Skip to main content

ಅವರವರ ಭಾವಕ್ಕೆ... (ಕಥೆ)

ಇಂದ venkatb83
ಬರೆದಿದ್ದುNovember 27, 2011
4ಅನಿಸಿಕೆಗಳು

[img_assist|nid=10795|title=ಅವರವರ ಭಾವಕ್ಕೆ..................|desc=|link=node|align=left|width=93|height=130]
ಬೆಂಗಳೂರು ,ಅದೊಂದು ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸಿಸುವ ಏರಿಯಾ ಆಲ್ಲಿನ ಮನೆಯೊಂದರ , ರೂಮಲ್ಲಿ ಬರುತ್ತಿದೆ ಹಾಡು.....
"ಕಾಲೇಜ್ ಗೇಟಲ್ಲಿ ಚೋಮ್ಬೇಶ್ವರ............ತನ ಡೂನ ಡೂನ ಡೂನ..........."
ಮೊಬೈಲ್ ರಿಂಗ್ ತಾರಕ ಸ್ವರದಲ್ಲಿ ಅರಚುತ್ತಿದ್ದರೂ ಫೋನ್ ಎತ್ತದೆ 'ಆರಾಮಾಗಿ' ಮಲ್ಕೊಂಡಿರೋ ಮಗರಾಯನ ಬಗ್ಗೆ ಗೊಣಗುತ್ತಲೇ ಅವನ ಬೆಡ್ ರೂಮಿಗೆ ಅಡಿ ಇಕ್ಕಿದ ತಾಯಿ ಹೇಳ್ತಾರೆ 'ಲೋ ಘಂಟೆ ಏಳು ಕಾಲು ಆಯ್ತು ಕಣೋ, ಏಳೋ ನನ್ ಪುಟ್ಟಾ'
ಅವ್ನು ಮಲಗಿದಲ್ಲೇ ಹೊದಿಕೆನ ಸರಿಸದೆ ಹೇಳ್ತಾನೆ 'ಅಮ್ಮ ಇವತ್ತು ಇರೋದು ಲ್ಯಾಬ್, ಲೇಟ್ ಆಗ್ ಹೋದರೂ ನಡೆಯುತ್ತೆ..
ತಾಯಿ ಕೋಪದಿಂದ 'ಆ ಫೋನ್ ಎತ್ ಅದ್ಯಾರು-ಏನು ಅಂತ ಕೇಳೋಕೆ ಏನ್ ದಾಡಿ ನಿಂಗೆ? ಒಳ್ಳೆ ಕುಂಭ ಕರ್ಣನಂಗೆ ಮಲಗಿದೀಯ
, ಸದಾ ನಿದ್ದೇದೆ ಚಿಂತೆ ನಿಂಗೆ' ...
ಅಮ್ಮ ಆ ಫೋನ್ ಎತ್ಬೇಡ 'ಅದು ಖಂಡಿತ ಅವಳೇ ಮಾಡಿರಬೇಕು ಆಮೇಲೆ, ಬೆಳಮ್ಬೇಳಗ್ಗೆ ಅವಳತ್ರ ಸಹಸ್ರ ನಾಮಾರ್ಚನೆ ಮಾಡಿಸ್ಕೊಬೇಕಾಗ್ತೆ' ಅವಳ್ಗೆ ಲ್ಯಾಬ್ ಆದರೂ ಕ್ಲಾಸೇ ಆದರೂ ನಾ ಅಲ್ಲಿರಲೇಬೇಕು,...
ಆದರೂ ತಾಯಿ ಅವನ ಮಾತು ಕಿವಿಗೆ ಬಿದ್ದಿಲ್ಲ ಎಂಬಂತೆ ಆ ಫೋನ್ ಎತ್ತಿ 'ಹಲ್ಲೋ ಹಾಂ ಹೌದು, ಅದಾ ಅಯ್ಯೋ ಅದು ನಿನ್ಗೊತ್ತಿರೋದೆಯ.
ಏನು? ಹಾಂ
ಇನ್ನು ಒಂದು ಘಂಟೆಲಿ ಅವ್ನು ಕಾಲೇಜ್ ಹತ್ರ ಇರ್ತಾನೆ,
ಹೌದ? ಇರು ಕೊಡ್ತೀನಿ ನೀನೆ ಮಾತಾಡು ಅವನ ಹತ್ರ.
ಏ ಪುಟ್ಟಾ ತಗೊಳ್ಳೋ, ಅವ್ಳು ನಿಂಜೊತೆ ಅದೇನೋ ಮಾತಾಡಬೇಕಂತೆ!!
ಅವ್ನು ಗೊಣಗುತ್ತಲೇ ಫೋನ್ ಹಿಡಿದು ಹಲೋ - ಹಾಂ ,ಹೇಳೇ ಅಂದದ್ದೇ ತಡ
ಅವಳು ,' ಲೋ ಗೂಬೆ!' ಇವತ್ತೂ ಲೇಟಾ?
ತಥ್, ನೀ ಈ ಜನ್ಮದಲ್ ಸುಧಾರಿಸೋಲ್ಲ ಕಣೋ...
ಈಗೇನು ಇನ್ ಅರ್ಧ ಘಂಟೆಲಿ ಇಲ್ ಬರ್ತೀಯೋ ಇಲ್ಲ ,ನಾನೇ ಆಲ್ ಬರ್ಲಾ?
ಇವಂಗೆ ರೇಗಿ ಹೋಯ್ತು ' ಅಲ್ಲ ಆ ದರಿದ್ರ ಲ್ಯಾಬ್ ಇದೆ ಇವತ್ತು , ಅದಕ್ಯಾಕೆ ಇವಳು ತಲೆ ಮೇಲೆ ಆಕಾಶ ಬಿದ್ದ ಹಾಗ್ ಆಡ್ತಾಳೆ? ಅಂತ ಮನಸಲ್ಲೇ ಅನ್ಕಂಡು ,
ಅಮ್ಮತಾಯಿ ನೀ ಇಲ್ ಬರೋದು ಬೇಡ , ನಾನೇ ಅಲ್ಗೆ ಬರ್ತೀನಿ ಕ್ಯಾಂಟೀನ್ ನಲ್ಲಿ ಕಾಫೀ ಕುಡೀತ ಆರಾಮಾಗಿರು. ಬೈ ಅಂದವನೆ ಫೋನ್ ಕಟ್ ಮಾಡಿದ.
ಅಬ್ಬ! ದೇವ್ರೇ ಸಧ್ಯ ಬದುಕ್ಕೊಂಡೆ , ದೀರ್ಘ ಉಸಿರು ತೆಗೆದುಕೊಂಡ್ ಉಫ್ಫ್! ಅಂದ ,ಮಗನ ಕಡೆ ನೋಡ್ತಾ ಮುಗುಳ್ ನಗುತ್ತಲೇ ತಾಯಿ ಬೆಳಗಿನ ತಿಂಡಿ ತಯಾರಿಸಲು ಅಡುಗೆ ಮನೆಗೆ ನಡೆದರು.
ತರಾತುರಿಯಲ್ಲಿ ಹಲ್ಲುಜ್ಜಿ- ಸ್ನಾನವನ್ನ 'ಯುದ್ಧಕ್ಕೆ' ಹೊರಟವನಂತೆ ಮುಗಿಸಿ, ತಲೆ ಕೂದಲಿಂದ ಇನ್ನು ತೊಟ್ಟಿಕ್ಕುತ್ತಿರುವ ನೀರನ್ನು ಒರೆಸಿಕೊಳ್ಳದೆ ತನ್ನ ರೂಮ್ಗೆ ಹೋಗ್ತಾ 'ಅಮ್ಮ ತಿಂಡಿ ರೆಡಿನಾ? ಬಾಕ್ಸ್ ಗೆ ಹಾಕಿದ್ಯ? ಬೇಗ ಅದ್ನ ನನ್ ಬ್ಯಾಗಿಗೆ ಹಾಕು.
ತಾಯಿ- ಇರೋ ಏನೋ ಅಸ್ಟು ಅರ್ಜೆಂಟು? ಬಾ ತಿಂಡಿ ತಿನ್ನು ಬಾ ..
ಅದಕ್ಕವನು, ಅಯ್ಯೋ ಅಮ್ಮ ಅವ್ಳು ಅಲ್ಲಿ ಅದಾಗಲೇ ಅರ್ಧ ಘಂಟೆಯಿಂದ ಕಾಯ್ತಿದಾಳೆ, ನಾನೆನಾರ ಇನ್ನರ್ಧ ಘಂಟೆಲಿ ಅಲ್ಲಿ ಹೋಗದಿದ್ದರೆ ನನ್ ಕಥೆ ಅಸ್ಟೇ!!.
ಬಾಕ್ಸ್ ನ ಬ್ಯಾಗಿಗೆ ಹಾಕು ಅಲ್ಲೇ ತಿಂತೀನಿ..
ಅವಳು ನೆನ್ನೆ ತಾನೇ 'ಈ ಪ್ಯಾಂಟು ನಿನಗೆ ಚೆನ್ನಾಗಿ ಒಪ್ಪುತ್ತೆ ಕಣೋ' ಅಂತೇಳಿ ಮಲ್ಲೇಶ್ವರಂ ಬಿಗ್ ಬಜಾರಿನಲ್ಲಿ ಕೊಡಿಸಿದ್ದ , ಆ ಲೋ ವೆಸ್ಟ್ ಜೀನ್ಸ್ ನಲ್ಲಿ ಒಂದು ಕಾಲು ತೂರಿಸಿ, ಇನ್ನೊಂದರಲ್ಲಿ ಕಾಲು ಹಾಕಬೇಕು ಅಂತ ಸರ್ಕಸ್ ಮಾಡ್ತಿರ್ಬೇಕಾದ್ರೆ ಬ್ಯಾಲನ್ಸ್ ತಪ್ಪಿ ದೊಪ್ಪನೆ ಬೆಡ್ ಮೇಲೆ ಬಿದ್ದ.
ತಥ್! ಇದೊಂದು ದರಿದ್ರ ಜೀನ್ಸ್ ಈಗಲೇ ಲೇಟು, ಇದು ಬೇರೆ ಇಸ್ಟೊಂದು ಟೈಟ್ ಇದ್ದು, ಕಾಲು ತೂರಿಸಲೇ ಆಗ್ತಿಲ್ಲವಲ್ಲಪ್ಪ , ಇದನ ಹಾಕೊಳ್ಳದೆ ಕಾಲಿಜಿಗೆ ಹೋದ್ರೆ ಅವ್ಳು 'ರೇಗೋದು' ಖಾತ್ರಿ.
ಅದೆಂಗೋ ಕಸ್ಟಪಟ್ಟು ಆ ಜೀನ್ಸ್ ನ ಹಾಕ್ಕೊಂಡು 'ಜಸ್ ಬಿ ಕೂಲ್ ' ಎಂಬ ಬರಹ ಇರವ ಟೀ-ಶರ್ಟನ ಹಾಕೊಂಡು ಅಡುಗೆ ಮನೆಯಲ್ಲಿದ್ದ ತಾಯಿಗೆ ಹೇಳಿದ ,ಅಮ್ಮ ನಾ ಹೋಗ್ತಿದೀನಿ,
ತಾಯಿ -ಇರೋ ಪುಟ್ಟಾ ಬಂದೆ, ಮಗನ ಬಳಿ ಸಾರಿ ಅವನ ಮುಂಗುರುಳು ಮೇಲಕ್ಕೆತ್ತಿ ,ಹಣೆಗೆ ಮುತ್ತ್ತನ್ನಿತ್ತು, 'ಪಾಕೆಟ್ ಮನಿ' -ಪೆಟ್ರೋಲು ಖರ್ಚು ಅಂತ ,ಐದು ನೂರರ ನೋಟೊಂದನ್ನು ಅವನ ಕೈಯಲ್ಲಿ ಇಟ್ಟರು....
ತನ್ನ ತಾಯಿ, ತಂದೆಯೊಡನೆ ಮುನಿಸಿಕೊಂಡು, ಅವನು ಪೀ ಯೂ ಸಿ ಯಲ್ಲಿ ಕಾಲೇಜಿಗೆ ಪ್ರಥಮನಾಗಿ ಬಂದಾಗ ತೆಗೆಸಿಕೊಟ್ಟ ಯಮಹ ಎಫ್ ಜೆದ್ ಸ್ಟಾರ್ಟ್ ಮಾಡಿ ರಸ್ತೆಗೆ ನುಗ್ಗಿಸಿದ , ಯಥಾ ಪ್ರಕಾರ 'ಗೇಟೂ' ಹಾಕಲಿಲ್ಲ!!
ಅವನ ಹಿಂದೆಯೇ ಬಂದ ತಾಯಿ ,ಆ ಗೇಟನ್ನು ಹಾಕುತ್ತಾ,
'ಪುಟ್ಟಾ' ಹುಷಾರಾಗಿ ಹೋಗು, ಜೋಪಾನ ,ಗಾಡೀನ ಜೋರಾಗಿ ಓಡಿಸಬೇಡ.
ಮಗ- ಅಮ್ಮ ನಾ ಜೋಪಾನವಾಗೆ ಹೋಗ್ತೀನಿ, ನಾ ಇದ್ವರ್ಗೂ ೫೦ರ ಮೇಲೆ ಸ್ಪೀಡಾಗ್ ಹೋಗಿಲ್ಲ ಗೊತ್ತಾ? ನೀ ವರಿ ಮಾಡಬೇಡ..
ಅದಾಗಲೇ ಇವ್ನು ಹೊರಗೆ ಬರೋದ್ನೆ ಕಾಯುತ್ತ ನಿಂತಂತಿದ್ದ 'ಎದುರು ಮನೆ ಹುಡುಗಿ' ಇವನತ್ತ 'ಒಂಥರಾ' ನೋಡ್ತಾ- ಹಲ್ಲು ಕಿರಿದಳು..
ಆದರೆ 'ಇವನೋ' ಅದ್ಯಾವುದನ್ನು ಯಥಾ ಪ್ರಕಾರ ಗಮನಿಸದೆ ತಾಯಿಗೆ ಬೈ ಹೇಳಿ ಬೈಕಿನ ಗೇರು ಚೇಂಜ್ ಮಾಡಿ ಸ್ಲೋ ಆಗ್ ಹೊರಟ. ತಮ್ಮ ಮನೆ 'ಕಣ್ಣಿಂದ ದೂರವಾಗುತ್ತಲೇ' ಬೈಕಿನ ವೇಗವನ್ನ ೬೦ಕ್ಕೆ ಹೆಚ್ಚಿಸಿ ಮುಖ್ಯ ರಸ್ತೆಗೆ ಇಳಿದ. ಅಲ್ಲಿಂದ ಕಾಲೇಜಿಗೆ ಕೇವಲ ಇಪ್ಪತ್ತು ನಿಮಿಷದಲ್ಲಿ ಬಂದು, ಬೈಕನ್ನ ಸ್ಟ್ಯಾಂಡಿಗೆ ಹಾಕಿ ಕ್ಯಾನ್ಟೀನಿನತ್ತ ಹೆಜ್ಜೆ ಹಾಕಿದ..
ಬೈಕಿನ ಕೀ ಚೈನನ್ನ ಗಾಳೀಲಿ ಎಸೆದು ಕ್ಯಾಚ್ ಹಿಡೀತ 'ಕೂಲಾಗ್' ಬರ್ತಿರೋ 'ಅವನನ್' ನೋಡ್ ' ಅವಳ್ಗೆ' ರೇಗ್ ಹೋಯ್ತು. ಬಾರದ ಕೋಪವನ್ನ ಮುಖದ ಮೇಲೆ 'ಬಲವಂತವಾಗಿ' ತೋರ್ಪಡಿಸಿಕೊಳ್ತಾ , ಅವ್ನು ಹತ್ತಿರ ಬಂದು 'ಸ್ಸಾರೀ' ಕಣೆ ಅನ್ನುತ್ತ 'ಅವಳ' ಹತ್ತಿರ ಕುಳಿತುಕೊಳ್ಳುತ್ತಿದ್ದಂತೆ ಬೆನ್ನ ಮೇಲೆ ಒಂದು ಗುದ್ದು ಹಾಕ್ತ ಹೇಳಿದಳು
'ಲೋ ನೀ ಈ ಜನ್ಮದಲ್ ಸುಧಾರಿಸಲ್ವೇನೋ? ಅಲ್ವೋ ಇಲ್ ನಾ ಮುಕ್ಕಾಲ್ ಘಂಟೆಯಿಂದ ನಿಂಗೆ ಕಾಯ್ತಿದ್ರೆ, ಏನೂ ಆಗಿಲ್ಲವೆಂಬಂತೆ ಕೂಲಾಗ್ ಬರ್ತೀಯ? ನಿನ್ನಜ್ಜಿ!!....
ಮೇಲಿಂದ ಕೆಳಗೆ ಒಮ್ಮೆ 'ಅವನತ್ತ' ನೋಡಿ ಹೇಳಿದಳು- ನಾ ಹೇಳಲಿಲ್ಲವ? ಖಂಡಿತ ಅವೆರಡು ಡ್ರೆಸ್ ನಿಂಗೆ ಸೂಟ್ ಅಗ್ತವೆಂತ...
ಡ್ರೆಸ್ ವಿಷ್ಯ ಎತ್ತುತ್ತಿದ್ದಂತೆ 'ಅವನ್ಗೆ 'ಬೆಳಗ್ಗೆ ಆ ಡ್ರೆಸ್ ಮಹಿಮೆಯಿಂದ ಬೆಡ್ ಮೇಲೆ ಮುಗ್ಗರಿಸಿ ಬಿದ್ದದ್ದು ನೆನಪಿಗ್ ಬಂದು ಅದ್ನ 'ಅವಳಿಗೆ' ಹೇಳಿದ್ದು -ಇಬ್ರೂ ನಕ್ಕಿದ್ದೂ ಆಯ್ತು..
ತಿಂಡಿ ತಿಂದಾಯ್ತೇನೋ? 'ಅವಳ' ಪ್ರಶ್ನೆ,
ಇನ್ನು ಇಲ್ಲ
ಕಣೇ, ನೀ ಕರೆದೆ ಅಂತ ಅವಸರದಲ್ಲಿ ಹಾಗೆ ಬಂದೆ,ಆದ್ರೆ 'ಅಮ್ಮ' ತಿಂಡೀನ ಬಾಕ್ಸಿಗೆ ಹಾಕಿದ್ದಾರೆ, ಇವತ್ ಅದೇನ್ ತಿಂಡಿ ಕಟ್ಟಿದಾರೋ ಗೊತ್ತಿಲ್ಲ, ಅದ್ನ ಬಿಸಿಯಾಗಿದ್ದಾಗ್ಲೆ ಇಬ್ರೂ ಸೇರಿ ತಿಂದು ಲ್ಯಾಬಿಗೆ ಹೋಗೋಣ.
ಕ್ಯಾಂಟೀನಿನ ಸಿಂಕಲ್ಲಿ ಇಬ್ರೂ ಕೈ ತೊಳೆದ್ಕೊಂಡ್ ಬಂದು 'ಕಾತರ-ಹಸಿವಿನ ಮಿಶ್ರಣದೊಂದಿಗೆ'
ಆ ಬಾಕ್ಸನ ಓಪನ್ ಮಾಡಿ 'ಪೆಚ್' ಆಗ್ ಬಿದ್-ಬಿದ್ ನಗಾಡೋಕೆ ಶುರು ಹಚ್ಕೊಂಡ್ರು.
ಅಕ್ಕಪಕ್ಕದ ಟೇಬಲ್ನಲ್ಲೋ ಕುಳಿತವರಗೆ ಇದೇನೋ 'ವಿಚಿತ್ರವಾಗ್' ತೋರಿ ಪ್ರಶ್ನಾರ್ಥಕವಾಗೀ ದಿಟ್ಟಿಸಿ ನೋಡಿದರು.. 'ಇವರಿಬ್ಬರ' ಆ ಪೆಚ್ಚು ಮತ್ತು ನಂತರದ ನಗೆಗೆ ಕಾರಣ ಆ ಬಾಕ್ಸ್ನಲ್ಲಿದ್ದ ತಿಂಡಿ.
ತನ್ನ ಹೆಸರು ಮಾತ್ರದೊಂದಿಗೆ 'ಕೆಲವರ್ಗೆ' ಇಸ್ಟವಾಗದ , ಆದರೆ ಹಲವರ್ಗೆ ಇಷ್ಟವಾದ 'ಉಪ್ಪಿಟ್ಟು' ಎಂಬ ನಾಮದೊಂದಿಗೆ ಪ್ರಸಿದ್ಧವಾದ 'ಕಾಂಕ್ರೀಟು'!...ಮತ್ತು ಅದ್ನ 'ಅವನು-ಅವಳು' ಇದ್ವರ್ಗೂ ತಿಂದ ಉದಾಹರಣೆ ಇಲ್ಲ.. ಹಾಗಂತ ಇದು 'ಅಮ್ಮಂಗೆ' ಗೊತ್ತಿಲ್ಲದ್ದೇನಲ್ಲ, ಅವರೋ 'ಇವನ' ಬೆಳಗಿನ ಹಡಾವುಡಿಯಲ್ಲಿ ತಾವೂ ಪಾಲುದಾರರಾಗಿ 'ಇವನ' ತಂದೆಗೆ ಕೊಡಬೇಕಿದ್ದ ಆ ತಿಂಡಿಯನ್ನ , 'ಇವನ' ಬ್ಯಾಗಲ್ಲಿ ಇಟ್ಟಿದ್ದರು..
ಸರೀ ಇನ್ನೇನ್ ತಾನೇ ಮಾಡೋಕಾಗ್ತೆ?
ಅದೇ ಕ್ಯಾಂಟೀನ್ನಲ್ಲಿ ಇಡ್ಲಿ-ವಡೆ-ಸಾಂಬಾರ್ ಭರ್ಜರಿಯಾಗ್ ತಿಂದು ಕಾಫೀ ಕುಡಿದು ಕಾಸು ಕೊಟ್ಟು ಲ್ಯಾಬ್ ಕಡೆ ಹೆಜ್ಜೆ ಹಾಕಿದರು.
ಅದಾಗಲೇ ಲ್ಯಾಬಲ್ಲಿ 'ಇವರಿಬ್ಬರನ್ನು' ಬಿಟ್ಟು ಉಳಿದ ಎಲ್ಲ ವಿಧ್ಯಾರ್ಥಿಗಳು ಬಂದು ಅವರಿಗೆ ಗೊತ್ತುಪಡಿಸಿದ ಸಿಸ್ಟಮ್ ಮುಂದೆ ಕುಳಿತಾಗಿತ್ತು...
ಬಾಗಿಲ ಹತ್ತಿರ ಕುಳಿತಿದ ವಿಧ್ಯಾರ್ಥಿಯೋಬ್ಬನನ್ನ 'ಅವನು' ಕೇಳಿದ , ಲ್ಯಾಬ್ ಶುರು ಆಗ್ ಎಸ್ಟ್ ಹೊತ್ತಾಯ್ತು?
ಈಗ ತಾನೆ ಶುರು ಆಗಿದೆ, ಹಾಜರಿ ತಗೊಳ್ತಾರೆ ಬೇಗ ಒಳಗೆ ಬನ್ನಿ..
ಖಾಲಿಯಾಗಿದ್ದ ತಮಗೆ ಗೊತ್ತುಪಡಿಸಿದ ಆ ಎರಡು ಅಕ್ಕ-ಪಕ್ಕದ ಸಿಸ್ಟಮ್ನ ಮುಂದೆ 'ಇಬ್ಬರೂ' ಕುಳಿತು ಬ್ಯಾಗಿಂದ ನೆನ್ನೆ ಕ್ಲಾಸಲ್ಲಿ ಲೆಕ್ಚರರ್ ಬರೆಸಿದ್ದ 'ಪ್ರೋಗ್ರಾಮ್'ನ ತೆಗೆದು ಅದನ್ನು ಸಿಸ್ಟಮ್ನ ತೆರೆ ಮೇಲೆ ಟೈಪಿಸಲು ಪ್ರಾರಂಭಿಸಿದರು..
ಸ್ವಲ್ಪ ಹೊತ್ತಲ್ಲೇ ,ಮೇಲಿಂದ -ಮೇಲೆ ಬರ್ತಿರೋ 'ಎರ್ರರ್' ನೋಡ್ 'ಅವನ್ಗೆ' ರೆಗ್ ಹೋಗಿ 'ಅವಳ್ಗೆ' ಪಿಸು ಮಾತಲ್ಲಿ ಹೇಳಿದ- ಈ ದರಿದ್ರ 'ಪ್ರೋಗ್ರಾಮ್' ಮುಗ್ಸಿ 'ಔಟ್ಪುಟ್'' ತೋರ್ಸೋಕ್ ನನ್ನ್ನಿಂದಾಗಲ್ಲ ಕಣೇ, ಇದನ ಎಡಿಟ್ ಮಾಡ 'ಔಟ್ ಪುಟ್ ' ತೆಗೆದ್ ಕೊಡೆ..
'ಅವ್ಳು' -ನನ್ನಿಂದಾ
ಗಲ್ಲಪ್ಪ, ಆ ಲೆಕ್ಚರ್ ಕಣ್ಣಿಗೆನಾರ ಇದ್ ಕಾಣಿಸಿದರೆ? ,ಇಲ್ಲ ಗೊತ್ತಾದರೆ? ಆಮೇಲ್ 'ನನ್' ಕಥೆ ಅಸ್ಟೇ...
ಹಿಂದೊಮ್ಮೆ 'ಇವನಿಗೆ' ಸೈನ್ಸ್ ಲ್ಯಾಬಲ್ಲಿ 'ಸೋನಾರ್' ಕುರಿತ ಪ್ರಾಕ್ಟಿಕಲ್ ನಲ್ಲಿ ಹೆಲ್ಪ್ ಮಾಡಿ ಅದು ಸೈನ್ಸ್ ಲೆಕ್ಚರ್ಗೆ ಗೊತ್ತಾಗ್ 'ಇವಳನ್ನ' ೩ ಲ್ಯಾಬಿಗೆ ಬರದಂತೆ ಮತ್ತು 'ಅವನಿಗೆ' ಆ 'ಸೋನಾರ್' ಕುರಿತ ಇನ್ನೊಂದು ಬೇರೆಯದೇ ತರಹದ ಪ್ರಯೋಗವನ್ನ ಮಾಡಲು ಹೇಳಿದ್ದು, ಅದು ಅವನಿನ್ದಾಗದೆ ಪಡಿಪಾಟಲು ಪಟ್ಟ ಧ್ರುಶ್ಯಗಳೆಲ್ಲ ಸರಸರನೆ ಅವಳ ಮನದಲ್ಲಿ ಒಮ್ಮೆ ಹಾದುಹೋದವು.
ಪ್ಲೀಜ್ ಕಣೇ ಇಲ್ಲ ಅನ್ಬೇಡ, ನಾ ಮೊದ್ಲೇ ಬಡ್ಕೊಂಡೆ ಇವತ್ತು ಲ್ಯಾಬಿಗೆ ನಾ ಬರಲ್ಲ ಅಂತ, ಆದರೂ ಬಾ ಅಂತ ನನ್ನ ಒತ್ತಾಯ ಮಾಡ ಕರೆಸಿ ಈಗ ನಂಗೆ ಹೆಲ್ಪ ಮಾಡದಿದ್ದರೆ ಹೇಗೆ?
ಅವಳ್ಗೆ 'ಇದೊಳ್ಳೆ ಪೀಕಲಾಟವಾಯ್ತಲ್ಲಪ್ಪ' ಅನಸ್ತು.
ಸರೀ ನಾ ಹೆಲ್ಪ್ ಮಾಡ್ತೀನಿ ಆದ್ರೆ ಆ ಲೆಕ್ಚರ್ಗೆ ನಮ್ ಮೇಲೆ ಮೊದಲೇ ಅನುಮಾನ, ಅವ್ರು ಅದ್ನೇ 'ಬೇರೆ ತರಹ' ತೋರ್ಸು ಅಂದ್ರೆ ಏನ್ ಮಾಡ್ತಿಯ?
'ಅವ್ನು' -ಅದ್ರ ಬಗ್ಗೆ ಆಮೇಲ್ ಯೋಚಿಸ್ತೀನ್ ,ಸಧ್ಯಕ್ಕೆ ಇದ್ನ ಎಡಿಟ್ ಮಾಡ್, ಔಟ್ ಪುಟ್ ತೆಗೆಯೋದ್ನ ನಂಗೆ ನೀ ಹೇಳಿಕೊಟ್ಟರೆ ಸಾಕ್ ಅಸ್ಟೇ.
ಲೆಕ್ಚರರ್ ಹಾಜರಿ ತೆಗೆದುಕೊಂಡ ಮುಗಿಸುವಸ್ಟರಲ್ಲಿ ಆ ಪ್ರೋಗ್ರಾಮ್ಗೆ ಒಂದು ಗತಿ ಕಾಣಿಸಿ ಔಟ್ ಪುಟ್ ತೆಗೆಯುವ ವಿಧಾನವನ್ನ 'ಅವಳು'-ಅವನಿಗೆ ಹೇಳಿಯಾಗಿತ್ತು.ಆ ಲೆಕ್ಚರರ್ ಹೆಚ್ಗೆ ಏನನ್ನು ಕೇಳದೆ ಪ್ರೋಗ್ರಾಮ್ ನೋಡಿ ಔಟ್ ಪುಟ್ ತೋರಿಸಲು ಹೇಳಿದಾಗ ಮನ ಹಿಗ್ಗಿ ಹೀರೆಕಾಯಿಯತು!
ಆದರೂ 'ಇವನ' 'ದುರಾಧ್ರುಸ್ಟಕ್ಕೆ ಅವತ್ತು, 'ಇವನ' ಬಗ್ಗೆ ಸದಾ ಅನುಮಾನದಿಂದಿದ್ದ ಆ ಲೆಕ್ಚರರ ಆ ಪ್ರೋಗ್ರಾಂನ ನೋಡಿಯೂ ಸಮಾಧಾನವಾಗದೇ ಅದನ್ನೇ ಕೊಂಚ ಎಡಿಟ್ ಮಾಡಿ, ಔಟ್ ಪುಟ್ ತೋರಿಸಲು ಹೇಳಿದರು.
'ಹಿಮಾಲಯವನ್ನೇರಿ ಆಲಿಂದ ಜರ್ರನೆ ಜಾರಿದ' ಹಾಗಾದ 'ಇವಂಗೆ' ಅನಸ್ತು- ಈ ಲೆಕ್ಚರರ್ ಒಳ್ಳೆ ಉಡಾ ತರಹದ ಗಿರಾಕಿ ಮಾರಾಯ!! ಬಿಡೋದೇ ಇಲ್ಲ ಅಂತಾನೆ....
ಲೆಕ್ಚರ್ಗೆ ತ್ರುಪ್ತಿಯಗೋ
ಹಾಗ್ ಆ ಪ್ರೋಗ್ರಾಂನ ಔಟ್ ಪುಟ್ ತೋರಿಸಿ ಅವ್ರು ಸಮಾಧಾನಗೊಂಡು , ಒಮ್ಮೆ 'ಅವಳ' ಪ್ರೋಗ್ರಾಮ್ ಮತ್ತು ಔಟ್ ಪುಟ್ ಮೇಲೆ ಕಣ್ಣ ಹಾಯಿಸಿ ನಗ್ತಾ ಹೋದರು...
ಅವ್ರ ನಗೆಗೆ ಕಾರಣ 'ಇವ್ಳು' ಅದಾಗಲೇ ಆ ಪ್ರೋಗ್ರಾಮ್ ಬಗ್ಗೆ 'ಅವನ್ಗೆ' ಹೇಳ್ ಕೊಟ್ಟಿರ್ಲೇಬೇಕು..
ಮತ್ತು ಅವ್ರ 'ಆ ಊಹೆ' ಸುಳ್ಳೂ ಆಗಿರಲಿಲ್ಲ.
'ಅವಳಿಗ್ಗೊತ್ತಿತ್ತು' ಆ ಲೆಕ್ಚರರ್ ಅದೇನೇನೆಲ್ಲ ಚೇಂಜ್ ಮಾಡಿ 'ಇವಂಗೆ' ಪರೀಕ್ಷಿಸಬಹುದು ಅಂತ, ಅದ್ಕೆ
'ಅವ್ಳು' , ಏನ್ ಚೇಂಜ್ ಮಾಡ್ ಅದ್ನ ತಿದ್ದಿ , ಅದ್ರ ಔಟ್ ಪುಟ್ ತೋರಿಸಲು ಹೇಳಬಹುದು, ಅನ್ನುವುದನ್ನ 'ಅವನಿಗೆ' ಅದಾಗಲೇ ಹೇಳಿಯಾಗಿತ್ತು !...
'ಅವಳೊಡನೆ' ಅವನಿಗೆ' ಪ್ರತಿ ದಿನವೂ ಹೊಸದು
ಕಲಿಯುವುದು,
ಸುತ್ತಾಡೋದು,
ಮುನಿಸು-ತಿನಿಸು
ಎಲ್ಲವೂ... ಮತ್ತು
ಇದು 'ಈಗೀಗಿನದ್ದಲ್ಲ',
ಅಂದಿನ 'ಲ್ಯಾಬಿನ' ಪ್ರಾಯೋಗಿಕ ತರಗತಿಯನ್ನು 'ಬಹು ಪ್ರಯಾಸಪಟ್ಟು' ಮುಗಿಸಿ ಹೊರ ಬಂದ 'ಅವನು' ಮತ್ತು 'ಅವಳು' ಆ ಲ್ಯಾಬಿನ ಹೊರಗಿರುವ ಹುಲ್ಲು ಹಾಸಿನ ಮೇಲೆ ಕುಳಿತುಕೊಂಡರು.
'ಅವನು' ಅಬ್ಬಾ!! ಅಂತೂ - ಇಂತೂ ಆ ಲ್ಯಾಬ್ ಪ್ರಾಕ್ಟಿಕಲ್ ಇವತ್ತಿಗ್ ಮುಗೀತು.. ತುಂಬಾ ಥ್ಯಾಂಕ್ಸ್ ಕಣೆ, ನಿನ್ನಿನ್ದಾಗ್ ನಾನಿವತ್ತು ಬಚಾವ್..
'ಅವಳು' ಅಪ್ಪಾ-ತಂದೆ! ಇವತ್ತಿಗೆ ಕೊನೆ ಇನ್ಮೇಲೆ ನೀ 'ನನ್ನಿಂದ' ಈ ತರಹದ್ ಸಹಾಯವನ್ನ ಎಕ್ಸ್ಪೆಕ್ಟ್ ಮಾಡಬೇಡ..
'ನಿಂಗೆ' ಸಹಾಯ ಮಾಡ್ತಾ ,ಆಮೆಲ್ ನಾ ಆ ಲೆಕ್ಚರ್ ಕೈಲಿ 'ಮಂಗಳಾರ್ಚನೆ' ಮಾಡಿಸಿಕೊಳ್ಳೋಕೆ 'ನನ್ಗಿಸ್ಟವಿಲ್ಲ'. ಇವತ್ತೇ ನಿಂಗೆ ಸಾಹಾಯ ಮಾಡ ನಂಗೆ 'ಜೀವವೇ ಬಾಯಿಗ್ ಬಂದ್ ಹಾಗ್ ಹಾಗಿತ್ತು'..
'ಅವ್ನು' ಹೋಗೋಗೆ, ನಾ ನೋಡದಿರೋಳ ನೀ? 'ನೀನಲ್ಲದಿದ್ದರೂ' ಬೇರಾರ ಹೆಲ್ಪ ಮಾಡೇ ಮಾಡ್ತಾರೆ... ಏನೋ ನಮಗೆ ಗೊತ್ತಿಲ್ಲದ್ದನ ಹೇಳಮ್ಮ ಅಂದ್ರೆ 'ಸಕತ್ ಬಿಲ್ದಪ್' ಕೊಡ್ತಿಯ?
'ಅವಳು' ಹೌದೋ ಬಿಲ್ದಪೆ ಏನಿವಾಗ?
ಹೌದ? ಬೇರೆ ಯರತ್ರನಾರ ಹೇಳಿಸ್ಕೊತಿಯ? ನೋಡೋಣ ಅದ್ಯಾರು ನಿಂಗ್ ಹೆಲ್ಪ್ ಮಾಡ್ತಾರೆ?
ಒಂದೈದು ನಿಮಿಷ 'ಮೌನ'... ಆ ಐದು ನಿಮಿಷದ ಮೌನವೇ ಅವರಿಬ್ಬರಿಗೂ ಸಹಿಸಲಾಗದೆ, ಹೇಳಿದ್ರು ಒಬ್ಬರಿಗೊಬ್ಬರು 'ಸ್ಸಾರೀ ಕಣೆ', 'ಸಾರೀ ಕಣೋ'..
ಹೌದು ಮುಂದೆ ಏನು ನಿನ್ನ ಪ್ರೋಗ್ರಾಮ್? 'ಅವನ್' ಪ್ರಶ್ನೆ'
'ಅವಳು' -ಇನ್ನೇನಿದೆ? ಮಾಮೂಲಿನೆ.ಕಾಲೇಜಿಂದ ನೇರವಾಗ್ ಮನೆಗೊಗೋದು ,ಸ್ವಲ್ಪ ಹೊತ್ ಕಂಪುಟರಲ್ಲಿ ಗೇಂ ಆಡಿ, ಅಮೇಲ್ ಓದ್ಕೊಳೋದು.
'ಅವನು;' -ತಥ್! ಅದು ದಿನ ಇರೋದೆಯ. ದಿನಾಲೂ ಮನೆಗ್ ಹೋಗೋದ್ ಇದ್ದೆ ಇದೆ, ಸ್ವಲ್ಪ ಹೊತ್ತು 'ಮಲ್ಲೇಶ್ವರಂ ಮಂತ್ರಿ ಮಾಲ್' ಸುತ್ಕೊಂಡು 'ವಿಂಡೌ ಶಾಪಿಂಗ್' ಮಾಡಿದ್ರ್ತೆ ಹೇಗೆ?
ಹ್ಹೂ... 'ಅವಳು' ಒಪ್ಪಿಯಾಯ್ತಲ್ಲ ಇನ್ನೇನು?
ಕಾಲೇಜಿಂದ ನೇರವಾಗಿ 'ಮಲ್ಲೇಶ್ವರಂನ ಮಂತ್ರಿ ಮಾಲ್ ಗೆ' ಬಂದು ಅದರ ಎದುರಿಗಿರುವ ತಮ್ಮ ಸ್ನೇಹಿತರ ಮನೆಯಲ್ಲಿ 'ಅವಳು' ತನ್ನ ಸ್ಕೂಟಿ ಪಾರ್ಕ್ ಮಾಡಿದಳು, 'ಇವನು' ಆ ಸ್ನೇಹಿಯ್ತೆಯ ಮನೆ ಎದುರಿಗೆ ಖಾಲಿ ಜಾಗದಲ್ಲಿ ತನ್ನ ಬೈಕು ಪಾರ್ಕ್ ಮಾಡಿದ.
ನಗುತ್ತಲೇ ಸ್ವಾಗತಿಸಿದ ಸ್ನೇಹಿತೆಯ ಮನೆಯೋಳಗೋಗಿ ಸ್ನೇಹಿತೆ ಕೊಟ್ಟ ಜೂಸ್ ಕುಡಿದು ಇಬ್ಬರೂ ಮಂತ್ರಿ ಮಾಲಿಗೆ ಅಡಿಯಿಟ್ಟರು.... ಸ್ನೇಹಿತೆಯ ಮನೆ ಹತ್ತಿರವಾದ್ದರಿಂದ ಮಂತ್ರಿ ಮಾಲಿನ 'ದುಬಾರೀ ಪಾರ್ಕಿಂಗ್ ಫಿ' ಕಟ್ಟೋದು ತಪ್ಪಿತು:))
>>>
ಇನ್ನೂ ಇದೆ................

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

Jyothi Subrahmanya ಧ, 11/30/2011 - 19:20

ವೆಂಕಟ್ ಅವರೇಓದಿಸಿಕೊಂಡು ಹೋಗೋವಂಥ ಕಥೆನ ಶುರು ಮಾಡಿದೀರಾ.... ಮುಂದೆ ಏನು ಅನ್ನೋ ಕುತೂಹಲದ ಜೊತೆ ನಿಮ್ಮ ಕಥೆಯ ಮುಂದಿನ ಭಾಗವನ್ನ ಎದುರು ನೋಡ್ತಾ ಇರ್ತೀನಿ....ಕಥೆಯ ಧಾಟಿ ಚೆನ್ನಾಗಿದೆ...

venkatb83 ಶುಕ್ರ, 12/16/2011 - 18:26

ಜ್ಯೋತಿ ಅವ್ರೆ ಬಹು ದಿನಗಳ ನಂತರ ವಿಸ್ಮಯನಗರಿಗ್ ವಾಪಸ್ ಬಂದು  ನಿಮ್ಮ ಪ್ರತಿಕ್ರಿಯೆ ನೋಡಿದೆ ನಿಮ ಅಭಿಮಾನಕ್ಕೆ ವಂದನೆಗಳು..ನನ್ನ ಇನ್ನಸ್ಟು ಬರಹಗಳಿಗಾಗಿ ಇಲ್ಲಿ ಭೇಟಿ ಕೊಡಿ  http://sampada.net/my-articles/೫೧೨೧ ಶುಭವಾಗಲಿ ಧನ್ಯವಾದಗಳು 

venkatb83 ಶುಕ್ರ, 12/16/2011 - 19:07

ಜ್ಯೋತಿ ಅವ್ರೆ ಮೇಲೆ ಕೊಟ್ಟ ಲಿಂಕ್ ತಪ್ಪಿದೆ... ನನ್ನ ಇನ್ನಿತರ ಬರಹಗಳಿಗಾಗಿ ಇಲ್ಲಿಗೆ ಬೇಟಿ ಕೊಡಿ..  http://sampada.net/user/venkatb83

belstaff jackets (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 06:56


Dad is busy every day outside, do not have belstaff jackets time to read. He will do regret belstaff bags it? Sometimes I really want to belstaff jackets discuss these books determined to Dad, which can be thought belstaff uk of six mother goes on the bleak white belstaff uk powder coated long face, the same belstaff jackets block as the wall on the road the north face uk , immediately give up north face the idea. Each hospital has a mulberry bagssmall door set with a narrow mulberry bags sale garden path connected to mulberry handbags the left, leading to the garden. cyh12-29

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.