Skip to main content

ಶಿವಕುಮಾರ ಕೆ. ಎಸ್.

ಸದಸ್ಯರು

11 ವರ್ಷಗಳು
ಮೊದಲ ಹೆಸರು

ಶಿವಕುಮಾರ

ಕೊನೆಯ ಹೆಸರು

ಶೇಷಪ್ಪ ಕುಂದೂರು

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಪಿಸುಮಾತಿನ ಹೆಸರು

ನನ್ನ ತಲೆ'ಹರಟೆ'ಗಳು

ಹವ್ಯಾಸಗಳು

ಚಿತ್ರಕಲೆ, ಸ್ಕೆಚಿಂಗ್, ಬರೆಯುವುದು, ಸಂಗೀತ ಕೇಳುವುದು, ಓದುವುದು(ಬಹಳಷ್ಟು), ಪಿಚ್ಚರ್ ನೋಡುವುದು,ತಿರುಗಾಟ, ಪ್ರಯಾಣ, ಚಾರಣ, ಸಾಹಸಯಾತ್ರೆಗಳು, ಅಲ್ಪ ಸ್ವಲ್ಪ ಹಾಡುವುದು, ಸ್ವಲ್ಪ ಗಿಟಾರು, ಸ್ನೇಹಿತರೊಂದಿಗೆ ಓತ್ಲಾ

ಸಿನಿಮಾಗಳು

ನಾನೊಬ್ಬ ದೊಡ್ಡ ಸಿನೆಮಾ ಹುಚ್ಚ. ಕನ್ನಡ, ಇಂಗ್ಲೀಷು, ಹಿಂದಿ, ಚೆಂದ ಅನ್ನಿಸೊ, ತುಂಬಾ ಕೇಳಿರೋ ಬೇರೆ ಭಾಷೆಯ ಚಿತ್ರಗಳೆಲ್ಲ ನನಗಿಷ್ಟ. ಪುಟ್ಟಣ್ಣ ಕಣಗಾಲ್, ಗಿರೀಶ್ ಕಾಸರವಳ್ಳಿ, ಮಣಿರತ್ನಂ, ಮಹೇಶ್ ಭಟ್, ಅಕಿರೋ ಕುರೋಸಾವ, ಸ್ಟೀವನ್ ಸ್ಪಿಲ್ಬರ್ಗ್ ಮಾಡಿರೋ ಎಲ್ಲ ಚಿತ್ರಗಳೂ ಇಷ್ಟ. ಡಾ.ರಾಜಕುಮಾರ್, ಅಮಿತಾಬ್, ಅಮೀರ್ ಖಾನ್, ಟಾಮ್ ಹ್ಯಾಂಕ್ಸ್, ಆಂಟನಿ ಹಾಪ್ಕಿನ್ಸ್, ನಿಕೋಲಸ್ ಕೇಜ್, ಮೆಗ್ ರಯನ್, ನಿಕೋಲೆ ಕಿಡ್ಮನ್, ಜಾಕಿ ಚಾನ್ ನನಗಿಷ್ಟವಾದ ಚಲನಚಿತ್ರ ತಾರೆಗಳು.

ಸಂಗೀತ

ಎಲ್ಲ ತರಹದ ಸಂಗೀತ ಇಷ್ಟ. ನನಗೆ ಕರ್ಣಾನಂದಕರ ಅನ್ನಿಸೋ ಭಾವಗೀತೆಗಳು; ಕನ್ನಡ, ಹಿಂದಿ ಚಲನಚಿತ್ರಗೀತೆಗಳು; ಶಾಸ್ತ್ರೀಯ ಸಂಗೀತ; ಎಲ್ಲ ತರಹದ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ವಾದ್ಯ ಸಂಗೀತ (ಇನ್ಸ್ಟ್ರುಮೆಂಟಲ್ಸ್); ನನಗರ್ಥವಾಗುವಂತಹ ಇಂಗ್ಲೀಷ್ ಹಾಡುಗಳು, ಪಾಪ್, ರಾಕ್, ಮೆಟಲ್ ಎಲ್ಲವೂ ಇಷ್ಟವೇ!

ಟಿವಿ

ಸ್ಟಾರ್ ಒನ್, ಸ್ಟಾರ್ ಮೂವಿಸ್, ಎಚ್.ಬಿ.ಓ., ಎ.ಎಕ್ಸ್. ಎನ್., ಟ್ರಾವೆಲ್ ಅಂಡ್ ಲಿವಿಂಗ್, ನ್ಯಾಷನಲ್ ಜಿಯಾಗ್ರಾಫಿಕ್ಸ್, ಡಿಸ್ನಿ, ಎಲ್ಲ ಮ್ಯೂಸಿಕ್ ಚಾನೆಲ್-ಗಳು.

ಆಟಗಳು

ಇದೂವರೆಗೂ ಯಾವ ಆಟವನ್ನೂ ಆಡಿಲ್ಲ ನಾನು.

ಅಡಿಗೆ

ಮನುಷ್ಯಮಾತ್ರರು ತಿನ್ನತಕ್ಕಂತಹದು ಏನಿದ್ದರೂ ನಡೆದೀತು. (ಶಾಖಾಹಾರವಾಗಿದ್ದರೆ ಚೆನ್ನ)

ಪುಸ್ತಕಗಳು

ದೊಡ್ಡ ಪುಸ್ತಕದ ಹುಳು. ಉಪಯೋಗವಾಗುವಂತಹ ಯಾವುದೇ ಪುಸ್ತಕ ಓದೋಕೆ ನಂಗೆ ಆಗಲ್ಲ. ಮ್ಯಾನೇಜ್ ಮೆಂಟ್, ಸ್ವಸಹಾಯ (ಸೆಲ್ಫ್-ಹೆಲ್ಪ್) ಪುಸ್ತಕಗಳಂದ್ರೆ ಕೆಟ್ಟ ಕೋಪ. ಅಲ್ಪಸ್ವಲ್ಪ ವಿಜ್ಞಾನ, ಚರಿತ್ರೆ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನ ಓದೋಕೆ ಅಡ್ಡಿ ಇಲ್ಲ. ಆದ್ರೆ ನನಗೆ ಇವೆಲ್ಲಕ್ಕಿಂತ ಇಷ್ಟ ಅಂದ್ರೆ ಕತೆ, ಕಾದಂಬರಿ, ಕವನಗಳನ್ನ ಓದೋದು. ಪೂಚಂತೇ, ಕುವೆಂಪು, ಕಾರಂತ, ಕೆ. ಎಸ್. ನರಸಿಂಹಸ್ವಾಮಿ, ಎಸ್. ಎಲ್. ಭೈರಪ್ಪ, ಗೊರೂರು, ಜಯಂತ ಕಾಯ್ಕಿಣಿ, ಶ್ರೀ ಕೃಷ್ಣ ಆಲನಹಳ್ಳಿ, ರವಿ ಬೆಳಗೆರೆ, ಇಂಗ್ಲೀಷಿನ ಓ. ಹೆನ್ರಿ, ಸಾಮರ್-ಸೆಟ್ ಮಾಮ್, ಎಡ್ಗರ್ ಅಲನ್ ಪೊಯ್, ಡೀನ್ ಕೂಂಟ್ಸ್, ಅಗಾತ ಕ್ರಿಸ್ಟಿ, ಗ.ಡ. ಮಾಪಸಂಟ್, ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್, ಕಾಫ್ಕ, ವಿಲಿಯಂ ಪೀಟರ್ ಬ್ಲಾಟಿ, ಅರ್ನೆಸ್ಟ್ ಹೆಮ್ಮಿಂಗ್ವೆ ಎಲ್ಲ್ರೂ ಇಷ್ಟ.