Skip to main content

ಇತ್ತೀಚಿನ ಲೇಖನಗಳು

ಸಿ.ಎಸ್.ಐ -ಪ್ರೇಮ ನಿಲಯದ ಮಕ್ಕಳಿಗೆ ಮ್ಯಾಟ್ ಗಳ ದೇಣಿಗೆ

ಇಂದ prabhu
ಬರೆದಿದ್ದುJanuary 31, 2019
noಅನಿಸಿಕೆ

ಕೆನರಾ ಬ್ಯಾಂಕ್ ಗದಗ-ಬೆಟಗೇರಿ ಶಾಖೆಯ ಸಿಬ್ಬಂದಿಗಳು ಗಣರಾಜ್ಯೋತ್ಸವದ ಅಂಗವಾಗಿ ಬೆಟಗೇರಿಯ ಸಿ.ಎಸ್.ಐ -ಪ್ರೇಮ ನಿಲಯದ ಮಕ್ಕಳಿಗೆ ಊಟಕ್ಕೆ ಕುಳಿತುಕೊಳ್ಳಲಿಕ್ಕೆ ಕಾಟನ್ ಮ್ಯಾಟ್ ಗಳನ್ನು ವಿತರಿಸಿದರು. ಬ್ಯಾಂಕ್ ಮ್ಯಾನೇಜರ್ ಶಬನಮ್ ಆದೋನಿರವರು ಸಿ.ಎಸ್.ಐ ಪ್ರೇಮ ನಿಲಯದ ಮುಖ್ಯಸ್ಥರ ಸಮ್ಮುಖದಲ್ಲಿ ನಿಲಯದ ಮಕ್ಕಳಿಗೆ ವಿತರಿಸಿದರು.

ಹೊಳೆಆಲೂರಲ್ಲಿ ಡಿಜಿಟಲ್ ಇಂಡಿಯಾ ಪರೀಕ್ಷೆ

ಇಂದ prabhu
ಬರೆದಿದ್ದುJanuary 31, 2019
noಅನಿಸಿಕೆ

ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಕವಿಪ್ರ ಸಮಿತಿಯ ಕಲಾ, ವಿಜ್ಞಾನ ,ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಮತ್ತು ೨ ಹಾಗೂ ಭುವನೇಶ್ವರಿ ನೆಟ್ ಸೆಂಟರ್ ಬೆಟಗೇರಿ ಆಶ್ರಯದಲ್ಲಿ ಪ್ರಧಾನಮಂತ್ರಿ ಡಿಜಿಟಲ್ ಇಂಡಿಯಾ ಕುರಿತು ಮಾಹಿತಿ ಮತ್ತು ಆನ್ ಲೈನ್ ಪರೀಕ್ಷೆ ನಡೆಸಲಾಯಿತು.

ಮತದಾನ ಜಾಗೃತಿ

ಇಂದ prabhu
ಬರೆದಿದ್ದುJanuary 31, 2019
noಅನಿಸಿಕೆ

ನಮ್ಮ ಹಕ್ಕು ನಮ್ಮ ಮತ
ಚಲಾಯಿಸೋದೆ ನಮಗೆ ಹಿತ|
ತಪ್ಪದಂತೆ ಹಾಕೋಣ
ಅವರಿವರ ಜೊತೆ ಹೋಗುತ||೧||
ಜಾತಿ ಧರ್ಮ ಗೊಡವೆ ಬೇಡ
ಪಕ್ಷ ಚಿಹ್ನೆ ನೋಡ ಬೇಡ|
ದೇಶದ ಹಿತ ಕಾಯುವವರ
ಆರಿಸೋದು ಮರೆಯಬೇಡ||೨||
ಚುನಾವಣೆಗೆ ವೇಷ ಬದಲಿಸೋ
ಪೊಳ್ಳು ಭರವಸೆ ಅಭ್ಯರ್ಥಿ ಬೇಡ|
ಕಾಲು ಕೈ ಮುಗಿದು ಬರುವ

ಭಯ

ಇಂದ prabhu
ಬರೆದಿದ್ದುJanuary 28, 2019
noಅನಿಸಿಕೆ

ಅಮ್ಮ ನೋಡು ನನಗೆ ಯಾಕೋ
ಕಣ್ಣೆ ಕಾಣ್ತಿಲ್ಲ|
ಏನೇ ನೋಡಲಿ ಮಸುಕು ಮಸುಕು
ವಸ್ತು ಗೋತ್ತಾಗ್ತಿಲ್ಲ||೧||
ರಾತ್ರಿ ಮಲಗೋವಾಗ ಎಲ್ಲ
ಚನ್ನಾಗೆ ಇತ್ತು|
ಟಿವಿ ಬಹಳ ನೋಡಿದ್ದಕ್ಕೆ
ಹೀಗಾಯ್ತಾ ಮತ್ತು||೨||
ಹಾಸಿಗೆಯಿಂದ ಏಳೋದಕ್ಕೂ
ಆಗ್ತಿದೆ ಭಯ|
ಮೇಜು ಖುರ್ಚಿ ಗೋಡೆ ತಗುಲಿ

ಮತದಾನ

ಇಂದ prabhu
ಬರೆದಿದ್ದುJanuary 28, 2019
noಅನಿಸಿಕೆ

ನಮ್ಮ ಹಕ್ಕು ನಮ್ಮ ಮತ
ನಮ್ಮ ದೇಶ ಸುರಕ್ಷಿತ |
ತಪ್ಪದಂತೆ ಬಂದು ಹಾಕಿ
ಎಲ್ಲರೂ ನಿಮ್ಮ ಮತ||೧||
ಹದಿನೆಂಟು ತುಂಬಿದ್
ದೇಶದೆಲ್ಲ ಪ್ರಜೆಗಳೆ|
ತಪ್ಪದಂತೆ ಬಂದು ನೀವು
ಮತವ ನೀಡಿ ಮರೆಯದಲೆ||೨||
ಬಲಿಷ್ಟ ಭಾರತ ಕಟ್ಟಲು
ನೀವು ಅದಕೆ ಮೆಟ್ಟಿಲು|
ಮೂಲಭೂತ ಸೌಕರ್ಯಕೆ

ಕಾಡು ಬೆಳಸು

ಇಂದ prabhu
ಬರೆದಿದ್ದುJanuary 25, 2019
noಅನಿಸಿಕೆ

ಕೇಳು ಗೆಳೆಯನೆ ಕೇಳು
ಅಕ್ಕರೆಯಲಿ ಹೇಳುವೆ ಕೇಳು|
ಜೀವಕೆ ಜಲವು ಬೇಕಲ್ಲವೇ
ಮರಗಿಡಗಳ ಬೆಳಸಲು ಹೇಳು||೧|||
ಗಿಡ ಮರಗಳಾ ಬೆಳೆಸೋ
ಮೋಡಗಳ ಇಳೆಗೆ ಇಳಿಸೋ|
ಹಸಿರೆ ಹಸಿರು ನಾಡಾಗಿಸೋ
ಬರವನು ಅಲ್ಲೆ ಅಟ್ಟಿಸೋ||೨||
ಕಾಡನು ಕಡಿದು ನಾಡನು ಕಟ್ಟುವ
ಬೆಟ್ಟವ ಅಗಿದು ಅದಿರನು ತೆಗೆಯುವ|

ಹಸಿರು ಸೇನೆ

ಇಂದ prabhu
ಬರೆದಿದ್ದುJanuary 24, 2019
noಅನಿಸಿಕೆ

ಹಸಿರೆ ಉಸಿರಾಗಿಸಿಕೊಂಡ
ಹಸಿರು ಸೇನೆಯವರು|
ಮನೆಗೊಂದು ಮರ ನೆಡಲು
ನಿಮ್ಮ ಮನೆ ಬಾಗಿಲಿಗೆ ಬಂದವರು||೧||
ಹರಿದು ಹೋಗುವ ನೀರ ನಿಲ್ಲಿಸಿ
ಇಂಗಿಸುವವರು ನಾವು|
ನೆರಳು ಫಲವನು ಕೊಡುವ ಮರಗಳ
ಬೆಳಸಿರೆಲ್ಲ ನೀವು||೨||
ಮನೆಗೊಂದು ಮರ ಊರಿಗೊಂದು ವನ
ನಿರ್ಮಾಣವಾಗಲೇ ಬೇಕು|

ನಾಯಿಮರಿ

ಇಂದ prabhu
ಬರೆದಿದ್ದುJanuary 24, 2019
noಅನಿಸಿಕೆ

ಜಾಣಮರಿ ಮುದ್ದುಮರಿ
ನನ್ನ ನಾಯಿಮರಿ|
ಯಾರಿಗೇನೂ ಮಾಡೋದಿಲ್ಲ
ಡೋಂಟ್ ವರಿ||೧
ಮನೆಯ ಸುತ್ತ ಯಾರೇ ಬರಲಿ
ಭಯ ಬೀಳಿಸಿ ಒದರೋ ಪರಿ|
ಪರಿಚಿತರಿದ್ದರೆ ಸಾಕು ನೋಡಿ
ಬಾಲ ಆಡಿಸಿ ಸಂಭ್ರಮ ತೋರಿ||೨||
ಕಲ್ಲ ಮಲ್ಲ ಸುಬ್ಬ ಹನುಮ
ಆಟಕೆ ಬೇಕು ಯಾವಾಗಲೂ|
ಸೀತ ಗೀತ ರಾಧೇ ಬಂದರೆ

ಯಾರಂತೆ ನಾನು?

ಇಂದ prabhu
ಬರೆದಿದ್ದುJanuary 20, 2019
noಅನಿಸಿಕೆ

ಅಮ್ಮ ನೀನು ನಿಜ ಹೇಳು
ನಾನು ಯಾರ ಹಾಗಿರುವೆ?|
ನಿನ್ನ ಮುದ್ದು ಮಗಳಾದರೂ
ಏಕೆ ಹೀಗೆ ಕಾಡುತಿರುವೆ||೧||
ನನ್ನ ಮೂಗು ಹಿಡಿದು ನೀ
ಅಜ್ಜಿಯದೆನ್ನುವೆ|
ಕಣ್ಣುಗಳೆಲ್ಲ ಥೇಟ್
ಅವರಜ್ಜನವೆನ್ನುವೆ||೨||
ಮಾತಾಡೋದೆಲ್ಲ
ದೊಡ್ಡಮ್ಮನಂತೆಯೇ|
ನಡೆವ ನಡಿಗೆಯೆಲ್ಲ
ಚಿಕ್ಕಮ್ಮನಂತೆಯೇ||೩||

ಬೆಕ್ಕು

ಇಂದ prabhu
ಬರೆದಿದ್ದುJanuary 19, 2019
noಅನಿಸಿಕೆ

ನಮ್ಮ ಮನೆಯ ಮುದ್ದಿನ ಬೆಕ್ಕು
ಅದಕ್ಕಿಲ್ಲ ಸೊಕ್ಕೆಷ್ಟು|
ಹಾಲು ಬೆಣ್ಣೆ ಎದುರಿಗೆ ಇದ್ದರೂ
ಮುಟ್ಟೋದಿಲ್ಲ ಎಷ್ಟೆಷ್ಟು||೧||
ಚಂಗನೆ ಜಿಗಿವ ಇಲಿಯ ಕಂಡರೆ
ತಲೆಗೇರುತ್ತೆ ಸಿಟ್ಟು|
ಟಣ್ಣನೆ ಹಾರಿ ಹಿಡಿದುಕೊಂಡು
ಬಿಡದು ತನ್ನ ಪಟ್ಟು||೨||
ಅಮ್ಮನ ಸುತ್ತ ಸುತ್ತಿ ಸುಳಿದು