Skip to main content
Submitted by prabhu on ಮಂಗಳ, 11/29/2011 - 16:08

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿ ವರುಷ ಚಂಪಾಷಷ್ಠಿಯ ವೇಳೆ ಆಚರಿಸುವ ಮಡೆಸ್ನಾನ ಇಂದೂ ಅಗತ್ಯವೇ?-ಡಾ.ಪ್ರಭು.ಅ.ಗಂಜಿಹಾಳ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Nanjunda Raju Raju ಗುರು, 12/15/2011 - 18:33

ಶ್ರೀ ಪ್ರಭುರವರೇ, ಇದು ಒಂದು ರೀತಿಯ ನಂಬಿಕೆ ಎನ್ನಬಹುದು. ಒಂದು ರೀತಿಯಲ್ಲಿ ಸಮೂಹ ಸನ್ನಿ ಎನ್ನಬಹುದು. ಬಾಯಿಂದ ಬಾಯಿಗೆ ಪ್ರಚಾರವಾಗಿ ಮುಂದುವರಿಯುತ್ತಾ ಇದೂವರೆಗೂ ನಡೆದುಕೊಂಡು ಬಂದಿರುತ್ತದೆ. ಇದನ್ನು ಏಕಾಏಕಿ ಪತ್ರಿಕೆಯ ಮೂಲಕವೋ, ಅಂತರಜಾಲದ ಮೂಲಕವೋ ಚರ್ಚಿಸಿದರೆ ನಿಲ್ಲುವುದಿಲ್ಲ. ಇದೆಲ್ಲಾ ಒಂದು ರೀತಿಯ ಪವಾಡ ಎನ್ನಬಹುದು. ಕೆಲವರು ತಮಗೆ ಏನೋ ಕಷ್ಠ ಬಂದಾಗ ಆರಿಕೆ ಮಾಡಿಕೊಂಡಿರುತ್ತಾರೆ. ಅರಿಕೆ ಮಾಡಿಕೊಂಡ ಅಥವಾ ತೀರಿಸಿದ ನಂತರವೋ ಅವರ ಕಷ್ಟ ಪರಿಹಾರವಾದರೆ, ಅಂತಹವರು ಊರಿಗೆಲ್ಲಾ ಡಂಗುರ ಸಾರುತ್ತಾರೆ. ಅದನ್ನು ಕೇಳಿದವರು ಅದನ್ನೇ ಅನುಸರಿಸುತ್ತಾರೆ. ಒಂದು ಸಣ್ಣ ಉದಾಹರಣೆ ಎಂದರೆ, ಸಣ್ಣ ಮಗುವಿಗೆ ಜ್ವರ ಬಂದರೆ, ನಾವು ಆಧುನಿಕ ಜ್ನಾನಿಗಳು ಎಂದು ಕೂಡಲೇ ವೈದ್ಯರಿಗೆ ತೋರಿಸಿ, ನೂರಾರು ರೂಪಾಯಿ ಖರ್ಚು ಮಾಡುತ್ತೇವೆ. ಒಂದು ವಾರವೋ ಹದಿನೈದು ದಿನದ ಚಿಕಿತ್ಸೆ ಬೇಕಾಗುತ್ತದೆ. ಅದರಿಂದ ಸೈಡ್ ಎಪೆಕ್ಟ್ ಕೂಡ ಆಗುತ್ತದೆ. ಅದೇ ಮೂಡ ನಂಬಿಕೆ ಇರುವವರು ಒಬ್ಬ ಪಂಡಿತನ ಹತ್ತಿರ ಹೋಗಿ ಯಂತ್ರವನ್ನೋ ಮಂತ್ರವನ್ನೋ ಹಾಕಿಸಿಕೊಂಡು ಬಂದರೆ ಅದು ಅದೃಷ್ಟವಶಾತ್ ವಾಸಿಯಾಗಿರುತ್ತದೆ. ಹಣ ಸ್ವಲ್ಪ ಖರ್ಚಾಗಿರುತ್ತದೆ. ಯಾವ ಸೈಡ್ ಎಪೆಕ್ಟ್ ಇರುವುದಿಲ್ಲ. ಆಗ ನಮ್ಮನ್ನು ಅವರು ಅಣಕಿಸುತ್ತಾರೆ. ನಿಂದಿಸುತ್ತಾರೆ. ಇದೊಂದೇ ಅಲ್ಲ ತಲೆ ಕೂದಲು ಕೊಡುವುದು, ಕಾಲ್ನಡಿಗೆಯಲ್ಲಿ ಯಾತ್ರೆ ಮಾಡುವುದು. ಉಪವಾಸ ಮಾಡುವುದು, ಬೆತ್ತಲೆ ಸೇವೆ ಮಾಡುವುದು. ಸರ್ಪದೋಷ ನಿವಾರಣೆ ಪೂಜೆ ಹೀಗೆ ಇದಕ್ಕೆಲ್ಲಾ ಪ್ರಚಾರವೂ ಇರುತ್ತದೆ. ಮಹಾನ್ ವ್ಯಕ್ತಿಗಳೇ ಇವೆಲ್ಲಾ ಆಚರಿಸುವಾಗ ನಾವೂ ಮಾಡೋಣ ಎನ್ನುತ್ತಾರೆ. ಅದರಿಂದಾಗುವ ಸಾಧಕ ಬಾಧಕಗಳನ್ನು ಯೋಚಿಸುವುದಿಲ್ಲ. ಇದು ಹಿಂದಿನಿಂದ ನಡೆದುಕೊಂಡು ಬಂದಿದೆ. ನಿಲ್ಲಬಹುದು. ಹೊಸ ರೀತಿಯಲ್ಲಿ ಉದ್ಬವಿಸಬಹುದು. ಅದನ್ನು ಜನರಿಗೆ ಬಿಡೋಣ. ನೀವು ತಿಳಿದಂತೆ, ರಾಘವೇಂದ್ರನನ್ನು ಯಾರು ಪೂಜಿಸುತ್ತಿರಲಿಲ್ಲ. ಕನ್ನಡದಲ್ಲಿ ಡಾಃರಾಜಕುಮಾರ್ ಅಭಿನಯಿಸಿದ ನಂತರ ನನಗೆ ಒಳೆಯದಾಯಿತು ಎಂದರು ಆಗಿನಿಂದ ಶುರುವಾಯಿತು. ಅದೇ ರೀತಿ ಅಯ್ಯಪ್ಪ, ದತ್ತ ಮಾಲೆ, ಉಜಿರೆ ಹತ್ತಿರದ ಸೂರ್ಯ ಬೊಂಬೆ ಮಾಡಿಕೊಡುವ ಪದ್ದತಿ ಇನ್ನು ಮುಂತಾದ ಆಚರಣೆಗಳು ವಿಚಿತ್ರವಾದರೂ ನಿಜ ತಾನೆ. ಇನ್ನು ಮುಂದೆ ಹೊಸ ದೇವರು ಹುಟ್ಟಬಹುದು, ಹೊಸ ಆಚರಣೆ ಬರಬಹುದು. ಸುಮ್ಮನೆ ನಾವೆಲ್ಲ ನೋಡೋಣ. ಧನ್ಯವಾದಗಳೊಡನೆ, ವಂದನೆಗಳು.

jeeva ಶುಕ್ರ, 12/16/2011 - 22:58

ಇದೊಂದು ದೇವರ ಮೇಲಿನ ನಂಬಿಕೆ, ಇದು ಹಿಂದಿನಿಂದ ನಡೆದುಕೊಂಡು ಬಂದಿದೆ ಇದು ಹಾಗೆ ಮುಂದುವರೆಯಲಿ. ಜ್ಸೈ ಶ್ರಿರಾಮ್.

muneerahmedkumsi (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/20/2011 - 13:19

 ನಾವೆಲ್ಲ ಮನುಶ್ಯರು , ನಾವು ವಿಧಾತನನ್ನು ಆರಾಧಿಸುತೇವೆ. ವಿಧಾತನೆಂದರೆ ನಮ್ಮೆಲ್ಲರ ಶ್ರುಶ್ಟಿಕರ್ತ, ಪಾಲನಕರ್ತ, ಲಯಕರ್ತ,ಒಡೆಯ ,                ಅವನು ಹೇಗೆ ಸ್ರುಶ್ಟಿಮಾಡಿದ್ದನೊ ಹಾಗೆಯೇ ಹೇಗೆ ಬಾಳಬೇಕೆಂಬುದನ್ನು ತನ್ನ ದಾಸರ ಮುಖಾಂತರ ತಿಳಿಸಿದ್ದಾನೆ. ವಿಧಾತ ಯೆಂದೆಂದಿಗು                  ಮನುಶ್ಯರನ್ನು ಪರಿಶುಧರಾಗಿ ಬಾಳಲು,ಆರಾಧಿಸಲು,ಆಜ್ನಾಪಿಸಿದ್ದನೆ.ತನ್ನ ಆರಾಧನೆ ಯನ್ನು ,ಪರಿಶುದ್ದರಾಗಿ, ಪರಿಶುದ್ಧ ಸ್ಥಿತಿಯಲ್ಲಿ,ಪರಿಶುದ್ಧ                 ಸ್ಥಳದಲ್ಲಿ ಆರಾಧಿಸಲು ತಿಳಿಸಿದ್ದಾನೆ.ಮಡೆಸ್ನಾನ ,ಏಂಜಲೆಲೆ ಮೇಲೆ ಹೊರಳಾಡುವುದು ಅದು ಭಾವನೆ ಅಶ್ಟೆ, ಭಕ್ತಿ ಅಲ್ಲ, ನಾಗರೀಕತೆಯೂ                 ಅಲ್ಲ. ಅದರಿಂದ ವಿಧಾತನು ತ್ರುಪ್ತಿಪಡಿಯುತ್ತಾನೆಯೆಂದರೆ ನಮ್ಮ ಮೂರ್ಖತನ ಅಶ್ಟೆ. ಈ ಪದ್ದತಿಯು ನಮ್ಮ ಮೇಲೆ ಹೇರಲಾಗಿದೆ ಅಶ್ಟೆ.                   ಇದನ್ನು ತಡಿಯಲೇಬೇಕು 

  • 856 views