Skip to main content

ಇತ್ತೀಚಿನ ಲೇಖನಗಳು

ಪ್ರಾರ್ಥನೆ

ಇಂದ prabhu
ಬರೆದಿದ್ದುJanuary 13, 2019
noಅನಿಸಿಕೆ

ತಾಯಿ ಶಾರದೆ ನಮಿಸುವೆ ನಿನಗೆ
ವಿದ್ಯೆಯ ಕಲಿಸು ಬೇಗನೆ ನಮಗೆ|
ಮುದ್ದು ಮಕ್ಕಳ ಮನವಿ ಆಲಿಸು
ಶುದ್ಧಾಕ್ಷರಗಳ ನಮಗೆ ಕಲಿಸು||೧||
ಕೂಡಿಸಿ ಕಳೆದು ಬಾಗಿಸಿ ಗುಣಿಸುವ
ಲೆಖ್ಖಗಳೆಲ್ಲ ತಟ್ಟನೆ ಕಲಿಸು|
ಹಿಂದಿ ಇಂಗ್ಲೀಷ್ ವಿಜ್ಞಾನವೆಲ್ಲ
ಕನ್ನಡದಂತೆ ಅರಗಿಸಿ ಕುಡಿಸು||೨||
ಗುರುಗಳು ಹೇಳುವ ಪಾಠಗಳೆಲ್ಲ

ಟಿ ವಿ

ಇಂದ prabhu
ಬರೆದಿದ್ದುJanuary 12, 2019
noಅನಿಸಿಕೆ

ಟಿ ವಿಯ ನೋಡಲು ಕುಳಿತರೆ ಅಮ್ಮಗೆ
ಜಗದ ಪರಿವೆ ಇರಲ್ಲ|
ಒಲೆಯ ಮೇಲಿನ ಅನ್ನ ಸೀದರೂ
ಲಕ್ಷವೇ ಇರೋಲ್ಲ||೧||
ಹಾಲು ಉಕ್ಕಲಿ ಬೆಕ್ಕು ಕುಡಿಯಲಿ
ಗಮನವೇ ಅತ್ತ ಕೊಡೋಲ್ಲ|
ಸಾರು ಪಲ್ಯಕೆ ಉಪ್ಪು ಹೆಚ್ಚಿ
ಅಪ್ಪನ ಬೈಗುಳ ತಪ್ಪೊಲ್ಲ||೨||
ಸುದ್ದಿಯ ನೋಡಲು ಅಪ್ಪಗೆ ಸಿಗದೆ
ಸಿಟ್ಟಲಿ ಹೋಗುವ ಹೊರಗೆ|

ನನ್ನ ವೇಷ

ಇಂದ prabhu
ಬರೆದಿದ್ದುJanuary 11, 2019
noಅನಿಸಿಕೆ

ಅಜ್ಜ ನಿನ್ನ ಚಾಳೀಸ ಕೊಡು
ಹಾಕಿಕೊಳ್ಳುವೆ ನಾನು|
ಕೋಲನು ಹಿಡಿದು ಮೆಲ್ಲಗೆ ನಡೆದು
ಗಾಂಧೀ ತಾತಾ ಆಗುವೆನು||೧||
ಕೋಟನು ತೊಟ್ಟು ಗುಲಾಬಿ ಇಟ್ಟು
ಚಾಚಾ ನೆಹರು ಆಗುವೆನು|
ಸೈನಿಕ ವೇಷವ ಧರಿಸಿ ಇಂದೇ
ಸುಭಾಸಚಂದ್ರನಾಗಿ ಕಾಣುವೆನು||೨||
ಸಂವಿಧಾನದ ಪುಸ್ತಕ ಎದೆಗಿಟ್ಟು
ಬಾಬಾಸಾಹೇಬ್ ಆಗುವೆನು|

ಯುವಶಕ್ತಿ (ಎನ್ ಎಸ್ ಎಸ್ ಗೀತೆ)

ಇಂದ prabhu
ಬರೆದಿದ್ದುJanuary 9, 2019
noಅನಿಸಿಕೆ

ಕೆರೆಯ ಸುತ್ತ ಬೇಲಿ ಹಚ್ಚಿ
ಜೀವ ಜಲವ ರಕ್ಷಿಸಿ|
ನೀರ ಮೂಲ ನೆಲೆಯ ಹುಡುಕಿ
ಹರಿದು ಬರಲು ಯತ್ನಿಸಿ||೧||
ಒಬ್ಬರೊಂದು ಗಿಡವ ಹಚ್ಚಿ
ನಾಡ ಬರವ ಅಳಿಸೋಣ|
ಮಣ್ಣ ಸವಕಳಿ ತಡೆಯಲು
ಮರಗಿಡಗಳ ಬೆಳಸೋಣ ||೨||
ಮನೆಗೊಂದು ಶೌಚವನು ಕಟ್ಟಿಸಿ
ಸ್ವಚ್ಚತೆಯ ಅರಿವು ಮೂಡಿಸೋಣ|

ಹೊಳೆಹಡಗಲಿ ಗ್ರಾಮದಲ್ಲಿ ನಾಟಕ ಪ್ರದರ್ಶನ

ಇಂದ prabhu
ಬರೆದಿದ್ದುJanuary 8, 2019
noಅನಿಸಿಕೆ

ರೋಣ ತಾಲೂಕಿನ ಹೊಳೆಆಲೂರ ಸಮೀಪದ ಹೊಳೆಹಡಗಲಿ ಗ್ರಾಮದಲ್ಲಿ ಶ್ರೀ ಚಂದ್ರಮೌಳೀಶ್ವರ ಜಾತ್ರೆಯ ಅಂಗವಾಗಿ ಶ್ರೀ ಚಂದ್ರಮೌಳೀಶ್ವರ ಕ್ರೀಡಾ ನಾಟ್ಯ ಸಂಘದಿಂದ "ಭಂಡರಿಗೆ ಸಿಡಿದೆದ್ದ ಪುಂಡ ಹುಲಿ" ಅರ್ಥಾತ್ "ಧರ್ಮದ ದಾರಿಗೆ ದೇವರು ಯಾರು?" ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಲಾಯಿತು.

ರೊಟ್ಟಿ

ಇಂದ prabhu
ಬರೆದಿದ್ದುJanuary 8, 2019
noಅನಿಸಿಕೆ

ಅಮ್ಮ ನನಗೂ ಹಿಟ್ಟನು ಕೊಡು
ಜೋಳದ ರೊಟ್ಟಿಯ ಮಾಡುವೆನು|
ಕೊಣಮಗಿಯಲ್ಲಿ ಹಿಟ್ಟನು ಹಾಕಿ
ಬಿಸಿ ನೀರನು ಸುರುವುವೆನು||೧||
ಗಂಟಾಗದ ರೀತಿ ಮೆಲ್ಲಗೆ ಕಲಿಸಿ
ಉಳ್ಳಿಯ ಮಾಡುವೆನು|
ಪಟ ಪಟ ಬಡೆದು ದುಂಡಗೆ ಮಾಡಿ
ಹಂಚಲಿ ಹಾಕುವೆನು||೨||
ರೊಟ್ಟಿಯು ಬೆಂದು ಹೊಟ್ಟೆಯು ಉಬ್ಬಲು
ಪುಟ್ಟಿಗೆ ಹಾಕುವೆನು|

ಕಾಲದ ಗೆಳೆಯ ಗಡಿಯಾರ

ಇಂದ prabhu
ಬರೆದಿದ್ದುJanuary 8, 2019
noಅನಿಸಿಕೆ

ಟಿಕ್ ಟಿಕ್ ಎನ್ನುತ ಓಡುತಲಿರುವ
ಓ ಗಡಿಯಾರ|
ಕಾಲದ ಗೆಳೆಯನೆ ನಿನ್ನದು
ಎಂಥ ಚಮತ್ಕಾರ||೧||
ರವಿಯ ನೆರಳೆ ಆಗಿನ ಕಾಲ
ಕಿವಿಯನು ಹಿಂಡುವ ನಂತರ ಕಾಲ|
ಸೆಲ್ಲು ಸೋಲಾರ ಇಂದಿನ ಕಾಲ
ಮುಂದೆನಿದೆಯೋ ನಿನ್ನಯ ಜಾಲ||೨||
ಪಾಠದ ಹೊತ್ತು ವೇಗದಿ ನಡೆ
ಆಟದ ವೇಳೆ ಮೆಲ್ಲಗೆ ಸಾಗು|

ನೆಪ

ಇಂದ prabhu
ಬರೆದಿದ್ದುJanuary 3, 2019
noಅನಿಸಿಕೆ

ಅಮ್ಮಾ ತುಂಬಾ ಚಳಿ ಇದೆ
ಉಣ್ಣಿ ಸ್ವೇಟರ್ ಹಾಕು|
ಕಾಲಿಗೆ ಚೀಲ ಕೈಗೆ ಗೌಸು
ತಲೆಗೆ ಟೊಪ್ಪಿಗೆ ಬೇಕು||೧||
ಶಾಲೆಗೆ ಹೋಗು ಅಂದ್ರೆ ಹೇಗೆ
ಇಂಥ ಕೊರೆವ ಚಳೀಲಿ|
ಬೆಚ್ಚಗೆ ಒಲೆಯ ಮುಂದೆ
ಕೂಡ್ರುವೆನು ಮನೇಲಿ||೨||
ಚಳಿಗೆ ಹೆಚ್ಚು ಕಮ್ಮಿ ಆದ್ರೆ
ನಿನಗೆ ಕಷ್ಟ ಕಣಮ್ಮ|
ನನ್ನ ಪಾಲನೆ ಮಾಡೋದು

ದಿನದರ್ಶಿಕೆ ಬಿಡುಗಡೆ

ಇಂದ prabhu
ಬರೆದಿದ್ದುJanuary 2, 2019
noಅನಿಸಿಕೆ

ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಜನನಾಡಿ ಪಾಕ್ಷಿಕದ ೨೦೧೯ರ ದಿನದರ್ಶಿಕೆಯನ್ನು ಶ್ರೀವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿಗಳಾದ ಪೂಜ್ಯ ಶ್ರೀ ಕಲ್ಲಯ್ಯಜ್ಜನವರು ಬುಧವಾರ ಮಧ್ಯಾಹ್ನ ಬಿಡುಗಡೆ ಮಾಡಿದರು.

ನಮ್ಮ ಶಾಲೆ

ಇಂದ prabhu
ಬರೆದಿದ್ದುJanuary 2, 2019
noಅನಿಸಿಕೆ

ನಮ್ಮ ಊರ ನಮ್ಮ ಶಾಲೆ
ನಮ್ಮದೆಂಬ ಹೆಮ್ಮೆ|
ನೋಡ ಬನ್ನಿ ಊರ ಹೊರಗೆ
ವಿದ್ಯಾ ಮಂದರನೊಮ್ಮೆ||೧||
ಒಂದರಿಂದ ಎಂಟನೆ ತರಗತಿ
ನಡೆವವಿಲ್ಲಿ ಪ್ರತಿದಿನ|
ಜ್ಞಾನ ವಿಜ್ಞಾನ ಜೊತೆಗೆ
ನಿತ್ಯ ಪಾಠ ಹೊಸತನ||೨||
ಬೆಳಗಿನಿಂದ ಉತ್ಸಾಹದಿ
ವಿಷಯಗಳ ಪಾಠ|
ಶಾಲೆ ಬಿಟ್ಟ ನಂತರ
ಮೈದಾನದಿ ಆಟ||೩||