Skip to main content

ಅವರವರ ಭಾವಕ್ಕೆ...(ಕಥೆ)-ಭಾಗ-೨

ಇಂದ venkatb83
ಬರೆದಿದ್ದುDecember 16, 2011
3ಅನಿಸಿಕೆಗಳು

ಬೈಕಿನ ಕೀ ಚೈನನ್ನ ಗಾಳೀಲಿ ಎಸೆದು ಕ್ಯಾಚ್ ಹಿಡೀತ 'ಕೂಲಾಗ್' ಬರ್ತಿರೋ 'ಅವನನ್' ನೋಡ್ ' ಅವಳ್ಗೆ' ರೇಗ್ ಹೋಯ್ತು. ಬಾರದ ಕೋಪವನ್ನ ಮುಖದ ಮೇಲೆ 'ಬಲವಂತವಾಗಿ' ತೋರ್ಪಡಿಸಿಕೊಳ್ತಾ , ಅವ್ನು ಹತ್ತಿರ ಬಂದು 'ಸ್ಸಾರೀ' ಕಣೆ ಅನ್ನುತ್ತ 'ಅವಳ' ಹತ್ತಿರ ಕುಳಿತುಕೊಳ್ಳುತ್ತಿದ್ದಂತೆ ಬೆನ್ನ ಮೇಲೆ ಒಂದು ಗುದ್ದು ಹಾಕ್ತ ಹೇಳಿದಳು
'ಲೋ ನೀ ಈ ಜನ್ಮದಲ್ ಸುಧಾರಿಸಲ್ವೇನೋ? ಅಲ್ವೋ ಇಲ್ ನಾ ಮುಕ್ಕಾಲ್ ಘಂಟೆಯಿಂದ ನಿಂಗೆ ಕಾಯ್ತಿದ್ರೆ, ಏನೂ ಆಗಿಲ್ಲವೆಂಬಂತೆ ಕೂಲಾಗ್ ಬರ್ತೀಯ? ನಿನ್ನಜ್ಜಿ!!....
ಮೇಲಿಂದ ಕೆಳಗೆ ಒಮ್ಮೆ 'ಅವನತ್ತ' ನೋಡಿ ಹೇಳಿದಳು- ನಾ ಹೇಳಲಿಲ್ಲವ? ಖಂಡಿತ ಅವೆರಡು ಡ್ರೆಸ್ ನಿಂಗೆ ಸೂಟ್ ಅಗ್ತವೆಂತ...
ಡ್ರೆಸ್ ವಿಷ್ಯ ಎತ್ತುತ್ತಿದ್ದಂತೆ 'ಅವನ್ಗೆ 'ಬೆಳಗ್ಗೆ ಆ ಡ್ರೆಸ್ ಮಹಿಮೆಯಿಂದ ಬೆಡ್ ಮೇಲೆ ಮುಗ್ಗರಿಸಿ ಬಿದ್ದದ್ದು ನೆನಪಿಗ್ ಬಂದು ಅದ್ನ 'ಅವಳಿಗೆ' ಹೇಳಿದ್ದು -ಇಬ್ರೂ ನಕ್ಕಿದ್ದೂ ಆಯ್ತು..
ತಿಂಡಿ ತಿಂದಾಯ್ತೇನೋ? 'ಅವಳ' ಪ್ರಶ್ನೆ,
ಇನ್ನು ಇಲ್ಲ ಕಣೇ, ನೀ ಕರೆದೆ ಅಂತ ಅವಸರದಲ್ಲಿ ಹಾಗೆ ಬಂದೆ,ಆದ್ರೆ 'ಅಮ್ಮ' ತಿಂಡೀನ ಬಾಕ್ಸಿಗೆ ಹಾಕಿದ್ದಾರೆ, ಇವತ್ ಅದೇನ್ ತಿಂಡಿ ಕಟ್ಟಿದಾರೋ ಗೊತ್ತಿಲ್ಲ, ಅದ್ನ ಬಿಸಿಯಾಗಿದ್ದಾಗ್ಲೆ ಇಬ್ರೂ ಸೇರಿ ತಿಂದು ಲ್ಯಾಬಿಗೆ ಹೋಗೋಣ.

ಕ್ಯಾಂಟೀನಿನ ಸಿಂಕಲ್ಲಿ ಇಬ್ರೂ ಕೈ ತೊಳೆದ್ಕೊಂಡ್ ಬಂದು 'ಕಾತರ-ಹಸಿವಿನ ಮಿಶ್ರಣದೊಂದಿಗೆ'
ಆ ಬಾಕ್ಸನ ಓಪನ್ ಮಾಡಿ 'ಪೆಚ್' ಆಗ್ ಬಿದ್-ಬಿದ್ ನಗಾಡೋಕೆ ಶುರು ಹಚ್ಕೊಂಡ್ರು.
ಅಕ್ಕಪಕ್ಕದ ಟೇಬಲ್ನಲ್ಲೋ ಕುಳಿತವರಗೆ ಇದೇನೋ 'ವಿಚಿತ್ರವಾಗ್' ತೋರಿ ಪ್ರಶ್ನಾರ್ಥಕವಾಗೀ ದಿಟ್ಟಿಸಿ ನೋಡಿದರು.. 'ಇವರಿಬ್ಬರ' ಆ ಪೆಚ್ಚು ಮತ್ತು ನಂತರದ ನಗೆಗೆ ಕಾರಣ ಆ ಬಾಕ್ಸ್ನಲ್ಲಿದ್ದ ತಿಂಡಿ.
ತನ್ನ ಹೆಸರು ಮಾತ್ರದೊಂದಿಗೆ 'ಕೆಲವರ್ಗೆ' ಇಸ್ಟವಾಗದ , ಆದರೆ ಹಲವರ್ಗೆ ಇಷ್ಟವಾದ 'ಉಪ್ಪಿಟ್ಟು' ಎಂಬ ನಾಮದೊಂದಿಗೆ ಪ್ರಸಿದ್ಧವಾದ 'ಕಾಂಕ್ರೀಟು'!...ಮತ್ತು ಅದ್ನ 'ಅವನು-ಅವಳು' ಇದ್ವರ್ಗೂ ತಿಂದ ಉದಾಹರಣೆ ಇಲ್ಲ.. ಹಾಗಂತ ಇದು 'ಅಮ್ಮಂಗೆ' ಗೊತ್ತಿಲ್ಲದ್ದೇನಲ್ಲ, ಅವರೋ 'ಇವನ' ಬೆಳಗಿನ ಹಡಾವುಡಿಯಲ್ಲಿ ತಾವೂ ಪಾಲುದಾರರಾಗಿ 'ಇವನ' ತಂದೆಗೆ ಕೊಡಬೇಕಿದ್ದ ಆ ತಿಂಡಿಯನ್ನ , 'ಇವನ' ಬ್ಯಾಗಲ್ಲಿ ಇಟ್ಟಿದ್ದರು..
ಸರೀ ಇನ್ನೇನ್ ತಾನೇ ಮಾಡೋಕಾಗ್ತೆ?
ಅದೇ ಕ್ಯಾಂಟೀನ್ನಲ್ಲಿ ಇಡ್ಲಿ-ವಡೆ-ಸಾಂಬಾರ್ ಭರ್ಜರಿಯಾಗ್ ತಿಂದು ಕಾಫೀ ಕುಡಿದು ಕಾಸು ಕೊಟ್ಟು ಲ್ಯಾಬ್ ಕಡೆ ಹೆಜ್ಜೆ ಹಾಕಿದರು.
ಅದಾಗಲೇ ಲ್ಯಾಬಲ್ಲಿ 'ಇವರಿಬ್ಬರನ್ನು' ಬಿಟ್ಟು ಉಳಿದ ಎಲ್ಲ ವಿಧ್ಯಾರ್ಥಿಗಳು ಬಂದು ಅವರಿಗೆ ಗೊತ್ತುಪಡಿಸಿದ ಸಿಸ್ಟಮ್ ಮುಂದೆ ಕುಳಿತಾಗಿತ್ತು...
ಬಾಗಿಲ ಹತ್ತಿರ ಕುಳಿತಿದ ವಿಧ್ಯಾರ್ಥಿಯೋಬ್ಬನನ್ನ 'ಅವನು' ಕೇಳಿದ , ಲ್ಯಾಬ್ ಶುರು ಆಗ್ ಎಸ್ಟ್ ಹೊತ್ತಾಯ್ತು?
ಈಗ ತಾನೆ ಶುರು ಆಗಿದೆ, ಹಾಜರಿ ತಗೊಳ್ತಾರೆ ಬೇಗ ಒಳಗೆ ಬನ್ನಿ..
ಖಾಲಿಯಾಗಿದ್ದ ತಮಗೆ ಗೊತ್ತುಪಡಿಸಿದ ಆ ಎರಡು ಅಕ್ಕ-ಪಕ್ಕದ ಸಿಸ್ಟಮ್ನ ಮುಂದೆ 'ಇಬ್ಬರೂ' ಕುಳಿತು ಬ್ಯಾಗಿಂದ ನೆನ್ನೆ ಕ್ಲಾಸಲ್ಲಿ ಲೆಕ್ಚರರ್ ಬರೆಸಿದ್ದ 'ಪ್ರೋಗ್ರಾಮ್'ನ ತೆಗೆದು ಅದನ್ನು ಸಿಸ್ಟಮ್ನ ತೆರೆ ಮೇಲೆ ಟೈಪಿಸಲು ಪ್ರಾರಂಭಿಸಿದರು..
ಸ್ವಲ್ಪ ಹೊತ್ತಲ್ಲೇ ,ಮೇಲಿಂದ -ಮೇಲೆ ಬರ್ತಿರೋ 'ಎರ್ರರ್' ನೋಡ್ 'ಅವನ್ಗೆ' ರೆಗ್ ಹೋಗಿ 'ಅವಳ್ಗೆ' ಪಿಸು ಮಾತಲ್ಲಿ ಹೇಳಿದ- ಈ ದರಿದ್ರ 'ಪ್ರೋಗ್ರಾಮ್' ಮುಗ್ಸಿ 'ಔಟ್ಪುಟ್'' ತೋರ್ಸೋಕ್ ನನ್ನ್ನಿಂದಾಗಲ್ಲ ಕಣೇ, ಇದನ ಎಡಿಟ್ ಮಾಡ 'ಔಟ್ ಪುಟ್ ' ತೆಗೆದ್ ಕೊಡೆ..
'ಅವ್ಳು' -ನನ್ನಿಂದಾಗಲ್ಲಪ್ಪ, ಆ ಲೆಕ್ಚರ್ ಕಣ್ಣಿಗೆನಾರ ಇದ್ ಕಾಣಿಸಿದರೆ? ,ಇಲ್ಲ ಗೊತ್ತಾದರೆ? ಆಮೇಲ್ 'ನನ್' ಕಥೆ ಅಸ್ಟೇ...
ಹಿಂದೊಮ್ಮೆ 'ಇವನಿಗೆ' ಸೈನ್ಸ್ ಲ್ಯಾಬಲ್ಲಿ 'ಸೋನಾರ್' ಕುರಿತ ಪ್ರಾಕ್ಟಿಕಲ್ ನಲ್ಲಿ ಹೆಲ್ಪ್ ಮಾಡಿ ಅದು ಸೈನ್ಸ್ ಲೆಕ್ಚರ್ಗೆ ಗೊತ್ತಾಗ್ 'ಇವಳನ್ನ' ೩ ಲ್ಯಾಬಿಗೆ ಬರದಂತೆ ಮತ್ತು 'ಅವನಿಗೆ' ಆ 'ಸೋನಾರ್' ಕುರಿತ ಇನ್ನೊಂದು ಬೇರೆಯದೇ ತರಹದ ಪ್ರಯೋಗವನ್ನ ಮಾಡಲು ಹೇಳಿದ್ದು, ಅದು ಅವನಿನ್ದಾಗದೆ ಪಡಿಪಾಟಲು ಪಟ್ಟ ಧ್ರುಶ್ಯಗಳೆಲ್ಲ ಸರಸರನೆ ಅವಳ ಮನದಲ್ಲಿ ಒಮ್ಮೆ ಹಾದುಹೋದವು.

ಪ್ಲೀಜ್ ಕಣೇ ಇಲ್ಲ ಅನ್ಬೇಡ, ನಾ ಮೊದ್ಲೇ ಬಡ್ಕೊಂಡೆ ಇವತ್ತು ಲ್ಯಾಬಿಗೆ ನಾ ಬರಲ್ಲ ಅಂತ, ಆದರೂ ಬಾ ಅಂತ ನನ್ನ ಒತ್ತಾಯ ಮಾಡ ಕರೆಸಿ ಈಗ ನಂಗೆ ಹೆಲ್ಪ ಮಾಡದಿದ್ದರೆ ಹೇಗೆ?
ಅವಳ್ಗೆ 'ಇದೊಳ್ಳೆ ಪೀಕಲಾಟವಾಯ್ತಲ್ಲಪ್ಪ' ಅನಸ್ತು.
ಸರೀ ನಾ ಹೆಲ್ಪ್ ಮಾಡ್ತೀನಿ ಆದ್ರೆ ಆ ಲೆಕ್ಚರ್ಗೆ ನಮ್ ಮೇಲೆ ಮೊದಲೇ ಅನುಮಾನ, ಅವ್ರು ಅದ್ನೇ 'ಬೇರೆ ತರಹ' ತೋರ್ಸು ಅಂದ್ರೆ ಏನ್ ಮಾಡ್ತಿಯ?
'ಅವ್ನು' -ಅದ್ರ ಬಗ್ಗೆ ಆಮೇಲ್ ಯೋಚಿಸ್ತೀನ್ ,ಸಧ್ಯಕ್ಕೆ ಇದ್ನ ಎಡಿಟ್ ಮಾಡ್, ಔಟ್ ಪುಟ್ ತೆಗೆಯೋದ್ನ ನಂಗೆ ನೀ ಹೇಳಿಕೊಟ್ಟರೆ ಸಾಕ್ ಅಸ್ಟೇ.
ಲೆಕ್ಚರರ್ ಹಾಜರಿ ತೆಗೆದುಕೊಂಡ ಮುಗಿಸುವಸ್ಟರಲ್ಲಿ ಆ ಪ್ರೋಗ್ರಾಮ್ಗೆ ಒಂದು ಗತಿ ಕಾಣಿಸಿ ಔಟ್ ಪುಟ್ ತೆಗೆಯುವ ವಿಧಾನವನ್ನ 'ಅವಳು'-ಅವನಿಗೆ ಹೇಳಿಯಾಗಿತ್ತು.ಆ ಲೆಕ್ಚರರ್ ಹೆಚ್ಗೆ ಏನನ್ನು ಕೇಳದೆ ಪ್ರೋಗ್ರಾಮ್ ನೋಡಿ ಔಟ್ ಪುಟ್ ತೋರಿಸಲು ಹೇಳಿದಾಗ ಮನ ಹಿಗ್ಗಿ ಹೀರೆಕಾಯಿಯತು!
ಆದರೂ 'ಇವನ' 'ದುರಾಧ್ರುಸ್ಟಕ್ಕೆ ಅವತ್ತು, 'ಇವನ' ಬಗ್ಗೆ ಸದಾ ಅನುಮಾನದಿಂದಿದ್ದ ಆ ಲೆಕ್ಚರರ ಆ ಪ್ರೋಗ್ರಾಂನ ನೋಡಿಯೂ ಸಮಾಧಾನವಾಗದೇ ಅದನ್ನೇ ಕೊಂಚ ಎಡಿಟ್ ಮಾಡಿ, ಔಟ್ ಪುಟ್ ತೋರಿಸಲು ಹೇಳಿದರು.
'ಹಿಮಾಲಯವನ್ನೇರಿ ಆಲಿಂದ ಜರ್ರನೆ ಜಾರಿದ' ಹಾಗಾದ 'ಇವಂಗೆ' ಅನಸ್ತು- ಈ ಲೆಕ್ಚರರ್ ಒಳ್ಳೆ ಉಡಾ ತರಹದ ಗಿರಾಕಿ ಮಾರಾಯ!! ಬಿಡೋದೇ ಇಲ್ಲ ಅಂತಾನೆ....
ಲೆಕ್ಚರ್ಗೆ ತ್ರುಪ್ತಿಯಗೋ ಹಾಗ್ ಆ ಪ್ರೋಗ್ರಾಂನ ಔಟ್ ಪುಟ್ ತೋರಿಸಿ ಅವ್ರು ಸಮಾಧಾನಗೊಂಡು , ಒಮ್ಮೆ 'ಅವಳ' ಪ್ರೋಗ್ರಾಮ್ ಮತ್ತು ಔಟ್ ಪುಟ್ ಮೇಲೆ ಕಣ್ಣ ಹಾಯಿಸಿ ನಗ್ತಾ ಹೋದರು...
ಅವ್ರ ನಗೆಗೆ ಕಾರಣ 'ಇವ್ಳು' ಅದಾಗಲೇ ಆ ಪ್ರೋಗ್ರಾಮ್ ಬಗ್ಗೆ 'ಅವನ್ಗೆ' ಹೇಳ್ ಕೊಟ್ಟಿರ್ಲೇಬೇಕು..
ಮತ್ತು ಅವ್ರ 'ಆ ಊಹೆ' ಸುಳ್ಳೂ ಆಗಿರಲಿಲ್ಲ.
'ಅವಳಿಗ್ಗೊತ್ತಿತ್ತು' ಆ ಲೆಕ್ಚರರ್ ಅದೇನೇನೆಲ್ಲ ಚೇಂಜ್ ಮಾಡಿ 'ಇವಂಗೆ' ಪರೀಕ್ಷಿಸಬಹುದು ಅಂತ, ಅದ್ಕೆ

'ಅವ್ಳು' , ಏನ್ ಚೇಂಜ್ ಮಾಡ್ ಅದ್ನ ತಿದ್ದಿ , ಅದ್ರ ಔಟ್ ಪುಟ್ ತೋರಿಸಲು ಹೇಳಬಹುದು, ಅನ್ನುವುದನ್ನ 'ಅವನಿಗೆ' ಅದಾಗಲೇ ಹೇಳಿಯಾಗಿತ್ತು !...
'ಅವಳೊಡನೆ' ಅವನಿಗೆ' ಪ್ರತಿ ದಿನವೂ ಹೊಸದು
ಕಲಿಯುವುದು,
ಸುತ್ತಾಡೋದು,
ಮುನಿಸು-ತಿನಿಸು
ಎಲ್ಲವೂ... ಮತ್ತು
ಇದು 'ಈಗೀಗಿನದ್ದಲ್ಲ',
>>>>>ಪಿಕ್ಚರ್ ಅಭೀ ಭಾಕೀ ಹಾಯ್ :))>>>>>>>>>>
 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

belstaff jackets (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 06:57


Dad is busy every day outside, do not have belstaff jackets time to read. He will do regret belstaff bags it? Sometimes I really want to belstaff jackets discuss these books determined to Dad, which can be thought belstaff uk of six mother goes on the bleak white belstaff uk powder coated long face, the same belstaff jackets block as the wall on the road the north face uk , immediately give up north face the idea. Each hospital has a mulberry bagssmall door set with a narrow mulberry bags sale garden path connected to mulberry handbags the left, leading to the garden. cyh12-29

anjali n n ಗುರು, 01/05/2012 - 16:33

ಹಾಯ್ ವೆಂಕಟ್,
 
ಚೆನ್ನಾಗಿದೆ, ನಂಗೆ ಇಷ್ಟ ಆಯ್ತು! ಹೇಗಿದಿರಾ?

venkatb83 ಶುಕ್ರ, 01/06/2012 - 19:01

ಅಂಜಲಿ ಅವ್ರೆ  >>>ಕೆಲ ಕೆಲಸ ಕಾರ್ಯ ನಿಮಿತ್ತ ವಿಸ್ಮಯ ನಗರಿಗೆ ಅಸ್ಟಾಗಿ ಭೇಟಿ ಕೊಟ್ಟಿರಲಿಲ್ಲ, ಆದರೆ ಈಗ ಮರಳಿ ಬಂದು ನೋಡಿದಾಗ, ನಿಮ್ಮ ಈ ಸಹೃದಯ ಪ್ರತಿಕ್ರಿಯೆ ಓದಿ ಪ್ರತಿಕ್ರಿಯಿಸುತ್ತಿರ್ವೆ. >>>>.ನಿಮಗೆ ಕಥೆ ಹಿಡಿಸಿದ್ದು ಕೇಳಿ ಸಂತೋಷ ಆಯಿತು...  >>> ನ ಬಹಳ ಚೆನಾಗಿರ್ವೆ.. ನಿಮಗೆ ಹೊಸ ವರ್ಷದ  ಶುಭಶಯಗಳು... ಹೊಸ  ವರ್ಷ ನಿಮ ಹೊಸ ಹರ್ಷ ತರಲಿ.......]ಸುಖ ಶಾಂತಿ ನೆಮ್ಮದಿಇಡೀ ನಾಡಲ್ಲಿ ನೆಲೆಸಲಿ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.