Skip to main content

ಕವನ

ಸಂಚಾರ

ಇಂದ prabhu
ಬರೆದಿದ್ದುMarch 6, 2019
noಅನಿಸಿಕೆ

ಹಳಿಗಳ ಮೇಲೆ ಚುಕುಬುಕು ಎಂದು
ಓಡುವ ರೈಲು ನೋಡಮ್ಮ|
ಊರಿ
ಊರಿಂದೂರಿಗೆ ಜನರನು ಹೊತ್ತು
ಓಡುವ ಗಾಡಿಯು ಚಂದಮ್ಮ||೧||
ಪೌಂವ್ ಪೌಂವ್ ಎಂದು ರಸ್ತೆಯ ಮೇಲೆ
ಓಡುವ ಬಸ್ಸು ನೋಡಮ್ಮ|
ಕಂಡಕ್ಟರನು ಸೀಟಿಯ ಹೊಡೆಯಲು
ಬಿಡುವನು ಡ್ರೈವರ್ ಬಸ್ಸಮ್ಮ||೨||
ಟಾಂಗಾ ರಿಕ್ಷಾ ಕಾರು ಟ್ಯಾಕ್ಷಿ

ಅರಿವು

ಇಂದ prabhu
ಬರೆದಿದ್ದುMarch 5, 2019
noಅನಿಸಿಕೆ

ಜ್ಞಾನ ವಿಜ್ಞಾನದಿಂದ
ಅಜ್ಞಾನವ ಕಳೆಯುವಾ|
ಸುಜ್ಞಾನದ ಜ್ಯೋತಿ ಹಚ್ಚಲು
ಅಕ್ಷರವ ಕಲಿಯುವಾ||೧||
ಅನಕ್ಷರತೆ ಅಜ್ಞಾನಕೆ
ಮೆಟ್ಟಲೆಂದು ತಿಳಿ|
ಹೆಬ್ಬೆಟ್ಟು ಬಿಟ್ಟು ನೀ
ಶಾಲೆಯನು ಕಲಿ||೨||
ಸಿರಿ ಸಂಪತ್ತು ಆಸ್ತಿಗೆ
ಕಳ್ಳರ ಭಯ ಯಾವತ್ತೂ|
ವಿದ್ಯೆ ಕಲಿತ ಜಾಣಗೆ

ಚಿಲಿಪಿಲಿ

ಇಂದ prabhu
ಬರೆದಿದ್ದುMarch 1, 2019
noಅನಿಸಿಕೆ

ಹಕ್ಕಿಯ ಚಿಲಿಪಿಲಿ ಕೇಳುತಲಿದ್ದರೆ
ಜಗವೇ ಮರೆಯುವದು|
ಕುಣಿಯುವ ನವಿಲನು ನೋಡುತಲಿದ್ದರೆ
ಮೈಮನ ಪುಳಕಿತವು||೧||
ಅರಳುವ ಹೂಗಳು ಬೀರುವ ಪರಿಮಳ
ಘಮ್ಮನೆ ಹೊಮ್ಮುವದು|
ಮಧುವನು ಹೀರಲು ಸುತ್ತುವ ದುಂಬಿಯ
ಆಟವೆ ಮೋಹಕವು||೨||
ಸುರಿಯುವ ಜೋಗದ ಧಾರೆಯ ನೀರು
ಕಣ್ಮನ ಸೆಳೆಯುವದು|

ಬೇಸಿಗೆ

ಇಂದ prabhu
ಬರೆದಿದ್ದುFebruary 28, 2019
noಅನಿಸಿಕೆ

ಅಮ್ಮ ಅಮ್ಮ ಪಾತ್ರೆಯ ಕೊಡು
ನೀರನು ಹಾಕಿ ಮನೆ ಮೇಲಿಡುವೆ|
ಬೇಸಿಗೆ ಬ್ಂತು ಪಕ್ಷಿಗಳಿಗೆ
ಕುಡಿಯಲು ನೀರು ಬೇಕಲ್ಲವೇ?||೧||
ಸುಡುವ ಬಿಸಿಲಿನ ಧಗೆಯು ಹೆಚ್ಚಿದೆ
ನೀರು ಇಲ್ಲ ಎಲ್ಲ ಕಡೆ|
ನದಿ ಕೆರೆ ಹಳ್ಳ ಕೊಳ್ಳ
ಬತ್ತಿ ಬರಿದಾಗಿವೆ ಒಳಗಡೆ||೨||
ಮನುಜರೆ ದಾಹದಿ ಬಳಲುವಾಗ
ಪಕ್ಷಿ ಸಂಕುಲ ಪಾಡೇನು?|

ಇರುವೆ

ಇಂದ prabhu
ಬರೆದಿದ್ದುFebruary 27, 2019
noಅನಿಸಿಕೆ

ಇರುವೆ ಇರುವೆ ಎಲ್ಲೆಲ್ಲೂ ಇರುವೆ
ಸರ ಸರ ಎಲ್ಲಿಗೆ ಹೊರಟಿರುವೆ?|
ಸರತಿಯ ಸಾಲಲಿ ಸಾಗುತ ನೀ
ಶಿಸ್ತಿನ ಸಿಪಾಯಿ ಆಗಿರುವೆ||೧||
ನೆಲ ಗೋಡೆ ಗಿಡ ಬಳ್ಳಿಗಳ
ಎಲ್ಲೆಂದರಲ್ಲಿ ನೀ ಇರುವೆ|
ಸಿಹಿ ಸಿಹಿ ರುಚಿಗೆ ಮುತ್ತಿಗೆ ಹಾಕಿ
ಸವಿಯನೆ ಮೆಲ್ಲುತ ಇರುವೆ||೨||
ಶೇಂಗಾ ಪುಟಾಣಿ ಖೊಬ್ರಿಗಳೆಲ್ಲ

ಸೂರ್ಯ

ಇಂದ prabhu
ಬರೆದಿದ್ದುFebruary 26, 2019
noಅನಿಸಿಕೆ

ಯಾಕಣ್ಣ ಸೂರ್ಯ ಬೇಸಿಗೆ ಮೊದಲೆ
ಹೀಗೆ ಉರಿಯೋದು ?|
ಬೆಳಗಿನ ವೇಳೆಯೇ ಸುಡುತ ಬಂದ್ರೆ
ಹೇಗೆ ಬದುಕೋದು? ||೧||
ಕುಳಿತರೂ ನಿಂತರೂ ಸಮಾಧಾನವಿಲ್ಲ
ಜೀವಕೆ ಚಡಪಡಿಕೆಯೆಲ್ಲ|
ನೀರನು ಕುಡಿದರೂ ನೆಮ್ಮದಿಯಿಲ್ಲ
ಬಾಯರಿಕೆ ನೀಗುತ್ತಿಲ್ಲ||೨||
ಹಸಿವು ಹತ್ತಿರ ಸುಳಿಯುತ್ತಿಲ್ಲ
ತಂಪು ಪಾನೀಯ ಬೇಕಲ್ಲ|

ರೈತನಾಗುವೆ

ಇಂದ prabhu
ಬರೆದಿದ್ದುFebruary 25, 2019
noಅನಿಸಿಕೆ

ಅಪ್ಪ ನಾನು ಹೊಲಕೆ ಹೋಗುವೆ
ಬಂಡಿಗೆ ಎತ್ತನು ಕಟ್ಟಿಕೊಡು|
ನೇಗಿಲು ಹೊಡೆದು ಹೊಲವನು ಉಳುವ
ಕೆಲಸವ ನನಗೆ ಕಲಿಸಿಕೊಡು||೧||
ಬೆಳ್ಳನೆ ಜೋಡೆತ್ತಿಗೆ
ಕೊಂಬಣಸನು ಹಾಕಿ ಬಿಡು|
ಡಂಬರಗಿಗೆ ಹಗ್ಗವ ಸುತ್ತಿ
ಬಾರಕೋಲನು ಹೆಗಲಿಗಿಡು||೨||
ಹಗಲು ಇರಳು ನೀರನು ಹಾಯಿಸಿ
ಬೆಳೆಯನು ಜೋಪಾನ ಮಾಡುವೆನು|

ಚುಕ್ಕಿ

ಇಂದ prabhu
ಬರೆದಿದ್ದುFebruary 24, 2019
noಅನಿಸಿಕೆ

ಚುಕ್ಕಿ ಚುಕ್ಕಿ ಮಿನಗು ಚುಕ್ಕಿ
ಬಾನಿನ ತುಂಬಾ ಹೊಳೆಯುವ ಚುಕ್ಕಿ|
ಹಕ್ಕಿ ಪಿಕ್ಕಿ ರೆಕ್ಕೆ ಬಿಚ್ಚಿ
ಹಾರುವ ಗಗನಕೆ ಸೇರಲು ಚುಕ್ಕಿ||೧||
ಬಣ್ಣದ ಚಿಟ್ಟೆ ಹಾರುವ ತಟ್ಟೆ
ದೇವರೆ ಬರೆದನು ರೆಕ್ಕೆಗೆ ಪಟ್ಟೆ|
ನಡೆಯೆ ಉಟ್ಟು ನವಿಲು ದಟ್ಟೆ
ನೀಲಿಯ ಲೋಕಕೆ ಕಳೆಯನು ಕಟ್ಟೆ||೨||

ಸ್ಟ್ರೈಕ್

ಇಂದ prabhu
ಬರೆದಿದ್ದುFebruary 23, 2019
noಅನಿಸಿಕೆ

ಗುರುಗಳು ಹೊಡೆದ ತಪ್ಪಿಗಾಗಿ
ಮಾಡಿದರ್ಹುಡಗರು ಸ್ಟ್ರೈಕ್|
ಕಲ್ಲು-ಇಟ್ಟಿಗೆ ಮಣ್ಣನು ತೂರಿ
ಒಡೆದರು ಎಲ್ಲ ಕಾಜು ಕಪಾಟು||೧||
ಅಣ್ಣನು ಕೊಡದಿಹ ಪೆನ್ನಿಗಾಗಿ
ತಂಗಿ ಮಾಡಿದಳು ಸ್ಟ್ರೈಕ್|
ಇಂಕನು ಚೆಲ್ಲಿ ಪುಸ್ತಕ ಹರಿದು
ಮಾಡಿದಳು ರಂಪಾಟು||೨||
ಅಪ್ಪನು ಸೀರೆಯ ತರದ ತಪ್ಪಿಗೆ

ತಾಯಿ ದೇವರು

ಇಂದ prabhu
ಬರೆದಿದ್ದುFebruary 22, 2019
noಅನಿಸಿಕೆ

ಅಮ್ಮ ನಿನ್ನ ಕಂದ ನಾನು
ಎಂಬ ಹೆಮ್ಮೆ ನನಗಿದೆ|
ಸ್ವಾಭಿಮಾನದಿಂದ ಬೆಳೆಸಿ
ಧೈರ್ಯ ಮನದಿ ತುಂಬಿದೆ ||೧||
ಶಿವ ಅಲ್ಲಾ ಏಸು ಎಲ್ಲ
ಬುದ್ದ ಬಸವರು ಒಂದೇ|
ಸತ್ಯ ಅಹಿಂಸೆ ಶಾಂತಿ ಮಂತ್ರ
ಉಸುರಿ ಉಸುರು ತಂದೆ ||೨||
ಜಾತಿಬೇಧ ಎಣಿಸದಂತೆ
ಸರ್ವರೊಳಗೆ ಬೆರೆಸಿದೆ|
ಹಗಲು-ಇರುಳು ತಿದ್ದಿ ತೀಡಿ