Skip to main content

ಮಾನ್ಯರೇ, ನಮ್ಮ ದೇಶದಲ್ಲಿ ಉಪಯೋಗಿಸುತ್ತಿರುವ ದಿನಧರ್ಶಿ ಅಥವಾ ಕ್ಯಾಲೆಂಡರ್ ಸರಿಯೇ. ಹಿಂದೂಗಳು ಕ್ರಿಸ್ತ ವರ್ಷಾರಂಭವನ್ನೇ ಹೊಸ ವರ್ಷವೆಂದು ಈಗಿನ ಯುವಕರು ಆಚರಿಸುತ್ತಾರೆ. ಅದೇ ನಮ್ಮ ವರ್ಷಾರಂಭ ಅವರಿಗೆ ತಿಳಿದಿಲ್ಲ. ಏಕೆ ನಮ್ಮ ಹಿಂದೂ ಪಂಚಾಂಗವನ್ನು ಜಾರಿಗೆ ತರಬಾರದು. ಇದರಿಂದ ಅನಾನುಕೂಲವೇನು? ತಿಳಿದವರು ತಿಳಿಸುವಿರಾ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಪ್ರಭುದೇವ್ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 13:52

ನಾವು ನಮ್ಮ ಅನುಕೂಲಕ್ಕಾಗಿಮಾಡಿಕೊಂಡು ಅನುಸರಿಸುವ ದಿನದರ್ಶಿ ಯಾರಿಗೂ ಕಡ್ಡಾಯ ಇಲ್ಲ. ಸರಿಯೆನಿಸಿದ ದಿನದರ್ಶಿಗಳನ್ನು ಉಪಯೋಗಿಸಲು ಮುಕ್ತ ಅವಕಾಶವಿದೆ.ಹಗಲು-ರಾತ್ರಿ,ವರ,ನಕ್ಷತ್ರ,ತಿಥಿ ,ತಿಂಗಳು,ವರ್ಷ,ದಿಕ್ಕುಗಳು,ನಾವೇ ಶ್ರುಷ್ಟಿಸಿಕೊಂಡವುಗಳು.ಅವುಗಳನ್ನೂ ಎಲ್ಲೂ ಭೂಮಿಯಮೇಲೆ ಬರೆದಿಲ್ಲ, ಓದುವುದಕ್ಕೂ ಲಬ್ಯ ಇಲ್ಲ 

jeeva ಶುಕ್ರ, 12/30/2011 - 21:28

ಪ್ರಭುದೇವ್ ರವರೆ ಹಗಲು-ರಾತ್ರಿ,ವಾರ,ನಕ್ಷತ್ರ,ತಿಥಿ ,ತಿಂಗಳು,ವರ್ಷ,ದಿಕ್ಕುಗಳು ನಾವು ಸೃಷ್ಟಿಸಿಕೊದವಲ್ಲಾ ಅದು ನಮ್ಮ ಹಿಂದೂ ಋಷಿಮುನಿಗಳು ಕಗೋಳ ಅದ್ಯಯನ ಮಾಡಿ ತಾಳೆಗ್ರಂಥದಲ್ಲಿ ಬರೆದಿರುವುದು ಇದು ವೇದಗಳಲ್ಲಿ ಇಪ್ಪತ್ತು ಸಾವಿರ ವರ್ಷಗಳ ಹಿಂದೆ ರಚಿಸಿರುವುದು, ಅದು ಇಂದಿನ ಜನಸಾಮಾನ್ಯರಿಗೆ  ಮತ್ತು ವಿಜ್ಞಾನಿಗಳಿಗೆ ಉಪಯೋಗವಾಗುತ್ತಿದೆ. ಇನ್ನು ಎಷ್ಟೇ ವರುಷವಾಗಲಿ ಗ್ರಹಣ ಹುಣ್ಣಿಮೆ ಅಮಾವಾಸ್ಯೆ ದೂಮಕೆತು  ಇವು ಯಾವಾಗ ಬರುತ್ತವೆ ಎಂದು ಅವರು ಹಿಂದೆಯೆ ಎಲ್ಲವನ್ನು ತಿಳಿಸಿದ್ದಾರೆ.

jeeva ಶುಕ್ರ, 12/30/2011 - 21:02

ನಮ್ಮ ದೇಶದಲ್ಲಿ ಉಪಯೋಗಿಸುತ್ತಿರುವ ದಿನಧರ್ಶಿ ಅಥವಾ ಕ್ಯಾಲೆಂಡ ರ್ಹಿಂದೂಗಳ ಪ್ರಾಕಾರ ೧೦೦%  ಸರಿಯಾಗಿಲ್ಲ. ನಮಗೆ ಯುಗಾದಿ ಹೊಸ ವರ್ಷ ಈಗಿರುವ ಕ್ಯಾಲೆಂಡರ್ ಕ್ರಿಶ್ಚಿಯನ್ ಕ್ಯಾಲೆಂಡರ್ ಹಿಂದೂಗಳು ಶುಭ ಕಾರ್ಯಗಳನ್ನು ಕ್ರಿಶ್ಚಿಯನ್ ಕ್ಯಾಲೆಂಡರ್ ನೋಡಿ ಯಾರು ಮಾಡುವುದಿಲ್ಲ ಎಲ್ಲರು ಪಂಚಾಂಗ ಮಾತ್ರ ನೋಡಿ ಮಾಡುತ್ತಾರೆ . ಎಲ್ಲರು ಶುಭ ಕಾರ್ಯಗಳನ್ನು ಮಾತ್ರ ಪಂಚಾಂಗ ನೋಡಿ ಮಾಡುತ್ತಾರೆ ಅದರೆ ಹೊಸವರ್ಷ ಮಾತ್ರ ಜನವರಿ ೧ ಯಾಕೆ ಆಚರಿಸಬೇಕು. ನನಗಂತೂ ಯುಗಾದಿ ಹೊಸವರ್ಷ. ಕ್ರಿಶ್ಚಿಯನ್ ಕ್ಯಾಲೆಂಡರ್ ಇಲ್ಲರಿಗೂ ವ್ಯವಹಾರಿಕ ಮತ್ತು ವ್ಯಪಾರಸ್ತರಿಗೆ ಮಾತ್ರ ಉಪಯೋಗವಗುತದೆ ಅದು ಬಿಟ್ಟು ಶುಭ ಕಾರ್ಯಗಲಿಗಲ್ಲ. ಜೈ ಶ್ರೀ ರಾಮ್ .

srinivas m ಶನಿ, 12/31/2011 - 09:45

ಇಂಗ್ಲಿಷ್ ದಿನದರ್ಶಿ ಕೇವಲ ದಿನಗಳ  ಲೆಕ್ಕವನ್ನು ಹೇಳುತ್ತದೆ.
ಆದರೆ ನಮ್ಮ ಪಂಚಾಂಗ ದಿನಗಳ ಲೆಕ್ಕದ ಜೊತೆ ಆ ದಿನದ ಮಹತ್ವವನ್ನೂ ಹೇಳುತ್ತದೆ,
ಈಗಿನ ದೈನಂದಿನ ಅನುಕೂಲಕ್ಕಾಗಿ ನಾವು ಪಂಚಾಂಗವನ್ನು ಉಪಯೋಗಿಸಲು ಸಾಧ್ಯವಾಗದು.

  • 1157 views