Skip to main content

ಇತ್ತೀಚಿನ ಲೇಖನಗಳು

ಹೊಳೆಆಲೂರ: ಪರಂಪರಾಕೂಟಾದಿಂದ ಶೈಕ್ಷಣಿಕ ಪ್ರವಾಸ

ಇಂದ prabhu
ಬರೆದಿದ್ದುMarch 31, 2019
noಅನಿಸಿಕೆ

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪರಂಪರಾಕೂಟದ ವತಿಯಿಂದ "ಐತಿಹಾಸಿಕ ಸ್ಠಳಗಳ ಶೈಕ್ಷಣಿಕ ಅಧ್ಯಯನ" ಕುರಿತು ಬಾದಾಮಿ, ವಿಜಯಪುರಗೆ ಒಂದು ದಿನದ ಪ್ರವಾಸ ಕೈಗೊಳ್ಳಲಾಯಿತು.

ಸಂಚಾರ

ಇಂದ prabhu
ಬರೆದಿದ್ದುMarch 6, 2019
noಅನಿಸಿಕೆ

ಹಳಿಗಳ ಮೇಲೆ ಚುಕುಬುಕು ಎಂದು
ಓಡುವ ರೈಲು ನೋಡಮ್ಮ|
ಊರಿ
ಊರಿಂದೂರಿಗೆ ಜನರನು ಹೊತ್ತು
ಓಡುವ ಗಾಡಿಯು ಚಂದಮ್ಮ||೧||
ಪೌಂವ್ ಪೌಂವ್ ಎಂದು ರಸ್ತೆಯ ಮೇಲೆ
ಓಡುವ ಬಸ್ಸು ನೋಡಮ್ಮ|
ಕಂಡಕ್ಟರನು ಸೀಟಿಯ ಹೊಡೆಯಲು
ಬಿಡುವನು ಡ್ರೈವರ್ ಬಸ್ಸಮ್ಮ||೨||
ಟಾಂಗಾ ರಿಕ್ಷಾ ಕಾರು ಟ್ಯಾಕ್ಷಿ

ಅರಿವು

ಇಂದ prabhu
ಬರೆದಿದ್ದುMarch 5, 2019
noಅನಿಸಿಕೆ

ಜ್ಞಾನ ವಿಜ್ಞಾನದಿಂದ
ಅಜ್ಞಾನವ ಕಳೆಯುವಾ|
ಸುಜ್ಞಾನದ ಜ್ಯೋತಿ ಹಚ್ಚಲು
ಅಕ್ಷರವ ಕಲಿಯುವಾ||೧||
ಅನಕ್ಷರತೆ ಅಜ್ಞಾನಕೆ
ಮೆಟ್ಟಲೆಂದು ತಿಳಿ|
ಹೆಬ್ಬೆಟ್ಟು ಬಿಟ್ಟು ನೀ
ಶಾಲೆಯನು ಕಲಿ||೨||
ಸಿರಿ ಸಂಪತ್ತು ಆಸ್ತಿಗೆ
ಕಳ್ಳರ ಭಯ ಯಾವತ್ತೂ|
ವಿದ್ಯೆ ಕಲಿತ ಜಾಣಗೆ

ಚಿಲಿಪಿಲಿ

ಇಂದ prabhu
ಬರೆದಿದ್ದುMarch 1, 2019
noಅನಿಸಿಕೆ

ಹಕ್ಕಿಯ ಚಿಲಿಪಿಲಿ ಕೇಳುತಲಿದ್ದರೆ
ಜಗವೇ ಮರೆಯುವದು|
ಕುಣಿಯುವ ನವಿಲನು ನೋಡುತಲಿದ್ದರೆ
ಮೈಮನ ಪುಳಕಿತವು||೧||
ಅರಳುವ ಹೂಗಳು ಬೀರುವ ಪರಿಮಳ
ಘಮ್ಮನೆ ಹೊಮ್ಮುವದು|
ಮಧುವನು ಹೀರಲು ಸುತ್ತುವ ದುಂಬಿಯ
ಆಟವೆ ಮೋಹಕವು||೨||
ಸುರಿಯುವ ಜೋಗದ ಧಾರೆಯ ನೀರು
ಕಣ್ಮನ ಸೆಳೆಯುವದು|

ಬೇಸಿಗೆ

ಇಂದ prabhu
ಬರೆದಿದ್ದುFebruary 28, 2019
noಅನಿಸಿಕೆ

ಅಮ್ಮ ಅಮ್ಮ ಪಾತ್ರೆಯ ಕೊಡು
ನೀರನು ಹಾಕಿ ಮನೆ ಮೇಲಿಡುವೆ|
ಬೇಸಿಗೆ ಬ್ಂತು ಪಕ್ಷಿಗಳಿಗೆ
ಕುಡಿಯಲು ನೀರು ಬೇಕಲ್ಲವೇ?||೧||
ಸುಡುವ ಬಿಸಿಲಿನ ಧಗೆಯು ಹೆಚ್ಚಿದೆ
ನೀರು ಇಲ್ಲ ಎಲ್ಲ ಕಡೆ|
ನದಿ ಕೆರೆ ಹಳ್ಳ ಕೊಳ್ಳ
ಬತ್ತಿ ಬರಿದಾಗಿವೆ ಒಳಗಡೆ||೨||
ಮನುಜರೆ ದಾಹದಿ ಬಳಲುವಾಗ
ಪಕ್ಷಿ ಸಂಕುಲ ಪಾಡೇನು?|

ಇರುವೆ

ಇಂದ prabhu
ಬರೆದಿದ್ದುFebruary 27, 2019
noಅನಿಸಿಕೆ

ಇರುವೆ ಇರುವೆ ಎಲ್ಲೆಲ್ಲೂ ಇರುವೆ
ಸರ ಸರ ಎಲ್ಲಿಗೆ ಹೊರಟಿರುವೆ?|
ಸರತಿಯ ಸಾಲಲಿ ಸಾಗುತ ನೀ
ಶಿಸ್ತಿನ ಸಿಪಾಯಿ ಆಗಿರುವೆ||೧||
ನೆಲ ಗೋಡೆ ಗಿಡ ಬಳ್ಳಿಗಳ
ಎಲ್ಲೆಂದರಲ್ಲಿ ನೀ ಇರುವೆ|
ಸಿಹಿ ಸಿಹಿ ರುಚಿಗೆ ಮುತ್ತಿಗೆ ಹಾಕಿ
ಸವಿಯನೆ ಮೆಲ್ಲುತ ಇರುವೆ||೨||
ಶೇಂಗಾ ಪುಟಾಣಿ ಖೊಬ್ರಿಗಳೆಲ್ಲ

ಸೂರ್ಯ

ಇಂದ prabhu
ಬರೆದಿದ್ದುFebruary 26, 2019
noಅನಿಸಿಕೆ

ಯಾಕಣ್ಣ ಸೂರ್ಯ ಬೇಸಿಗೆ ಮೊದಲೆ
ಹೀಗೆ ಉರಿಯೋದು ?|
ಬೆಳಗಿನ ವೇಳೆಯೇ ಸುಡುತ ಬಂದ್ರೆ
ಹೇಗೆ ಬದುಕೋದು? ||೧||
ಕುಳಿತರೂ ನಿಂತರೂ ಸಮಾಧಾನವಿಲ್ಲ
ಜೀವಕೆ ಚಡಪಡಿಕೆಯೆಲ್ಲ|
ನೀರನು ಕುಡಿದರೂ ನೆಮ್ಮದಿಯಿಲ್ಲ
ಬಾಯರಿಕೆ ನೀಗುತ್ತಿಲ್ಲ||೨||
ಹಸಿವು ಹತ್ತಿರ ಸುಳಿಯುತ್ತಿಲ್ಲ
ತಂಪು ಪಾನೀಯ ಬೇಕಲ್ಲ|

ರೈತನಾಗುವೆ

ಇಂದ prabhu
ಬರೆದಿದ್ದುFebruary 25, 2019
noಅನಿಸಿಕೆ

ಅಪ್ಪ ನಾನು ಹೊಲಕೆ ಹೋಗುವೆ
ಬಂಡಿಗೆ ಎತ್ತನು ಕಟ್ಟಿಕೊಡು|
ನೇಗಿಲು ಹೊಡೆದು ಹೊಲವನು ಉಳುವ
ಕೆಲಸವ ನನಗೆ ಕಲಿಸಿಕೊಡು||೧||
ಬೆಳ್ಳನೆ ಜೋಡೆತ್ತಿಗೆ
ಕೊಂಬಣಸನು ಹಾಕಿ ಬಿಡು|
ಡಂಬರಗಿಗೆ ಹಗ್ಗವ ಸುತ್ತಿ
ಬಾರಕೋಲನು ಹೆಗಲಿಗಿಡು||೨||
ಹಗಲು ಇರಳು ನೀರನು ಹಾಯಿಸಿ
ಬೆಳೆಯನು ಜೋಪಾನ ಮಾಡುವೆನು|

ಬಿ.ಎಸ್ .ಬೇಲೇರಿ ಗ್ರಾಮದಲ್ಲಿ ಸನ್ಮಾನ

ಇಂದ prabhu
ಬರೆದಿದ್ದುFebruary 24, 2019
noಅನಿಸಿಕೆ

ಗ್ರಾಮೀಣ ಅಭಿವೃದ್ಧಿ ಪಂಚಾಯತರಾಜ್ ಇಲಾಖೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಎನ್ ಎಸ್ ಎಸ್ ಕೋಶ ಜಿಲ್ಲಾ ಪಂಚಾಯತ ಗದಗ, ತಾಲೂಕ ಪಂಚಾಯತ ರೋಣ, ಗ್ರಾಮ ಪಂಚಾಯತ ಅಮರಗೋಳ ಹಾಗೂ ಶ್ರೀ ಕವಿಪ್ರ ಸಮಿತಿಯ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೊಳೆಆಲೂರ ವತಿಯಿಂದ ಬಿ.ಎಸ್.ಬೇಲೇರಿ ಗ್ರಾಮದಲ್ಲಿ ದಿ.೧೩-೨-೨೦೧೯ ರಿಂದ್ ೧೯-೨-೨೦೧೯ ರ

ಚುಕ್ಕಿ

ಇಂದ prabhu
ಬರೆದಿದ್ದುFebruary 24, 2019
noಅನಿಸಿಕೆ

ಚುಕ್ಕಿ ಚುಕ್ಕಿ ಮಿನಗು ಚುಕ್ಕಿ
ಬಾನಿನ ತುಂಬಾ ಹೊಳೆಯುವ ಚುಕ್ಕಿ|
ಹಕ್ಕಿ ಪಿಕ್ಕಿ ರೆಕ್ಕೆ ಬಿಚ್ಚಿ
ಹಾರುವ ಗಗನಕೆ ಸೇರಲು ಚುಕ್ಕಿ||೧||
ಬಣ್ಣದ ಚಿಟ್ಟೆ ಹಾರುವ ತಟ್ಟೆ
ದೇವರೆ ಬರೆದನು ರೆಕ್ಕೆಗೆ ಪಟ್ಟೆ|
ನಡೆಯೆ ಉಟ್ಟು ನವಿಲು ದಟ್ಟೆ
ನೀಲಿಯ ಲೋಕಕೆ ಕಳೆಯನು ಕಟ್ಟೆ||೨||