Skip to main content

ಹೀಗೊಂದು ಯುದ್ಧ-ಸೋತರೂ ನಸ್ಟ- ಗೆದ್ದರೂ ನಸ್ಟ:))-ಬೇಡಪ್ಪ ಈ ಕಷಾಯ ಕಷ್ಟ :))

ಇಂದ venkatb83
ಬರೆದಿದ್ದುDecember 18, 2011
noಅನಿಸಿಕೆ

ಎಡಗಣ್ಣು ಅದುರುತ್ತಿದೆ'...:) ಇದೇನೋ ಭಯಾನಕ ಭೂಕಂಪನ ,ಇಲ್ಲ  ಯುದ್ಧ(ಮೌನ ಅಥವಾ ಮಾತಿನ) ನಮ್ಮನೆಯಲ್ಲಿ ನಡೆಯುವ ಸೂಚನೆಯೇ?ನನ್ನಂಬಿ ನನ್ನಂಬಿ ಪ್ಲೀಜ್! 'ಹೀಗೆ' ಆದಾಗೆಲ್ಲ 'ನನ್ನ' ಜೇಬಿಗೆ ಕತ್ತರಿ ಬಿದ್ದು ಅದು 'ಬಡವಾಗಿದೆ':)ಲೇ 'ಇವಳೇ' ತಿಂಡಿ  ತತ್ತಾ ,ಹಾಗೆ ಫಿಲ್ಟರ್ ಕಾಫೀನ  ರೆಡಿ ಮಾಡ್.. ಏನೂ ಹಾ ಇಲಾ- ಉಹೂ ಶಬ್ದ ಅಡುಗೆ ಕೋಣೆಯಿಂದ  ಬಂದ ಹಾಗಿಲ್ಲ  ನಂಗೆ ಸಂಶಯ ,ನನ್ನ ಕಿವಿ ;ಗ್ರಹಣ ಶಕ್ತಿ; ಕಡ್ಮೆಯಾಯ್ತೆ:))ನನ್ನ ಧ್ವನಿಯೂ ತನ್ನ 'ಶಕ್ತಿ' ಕಳೆದುಕೊಂಡು  ಅದು ಅವಳಿಗೆ ಕೇಲಿಸಲಿಲವ?ಪ್ರಶ್ನಾರ್ಥಕವಾಗ್  ಅಥವಾ ನನ್ನ 'ಸಂದೇಹ' ಪರಿಹರಿಸಿಕೊಳ್ಳಲು  ನನ್ನ ಟೇಬಲ್ ಮುಂದೆ ಕುಳಿತು ಡ್ರಾಯಿಂಗ್ ಬಿಡಿಸುತ್ತಿದ್ದ ಮಗಳು 'ವಿಜೇತ'ಳತ್ತ ನೋಡಲು ಅವಳು ' ನೀ ಉಂಟು-ಅಮ್ಮ ಉಂಟು'  ಅನ್ನೋ ಹಾಗ್ ಭುಜ ಕುಣಿಸಿ ಪ್ಚ್ಚ್  ಅಂದಳು ಹಾಗೆ ಎದ್ದೂ ತನ್ನ ಕೊನೆಗೆ ಹೋದಳು.. ಆಲ್ ಮೋಸ್ಟ್  ಏಕಾಂಗಿಯಾದ ನಾ 'ತಡವರಿಸುತ್ತಾ'  ಮತ್ತೊಮ್ಮೆ  ಹೇಳಿದೆ .. ಲೇ 'ಇವಳೇ',  ತಿಂಡಿ ತಾರೆ  ಹಾಗೆ ಕಾಫೀನು ರೆಡಿ ಮಾಡು. ಹೊಟ್ಟೆ 'ಚುರುಗುಡುತ್ತಿದೆ'.. ಯಾವ್ದೋ ಪಾತ್ರೆ  ಟಣ್ಣ - ಟಣ್ಣಣ್ಣನ್  ಅಂತ ಸಿಂಕಿಗೆ ಬಿದ್ದು ಅದರ ಜೊತೆಗೆ ಇನ್ನೇನೋ ಧದಾಲ್ ಅಂತ ಬಿದ್ದು 'ಒಟ್ಟೊಟ್ಟಿಗೆ' ಭಯಂಕರ ಶಬ್ದ'  ಮಾಡಿ ಬೆಳಂಬೆಳಗ್ಗೆ  ಮನದಲ್ಲಿ 'ಆಂದೋಲನ'ಮೂಡಿಸಿದವು:)) ನನ್ಗೊತ್ತಯ್ತು 'ಇವತ್ತು' ಮತ್ತೊಮ್ಮೆ 'ಅಮೋಘ ೧೦೧ ನೇ'  ಮೌನ ಯುದ್ಧ ಮನೆಯಲ್ಲಿ ನನ್ನ-ಮತ್ತು ಅವಳ ಮಧ್ಯೆ ಇದೆ..  ನಾ ಏನಾರ ತಪ್ಪು ಮಾಡಿದೆನ?  ಅವ್ಳು ಹೇಳಿದಏನಾರ ಮರೆತ್ನ ? ಇವತ್ತು ಭಾನುವಾರ ಬೇರೆ  ಯಾವ ಕೆಲಸ ಕಾರ್ಯವೂ ಇಲ್ಲ, 'ಉಂಡಾಡಿ ಗುಂಡನ್' ತರಹ ಚೆನ್ನಾಗ್ ತಿಂದು- ಹಾಯಾಗ್  ಟೀ  ವಿ ನೋಡ್ತಾ ಕುಳಿತರೆ ಆಯ್ತಪ್ಪ :))ಏನೂ ಕೆಲಸವಿಲ್ಲ ,ಮತ್ಯಾಕ್ ಅವಳ್ಗೆ ಕೋಪ? ಯಾವ್ಯಾವ್ದೋ ಸಿನೆಮಾಗಳನ್ನ  ನೆನಪಿಗೆ ತಂದುಕೊಂಡು  ಅದರಲ್ಲಿ 'ಮುನಿಸಿಕೊಂಡ  ಹೆಂಡ್ತಿಗ್' ನಾಯಕ 'ಕಾಮನಬಿಲ್ಲಿನ ಬಣ್ಣವನ್ನು' ಮೀರಿ 'ನಟನೆ' ಮಾಡಿ  ರಮಿಸುವ  ಧ್ರುಷ್ಯಗಳು ಕಣ್ಣಮುಂದೆ ಹಾಡು ಹೋದವು:))'ಯಾವ್ಯಾವ್ದೋ' ದೇವರ್ನ  ನೆನೆಸಿಕೊಳ್ತಾ(ಅದ್ವರ್ಗೂ ದೇವ್ರು ಬಗ್ಗೆ ಯೋಚಿಸ್ದವ್ನೆ ಅಲ್ಲ- ಅಯ್ಯೋ ,,ದೇವ್ರು ಅಲ್ವ ಹೆಂಗೂ 'ಅರಾಮಗೆ ಇರ್ತಾರ್' ಬಿಡು ಅನೋ ಭಾವನೆ ):)) ನೀವೇ ಕಾಪಾಡಿಅನ್ತ, ಬೆಕ್ಕಿನ ಹೆಜ್ಜೆ ಮೀರ್ಸುವಂತ್ ''ಕಳ್ಳ ಹೆಜ್ಜೆ ಇಕ್ತಾ'  ಅಡುಗೆ ಕೊನೆ ಸೇರಿದಾಗ  'ನನ್ನವಳು' ಸರ್ರನೆ ನನ್ನೆದೆ ತಿರ್ಗಿ  ಒಮ್ಮೆ 'ಧಿಟ್ಟಿಸಿ' ಏನೊಂದು ಹೇಳದೆ ರೋಶದಿಂದೆಮ್ಬಂತೆ  ದಬೀಲ್ಅನ್ತ ಪಾತ್ರೆಯೊಂದನ್ನ  ಸಿಂಕಿನ ಕಲ್ಗೆ ಕುಟ್ಟಿದಳು. ಚಿನ್ನ- ಅಯ್ಯೋ ಹೇಳ್ಬಾರ್ದಾಗಿತ್ತು ಏನೋ 'ಬಾಯ್ ತಪ್ಪಿ' ಬಂತು (ಬೀಳ್ತಲ್ಲಪ್ಪ  ಟ್ಯಾಕ್ಸು  ಚಿನ್ನ ಅಂದ ತಪ್ಪಿಗ್:)) ಆದರೋ ಸಾವರಿಸಿಕೊಂಡು  ಪದ್ದು ಅಂತಾ ಕೆಳಿಸ್ತೋ ಇಲ್ಲ ( 'ಪೆದ್ದು' )ಅಂತಾನೋ  ದುಗುಡ! ಪಾಪ ಬೆಳಗೆಯಿಂದ  ನೀ ಒಬ್ಳೆ ಕಸಗುಡ್ಸಿ, ನೀರ್ ಕಾಯ್ಸಿ ,ಅಡುಗೆ ರೆಡಿ ಮಾಡಿ(ಮಾಡಿರಬಹುದು ಎನ್ನುವ ಆಶೆ!) ನಿಂತಲ್ಲೇ ನಿಂತು 'ಸುಸ್ತಾಗಿದಿಯ', ಈ ಹಾಳಾದ್ ಕೆಲಸ ಸದಾ ಇದ್ದದ್ದೇ,ಹೆಂಗೂ ಇವತ್ ಭಾನುವಾರ ಅಲ್ಲವ? ಆರಾಮಾಗಿ ತಿಂದು ಕಾಲ ಕಳೆದರೆ ಆಯ್ತು,ಬಾ -ಹಾಲ್ನಲ್ಲಿ  ಹಾಯಗ್ ಕುಳಿತ ಟೀ ವೆ ನೋಡೋಣ- ಅದ್ಯಾವ್ದೋ 'ನಮ್ ಸಂಸಾರ' ಅನ್ನೋಪ್ರೋಗ್ರಾಮ್ ಬರ್ತಿದೆ... ಮತ್ತೊಮ್ಮೆ ನನ್ನೆದೆ ತಿರ್ಗಿ, ಮುಖವನ್ನ 'ಹೈದರಾಬಾದ್  ಹಪ್ಪಳ' ಮಾಡಿಕೊಂಡು  ಬಿರ ಬಿರನೆ ನಮ್ಮ ಕೋಣೆಗೆ ನಡೆದಳು:)ಅಂದ್ರೆ ? ಅಲ್ಲಿ ನನಗೇನೋ  'ಕಾದಿದೆ':() ದೇವ್ರೇ ತಿಂಗಳ ಕೊನೆಬೇರೆ!  ಇವಳು ನನ್ನ 'ಸಂಬಳದ' ಮೇಲೆ  ಏನಾರ 'ಸ್ಕೆಚ್' ಹಾಕವ್ಳ?  ಮೆಲ್ಲಗೆ ಅನ್ಜಂಜುತ್ತ  ಹೊಳ ಹೊಕ್ಕು  ನನ್ನೆದೆ ಬೆನ್ನು ಮಾಡಿ ಬುಸುಗುಡುತ್ತ  ಕುಳಿತಿದ್ದ 'ಅವಳ ಮುಖವನ್ನ' ಎರಡೂಕೈನಲ್ಲಿ ಹಿಡಿದು ಯಾಕೆ ಏನಾಯ್ತೆ  ನನ್  ಮೇಲೆ ಕೋಪಾನ? ಕೇಳಿದೆ. ಈಗ 'ಅವಳ' ಮುಖ 'ಬೊ ಚೆಂದ' ಆಯ್ತೆ ಅನ್ಸ್ತು:)) ನನ್ನ್ಯಾವ ಪ್ರಶ್ನೆಯೂ ಸಂತೈಸುವಿಕೆಯೂ  ಏನೂ ಪರಿಣಾಮ ಬೀರಲಿಲ್ಲ:(( ಹ್ಯಾಪು ಮೊರೆ ಹಾಕೊಂಡು ' ಈ ಮೌನವ ತಾಳೆನು ಮಾತಾಡೋ ದಾರಿಯ ತೋರಿಸು  ಓ ನಲ್ಲೆ'  ಕೊನೆ ಪ್ರಯತ್ನ ಎಂಬಂತೆ  ಹಾಡಿದೆ ..ಅವಳೂ ಅದಾಗಲೇ 'ಸಂಧಾನಕ್ಕೆ' ಸಿದ್ದವಾದಂತಿತ್ತು:)(  ಒಮ್ಮೆ ಖಿಲ್ಲನೆ ನಕ್ಕು   ಬಡ್ಕೊಬೇಕು!! ರ್ರೀ  ಅದ್ 'ತೋರಿಸು' ಅಲ್ಲ  'ಕಾಣೆನು' ಅಂತಾ ಹಾಡಬೇಕು... ವಾಹ್ವ್ ಮನಸಲ್ಲೇ 'ಅಣ್ಣಾವ್ರಿಗ್ ' ವಂದಿಸಿದೆ ಎಲ್ಲ ನಿಮ್ಮ ದಯೆ  ಗುರೂ ,ಅಂತೂ 'ಮೌನ ಯುದ್ಧ' ಕೊನೆ ಮಾಡಿದಿರಿ... ಯಾವ್ದೋ ಒಂದು  ಒಟ್ನಲ್ಲಿ  ನೀ ಮಾತಾಡಿದೆಯಲ್ಲ್:() ರ್ರೀ  ಅದೇನ್ರಿ ನಾ ಹೊಸ್ದಾಗ್ ಮಾತಾಡೋದು? ನಾ ೧ ವರ್ಷದವಲಾಗಿಂದ  ಮಾತಾಡ್ತ್ಲೇ ಇದ್ದೀನಿ, ಅಹ ಅದೇ ನೋಡು ತಾಪತ್ರಯ!ನಿನ್ನ ಮಾತನ್ನ ಆಗ ಅಲ್ಲಿ  ಯಾರು ಕಿವಿಗ್ ಹಾಕೊಂದಿಲ್ಲ ಅದ್ಕೆ ಇಗ ನೀ ಇಲ್ಲಿ  ನಂಗೆ------ನಾಲಗೆ ಕಚ್ಚಿ ಹಿಡಿದೇ ಈಗಲೇ 'ಯುದ್ಧ ಮುಗಿದಿದೆ' ಮತ್ತೊಂದು 'ವಾಗ್ಯುದ್ಧ'  ಬೇಕಾ? ಅದ್ ಅತ್ಲಾಗಿರ್ಲಿ  ಈಗ ನಿನ್ನ ಈ ಹೈದರಾಬಾದು ಹಪ್ಪಳ' ಬಿಟ್ಟು  ಕೊಂಚ ನಗ್ಬಾರ್ದೆ? ಹಾ ಹಾ ಇರಿ ಇರಿ  ನಿಮಗೆ 'ಸಲ್ಗೆ' ಕೊಡೋದೇ ತಪು?  ವಿಷಯಾಂತರ ಮಾಡಬೇಡಿ, ಈ ಸರ್ ನಾನಿಮ್ಮ ಬಣ್ಣದ ಮಾತಿಗ್ ಮರುಳಾಗಲ್;!!ಹೋಗ್ಲಿ ಏನು ವಿಷ್ಯ ಹೇಳು ಅಂದೇ.ಏನೂ ಮಾತಾಡದೆ ಎದ್ದು ಹೋಗ ಮೇಜಿನ ಮೇಲಿಂದ ಒಂದು  ಅದಾಗಲೇ ಬರೆದು ಇಟ್ಟಿದ್ದ  ಪೇಪರ್  ತಂದುಕೊಟ್ಟಳು . ಅದನ್ನು 'ನಡುಗುವ ಕೈನಿ0ದಲೇ'  ಓಪನ್ ಮಾಡಿದೆ,ಅದೇನೇನೋ  'ಮಾರುದ್ದ ಲಿಸ್ಟ್'  ಬರೆದವ್ಲೋ ಅಂತಾ:()  ೧ ಬೆಳಗ್ಗೆ 'ಬೇಗ' ಏಳಬೇಕು (ನಾ ಎದ್ದೆಳೋದು ಅವಳು ಕಿವಿ ಹಿಂಡಿ ಎಬ್ಬಿಸಿದಾಗ:)) ಹೀಗೂ ಉಂಟೆ?ಮತ್ತು ಎದ್ದು ಬೆಳಗ್ಗೆ ವಾಕಿಂಗ್ ಜಾಗಿಂಗು 'ಏನಾರ್' ಮಾಡಿ 'ಹತ್ತು ಕಿಲೋ'(ಹತ್ತೇ ಸಾಕ?) ಕಮ್ಮಿ ಆಗಬೇಕು(ಏನೋ 'ಕೊಂಚ ಮಾತ್ರ' ತೆಳ್ಳಗಿಲ್ಲ ಅಸ್ಟೆ ಅದ್ಕೆ ಇಂಥ ಘೋರ ಶಿಕ್ಷೆನ?  ದೇವ್ರೇ :)೨.ಅಡುಗೆ ಮನೆಯಲ್ಲಿ ನನಗೆ 'ಸಹಾಯ' ಮಾಡಬೇಕು (ನಾ ತಿಂಡಿ ತಿನ್ನೋದಾದ್ರೆ ಓಕೆ- ಮಾಡೋಕಲ್ಲ :)(೩.ಮನೆ ಮುಂದಿನ ಪುಟ್ಟ  ತೋಟಕ್ಕೆ ನೀರ್ ಹಾಯ್ಸಬೇಕು(ಅಬ್ಬ ಈ ಚಳೀಲ?)೪. ವಾರದ ಕೊನೆ ಎರಡು ದಿನ  ಹೊರಗಡೆ ಊಟ ( ನಾ ಒಬ್ನೇ ಆದ್ರೆ ಓಕೆ! ಮನೆ ಎಲ್ರೂ  ಆದ್ರೆ -ದೇವ್ರೇ ದಿಕ್ಕು :)೫.ಹೊಸ ಸೀರೆನೆ ಇಲ್ಲ ೨ ರೇಷ್ಮೆ ಸೀರೆ,ಅದಕ್ಕೊಪ್ಪುವ ರವಿಕೆ, ಮತ್ತು 'ಎರಡೆಳೆ ಸರ'(ಬರೀ ಎರಡೇ ಎಳೆ ಸಾಕೆ ಚಿನ್ನ?))   ಬೇಕು, ಮನೆ ಮುಂದೆ ತರಕಾರಿ ಬೆಳೆದು ಅದು ಸರಿಯಾಗ್ ನೀರು ಹಾಕದೆ ಕೇರ್ ಮಾಡದೆ -ಮುದುಡಿ ಒಣಗಿ ಹೋಗಿದೆ ಅದಕ್ಕೆ ಪ್ರಾಯಶ್ಚಿತ್ತವಾಗಿ  ಈ ವಾರ ಪೂರ್ತಿ ಮಾರ್ಕೆಟ್ಟಿಗೆ  ಹೋಗ ತರಕಾರಿ ತರಬೇಕು(ವಾಹ್ವ್ ಎಂತ ಚಾನ್ಸ್  ಒಬ್ಬನೇ ಹೋಗ್ ಅಲ್ಲಿ 'ಕಣ್ಣು 'ತುಂಬಾ ತುಂಬಿಸಿಕೊಳ್ಳಬಹುದು:)೦ ಇದು ಓಕೆ ಹಾ ಇರೀ ಇರೀ ಜಾಸ್ತಿ ಎಕ್ಷಾಯ್ತ ಏಕಸಾಯ್ಟ್  ಆಗ್ಬೇಡಿ 'ನಿಮ್ಬಗ್ಗೆ' ನಂಗೊತ್ತಿಲ್ವ? ಅಲ್ಲಿ ಯಾರಾ ಹಲ್ಲು ಕಿರಿದು ನಕ್ರು ಅಂತಾ 'ಅವ್ರೆಲಿದ್ ರೇಟಿಗ್' ಕೋಲೇ ಬಸವನ(ಅದ್ಯಾರು ನನ್ಗೊತ್ತಿಲಪ್ಪ:)) ತರಹ  ಕಾಸು ಕೊಟ್ಟು ತರೋದಲ್ಲ, 'ಭರ್ಜರಿ ಚೌಕಾಸಿ' ಮಾಡಬೇಕು ಗೊತ್ತಾಯ್ತ? ಅದೆಲ್ಲ ಓದಿ  ಒಂಥರಾ ನಕ್ಕು  ನಾನೆ ಅನ್ಕೊಂಡೆ 'ಅದಾಕೆ ಜನ  ಎದ್ದೋ-ಬಿದ್ದೋ ಅಂತಾ ಹಿಮಾಲಯಕ್ಕೆ ಒಡತವರೆ ' ಅಂತಾ ಈಗ ಗೊತತ್  ನೋಡ:()  ಒಮ್ಮೆ ನೋಡಿ ಹೇಳಿದೆ,ಮೊದಲಿನ ಕೆಲವು ಬೇಡಿಕೆಗಳು 'ಈಗೆ' ಆಗೋಲ್ಲ  ಸ್ವಲ್ಪ ದಿನ ಸಮಯ ಕೊಡು ಒಂದೊಂದಾಗ್  ಪೂರೈಸ್ತೀನ್. ಸ್ಸಾರಿ ಆದ್ರೆ ನೀವ್ ಹತ್ತು ಕಿಲೋ ಕಡಮೆ ಆಗಲೇಬೇಕು, ನಾ ಪಕ್ಕದ್ ಮನೆ ತಾರ ಜೊತೆ  'ಬೆಟ್ ' ಕತ್ತಿದ್ದೀನ್ 'ನಮ್ ಯೆಜ್ಮಾನ್ರ  ಹತ್ತು ಕೆಜಿ ಕಡಮೆ' ಮಾಡ್ತೀನ್ ಅಂತಾ!!ಅವ್ರ ಯೆಜ್ಮಾನ್ರು ಬರೀ ಹತ್ತೇ ದಿನದಲ್ಲಿ ೫ ಕೆಜಿ  ಕಡಮೆ  ಆಗಿದ್ರಂತೆ, ನೀವು  ಹತ್ತು -೧೫ ದಿನ ಸಮಯ ತೊಗೊಳ್ಳಿ ಆದ್ರೆ ಆಗಲೇಬೇಕು ನನ್ನ 'ಬೆಟ್' ಪ್ರಶ್ನೆ. ಅದೊಮ್ಮೆ ಸಿಕ್ಕಾಗ್  'ಗಾಲಿಯಲಿ' ತೇಲ್ತಾ ಹೋಗ್ತಿದ್ದ 'ಕಪನೀಪತಿ' ಅವರನ್ನ ಕೈ ಹಿಡಿದು  ನಿಲ್ಲಿಸಿ ಹೆಂಗಿದೀರ ಸ್ಸಾರ್ ಎಂದಾಗ ಅವ್ರು 'ಅಯ್ಯೋ ಸಧ್ಯ ಹಿಂಗ್ ಇದೀನ್, ಆಮೇಲ್ಹೆಂಗಿರ್ತಿನೋ  ನಾ ಕಾಣೆ, ಯಕ್ಸ್ಸಾರ್  ಏನ್ ವಿಷ್ಯ ಅಂದೇ? ಅದ್ನ ಈಗ ಹೇಳೋಕಾಗಲ್ಲ, ಯಾವತ್ತರ ಸಿಕ್ರೆ ಹೇಳ್ತಿನ್(ಮತ್ತೆ ಸಿಗಲ್ವ")   ನಿಮ್ಮ ಆರೋಗ್ಯದ ಬಗ್ಗೆ ಹುಷಾರು ಅಂದಾಗ ,ಒಹ್! ಬಹುಶ ಯಾವ್ದೋ 'ಗುಪ್ತ ರೋಗವಿರ್ಬೇಕು)ಸ್ಸಾರಿ ಕಣ್ರೀ ಎಂದೇ ,ಅವ್ರು  ನನ್ನ ಊಹೆಯನ್ನ ಅರಿತು ಅಯ್ಯೋ 'ಹಾಗೇನು-ಅಂತಾದ್ದೇನೂ'  ಇಲ್ಲಾರೀ , ನನ್ನವಳು ನಾ ತೆಳಗಗಬೇಕು  ತೆಲ್ಲಗಾಗಬೇಕು ಅಂತ  'ಅದ್ಯಾವ್ದೋ ಕಹಿ  ಕಷಾಯ' ಮಾತ್ರ ಕುಡ್ಸಿ 'ಏನೂ' ತಿನ್ನೋಕ್ ಬಿಡದೆ ಹಿಂಗಿದೀನ್.ಏನೋ ನಾ ಆಗಾಗ ಹೊರಗಡೆ ಪಾನಿ ಪೂರಿ ತಿಂತಾ ಹಿಂಗಿದಿನಿ ಅಂದ್ರು:)) ಅದ್ಸರಿ ನೆವ್ ಯಾಕ್ ತೆಳ್ಳಗಾಗಬೇಕು?  ಅದೂ ಮಧ್ಯ ವಯಸ್ಗೆ ? ವಿಷ್ಯ ಅದಲ್ಲ, 'ಅದ್ಯಾವ್ದೋ  ಹಾಳಾದ್ದು' ಸ್ಪರ್ಧೆಇದೆಯಂತೆ ಅವರ ಸಂಘದಲ್ಲಿ(ಮಹಿಳ ವಿಮೋಚನಾ ಸಂಘಟನ  ಸಂಘ) ಯಾರು ಅವ್ರ ಯೆಜ್ಮಾನ್ರನ್ನ  ಒಂದು ತಿಂಗಳಲ್ಲಿ  ಅತಿ ಕಡಮೆ ತೂಕ ಇಳಿಸ್ತಾರೋ ಅವರನ್ನ  ಅಜೀವ ಪರ್ಯಂತ ಮಹಿಳ ಸಂಘದ ಅದ್ಯಕ್ಷೆ ಮಾಡುತ್ತಂತೆ:)) ಅಲ್ದೆ ಇನ್ನು ಏನೇನೋ ಆಶೆಆಮಿಷ ಇದೆ. ಒಹ್ ಅದ ವಿಷ್ಯ? ಆ ದೇವ್ರು ನಿಮ್ನ ಕಾಪಾಡಲಿ ಅಂತ ಬಾಯ್ ಹೇಳಿದೆ. ಮನಸಲ್ಲೇ ಬೇಡ್ಕೊಂದೆ  ದೇವ್ರೇ ಅಪ್ಪಿ-ತಪ್ಪಿ- ನನ್ನವಳು ಇನ್ತಾದ್ರಲ್ಲಿ 'ಇನ್ವಾಲ್ವ್ ' ಆಗದಿದರೆ  ಸಾಕು. 'ಕಹಿ ಕಷಾಯ್' ಕುಡ್ಯೋ  ಪಾಡು ಬೇಡಪ್ಪ. ಅದಾಗಲೇ  ಕಪನೀಪತಿಗಳು ಬನ್ನಿ ಕಾಫೀ ಕುಡಿಯೋಣ ಅಂದಾಗ 'ಒಂಥರಾ  ತೆನಾಲಿ ರಾಮ ಕೃಷ್ಣನ ಬಿಸಿ ಹಾಲು ಕುಡಿದ ಬೆಕ್ಕು ತರಹ' ಫೀಲ್ಆಗ್ ಓಡ ಹೋದರು?:))ಗತ ನೆನಪಿಂದ ಪ್ರಸ್ತುತ -ವಾಸ್ತವಕ್ಕೆ ಬಂದು ಒಹ್! ಇದಾ ಸಮಾಚಾರ? ಈ ಯೆಜ್ಮಾನರನ್ನ 'ತೆಳ್ಳಗೆ' ಮಾಡೋ ಈ 'ವಾಯ್ರಸ್ಸು' ಇನ್ನು ಅದ್ಯಾರ್ಯಾರಿಗ್ ವ್ಯಾಪಿಸಿರಬಹುದು? ಅವರ ಪಾಡುಈಗ ಹೆಂಗಿರಬಹುದು? ಅವ್ರದವ್ರು ಹೆಂಗೋ  ನೋಡ್ಕೋತಾರೆ, ಮೊದ್ಲು 'ನಿಂದು' ಯೋಚ್ಸಪ್ಪ ಕುಟುಕಿತು 'ಅಂತರಾತ್ಮ':)) ಅಂದು ಕಪನೀಪತಿಗೆ ಮರುಗಿದೆ ನಾ, ಈಗ ಎನ್ನ ಬುಡಕ್ಕೆ----- ಛೆ ಛೆ! ಆಯಿತು ಕಣೆ ನನ್ನನ್ನೇನ್ ಅಸ್ಟ್ ಧಡ್ಡ ಅನ್ಕಂಡ? ನ 'ರವಸ್ಟು' ಓದಿದೀನ್:)) ನಂಗೂ ವ್ಯಾವಹಾರಿಕ ಜ್ನಾನ ಇದೆಈಗೇನು ಮಾರುಕಟ್ಟೆಗ್    ಹೋಗ ತರಕಾರಿ ತರ್ಬೇಕ್ ಅಸ್ತೆ ತಾನೇ 'ಹಿಂಗ್ ಹೋಗ ಹ್ಯಾಂಗ್ ಬರ್ತೀನ್, ನೀ ಸಧ್ಯಕ್ಕೆ ನಗ ಮಾರಾಯ್ತಿ.. ಹ್ಹ ಹ್ಹ :)) ಹೊರಗಡೆ ಬಂದು ಉಸ್ಸಪ್ಪ ಅಂದೇ.!ಸಧ್ಯ 'ಬೀಸೋ ದೊಣ್ಣೆ' ತಪ್ಪಿದರೆ ೧೦೦೦ ವರ್ಷ ಆಯಸ್ಸು! ಅಲ್ಲಾ ಈ 'ಪಕ್ಕದ್ ಮನೆ ಆಂಟಿ' ಹಿಂಗ ನಂಗೆ ತೊಂದ್ರೆ ಕೊಡೋದು? ಅವ್ರಿಗ್ ನ ಏನ್ 'ಅನ್ಯಾಯ' ಮಾಡಿದ್ದೆ? ನನ್ನ ಹೆಂಡತಿಗೂಆ ವಾಯ್ರಸ್ಸು  ಹಚ್ ಬಿತವ್ರಲ್ಲ ಶಿವನೆ 'ಒಳ್ಳೆವ್ರಿಗ್ ಕಾಲ ಇಲ್ಲ")) ಅಂಗಳದಲ್ಲಿ ಇವತ್ತು  ಭಾನುವಾರ 'ಅರಮಗಿರಬಹುದು' ಅಂತ ಸುಖ ನಿದ್ರೆಯಲ್ಲಿದ್ದ ನನ್ನ' ಎನ್ಫೀಲ್ಡ್' ಬೈಕನ್ನ ಕೀ ಹಾಕ್ 'ಕಿವಿ ಹಿಂಡಿ'  ಒಂದು 'ಒದೆತ' ಕೊಟ್ಟು ಎಬ್ಬಿಸಿ ಅದು ಕೆಟ ಧ್ವನಿಯಿಂದಅರಚುತ್ತಿದ್ದರೂ ಕಿವಿಗ್ ಹಾಕೊಳ್ಳದೆ ಮಲ್ಲೇಶ್ವರಂ  ತರಕಾರಿ  ಮಾರ್ಕೆಟ್ಟಿಗೆ  ಓಡಿಸಿದೆ!!ಬೈಕನ್ನ ಸಮೀಪದ 'ಕಾಡು ಮಲ್ಲೇಶ್ವರ ದೇವಸ್ಥಾನದ' ಪಕ್ಕ ನಿಲ್ಲಿಸಿ ಮಲ್ಲೇಶ್ವರಂಗೆ ನಿಂತಲ್ಲೇ  ಒಂದು ನಮಸ್ಕಾರ ಹಾಕ್ ನೀನೆ ದಿಕ್ಕು ಅಂತಾ ಮಾರುಕಟ್ಟೆ ಕಡೆ ಹೊರಟೆ. ಒಳಗಡೆ ಜನವೋಜನ, ಅವರಲ್ಲಿ 'ಮುಕ್ಕಾಲ್ ಭಾಗ ಪುರುಷರೇ':)) ಇದೇನ್ ಆಶ್ಚರ್ಯ!! ನಾ ಒಬ್ನೇ ಹೆಂಗಪ್ಪ ಈ ತರಕಾರಿ ಮಾರೋ ಹೆಣ್ಣು ಮಕ್ಕಳ್ನ  ನನ್ನ 'ವ್ಯಾವಹಾರಿಕ ಜ್ಞಾನ' ತೋರ್ಸಿ ನಿಭಾಯ್ಸ್ಲಿಅಂತಿರಬೇಕಾದ್ರೆ  'ಆ ಮಲ್ಲೇಶನೆ' ಇಸ್ಟೊಂದು ಪುರುಷರನ್ನ ನನ್ನ ಜೊತೆ ಕಳ್ಸವ್ನೆ:))  ಒಳಗಡೆ ಎಸ್ಟೊಂದು ಹಣ್ಣಿನ ಹೂವಿನ ತರಕಾರಿ ಅಂಗಡಿಗಳು! ಕಲರ್ ಕಲರಾಗ್ ತಾಜಾ ಇದ್ದ ಹಣ್ಣು ಹಂಪಲು ತರಕಾರಿ ನೋಡೋಕೆ ಭಲೇ ಸೊಗಸಾಗಿತ್ತು ಹೂವಿನ ಘಮ ಘಂ ವಾಸನೆ ಮೂಗಿಗೆ ತೋರಿ 'ವಾತಾವರಣ' ಅನ್ನಿಸಿತು. ಪೆಕರು ಪೆಕ್ರಾಗ್ ನೋಡ್ತಾ ಎಲ್ಲೋಗ್ಲಿ ಅಂತಾ ಕಣ್ಣು ತೆರೆದು ಧ್ಯಾನ ಮಗನಾಗಿದ್ದ ನನ್ನನ್ನ  ನೋಡಿಯಾ ಎಲ್ಲರೂ ಬಣ್ಣ ಸ್ಸಾರ್ ಇಲ್ಲಿ ಬನ್ನಿ ನಮ್ಮಹತ್ತಿರ ಬನ್ನಿ ಏನ್ ಬೇಕು? ಎಷ್ಟು ಬೇಕು(ಸಧ್ಯ ಯಾಕ್ ಬೆಕ್ ಅಂತಾ ಮಾತ್ರ ಕೇಳಲಿಲ್ಲ:)) 'ಒಳ್ಳೆ ರೇಟಿಗೆ' ಕೊಡ್ತೀನ್ ಬನ್ನಿ... ಹ್ಹೆ ಹ್ಹೆ ಅಂತಾ ಹಲ್ಲು ಗಿಂಜುತ್ತ ಎಲ್ಲರ ಮೊಗ ನೋಡಿ, ಕೊನೆಗ್ ಇದ್ದುದರಲ್ಲಿ  'ಸಾಧಾರಣವಾಗಿದ್ದು  ಮುಗ್ಧೆ ' ತರಹ ಕಂಡ ಹೆಣ್ಣು ಮಗಳೊಬ್ಬಳ ಅಂಗಡಿ ಮುಂದೆ ನಿಂತು  ಜೇಬಿಂದತರಕಾರಿ  ಪಟ್ಟಿ ತೆಗೆದ.. ಟೊಮೇಟೊ-೧ ಕೆಜಿಈರುಳ್ಳಿ-೫ ಕೆಜಿಅಲೂ-೧ ಕೆಜಿಬೀಟ್ ರೂಟ್ -೧ ಕೆಜಿಸವತೆ ಕಾಯಿ-೧ ಕೆಜಿಪಡುವಲ ಕಾಯಿಹಸಿ ಮೆಣಸಿನ ಕಾಯಿ-೧ ಕೆ ಜಿಹೂಕೋಸುಎಲೆ ಕೋಸುನುಗ್ಗೆ ಕಾಯಿ(ಹೆಸರು ನೋಡಿ ಮೈ ಮನಸು ರೋಮಾಂಚನ:)) ೫-೬ ಎಳೆಯ ಚಿಕ್ಕ ಗಾತ್ರದವುಕೊತ್ತಂಬರಿಕರಿಬೇವು ಆ ಪಟ್ಟಿ ಇಲ್ಲಿ ಕೊಡಿ 'ಸ್ವಾಮಿ' ನಾ ಎಲ್ಲವನ್ನು ತೂಗ್ತೀನ್-ಅಂಗಡಿಯವಳು. ಇಲ್ಲ ನಾ ಮೊದ್ಲು ಎಲ್ಲ ತರಕಾರಿ ರೇಟು ಕೇಳಬೇಕು ಆಮೇಲೆ ತೊಗೊಳೋದ್. ಟೊಮೇಟೊ ಕೆ ಜಿ ಗ ಎಸ್ಟಮ್ಮ ?  ಅದಾ ಹೈಬ್ರಿಡ್ ಬೇಕಾ? ದೇಶೀ ತಳಿ ಬೇಕಾ? (ದಿನ ಪತ್ನಿ ಮಾಡಿದ್ದನ್ನ ತಿಂದ ನಾ ಧಂಗಾಗ್ ಅದರಲ್ಲೂ ವಿಧ ವಿಧ ಇದ್ದೀಯ- ಹೀಗೂ ಉಂಟಾ?) ಎರಡರ ರೇಟು ಹೇಳಿದೇಶೀ ತಳಿ -೧೦  ಕ್ಕೆ ಕೆಜಿಹೈಬ್ರಿಡ್ -೫0 ರೂ ಕೆ ಜಿ (ಏನು ಬರೀ ೫0 ರುಪಾಯಾ? ತುಟಿಯಿಂದ ಆಚೆ ಬಂದೆ ಬಿಡ್ತು ಆಶ್ಚರ್ಯದ ಉದ್ಘಾರ) ಬರೇ ೫0 ರುಪಯಗ್ ಮಾರಿದರೆ ಇವ್ರಿಗೆನ್ ಲಾಭ?  ಅಲ್ಲಾ ನಾ ಮೊನ್ನೆ ಪೇಪರಲ್ಲಿ ಓದಿದೀನ್ 'ಟೊಮೇಟೊ ಬೆಲೆ ಕುಸಿತ' ರೈತರು ತೊಮತೆಯನ್ನ ಮೂಟೆಗಟ್ಟಲೆ ರಸ್ತೆ ಮೇಲೆ ಸುರಿದರು ಅಂತಾ ಇಲ್ಲಿ ನೀವ್ ನೋಡಿದರೆ ಕೆಜಿಗೆ ೫೦ ಅಂತಾಇದೀರ!ಅಯ್ಯೋ 'ಸ್ವಾಮಿ' ಪೇಪರಲ್ಲಿ ಬರೋದೆ ಬೇರೆ ನಿಜವಾಗಲೂ ಆಗದೆ ಬೇರೆ, ಅದೇನೋ ಸತ್ಯ ಆದ್ರೆ  ಅವ್ರಿಗ್ ನಾಸ್ತ ಆದ್ರೆ ನಾವು ಕಡ್ಮೆಗ್ ಕೊಟ್ಟು ನಸ್ಟ ಮಾಡ್ಕೊಬೇಕ? ನಾವು'ದಲ್ಲಲಿಗಳಿಗ್'  ಕಾಸು ಕೊಟ್ಟೆ ತಗಳೋದ್ ತಿಳೀತ?  ತಲೆ ಅಲ್ಲಾಡಿಸಿದೆ:)ಬೆಳೆದ ರೈತ ಒಳ್ಳೆ ಬೆಲೆ ಸಿಗದೇ  'ರಸ್ತೆ ಮೇಲೆ ಯಾಕೆ ಟೊಮೇಟೊ ಮೂಟೆಗಟ್ಟಲೆ' ಚೆಲ್ಲಿ ಪ್ರತಿಭಟಿಸಿದ ಅಂತಾ ಗೊತ್ತಾಯ್ತು ಈಗ ಛೆ ಛೆ.ಸರಿ ಅದು ಒಂದು ಕೆಜಿ ಹಾಕಮ್ಮ, ಮತ್ತೆ ಈರುಳ್ಳಿ ರೇಟು ಎಷ್ಟು?  ದಪ್ಪದ್ದು ಬೇಕಾ? ಚಿಕದ್ದು ಬೇಕಾ? (ಇದೊಳ್ಳೆ ಕಥೆ ಆಯ್ತಲ್ಲ ಈರುಲ್ಲಿಯಲ್ಲೂ ದಪ್ಪ-ಸಣ್ಣ ಅಂತಾ ಇದ್ಯಾ?) ಸಣ್ಣದೆ ಹಾಕಮ್ಮ,ರೇಟು ಎಷ್ಟು?ದೊಡ್ಡದು-ಕೆ ಜಿ ಗೆ ೬೦ಸಣ್ಣದು ಕೆ ಜಿ ಗೆ ಬರೀ ೫೦ ಅಸ್ಟೆಯ!ಒಹ್'ಅಬ್ಬ ಕೆ ಜಿ ಗೆ ೬೦ ರುಪಾಯ?  ಆ ೫೦ ರುಪಾಯೀ 'ಬರೀ' ೫೦ ರುಪಾಯಾ?ಕಡಮೆ ಮಾಡ ಕೊಡಮ್ಮ, ನಾ ಕೆಲಿದಂಗೆ ಈರುಳ್ಳಿ ಕೆ ಜಿ ಗೆ ೧೦ ರುಪಿ ಇತ್ತು.ಯ್ಯೋ ಪ  ದೇವ್ರೇ !  ನಿ  ಇನ್ ಯಾವ್ ಕಾಲದಲ್ಲಿದಿಯ? ?ಆ ಹತ್ತು ರುಪಾಯಿಗ್ ಈಗ ಒಂದು 'ಮಲ್ಲಿಗೆ ಇಡ್ಲಿ' ಸಹಾ ಬರಲ್ಲ:)) ಆ ಹತ್ತು ರುಪಿ ಇದ್ದದ್ದು ೧೯೯೦ ರಲ್ಲಿ  (ಉಹೆ ಆಸ್ಟೇ) ಇದು ೨೦೧೧ಆ ಕೊನೆ ಗೊತ್ತುಂಟ? ಛೆ ಛೆ ಹೇಳಬರ್ದಿತ್ತೇನೋ? ನನ್ನದಡ್ಡತನಕ್ಕೆ ನಾನೇ ಮರುಗುತ್ತ-ಕೊರಗುತ್ತ  ಪೇಚಾಡಿದೆ. ಆದರೂ ಸುಧಾರಿಸಿಕೊಂಡು  ಹ್ಹೆ ಹ್ಹೆ ಅಂತಾ ದಂತ ಪಂಕ್ತಿ ತೆಗೀತ  ಹೇಳಿದೆ, ನನಗೋ ಗೊತ್ತಿತ್ತು ಆದರೂ ಹಂಗೆ ಸುಮ್ನೆಹೇಳಿದೆ:)೦ ಪರವಾಗಿಲ್ಲ ನಿಮಗೆ ಒಳ್ಳೆ ನಾಲೆಜ್ ಇದೆ! ಮತ್ತೆ ನಾವ್ ಮಾಡೋದೇ ತರಕಾರಿ ವ್ಯಾಪಾರವ ಅಸ್ತಿಲ್ದ್ರೆ ಹೆಂಗೆ?ಅದರ ರೇಟು ಕಡಿಮೆಯಾಗ ಅದನ್ನೂ ರಸ್ತೆಗ್ ಎಸೆದದ್ದು ಮತ್ತ್ತು ಅದೊಮ್ಮೆ ಅದರ ರೇಟು ಅಕ್ಕಾಶ ಮುಟ್ಟಿ 'ಕೆ ಜಿ ಚಿನ್ನ ಒಯ್ದು ನೂರು ಗ್ರಾಂ ಈರುಳ್ಳಿ' ತರ್ವಂಗೆ ಆಗಿದ್ದು ಅದರ ಬೆಲೆನಿಯಂತ್ರಿಸದೆ  ಸರಕಾರಗಳ ವಿರುದ್ಧ ಜನ ಧಂಗೆ' ಎದ್ದದ್ದು ಕೆಲ ಜೋಕುಗಳೂ ಹುಟ್ಟಿದ್ದು(ಅವ್ರ ಮನೇಲಿ ಒಂದು ಕೆ ಜಿ ಈರುಳ್ಳಿ ನೋಡಿದೆ 'ಅವ್ರೆ ಅಧ್ರುಸ್ಟವಂತರು -ಸಿರಿವಂತರು- ಮತ್ತು ಆಚಿನ್ನದ ಸರ ಅಡವಿಟ್ಟು ಕಾಲು ಕೆ ಜಿ ಈರುಳ್ಳಿ ತನ್ನಿ:) ಅದರ ಎಫೆಕ್ತ್ಗೆ ಸರಕಾರ ಉರುಳಿದ್ದು ನೆನಪಿಗ್ ಬಂತು(ಅದೂ ಹಿಂದೊಮ್ಮೆ ಹಾಗಿದೆ) ರೇಟು ಕಡಮೆ ಆದ್ರೆ ನಸ್ಟ ರೈತನಿಗೆ, ಹೆಹ್ಚಾಗ್ಲಾಭ ಬಂದ್ರೆ ಅದು ಮಧ್ಯವರ್ತಿಗಳಿಗೆ-ರೈತ ನಿಂಗೆ ಆ ದೇವ್ರೇ ಧಿಕ್ಕು. ಹೀಗೆ ಕೇಳಿದ ಎಲ್ಲ ತರಕಾರಿ ಬೆಲೆಯೂ ನಾ ಊಹಿಸಿದ್ದಕ್ಕಿಂತ(ನಾ ಕೊನೆದಾಗ್ ಮಾರುಕಟ್ಟೆಗೆ  ಹೋಗಿದ್ದು ೧೯೯೦ ರಲ್ಲಿ) ಈಗ ರೇಟು ಹೆಹ್ಚಿದೆ ಎಲ್ಲದರದು. ಆದರೆ ಸಂಪಾದನೆ ಮಾತ್ರ ಇನ್ನು 'ಅಲ್ಲೇ-ಅಸ್ಟರಲ್ಲೇ ' ಇದೆ. ಎಲ್ಲ ತರಕಾರಿ ತೆಗೆದುಕೊಂಡು ಬೈಕಿನತ್ತ ಬರ್ತಾ ಯೋಚಿಸಿದೆ ' ದಿನ ಬೆಳಗೆ ಎದ್ದು ನೀರು  ಹೊಡೆದು ತರಕಾರಿ ಬೆಳೆದು ಅದನ್ನೇ ತಿನ್ನಬೇಕು' ಕಷ್ಟ ಅದರೂಪರವಾಗಿಲ್ಲ.. ಹೆಂಗೂ ಕೊಂಚ ಜಾಗವಿದೆಯಲ್ಲ ಮನೆ ಮುಂದೆ.. ಮನೆಗ್ ಬಂದು ಎಲ್ಲ 'ಸವಿವರ ವರದಿ' ಒಪ್ಪಿಸಿ ಹ್ಯಾಪ್ ಮೊರೆ ಹಾಕಿಕೊಂಡು ನಿಂತೇ, 'ಅವಳು' ನಾ ಇದನ್ನೆಲ್ಲಾ ಮೊದ್ಲೇನಿರೀಕ್ಷಿಸಿದ್ದೆ!ಬನ್ನಿ ತರಕಾರಿ ಕಟ್ ಮಡಿ ನಾ ಅದುಗೆಗ್ ರೆಡಿ ಮಾಡ್ತೀನ್ ನುಗ್ಗೆಕಾಯ್  ಸಾರು-ಅನ್ನ  ,ಟೊಮೇಟೊ-ಅಲೂ  ಗೊಜ್ಜು,ಚಪಾತಿ, ಮಡಿ ಭರ್ಜರಿ ಭೋಜನ ಮಾಡೋಣ.. ತರಕಾರಿ ಕಟ್ಮಾಡಬೇಕ? ನಾ ಮರುಕತ್ತೆಗ್ ಹೋಗ ತರಕಾರಿ ತಂದಿಲ್ಲವ? ನೀ ಮಾಡಬಹುದಲ? ಹೌದಾ ಹಾಗಾದ್ರೆ 'ಅಲ್ಲೇ' ಹೋಗ ಊಟ ಮಾಡಿ, ಅಯ್ಯೋ ಅಯ್ಯೋ ಮತ್ತೆ ಯುದ್ಧ ಬೇಡ ಮಾರಾಯ್ತಿ,ನಾ ತರಕಾರಿ ತೊಳೆದು ಕಟ್ ಮಾಡ್ತೀನ್ ನೀ ಮೊದ್ಲು ಅಡುಗೆಗ್ ಶುರು ಹಚ್ಕೊ.. ತರಕಾರಿ ಕಟ್ ಮಾಡಿ ಅವಳಿಗ ಕೊಂಚ ಸಹಾಯ ಮಾಡಿ 'ಗೊಜ್ಜು-ಚಪಾತಿ-ಅನ್ನ-ಅಹ ಅಹ ನುಗ್ಗೆಕಾಯ್ ಸಾರು' ತೊಂದ್ರೆ ಎನ್ಗಿರ್ತೆ:)) ಅಂತೆಲ್ಲ ಯೋಚಿಸ್ತಾ ಹೊಟ್ಟೆ ಮೇಲೆ ಕೈ ಆಡಿಸ್ತಾ ಕೂಲ್ -ಕೂಲ್ ಅಂದೇ:)೦  ಅರ್ಧ ಘಂತೆಲ್ ಎಲ್ಲವೂ ರೆಡಿ ಆಗ್ ಊಟದ ಮೇಜಿನ ಮೇಲೆ ಒಪ್ಪ ಓರಣವಾಗಿ ಇಟ್ಟಳು ಪತ್ನಿ.. ಊಟವನ್ನ ಭರ್ಜರಿಯಾಗ್ ಮುಗ್ಸಿ ಹೊಟ್ಟೆ 'ಭಾರವಾಗ್'  ಸ್ವಲ್ಪಆಡ್ದಡಿದರೆ ಸರಿ ಹೋಗುತ್ತೆ ಅಂತಾ ಮನೆ ಹಿಂದುಗಡೆ ಬಂದು ಅಡ್ದಡುತಿರಲು  ದಪ್ಪ-ದಪ-ದಪ್ ಪ - ದಪಪ್! ಏನೋ ಸದ್ಧು ಏನದು? ಒಹ್ ಮೈ ಗಾಡ್! ಯಾರಾರ ಕಳ್ಳರು ಹಿಂದಿನ ಮನೆ'ಕಪನೀಪತಿಗಳ' ಗೋಡೆಗ್ 'ಕನ್ನ' ಹಾಕ್ತವ್ರೆ. ಎಷ್ಟು ಜನ ಇರಬಹುದು? ೩ -೪ ಜನ ಇರಬಹುದ? ಒಳಗಡೆ ಹೋಗ ಹೆಂಡ್ತೀನ ಜೊತೆಗ್ 'ಕರೆ' ತರಲೆ:)) ಛೆ ಛೆ ಬೇಡ ಈ ಕಳ್ಳರನ್ನ ನಾನೆ ಓಡಿಸಬೇಕು! ಮೆತ್ತಗೆ ನಮ್ಮ ಕಂಪೌಂಡ್ ಗೋಡೆಏರಿ ಇಣುಕಿ ನೋಡಿದೆ 'ಮೈ ಗಾಡ್' ಅಲ್ಲಿ ನಾ ಕಂಡ ದೃಶ್ಯವನ್ನ ಅದೆಂತು ವರ್ಣಿಸಲಿ :)) ಲುಂಗಿಯನ್ನ ಗೋಸಿ ಹಾಕಿ ಸುತ್ತಿಕೊಂಡು  ಬರೀ ಬನಿಯನ್ನಿನಲ್ ಹೆಂಡತಿ ಸೀರೆ ಮತ್ತ್ತು ತಮ್ಮ ಬಟ್ಟೆಒಗೆಯುತ್ತಿದ್ದ ಅವರು ನಂಗೆ ಮುಂದೆ ಬರೋ 'ಅಪಾಯವನ್ನ' ತೋರಿಸ್ದ್ರು:) ಕಪನೀಪತಿಗಳೇ ಏನಿದು? ಧುತ್ತನೆ ಅವ್ರ ಮುಂದೆ ಪ್ರತ್ಯಕ್ಷನಾಗ್ ಈ ಪ್ರಶ್ನೆ ಕೇಳಿದಾಗ ಮಾರುದ್ದ ಹಾರಿ ನಿಂತುನನ್ನ ನೋಡಿ, 'ನೀವ'! ನಾ ಯಾರೋ ಅನ್ಕಂದಿದ್ದೆ:))ಕಾಣಿಸುತ್ತಿಲ್ಲವೇ ಬಟ್ಟೆ ವಾಶ್ ಮಾಡುತ್ತಿದ್ದೇನೆ:) ಅದೇ ನೀವೇ ಯಾಕೆ ಅಂತಾ? ಯಾಕೆ ನಾ ಒಗೀಬಾರ್ದ? ನೀವ್ ಒಗೀತೀರ?(ತೊಗಳ್ಳಪ್ಪ ಇದು ವರ್ಸೆ ಅಂದ್ರೆ :)) ಅಲ್ಲಾ ಇದೂ ಏನಾರಒಂಥರಾ ಪಂದ್ಯವ? ನಿಮ್ಮವರು ಅದ್ಯಕ್ಷೆ ಆಗಲು ಅಂತಾ ಕೇಳಿದೆ ಅಸ್ಟೇ? ಹಾಗೇನು ಇಲ್ಲ, ಏನು ಆಯಿತು ಅಂದ್ರೆ, ತುಂಬಾ ದಿನದಿಂದ ಹೊಟ್ಟೆಗ್ ಗಟ್ಟಿಯಾಗಿದ್ ಬಿದ್ದು  ಆಗಿತ್ತಲ್ಲ ಅದ್ಕೆಇವತ್ತು ಹೊರಗಡೆ ಹೋದಾಗ ಕದ್ದು-ಮುಚಿ  ಇಡ್ಲಿ-ವಡಾ-ದೋಸೆ ಎಲ್ಲವನ್ನು ತಿಂಗಳಿಡಿ 'ಬರಗೆಟ್ತವನಂತೆ' ತಿನ್ತಿರ್ಬೇಕಾದ್ರೆ ನನ್ನ ಹೆಂಡತಿ ಸಂಘದ 'ಮಹಿಳಾ ಮಣಿಗಳ' ಜೊತೆ ಅಲ್ಲಿಗ್ಬರಬೇಕೆ ಕಾಫೀ ಕುಡಿಯಲು:))  ಆಮೇಲ್ ಮನೆಗ್ ಬಂದದ್ಮೇಲೆ  ಹೆಂಡ್ತಿ -ರಾಮಾಯಣ-ಮಹಾಭಾರತ-ಹೇಳಿ ನನಗೆ 'ಆ ತಪ್ಪಿಗಾಗಿ' ದಿನಕ್ಕೆ ೫ ಲೋಟ ಕಷಾಯ ಕುದಿಯ ಹೇಳಿದಳು:)) ನಾ ಅಂತಾ ಘೋರ ಶಿಕ್ಷೆ ಬೇಡ ಸ್ವಲ್ಪ ಕರುಣೆ ತೋರಿಸು ಎನಲು ನಂಗೆ 'ಈ ಬಟ್ಟೆ ಒಗೆಯುವ' ದನ್ನ ದಯಪಾಲಿಸಿದ್ದಾಳೆ. ನೀವು ಹೊರಡಿ   ಇನ್ನು ಬೇಜಾನ್ ಇವೆ ನಂಗೆ ಬಿಡುವಿಲ:೦ 'ಅವ್ರ ಸ್ತಿತಿಗ್' ಕೊರಗ್ತಾ  ಮೆತ್ತಗೆನಮನೆ ಸೇರಲು, ನನ್ನವಳು' ಕೇಳಿದಳು ನೀವ್ ಅವರತ್ರ ಏನು ಮಾತದುತ್ತಿದ್ದಿರಿ? ಅಹ! ಅದಾ ಏನಿಲ ಏನಿಲ್ಲ  ಅದೇ ಕಷ್ಟ ಸುಖ:)) ಸ್ಸರಿ ಸ್ಸರಿ ನಾ ಹೇಳಿದ್ದು 'ನೆನಪಿದೆ' ಅಲ್ಲವ? ನಾಳೆ ಬೆಳಗ್ಗೆಎದ್ದು ತರಕಾರಿಗ್ ನೀರ್ ಹಾಕಬೇಕು, ವಾಕಿಂಗ್ ಜಾಗಿಂಗು ಮಾಡಬೇಕು.ಆಯ್ತು ಮಾರಾಯ್ತಿ ನಡಿ ಮನೆಯೊಳಗೇ....ಅದು ಮಾಡಬೇಕಿರ್ವದು  'ನಾಳೆ' ತಾನೇ ,'ಇವತ್ತಿನ ಬಗ್ಗೆ' ಯೋಚ್ಸೋಣ ಸಧ್ಯಕ್ಕೆ, ನಾಳೆ ಬಗ್ಗೆ ನಾಳೆ ಯೋಚಿಸಿದ್ರಾಯ್ತಪ್ಪ:)) ಬೆಳಗ್ಗೆ ಎದ್ದು ಪೈಪುಹಿಡಿದು ನೀರು ಬಿಟ್ಟು ಡಿಸೆಂಬರ್ ಚಳಿಗ ಘದ ಘದ ನಡುಗುತ್ತ, ರಸ್ತೆಗೆ ಇಳಿದು ಮೆತ್ತಗೆ ಹೆಜ್ಜೆ ಇಡ್ತಾ ಹೋಗಲು ಅಲ್ಲಿ ದೂರದಲ್ಲಿ ಹಾಯಾಗ್ ಮಲಗಿ ನಿದ್ರಿಸುತ್ತಿದ್ದ 'ಶ್ವಾನಗಳು'  ಒಟ್ಟಾಗಿ ನನ್ನಹಿಂದೆ  ಬೆಳಬೇಕೆ:)೦ ಎದ್ನೋ ಬಿದ್ನೋ ಅಂತಾ ಓದಿ ಹೋಗಿ ಪಾರ್ಕಿನ ಗೇಟು ತೆಗೆದು ಒಳ ಓಈಡೀಏ ಜೋರಾಗಿ ಉಸಿರು ಎಳೆದುಕೊಂಡು ಸದ್ಯ 'ದೇವ್ರು' ದೊಡ್ಡವನು ನನ ಉಳಿಸಿದ ..ಅದೇ ಕೊನೆ ಹೆಂತಿಗ್ ಹೇಳಿದೆ ನನಿಂದ ಆಗೋಲ್ಲ ೯ ಇ0ಜಕ್ಚನ್ ಬೇಕ? 

ಕಪನಿಪತಿಗಳಿಗೆ ದುಂಬಾಲು ಬಿದ್ದು ಏನಿದು ಅನ್ಯಾಯ ಬನಿ 'ಪುರುಷ ವಿಮೋಚನಾ  ಸಮಿತಿಗೆ'ಹೋಗಿ ದೂರು ಕೊಡೋಣ:) ಒಲ್ಲೇ ಒಲ್ಲೇ ಅಂದರೂ'ಕಪನೀಪತಿಗಳನ್ನ' ನಾ  ದರ ದರ ಎಳೆದುಕೊಂಡುಹೊರಟೆ. ಶಾಲೆಗೆ ಪ್ರಥಮ ಬಾರಿ  ಹೋಗಲು ರಚ್ಚೆ ಹಿಡಿದಮಗುವನ್ನ ಹಠ ತೊಟ್ಟು ಕರೆದೊಯ್ವ ಪಾಲಕರಂತೆ':)) ಅದರ ಅಡ್ದ್ರೆಸ್ಸು ಕೇಳಲು ಅಲ್ಲಿನವರು 'ಅದೇನು' ಹೆಂಗಿರ್ತೆ?ಯಾಕಿದೆ? ಅಂತೆಲ್ಲ ಕೇಳಲು ಹೀಗೂ  ಉಂಟೆ ಅಂತಾನಾವೇ ಹುಡುಕಲ್ ಹೊರಟೆವು, ಕೊನೆಗೆ ಗಾಂಧಿನಗರದಯಾವುದೊ 'ಹಾಳು' ಬಿದ್ದಿದ 'ಗಲ್ಲಿಯಲ್ಲಿ' ಪುಟ್ಟ 'ಶಿಥಿಲಕಟ್ಟಡದಲ್ಲಿ' ಸಿಕ್ಕಿತು ಆ ಸಮಿತಿಯ 'ಆಫೀಸು',ಅದಕ್ಕೊಂದುಲಡಕಾಸು ಬೋರ್ಡು:)೦ ಅನ್ಜಂಜುತ್ತ ಹೊಳ ಹೋಗ್ವದೋಬೇಡವೋ  ಅಂತಾ ದ್ವನ್ದ್ವಾದಲ್ಲಿದ್ದಾಗ ಯಾರೋ ಒಬ್ರು ಬಂದು ಬನ್ನಿ ಬನ್ನಿ ಎಂದರು ಇನ್ನೇನು ಮಾಡುವುದುಹೊಳ ಹೋಗಿ ಕುರ್ಚಿಯನ್ನ ಎರಡೆರಡು ಸಾರ್ ಮುಟ್ಟಿ-ತಿವಿದು ಭದ್ರವಾಗಿದೆ  ಅಂತಾ ಪರೀಕ್ಷಿಸಿ  ನೋಡಿ ಕುಳಿತೆವು .. ಎದುರು ಕುಳಿತ ಸ್ವಾಗತಕಾರ ಕಂ ಇನ್ನೇನೋ  ಹೇಳಿದ್ರು ಅದ್ಯಕ್ಷರು ಭಲೇ ಬ್ಯುಸಿ 'ಇನ್ನೇನ್' ಬಂದ್ ಬಿಡ್ತಾರೆ.. ಸುತ್ತ ಮುತ್ತ ನೋಡಲು ಅದ್ಯಕ್ಷರು ಅಲ್ಲಿ-ಇಲ್ಲಿ-ಸಿಕ-ಸಿಕ್ಕಲ್ಲೆಲ್ಲ ಹಾರ ತುರಾಯಿ  ಹಾಕಿಸಿಕೊಂಡು ಕೈ ಬೀಸಿ  ನಿಂತಿದ್ದ   ಚಿತ್ರಗಳು, ಅನ್ಕೊಂಡೆ ಒಹ್! ಪರ್ವಾಗಿಲ್ವೆ ಈ ಅದ್ಯಕ್ಷರು 'ಬೊ ಫೇಮಸ್' ಇರ್ಬೇಕು:)೦ ನಮಗೆ ನ್ಯಾಯ ಸಿಗ್ತೆ..ಇನೇನ್ ಬಂದ್ರು-ಬರ್ತಾರೆ ಅಂತಾ ೩ ಘಂಟೆ ಕಾಯಿಸಿದರುಕಪನೀಪತಿಗಳು 'ಒಂಥರಾ' ವರ್ತಿಸಲು ಶುರು ಮಾಡಲುನಾ ಎದೆಗುಂದಿ ಯಾಕೆ ಏನಾಯ್ತು ಎಂದೇ? ಅವ್ರು 'ಈಗಕಷಾಯ' ಕುಡಿಯೋ ಹೊತ್ತು, ಆದ್ರೆ ಅದು ಮನೆಲಿದೆ:)೦ತತ್ ಅದ್ನ ತಪ್ಪಿಸೋಕ್ ನಾವ್ ಇಲ್ಲಿಗ್ ಬಂದ್ರೆ 'ಈಯಪ್ಪಂಗೆ  ಬಡ್ಕೊಬೇಕು:೦೦ ನಂಗೆ - ಅದ್ಯಾವ್ದೋಮೊದ್ಲಿಗ್ 'ಕಟ್ಟಿ ಹಾಕ್' ಆಮೇಲ್ ಕಟ್ಟದೆ ಬಿಟ್ರೂ- 'ಇನ್ನುಕಟ್ಟಿ ಹಾಕವ್ರೆ' ಅಂತಾ  ಓಡದೆ ಇದ್ದ ಕುದುರೆ ನೆನಪಿಗ್ಬಂತು:)೦  ಮೂರು ಮುಕ್ಕಾಲು ಘಂಟೆ ಕಾಯಿಸಿ ಹಲ್ಲು ಕಿರಿಯುತ್ತಾಬಂದ 'ಅದ್ಯಕ್ಷರನ್ನ' ಮುಖ ಗಂಟಿಕ್ಕಿ ನೋಡಿದೆ ಸಾಮಾನ್ಯ ವ್ಯಕ್ತಿ ಯಾಕೋ ಬಳಲಿದನ್ಗಿತ್ತು:)೦ ಒಹ್! ನಿಮ್ಮನ್ನ 'ಸ್ವಲ್ಪ'ಕಾಯಿಸಿಬಿಟೇ ಕಾಫೀ ಕುಡೀತೀರ? ಏನ್ ವಿಷ್ಯ? ಅದಿರ್ಲಿನೆಲ್ಲಿ ಸ್ಸಾರ್ ಇಸ್ತೊತ್ತು ಹೋಗಿದ್ರಿ ಅದೂ 'ನನ್ನ ಹೆಂಡ್ತಿ'ಬರೋದು ಸಾಯಂಕಾಲ ಅದ್ಕೆ-- ಅದ್ಕೆ ನಾ ಮನೆಗ್ಹೋಗ ಅಡುಗೆ  ರೆಡಿ ಮಾಡ ಬಂದೆ :)) ಅಂದ್ ಹಾಗೆ ಏನುನಿಮ್ಮ ಸಮಸ್ಯೆ? ಏನಿಲ್ಲ ಏನಿಲ್ಲ ಹಾಗೆ 'ಸುಮ್ನೆ'  ನಿಮ್ಮನ್ನ್ನೋಡಿಕೊಂಡು ಹೋಗೋಣ ಅಂತಾ ಬಂದ್ವಿ.ನೋಡಾಯ್ತು, ಬರ್ತೆವಿ. ಕಪನೀಪತಿಗಳಿಗೆ  ಇಲ್ಲಿಗ್ಬಂದದ್ಯಾಕೆ ಈಗ ಹೊರಟಿದ್ಯಾಕೆ?ಹೋಗ್ತಾ ಹೇಳಿದೆ 'ನಿಮ್ಮ ಫೋಟೋಗಳು' ಭಲೇಸೊಗಸಾಗಿವೆ ಸ್ಸಾರ್, ಹಲ್ಲು ಕಿರಿಯುತ್ತಾ ಹೇಳಿದರು,ಏನೋ ಸಮಾಜ ಸೇವೆ ನೊಂದವರ ಕಣ್ಣೇರುಒರೆಸುವುದು, ಧೈರ್ಯ ತುಂಬುವುದು, ನಂದು 'ಮೃದುಹೃದಯ'! ನೋಡಿ(ತಗಳ್ಳಪ್ಪ ರ್ರೀ ಸ್ವಾಮೀ ಎಲ್ಲರಹೃದಯವೂ ಕಿತ್ತು -ಕೈಗೆತ್ತಿ ನೋಡಿದರೆ 'ಮ್ರುದುವೆ'ನಿಮ್ಮದೇನು ಬದ್ನೆಕಾಯ್  ಸ್ಪೆಸಲ್:)) ಅದೆಲ್ಲ ಬಿಲ್ದಪ್ಗಾಗಿ.. ಸರಿ ನವಿನು ಬರ್ತೀವ್ ಸ್ಸಾರ್. ಕಪನೆಪತಿಗಳನ್ನ ಅವ್ರಮನೆಗ್ ಬಿಟ್ಟದ್ದೇ ಅವ್ರು ಓಡಿ ಹೋದರುಮನೆಯೊಳಕ್ಕೆ 'ಕಷಾಯ' ಕುಡಿಯಲು)೦ಅದೊಮೆ    ಒಂದು ವಾರವಸ್ಟೆ ಆಗಿತ್ತು ಮತ್ತೆ 'ಕೊಂಚ ಮುನಿಸು' ಶುರು ಕಾರಣ ಕೇಳಲು ನೀವು 'ಸೀರೆ-ರವಿಕೆ-ಎರಡೆಳೆ ಸರದ' ಬಗ್ಗೆ ಮಾತೆ ಆಡುತ್ತಿಲ್ಲ:)) ಈಗ ಬಂಗಾರ ೧ ಸಾವಿರ ಕಡಿಮೆ ಆಗಿದೆಈಗಲೇ ತೆಗೆದು ಕೊಳೋದು ಒಳ್ಳೇದ್(ಯಾರ್ಗೆ?)) ನಾ ಹೆಂಗ್ ಪಾರಾಗೋದು ಅಂತಾ ಯೋಚಿಸ್ತಿರ್ಬೇಕದ್ರೆ ಹಾಳಾದ್ದು ! ಒಂದಾರ ಉಪಾಯ ಹೊಳಿಬಾರ್ದೆ:)) ಇರು ಕೊಂಚ ಹೊರಗ ಹೊಗ್ ಬತ್ತೀನ್ ಏನಾರ 'ವ್ಯವಸ್ತೆ' ಮಾಡಬೇಕಲ್ಲ ಅದಕ್ಕೆ.. ಮನೆಯಿಂದ ಹೊರ ಬಂದು ನನ್ನಂ ಈ ಸಂಕಸ್ಟದಿಂದ ಪಾರು ಮಾಡೋ   'ಅಪಾಧ್ಭಂದವರನ್ನ'ಹುಡುಕುತ್ತಿದ್ದೇನೆ.. ಹುಡುಕುತ್ತಲೇ ಇದ್ದೇನೆ ಮನೆಗೂ ಹೋಗದೆ:)) ಅದು ನೀವೇನ? ಎಲ್ ಇದೇರ? ಯಾವಾಗ್ ಸಿಗ್ತೀರ ?  

  ಈಗ  ಬಂದ   ಸುದ್ಧಿ : ಆ ಕಶಾಯವನ್ ಕಾಳು ಮೆಣಸು-ಕೊತ್ತಂಬರಿ-ಬ್ಯಾಡಗಿ ಮೆಣಸಿನ ಕಾಯಿ ಪುಡಿ-ಒಣ ಶುಂಟಿ ಬೆಲ್ಲದ ಚೂರು ಸೇರಿಸಿ ತಯಾರು ಮಾಡಿದ್ದ ಅದನನ ಕುಡಿದು ಯಾರು ತೆಳ್ಳಗಾದರೋ ನಾಅರಿಯೆ:) ಆದರೆ ಅದರ ನಿರ್ಮಾತೃ  ಈಗ 'ಬಹು ದಪ್ಪವಾಗಿ' ಬೆಂಗಳೂರಲ್ಲಿ ಹತ್ತು ಕಡೆ ೬೦-೪೦ ರ ಹತ್ತು ಸೈಟು ಕೊನ್ದವ್ನೆ..ಎಲ್ಲ ಮನೆ ಹೆಸರೂ 'ಕಷಾಯ ಕಲ್ಪ' )೦ ಬೋಲೋ ಜೈ ...ಕಷಾಯ"))

 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.