Skip to main content

ಬಾ! ಬಾ! ಬ್ಲಾಕ್ ಮನಿ............

ಬರೆದಿದ್ದುJune 6, 2011
11ಅನಿಸಿಕೆಗಳು

ನಗುವುದೋ ಅಳುವುದೋ ನೀವೇ ಹೇಳಿ....ಎನ್ನುವ ಅಣ್ಣಾವ್ರ ಸಂಪತ್ತಿಗೆ ಸವಾಲ್ ಗೀತೆ ನಿನ್ನೆಯಿಂದ ಬೇಡ ಬೇಡವೆಂದರೂ ನಾಲಿಗೆಯ ತುದಿಯಲ್ಲಿ ಗುನುಗುವಂತಾಗುತ್ತಿದೆ. ಭಾನುವಾರ ನಸುಕಿನಲ್ಲಿ ನಡೆದ ಯು ಪಿ ಎ ಸರ್ಕಾರ ಮತ್ತು ಬಾಬಾ ರಾಮದೇವ್ ರವರ ನಡುವಿನ ಜಟಾಪಟಿ. ಬಾಬಾರ ನಿರಶನವನ್ನು ಪ್ರಹಸನವನ್ನಾಗಿ ಪರಿವರ್ತಿಸಿ ಯು.ಪಿ.ಎ ಯ ಕಪಿಗಳು ಸಿಂಗಲೀಕಗಳು ಅಲ್ಲಲ್ಲ ಕಪಿಲ್(ಸಿಬಲ್) ಮತ್ತು ಸಿಂಗ್(ದಿಗ್ವಿಜಯ್) ಗಳು ರಾತ್ರೋರಾತ್ರಿ ’ಹೊಸ ಹೀರೋ’ ಒಬ್ಬನನ್ನು ಪ್ರಪಂಚಕ್ಕೆ ನೀಡಿದ (ಕು)ಖ್ಯಾತಿಗೆ ಒಳಗಾಗಿದ್ದಾರೆ. ಇಬರಿಬ್ಬರ ಜಟಾಪಟಿಗೆ ಕಾರಣ ಬ್ಲಾಕ್ ಮನಿ ಅರ್ಥಾತ್ ಕಪ್ಪು ಹಣ. ವಿದೇಶಗಳಲ್ಲಿನ ಕಪ್ಪು ಹಣ ವನ್ನು ವಾಪಸ್ ತರಬೇಕೆಂದು ಬಾಬಾ ನಿರಶನಗೊಂಡರೆ, ಹಜಾರೆಯವರಿಂದ ಹೈರಾಣಾಗಿದ್ದ ಕೇಂದ್ರ ಸರ್ಕಾರ ಬಾಬಾರವರೇ ಕಪ್ಪು ಹಣದ ಸರದಾರನೆನ್ನುವಂತೆ ಬಿಂಬಿಸುತ್ತಿದೆ.ಅಸಲಿಗೆ ಇದೆಲ್ಲಾ ಶುರುವಾಗಿದ್ದು ಬಾಬಾ ರಾಮದೇವ್ ಕಪ್ಪು ಹಣವಾಪಸ್ ತರಬೇಕೆಂದು ಜೂನ್ ನಾಲ್ಕರಂದು ಉಪವಾಸ್ ನಿರಶನ ಆರಂಭಿಸುತ್ತೇನೆ ಎಂಬ ಘೋಷಣೆಯೊಂದಿಗೆ. ಅಣ್ಣಾ ಹಜಾರೆಯವರ ಉಪವಾಸದಿಂದ ಸೊರಗಿ ಸುಸ್ತಾಗಿದ್ದ ಕೇಂದ್ರ ಸರ್ಕಾರಕ್ಕೆ ರಾಮದೇವರ ನಿರ್ಧಾರದಿಂದ ವಿಧಿಯಿಲ್ಲದೆ ’ರಾಮನಾಮ’ ಇದೇ ಪ್ರಥಮ ಬಾರಿಗೆ ಜಪಿಸುವಂತಾಯ್ತು. ವಿಚಲಿತಗೊಂಡ ಸೋನಿಯಾ ರಾಮದೇವರ ಹಿಂದೆ ಕಪಿ(ಲ್) ಸೈನ್ಯವನ್ನು ಛೂ!! ಬಿಟ್ಟಿತು. ಐದು ದಿನ ಬಾಬಾರ ಯೋಗಾಸನದ ಮುಂದೆ ಮಂತ್ರಿಗಳ ’ದೀರ್ಘದಂಡಾಸನ’ವೆಲ್ಲಾ ದಂಡವಾಗಿ ಫಲವೇನೂ ಸಿಗಲಿಲ್ಲ. ’ಕುಳಿತು ಹಾಳಾಗಿ ಹೋಗಲಿ’ ಎಂದು ಸುಮ್ಮನಾಯ್ತು. ನಿರಶನವೂ ಪ್ರಾರಂಭವಾಯ್ತು. ಅದಕ್ಕೆ ಹರಿದು ಬರುತ್ತಿದ್ದ ಜನಸಾಗರ ನೋಡಿ ಕೇಂದ್ರಕ್ಕೆ ಮತ್ತಷ್ಟು ದಿಗಿಲಾಯ್ತು. ಸಂಧಾನದ ಗೊಂದಲಗಳು ಪ್ರಾರಂಭವಾಗಿ ಎಲ್ಲವೂ ಸಂಜೆಯ ವೇಳೆಗೆ ’ಸುಖಾಂತ್ಯ’ ಎನ್ನುವಷ್ಟರಲ್ಲಿ ಎಂಟ್ರಿಕೊಟ್ಟರು ನೋಡಿ ’ಸಾಧ್ವಿ ರಿತುಂಬರಾದೇವಿ’!!!! ದಿಗ್ವಿಜಯ್ ದಿಕ್ಕೆಂಟ್ಟಂತೆ ಮಾತನಾಡಲು ಶುರುಮಾಡಿದ್ದೇ ಆವಾಗ!!!!’ರಾಮದೇವ್ ಮೋಸಗಾರ!! ಜನರ ದಿಕ್ಕು ತಪ್ಪಿಸುತ್ತಿದ್ದಾರೆ! ಅವರೇ ಕಪ್ಪುಹಣದ ಸರದಾರರು!! ಅವರಿಗೆ ನಿರಶನ ಕೂರುವ ನೈತಿಕತೆ ಇಲ್ಲ!! ...ಇತ್ಯಾದಿ..ಇತ್ಯಾದಿ.... ಆದರೆ ಕೇಂದ್ರ ಮತ್ತಷ್ಟು ತಲೆಕೆಡಿಸಿಕೊಂಡಿದ್ದು ’ಆರ್. ಎಸ್ ಎಸ್’ನ ಮುಖಂಡರು ವೇದಿಕೆ ಹಂಚಿಕೊಂಡಾಗ!!! ತಡೆದುಕೊಳ್ಳದ ಸರ್ಕಾರ ಮಧ್ಯರಾತ್ರಿ ಮಹಿಳೆಯರು, ಮಕ್ಕಳು ಒಳಗೊಂಡು ಸತ್ಯಾಗ್ರಹಿಗಳು ಸವಿನಿದ್ದೆಯಲ್ಲಿದ್ದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಕಪ್ಪು ಹಣ ವಾಪಸ್ ತರಬೇಕು, ಕಳ್ಳ ದಾರಿಯಲ್ಲಿ ಹಣ ಮಾಡಿರುವ ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಈ ಕುರಿತ ಪ್ರಕರಣಗಳ ವಿಚಾರಣೆಗೆ `ಫಾಸ್ಟ್ ಟ್ರ್ಯಾಕ್~ ಕೋರ್ಟ್‌ಗಳನ್ನು ಸ್ಥಾಪಿಸಬೇಕು ಎಂದು ಶನಿವಾರ ಬೆಳಗಿನ ಜಾವದಿಂದ ಆಮರಣ ಉಪವಾಸ ಕೈಗೊಂಡಿದ್ದ ಬಾಬಾ ಮತ್ತು ಅವರ ಶಿಷ್ಯರನ್ನು ರಾಮಲೀಲಾ ಮೈದಾನದಿಂದ ಖಾಲಿ ಮಾಡಿಸಲು ಪೊಲೀಸರು ಸರ್ಕಾರದ ನಿರ್ದೇಶನದಂತೆ ಈ ಕ್ರಮ ಕೈಗೊಂಡರು. ಭಾನುವಾರ ಬೆಳಗಿನ ಜಾವ ಸತ್ಯಾಗ್ರಹಿಗಳ ಪಾಲಿಗೆ ಕರಾಳ ರಾತ್ರಿಯಾಯಿತು. ಇದೆಲ್ಲವನ್ನೂ ಪ್ರಪಂಚದಾದ್ಯಂತ ಜನರು ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ. ಇಡೀ ಪ್ರಕರಣವನ್ನು ಒಟ್ಟಾರೆಯಾಗೆ ನೋಡಿದಾಗ ಬಾಬಾರಿಗಿಂತ ಸರ್ಕಾರದ ನಡೆಯ ಮೇಲೆ ಹೆಚ್ಚು ಸಂಶಯವಾಗುವುದು ಹತ್ತು ಹಲವು ಉತ್ತರಸಿಗದ ಪ್ರಶ್ನೆಗಳು ಕಾಡುವುದೂ ಸ್ಪಷ್ಟ.ಮೊದಲಿಗೆ ’ಬಾಬಾರವರಿಗೆ ಒಂದು ದಿನಕ್ಕೆ ಯೋಗ ಶಿಬಿರಕ್ಕೆ ಮಾತ್ರ ಅನುಮತಿಸಲಾಗಿತ್ತು’ ಎಂದು ಸರ್ಕಾರ ಹೇಳುವುದು ನಿಜವಾಗಿದ್ದಲ್ಲಿ ಬಾಬಾರವರ ಹಿಂದೆ ಐದು ದಿನಗಳಿಂದ ಅಲೆದದ್ದೇಕೆ? ಅವರೊಡನೆ ಸತ್ಯಾಗ್ರಹ ಕೈಬಿಡಲು ದಂಬಾಲು ಬಿದ್ದದ್ದೇಕೆ? ಹಾಗೆ ಯೋಗ ಶಿಬಿರಕ್ಕೆ ಮಾತ್ರ ಅನುಮತಿಸಿದ್ದಲ್ಲಿ ಅದರ ಪ್ರತಿಯನ್ನೇಕೆ ಮಾಧ್ಯಮಗಳ ಮೂಲಕ ಜನರಮುಂದೆ ಇಡಲಿಲ್ಲ? ಅಕಸ್ಮಾತ್ ಹಾಗೆ ಅನುಮತಿ ನೀಡಿದ್ದಲ್ಲಿ ಹಗಲುಹೊತ್ತೇಕೆ ರಾಮಲೀಲಾ ಮೈದಾನವನ್ನು ತೆರವುಗೊಳಿಸಲಿಲ್ಲ? ನಟ್ಟನಡುರಾತ್ರಿ ನಿದ್ರಿಸುತ್ತಿರುವವರ ಮೇಲೆ ಕೈಮಾಡಿದ್ದು ತಪ್ಪಲ್ಲವೇ?ಎರಡನೆಯದು ’ಬಾಬಾರವರ ಸಮಾರಂಬಕ್ಕೆ ಹಣ ಹೇಗೆ ಬಂತು? ಅದು ಕಪ್ಪು ಹಣವಲ್ಲವೇ?’ ಎನ್ನುವುದು ಸರ್ಕಾರದ ವಾದ. ಇದು ಅತಿ ಮುಖ್ಯವಾದ ಪ್ರಶ್ನೆ ಇದು ನಿಜವೆನಿಸಿದಲ್ಲಿ ಅದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸಾರ್ವಜನಿಕರ ಮುಂದೆ ದಾಖಲೆ ಸಮೇತ ಇಡುವುದು ಬಿಟ್ಟು ಮಾಧ್ಯಮದ ಮುಂದೆ ಒಣ ಹೇಳಿಕೆಗಳನ್ನು ನೀಡುವುದೇಕೆ? ಕೇಂದ್ರ ಸರ್ಕಾರದ ಬಳಿ ಸಧ್ಯ ದಾಖಲೆಗಳಿಲ್ಲ ಎನ್ನುವುದಾದರೆ ಸುಮ್ಮನೆ ಅದರ ಬಗ್ಗೆ ಮಾತನಾಡುವುದೇಕೆ? ಅಥವಾ ಕೇಂದ್ರದ ಗುಪ್ತಚರ ಇಲಾಖೆಯೇನು ಕಡ್ಲೇಪುರಿ ತಿನ್ನುತ್ತಿದೆಯೇ? ಅದರ ಸಹಾಯವನ್ನೇಕೆ ತೆಗೆದುಕೊಳ್ಳಲಿಲ್ಲಈ ರೀತಿಯ ಕೇಂದ್ರದ (ದುರ್)ವರ್ತೆನೆಗೆ ವಿದೇಶಗಳಲ್ಲಿ ಅತಿ ಹೆಚ್ಚು ಕಪ್ಪು ಹಣ ಇಟ್ಟಿರುವವರ ಪಟ್ಟಿಯಲ್ಲಿ ಯು.ಪಿ.ಎ ಸರ್ಕಾರದವರದ್ದು ಸಿಂಹಪಾಲು!! ಅವರನ್ನು ರಕ್ಷಿಸುವ ಗುರುತರ ಹೊಣೆ ಅವರದ್ದೇ ಆಗಿದೆ. ವಿಪರ್ಯಾಸವೆಂದರೆ ಹಗರಣಗಳಲ್ಲಿ ಮುಳುಗೇಳುತ್ತಿರುವ ಕೇಂದ್ರ ಸರ್ಕಾರವನ್ನು ಯೋಗ ಕಲಿಸುವ ಗುರು, ಔಷಧಿ ಮಾರುವ ವ್ಯಾಪಾರಿಯೊಬ್ಬರು ಹೆದರಿಸುವಂತಾಗಿದೆ. ’ಇದಕ್ಕೆ ಹೇಳುವುದು ಸ್ವಯಂಕೃತಾಪರಾಧ’ ಅಂತಹಾಗೆಂದ ಮಾತ್ರಕ್ಕೆ ಬಾಬಾರವರನ್ನು ಸಾಚ ವ್ಯಕ್ತಿ ಎಂದೇನು ಸಮರ್ಥಿಸಿಕೊಳ್ಳುತ್ತಿಲ್ಲ. ಅವರ ಮೇಲೂ ಸಾಕಷ್ಟು ಗುರುತರ ಆಪಾದನೆಗಳಿವೆ. ಅದರಲ್ಲೂ ದೃಶ್ಯಮಾಧ್ಯಮಗಳಲ್ಲಿ ಕ್ಷಣ ಕ್ಷಣಕ್ಕೂ ಚಿತ್ರ ವಿಚಿತ್ರ ಬಣ್ಣದ ಸುದ್ದಿಯಾಗುತ್ತಿದ್ದಾರೆ. ಅವುಗಳಲ್ಲಿ ಕೆಲ ಪ್ರಶ್ನೆಗಳು ಸಹಜವೆನಿಸುತ್ತವೆ. ಭ್ರಷ್ಟಾಚಾರ ವಿರೋಧಿಸುವುದು ಈಗೀಗ ಒಂದು ಫ್ಯಾಷನ್. ಭ್ರಷ್ಟಾಚಾರ ವಿರೋಧಿ ಹೋರಾಟಗಳನ್ನು ಬೆಂಬಲಿಸುವವರ ಪೈಕಿ ಸಾಕಷ್ಟು ಮಂದಿಗೆ ತಮ್ಮ ಕಳಂಕಗಳನ್ನು ತೊಳೆದುಕೊಳ್ಳುವ ಆತುರ. ಅಣ್ಣಾ ಹಜಾರೆ ಹೋರಾಟಕ್ಕೆ ವ್ಯಕ್ತವಾದ ಸಾರ್ವತ್ರಿಕ ಬೆಂಬಲವನ್ನು ಗಮನಿಸಿದ ಮೇಲೆ ಇಂಥದ್ದೇ ಬೆಂಬಲದ ನಿರೀಕ್ಷೆಯಲ್ಲಿ ರಾಮದೇವ ಉಪವಾಸಕ್ಕೆ ಕೂರುತ್ತಿದ್ದಾರೆ. ಅಲ್ಲದೆ ಸರ್ಕಾರದ ಹೇಳಿಕೆಗಳು ಸಧ್ಯದ ಪರಿಸ್ಥಿತಿಯಿಂದ ಬಚಾವಾಗಲು ನೀಡುತ್ತಿರುವ ದಾರಿ ತಪ್ಪಿಸುವ ಹೇಳಿಕೆಗಳೆಂಬುದು ಸ್ಪಷ್ಟ. ಅದೇನೇ ಆಗಲಿ ಅವರು ತಪ್ಪು ಮಾಡಿದ್ದೇ ಆದಲ್ಲಿ ಅವರಿಗೂ ಶಿಕ್ಷೆಯಾಗಲೇ ಬೇಕು ಅವರೇನು ದೇವಲೋಕದಿಂದ ಇಳಿದು ಬಂದವರೇನಲ್ಲ. ಈ ನೆಲದ ಕಾನೂನುಗೆ ಯಾರೂ ಅತೀತರಲ್ಲ. ಸಂಸ್ಕೃತಿಯನ್ನೇ ಬಂಡವಾಳವಾಗಿಸಿಕೊಂಡು ಜನರನ್ನು ದಾರಿತಪ್ಪಿಸುವ ಇತರ ಸ್ವಾಮಿಜಿಗಳೂ ಸಹ ಈ ಸಮಾಜದಲ್ಲಿದ್ದಾರೆ ಅವರುಗಳ ವಿರುದ್ಧವೂ ಸಹ ತನಿಕೆಯಾಗಬೇಕು. ಏಕೆಂದರೆ ವಿದೇಶದಲ್ಲಿ ಕಪ್ಪು ಹಣವನ್ನಿಡಲು ಮಠಮಾನ್ಯಗಳ ’ಕೊಡುಗೆ’ ಅಪಾರ. ಆದ್ದರಿಂದ ಲೋಕಪಾಲ ಕಾಯ್ದೆಯಡಿಯಲ್ಲಿ ಅವರನ್ನೂ ತರುವ ಪ್ರಾಮಾಣಿಕ ಪ್ರಯತ್ನವಾದಾಗಲೇ ಭ್ರಷ್ಟಾಚಾರವೆನ್ನುವುದು ಭಾರತದಿಂದ ಬುಡಸಮೇತ ತೊಲಗಲು ಸಾಧ್ಯ.

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ಕೆಎಲ್ಕೆ ಸೋಮ, 06/06/2011 - 15:05

ಹಾ. ಹ್ಹಾ..ಚೆನ್ನಾಗಿದೆ ನಿಮ್ಮ ಲೇಖನದ ತಲೆಬರಹ...." ಬಾ ..ಬಾ...ಬ್ಲಾಕ್ ಮನಿ" !!!

ಉಮಾಶಂಕರ ಬಿ.ಎಸ್ ಸೋಮ, 06/06/2011 - 20:58

ಅನಂತಾನಂತ ಧನ್ಯವಾದಗಳು ಕೆ ಎಲ್ಕೆ ಸರ್ನಿಮ್ಮ ಉಮಾಶಂಕರ

ವಿ.ಎಂ.ಶ್ರೀನಿವಾಸ ಸೋಮ, 06/06/2011 - 18:23

 ಸಿಖ್ಖ ಹತ್ಯಾಕಾಂಡದ ಸಂದರ್ಭದಲ್ಲಿ, "ಸಿಖ್ಖರು ಎಲ್ಲಿ ಕಂಡರೆ ಅಲ್ಲಿ ಗುಂಡಿಟ್ಟು ಕೊಲ್ಲಿ" ಎಂದು ತೆರೆದ ಜೀಪಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಿ ಸಾವಿರಾರು ಸಿಖ್ಖರ ನರಮೇಧಕ್ಕೆ ಕಾರಣನಾದ ಮೇಯರ್ ನನ್ನು, ರಾಜೀವ ಸರ್ಕಾರದಲ್ಲಿ ಸಚಿವನನ್ನಾಗಿಸಿದ ಸಂಸ್ಕ್ರುತಿ ಇರುವ ಕಾಂಗ್ರೆಸ್ ನಿಂದ , ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ ನನ್ನ  ಪ್ರೀತಿಯ  ಉಮಾಶಂಕರ್ ಜಿ.       ಗಂಭೀರ ವಿಷಯಕ್ಕೆ ತಿಳಿಹಾಸ್ಯದ ಲೇಪನವನ್ನು ಸೇರಿಸಿರುವುದು ಲೇಖನದ ಸೊಬಗನ್ನು ಹೆಚ್ಚಿಸಿದೆ. ಅದರಲ್ಲೂ ಬಾ..ಬಾ..ಬ್ಲಾಕ್ ಮನಿ..!! ಎಂಬ ತಲೆಬರಹ ಆಕರ್ಷಕವಾಗಿದೆ.  ವಾಸ್ತವದಲ್ಲಿ ಬಾಬಾರವರ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಅನುಮಾನದಿಂದ ನೋಡುವುದು ತರವಲ್ಲ  ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ. ನಮ್ಮಿಂದಾಗುದುದನ್ನು ಅವರು ಮಾಡುತ್ತಿದ್ದಾರೆ ಅವರಲ್ಲಿ ನೈತಿಕ ಶಕ್ತಿಯನ್ನು ತುಂಬಿಸಬೇಕಾದುದು ನಮ್ಮ ಕರ್ತವ್ಯ. ಒಂದು ವೇಳೆ ಬಾಬಾ ರವರು ಸಹ ಕೆಲವೊಂದು ವಿಷಯಗಳಲ್ಲಿ ಪ್ರಶ್ನಾರ್ಹರೇ ಆಗಿದ್ದರೂ , ದೊಡ್ಡ ಗುರಿಯತ್ತ ಹೊರಟಿರುವ ಅವರ ಸಣ್ಣ ತಪ್ಪುಗಳನ್ನು ಮನ್ನಿಸಿ ಅವರ ಹೋರಾಟಕ್ಕೆ ಬೆಂಬಲ ಕೊಟ್ಟು, ಕಪ್ಪುಹಣವನ್ನು ಭಾರತಕ್ಕೆ ತರುವುದು ಇಂದಿನ ತುರ್ತುಕ್ರಮಗಳಲ್ಲೊಂದು. 

ಉಮಾಶಂಕರ ಬಿ.ಎಸ್ ಸೋಮ, 06/06/2011 - 20:57

ಶ್ರೀನಿವಾಸ್ ಸರ್ ಮೊದಲಿಗೆ ನಿಮ್ಮ ಪ್ರೋತ್ಸಾಹಭರಿತ ನುಡಿಗಳಿಗೆ ಅನಂತಾನಂತ ಧನ್ಯವಾದಗಳು.ಎರಡನೆಯದಾಗಿ ಭ್ರಷ್ಟಾಚಾರದ ವಿರುದ್ಧ ಯಾರೇ ಹೋರಾಡಿದರೂ ಅದರ ಗೆಲುವಿಗಾಗಿ ಬೆಂಬಲಿಸಿ, ಹಾರೈಸುವ  ಕೋಟ್ಯಾಂತರ ಭಾರತೀಯರಲ್ಲಿ  ಮಂದಿಯಲ್ಲಿ ನಾನೂ ಒಬ್ಬ. ಅದೇ ರೀತಿ ಬಾಬಾರವರ ಹೋರಾಟಕ್ಕೂ ನನ್ನ ಬೆಂಬಲವಿದೆ. ಒಟ್ಟಾರೆ ಈ ಘಟನೆಯಲ್ಲಿ ಬಾಬರವನ್ನು ಸಂಶಯದಿಂದ  ನೋಡುವುದಕ್ಕೆಅವರ ನಡೆಗಳೂ ಸಹ ಕಾರಣವೇ. ಸರ್ಕಾರ ಹೇಳುವಂತೆ ಯೋಗ ಶಿಬಿರಕ್ಕೆ ಅನುಮತಿಯಿತ್ತಿದ್ದೇ ಆದಲ್ಲಿ ಅದರ ಬಗ್ಗೆ ಬಾಬ ಇನ್ನೂ  ತುಟಿ ಬಿಚ್ಚಿಲ್ಲ.ಅಲ್ಲದೆ ಪಂಚತಾರ ಹೋಟೆಲ್ ನಲ್ಲಾದ ಒಡಂಬಡಿಕೆ ಬಗ್ಗೆ ಸರ್ಕಾರ ಬೊಬ್ಬೆಯಿಡುತ್ತಿದ್ದರೂ ಬಾಬರನ್ನು ಆ ವಿಚಾರ ಕೇಳಿದಾಗ  ಕಣ್ಣೀರಿಟ್ಟು  'ಅದು ಒತ್ತಡದಿಂದ ಬರೆಸಿಕೊಂಡಿದ್ದು' ಎನ್ನುತ್ತಾರೆ ಹಾಗಿದ್ದಲ್ಲಿ ಅದೆಂತಹ ಒತ್ತಡ ಎನ್ನುವುದನ್ನು ಸ್ಪಷ್ಟಪಡಿಸುವ ಗೋಜಿಗೆ ಹೋಗಿಲ್ಲ. ಹಾಗಾಗಿ ಈ ರೀತಿ ಬರೆಯಬೇಕಾಯ್ತುಇತಿ ನಿಮ್ಮಉಮಾಶಂಕರ

ವಿ.ಎಂ.ಶ್ರೀನಿವಾಸ ಸೋಮ, 06/06/2011 - 21:07

ಉಮಾಶಂಕರ್ ಜಿ.ನಿಮ್ಮ ತುಡಿತ ಅರ್ಥವಾಗಿದೆ, ಆದರೆ ಅದು ಬೇರೆಯದೇ ಅರ್ಥವನ್ನು ಸಹ ಮೂಡಿಸುವ ಸಾಧ್ಯತೆಗಳು ಇರುವುದರಿಂದ, ನಿಮ್ಮ ಲೇಖನದ ಉದ್ದೇಶ ಚರ್ಚೆಯಾಗದೆ, ಬೇರೆ ಇನ್ನೇನೋ ಚರ್ಚೆಯಾಗಿಬಿಡುವುದೆನೋ  ಎಂಬ ಆತಂಕದಲ್ಲಿ ನೈತಿಕತೆಯ ಮಾತುಗಳನ್ನು ಆಡಬೇಕಾಯಿತು. ಬೇಸರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಲೇಖನ ಸಕಾಲಿಕವಾಗಿದೆ.

ಉಮಾಶಂಕರ ಬಿ.ಎಸ್ ಸೋಮ, 06/06/2011 - 21:27

ಶ್ರೀನಿವಾಸ್ ಸರ್ ಖಂಡಿತವಾಗಿಯೂ ಬೇಸರವಾಗಿಲ್ಲ, ನಿಮ್ಮ ಕಾಳಜಿ ನನಗೆ ಅರ್ಥವಾಗಿದೆ, ನೀವು ಹೇಳಿದ ನಂತರ ನನಗೂ ಹಾಗೆ ಅನ್ನಿಸಿತುಮತ್ತೊಮ್ಮೆ ಅನಂತಾನಂತ ಧನ್ಯವಾದಗಳುನಿಮ್ಮಉಮಾಶಂಕರ

vijayashree (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 06/10/2011 - 15:39

ಉತ್ತಮವಾಗಿದೆ ವಿಚಾರ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/15/2011 - 12:36

ಉಮಾ ಶಂಕರ್ ನಿಮ್ಮ ಲೇಖನ ತುಂಬಾ ಅಂದರೆ ತುಂಬಾ ಚೆನ್ನಾಗಿದೆ.... ಭ್ರಷ್ಟಾಚಾರದ ವಿರುದ್ಧದ ನಿಮ್ಮ ಈ ಲೇಖನ ಸದಾಕಾಲ ಹೀಗೆ ಮುಂದುವರೆಯಲಿ.... ಆಲ್ ದ ಬೆಸ್ಟ್... ಉಮಾ...

venkatesha (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 06/19/2011 - 09:17

ಉಮ ಶನ್ಕರ್  ನಿಮ್ಮ ಈ ಬರವನಿಗೆ ಸದಾ ಹೀಗೆಯೆ ಮುನ್ದುವರೆಯಲಿ.

ವಿಜಯಶ್ರೀ ಮೇಡಂ, ಅನಾಮಿಕರೆ ಮತ್ತು ವೆಂಕಟೇಶ್ ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು

belstaff jackets (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 06:55


Dad is busy every day outside, do not have belstaff jackets time to read. He will do regret belstaff bags it? Sometimes I really want to belstaff jackets discuss these books determined to Dad, which can be thought belstaff uk of six mother goes on the bleak white belstaff uk powder coated long face, the same belstaff jackets block as the wall on the road the north face uk , immediately give up north face the idea. Each hospital has a mulberry bagssmall door set with a narrow mulberry bags sale garden path connected to mulberry handbags the left, leading to the garden. cyh12-29

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.