್ದೆಯಾಗ್ 'ಅವರ' ಬರುವ ದಾರಿಯತ್ತ ನೋಡುತ ನಿಂತರು... ಇಲ್ಲಿ 'ಅವ್ರು' ಬಂದ ಸುದ್ಧಿ'ಆಲ್ ಇಂಡ್ಯಾ ರೇಡಿಯೋ' ನೋ ನಾಚಿಸುವಂತೆ ಅದಾಗಲೇ ಬಂದು 'ಸ್ವರಳ' ಕಿವಿಗೆ ಬಿದ್ದು, ಮೈ ಎಲ್ಲ ನವಿರಾಗಿ ಕಂಪಿಸಿತು!! ತುಟಿ ಒಣಗಿತು, ಹೃದಯ 'ನಗಾರಿಯಂತೆ' ಹೊಡೆದು ಕೊಳ್ಳಲು ಆರಂಭಿಸಿತು.. ನಾಚಿಕೆ  -ಹೆದರಿಕೆ ಅದೂ ಇದೂ ಒಟ್ಟಾಗಿ ರಕ್ತ  ಸಂಚಾರ ಹೆಚ್ ಆಗ್ಮುಖಕ್ಕೆ ಚಿಮ್ಮಿ ಕೆನ್ನೆ ಕೆಂಪಾಯ್ತು:)  :)  ಅದನ್ನು ಕಂಡ ಸ್ನೇಹಿತೆಯರು ನಗುತ್ತ, ಕೂಲ್- ಕೂಲ್   ಕಣೇ - ಟೆನ್ಸನ್ಕು ಆಗಬೇಡ -ಅಲ್ಲಾ ಅವ್ರು ಬರ್ತಿರೋ ಸುದ್ಧಿ ಕೇಳಿಯೇ 'ಹಿಂಗಾದರೆ' ,ಇನ್ನು ಅವ್ನು ನಿಂಜೊತೆ ಮಾತಾಡಬೇಕು ಅಂದ್ರೆ....? ಸಧ್ಯಕ್ಕೆ    ಈ ಎಳ ನೀರು ಕುಡಿ  ಸುಧಾರಿಸಿಕೋ, 'ಮುಂದಿನದಕ್ಕೆ 'ರೆಡಿ ಆಗು ಎಂದರು....  ಅಂದ್ರೆ? ಅಂದ್ರೆ... ಅದೇ ಹಾಡು-ನೃತ್ಯ- ಇತ್ಯಾದಿ!!

ಒಹ್ ಮೈ ಗಾಡ್!  ಅದೆಲ್ಲ ಇದ್ದೀಯ?.. ನಾ ಕೆಟ್ಟೆ
 

>>>>>ಇನ್ನರ್ಧ ಮುಂದಿನ ಭಾಗದಲ್ಲಿ..

ಅತೀ ಶೀಘ್ರದಲ್ಲಿ....

ಅಲ್ಲಿವರ್ಗೆ ಮದ್ವೆ ಆದವರು  ತಮ್ಮ 'ಗತ'  ನೆನಪನ್ನು,

ಆಗದಿದ್ದವ್ರೂ 'ಕಲ್ಪನೆ'ಯನ್ನ ಮಾಡಿಕೊಳ್ಳುತ್ತ ............... :)

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

pavu ಶನಿ, 01/07/2012 - 15:56

ನಿಮ್ಮ ಹಾಸ್ಯ ಬರಹ ತುಂಬಾ ಚೆನ್ನಾಗಿದೆ ನಿಮ್ಮ ಈ ಬರಹದ ಮುಂದಿನ ಭಾಗ ಏನು ಎಂಬುದು ತಿಳಿದುಕೊಳ್ಳುವ ಕುತೂಹಲ ನನಗೆ ಬಾಗ ಮುದುವೆರೆಸಿ.

venkatb83 ಭಾನು, 01/08/2012 - 00:40

ಪವಿತ್ರ ಅವ್ರೆ (ಪವು ಅಂತ ಇದೆ ಆದರೆ ನಿಮ್ಮ ಹೆಸರು ಪವಿತ್ರ ಇರಬಹುದು ಅನ್ಸುತ್ತೆ!!)  ಬರಹ ನಿಮಗೆ ಹಿಡಿಸಿದ್ದು ನಂಗೆ  ಸಹಜವಾಗಿ ಖುಶೀ ತಂದಿದೆ.. >>>>ನಿಮ್ಮ ಇಚ್ಚೆಯಂತೆ ಕೊನೆ ಭಾಗವನ್ ಸೇರಿಸಿದ್ದೇನೆ(೨ ಭಾಗವಾಗಿ ಮಾತ್ರ ಅದನ್ನು ಬರೆದದ್ದು) ... ನನ್ ಇನ್ನಸ್ಟು ಬರಹಗಳಿಗಾಗಿ ಇಲ್ಲಿ ಭೇಟಿ ಕೊಡಿ..  http://sampada.net/user/venkatb83

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.