Skip to main content
Submitted by pavu on ಗುರು, 11/24/2011 - 13:56

ನಮ್ಮ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ನಿಜಕ್ಕೂ ಸಂತೋಷವನ್ನು ತಂದಿದೆ ಆದರೆ ಅದರ ಜೊತೆಗೆ ಭಾಷಾಂತರ ನೀತಿಯಿಂದ ಬೆಂಗಳೂರಿನ ಜನತೆಗೆ ದುಃಖವನ್ನು ಉಂಟು ಮಾಡಿದೆ. ಮೆಟ್ರೋದಲ್ಲಿ ಅನಗತ್ಯವಾಗಿ ಹಿಂದಿ ನಾಮಫಲಕಗಳನ್ನು ಹಾಕಿದ್ದು ಅಲ್ಲಿಯ ಸಿಬ್ಬಂದಿಗಳಿಗೆ ಕನ್ನಡ ಮಾತನಾಡಲು ಬಾರದಿರುವುದು ನಿಜಕ್ಕೂ ವಿಷಾದನೀಯ. ತ್ರಿ ಭಾಷಾ ಸೂತ್ರ ಎಂದು ಹೇಳಿ ಹಿಂದಿಯನ್ನು ಮಾತ್ರ ಬಳಕೆ ಮಾಡಿರುವುದು ನುಂಗಲಾರದ ಒಂದು ತುತ್ತು ಎಂದು ಹೇಳಬಹುದು.ಹೆಚ್ಚತ್ತವಾಗಿ ಕನ್ನಡಿಗರು ಇರುವ ಬೆಂಗಳೂರಿನಲ್ಲಿ ಹಿಂದಿ ಬರುವ ಕಡಿಮೆ ಜನಗಳಿಗೆ ಸಹಾಯ ಮಾಡುತ್ತಿರುವ ಮೆಟ್ರೋ ಕನ್ನಡಿಗರನ್ನು ತುಳಿಯುತ್ತಿದೆ. ಈ ಕೆಲಸ ಹೇಗಿದೆ ಎಂದರೆ ಒಬ್ಬರಿಗಾಗಿ ೨೦ ಜನರನ್ನು ಸಾಯಿಸುವಂತಿದೆ.. ಇದೇ ರೀತಿ ಮುಂದುವರೆದರೆ ಮುಂದೆ ಕನ್ನಡ ಎಂಬ ಹೆಸರು ಅಳಿದು ಹೋಗುತ್ತದೆ. ಹೆಸರಾಗಲಿ ಕನ್ನಡ ಉಸಿರಾಗಲಿ ಕನ್ನಡ ಎನ್ನುವ ಕರ್ನಾಟಕ ರಕ್ಷಣಾ ವೇದಿಕೆಯವರು ಇದರ ಬಗ್ಗೆ ಜಾಗೃತವಹಿಸಲಿ ಎಂಬುದು ನನ್ನ ಆಶಯ....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 562 views