Skip to main content

ಇತ್ತೀಚಿನ ಲೇಖನಗಳು

ನಮ್ಮ ಮೇಷ್ಟ್ರೇ ಜಾಣರು

ಇಂದ prabhu
ಬರೆದಿದ್ದುFebruary 10, 2019
noಅನಿಸಿಕೆ

ನಮ್ಮ ಶಾಲೆ ಮಾಸ್ತರಷ್ಟು
ಜಾಣ ಅಲ್ಲ ನೀನಪ್ಪ|
ಏನೇ ಕೇಳಿದ್ರೂ ಗೊತ್ತಿಲ್ಲಂತಿ
ಅವ್ವನ್ನ ಕೇಳ್ ಅಂತಿಯಪ್ಪ||೧||
ದೊಡ್ಡ ಶಾಲೆ ಮೇಷ್ಟ್ರ ಅಂತಿ
ಬಾಳ ದಡ್ಡ ಹೌದಪ್ಪ|
ಲೆಖ್ಖ ತಿಳಿಸಿ ಕೊಡು ಅಂದ್ರ
ಅಣ್ಣನ್ನ ಕೇಳ ಅಂತಿಯಪ್ಪ||೨||
ಕಕಂಬಳ್ಳಿ ಹೇಳಿಕೊಡು ಅಂದ್ರ
ಅಕ್ಕನ ಕೇಳು ಅಂತಿಯ|

ಕನಸು

ಇಂದ prabhu
ಬರೆದಿದ್ದುFebruary 10, 2019
noಅನಿಸಿಕೆ

ಹಕ್ಕಿಯ ಹಾಗೆ ಆಕಾಶಕೆ
ನಾವು ಹಾರೋಣ|
ಪಕ್ಷಿ ನೋಟದಿ ಎಲ್ಲವ ನೋಡುತ
ದೇಶವ ಸುತ್ತೋಣ||೧||
ಕೊನೆಯೆ ಇಲ್ಲದ ಬಾನಲಿ ಹಾರುತ
ಮೋಡದ ನಡುವೆ ಸಾಗೋಣ|
ಚುಕ್ಕಿ ಚಂದ್ರರ ಹತ್ತಿರ ಹೋಗಿ
ಸ್ನೇಹ ಬೆಳೆಸೋಣ||೨||
ಮಂದಿರ ಮಸೀದಿ ಚರ್ಚುಗಳಿಲ್ಲದ
ಬಾನಲಿ ಹಾರೋಣ|
ದೇವರು ಎಲ್ಲಡೆ ಇರುವನೆಂದರೆ

ಮೂಢ ನಂಬಿಕೆ

ಇಂದ prabhu
ಬರೆದಿದ್ದುFebruary 10, 2019
noಅನಿಸಿಕೆ

ಬೆಕ್ಕು ಅಡ್ಡ ಹೋದರೆ ಏಕೆ
ನಿಲ್ಲುವೆ ನೀನು ತಮ್ಮಣ್ಣ|
ನರಿಯ ಮುಖವ ನೋಡಿದರೆ
ಒಳ್ಳೆಯದಾಯ್ತೆ ಕಣಣ್ಣ||೧||
ಮಾತಿನ ವೇಳೆ ಹಲ್ಲಿ ಲೊಚಗುಟ್ಟಲು
ತಾಳೆ ಹಾಕುವ ಜನರಲ್ಲಿ|
ಒಂದು ಸೀನಿಗೆ ಅಪಶಕುನವೆಂದರೆ
ಎರಡು ಸೀತರೆ ಶುಭವಲ್ಲಿ||೨||
ಬಾಲಗೆ ಬಲಗಣ್ಣು ಹಾರಿದರೆ
ಒಳ್ಳೆಯದೆನ್ನುವ ಈ ಜನರು|

ಗಾಳಿಪಟ

ಇಂದ prabhu
ಬರೆದಿದ್ದುFebruary 7, 2019
noಅನಿಸಿಕೆ

ಅಣ್ಣ ನನಗೆ ಪಟವನು ಮಾಡು
ಬಾನಿಗೆ ಹಾರಿಸುವೆ|
ಸೂತ್ರವ ಬಿಗಿದು ಬಾಲವ ಹಚ್ಚು
ಮೇಲಕೆ ಏರಿಸುವೆ||೧||
ಸೊಯ್ಯನೆ ಗಾಳಿ ಬೀಸುತಲಿ
ರೊಯ್ಯನೆ ಮೇಲೆ ಹೋಗಲಿ|
ಗೆಳೆಯರೆಲ್ಲರ ಪಟಗಳಿಗಿಂತ
ಎತ್ತರದಲ್ಲೇ ಹಾರಲಿ||೨||
ಬಾಲಂಗಸಿಗೆ ರೇಜರ್ ಕಟ್ಟಿ
ಹಾರಿಸೋ ಗೆಳೆಯರುಂಟು|
ಇತರರ ಪಟಕೆ ಡಿಚ್ಚಿ ಹೊಡೆಸಿ

ನಾನು ಹೆಣ್ಣು

ಇಂದ prabhu
ಬರೆದಿದ್ದುFebruary 6, 2019
noಅನಿಸಿಕೆ

ಅಜ್ಜಿ ನಾನು ಹೆಣ್ಣು ಅಂತ
ಅವ್ವನ್ನೇಕೆ ಬೈಯ್ತಿಯಾ?|
ನೀನೂ ಹೆಣ್ಣು ಅನ್ನೋದನ್ನ
ಮರೆತು ಬಿಟ್ಟು ಒದರ್ತೀಯ||೧||
ಅವ್ವ ನಾನು ಹೆಣ್ಣಾದೆಂತ
ಅಳುವೆ ಏಕವ್ವ|
ನಾನೇ ಗಂಡುಮಗು ಅಂತ
ತಿಳಿದು ಬಿಡವ್ವ||೨||
ಅಜ್ಜ ಅಜ್ಜಿ ಬೈತಾರಂತ
ಕಿನ್ನತೆ ಬೇಡವ್ವ|
ಅಪ್ಪ ನಿನ್ನ ಜೊತೆಗಿರುವಾಗ

ಹಬ್ಬದ ಊಟ

ಇಂದ prabhu
ಬರೆದಿದ್ದುFebruary 5, 2019
noಅನಿಸಿಕೆ

ಸಜ್ಜೆಯ ರೊಟ್ಟಿ ಪುಂಡಿಯ ಪಲ್ಯೆ
ಎಣ್ಣೆಯ ಹಾಕಿ ಕೊಡಮ್ಮ|
ಅಗಸಿ ಚಟ್ನಿ ಸ್ವಲ್ಪವೇ ಇರಲಿ
ಪಲ್ಯ ಪಚಡಿ ನೀಡಮ್ಮ||೧||
ಹೂರಣ ಹೋಳಿಗೆ ಕರ್ಚಿಕಾಯಿಗೆ
ತುಪ್ಪವ ಜಾಸ್ತಿ ಹಾಕಮ್ಮ|
ಉಪ್ಪಿನಕಾಯಿ ಹಪ್ಪಳ ಸಂಡಿಗೆ
ಭಜಿಯ ಜೊತೆಗೆ ಇರಲಮ್ಮ||೨||
ಬಳ್ಳೊಳ್ಳಿ ಮೊಸರು ಕಲಿಸಿದ ಬಾನದ
ಅನ್ನದ ಉಂಡೆಯ ನೀಡಮ್ಮ|

ನನ್ನ ಗೊಂಬೆ

ಇಂದ prabhu
ಬರೆದಿದ್ದುFebruary 4, 2019
noಅನಿಸಿಕೆ

ಅಪ್ಪಗೆ ಹೇಳುವೆ ಸುಮ್ಮನೆ ಕೂಡು
ಹಠ ಮಾಡುತ ಏಕೆ ಕಾಡಿಸುವೆ|
ಎಣ್ಣೆಯ ಹಚ್ಚಿ ತಲೆಯನು ಬಾಚಿ
ದುಬು ದುಬು ಜಳಕವ ಮಾಡಿಸುವೆ||೧||
ಟೂತ್ ಪೇಸ್ಟಲಿ ಹಲ್ಲು ಉಜ್ಜುತ
ಕೈಕಾಲುಗಳ ತಿಕ್ಕುವೆನು|
ಕಣ್ಣಲಿ ಸೋಪು ಸೇರದ ಹಾಗೆ
ಮುಚ್ಚಿಕೊ ಗಟ್ಟಿ ಕಣ್ಣನು||೨||
ಉಗುರು ಬೆಚ್ಚಗಿನ ನೀರು ಸುರಿಯುವೆ

ಮಕ್ಕಳ ಆಟ

ಇಂದ prabhu
ಬರೆದಿದ್ದುFebruary 3, 2019
noಅನಿಸಿಕೆ

ಶೆಟ್ಟರು ಮನೆಯ ಕಟ್ಟಲು ಹಾಕಿದ
ಉಸುಕಿನ ಗುಂಪೆಯಲಿ|
ಸೇರಿತು ಗೆಳೆಯರ ಗುಂಪು
ವಾರದ ರಜೆಯಲ್ಲಿ||೧||
ಕಾಲನು ಇಟ್ಟು ಪಟ ಪಟ ಬಡಿದು
ಮನೆಯನು ಕಟ್ಟಿದರು|
ಹನುಮ ಶಾರಿ ಅಪ್ಪ ಅಮ್ಮರು ಆಗಿ
ಆಟವ ಆಡಿದರು||೨||
ಸಿದ್ದು ರೋಜಿ ಕಾಶಿ ಪಾತು
ನೆರೆಮನೆ ಕುಟುಂಬವು|
ಏನೇ ಅಡುಗೆ ಮಾಡಲಿ ಮನೆಯಲಿ

ರಜೆ

ಇಂದ prabhu
ಬರೆದಿದ್ದುFebruary 2, 2019
noಅನಿಸಿಕೆ

ಶಾಲೆಗೆ ನಾಳೆ ರಜೆ ಇದೆಯಮ್ಮ
ಅಲಾರಾಮ್ ಇಡಬೇಡ|
ಹುಂಜವು ಕೂಗದ ಹಾಗೆ ಹೇಳು
ಮಲಗುವೆ ಹೆಚ್ಚು ಹೊತ್ತಮ್ಮ||೧||
ವಾರದ ಆರು ದಿನಗಳು ನನಗೆ
ರೆಸ್ಟೇ ಇಲ್ಲ ಕಣಮ್ಮ|
ಶಾಲೆ ಓದು ಬರಹ ಇಷ್ಟೇ
ಪರೀಕ್ಷೆ ಬಂತು ನೋಡಮ್ಮ||೨||
ನೆಗಡಿ ಕೆಮ್ಮು ಜ್ವರಗಿರ ಬರದ
ಹಾಗೆ ಎಚ್ಚರ ಬೇಕಮ್ಮ|

ನೈವೇದ್ಯ

ಇಂದ prabhu
ಬರೆದಿದ್ದುFebruary 1, 2019
noಅನಿಸಿಕೆ

ಹಲ್ಲು ಬಿದ್ದರೆ ಏನಾಯ್ತಮ್ಮ
ನನಗೆ ಊಟಕೆ ಕೊಡಮ್ಮ|
ದೇವರ ಪೂಜೆ ಆಗೋವರೆಗೂ
ತಾಳೆನು ಹಸಿವು ನಾನಮ್ಮ||೧||
ಹಪ್ಪಳ ಸಂಡಿಗೆ ಉಪ್ಪಿನ ಕಾಯಿ
ಹುಗ್ಗಿ ಹೋಳಿಗೆ ಮಾಡುವೆ|
ಹಬ್ಬ ಹುಣ್ಣಿಮೆ ಅಮವಾಸ್ಯೆಯಲಿ
ನೈವೇದ್ಯ ದೇವರಿಗೆ ಕೊಡುವೆ||೨||
ಅಮ್ಮ ನನಗೆ ಕೊಡು ಎಂದರೆ
ಎಂಜಲು ಎಂದೆ ಹೇಳುವೆ|