ಇಹಲೋಕಕೆ ಮರಳಿ ಬಾ ಬಾ!!!
[img_assist|nid=8826|title=ಸಾಯಿ ಬಾಬಾ|desc=|link=node|align=left|width=200|height=161]ಬಾಬಾ ಎನ್ನುವ ಹೆಸರನ್ನು ಇತ್ತೀಚಿನ ದಿನಗಳಲ್ಲಿ ಕೇಳಿದರೆ ಸಾಮಾನ್ಯವಾಗಿ ಬೇಸರ, ನಿರ್ಲಕ್ಷ್ಯ, ಅಸಡ್ಡೆ, ಆಶ್ಚರ್ಯ ಎಲ್ಲವೂ ಒಮ್ಮೆಲೆ ಮೂಡಿಬರುವುದು ಸಹಜ. ಆದರೆ ’ಸತ್ಯ ಸಾಯಿ ಬಾಬಾ’ ಹೆಸರು ಕೇಳಿದರೆ ಭಕ್ತಿ ಭಾವಕ್ಕಿಂತ ಗೌರವ ಮೂಡುವುದೇ ಹೆಚ್ಚು.
ಹೌದು ಸತ್ಯ ಸಾಯಿ ಬಾಬಾ ವ್ಯಕ್ತಿತ್ವವೇ ಹಾಗೆ!! ಚಿಕ್ಕವಯಸ್ಸಿನಲ್ಲೇ ಆಧ್ಯಾತ್ಮದ ಕಡೆ ಹೊರಳಿದ ಬಾಬಾ ನಂತರ ಮನೆ ಮಾತಾದದ್ದು ತಮ್ಮ ವಿಚಿತ್ರ ಪವಾಡಗಳಿಂದಲೇ!! ಶೂನ್ಯದಲ್ಲಿ ವಾಚು - ಉಂಗುರ, ಚೈನು - ವಿಭೂತಿ ಸೃಷ್ಠಿಸಿ ಭಕ್ತರನ್ನು ಬೆರಗುಗೊಳಿಸುತ್ತಿದ್ದ ಬಾಬಾ ರವರಿಗೆ ಆಧುನಿಕ ಚಿಂತಕರು ’ಬೂದಿ ಬಾಬಾ’ ಎಂದು ಕರೆದಿದ್ದರಲ್ಲಿ ಅತಿಶಯೋಕ್ತಿಯೇನಿರಲಿಲ್ಲ. ಇದೆಲ್ಲದರ ಹೊರತಾಗಿಯೂ ಅವರ ವಿರೋಧಿಗಳೂ ಸಹ ಅವರನ್ನು ಮೆಚ್ಚಿದ್ದು ಮತ್ತು ಮೆಚ್ಚುತ್ತಿದ್ದದ್ದು ಅವರ ಸಮಾಜ ಸೇವೆಗಳಿಗಾಗಿ.
ಹೌದು!! ಸಾಯಿ ಬಾಬ ಪವಾಡ ಪುರುಷನೋ, ಡಂಬಾಚಾರಿಯೋ, ಕೊಲೆಗಡುಕನೋ, ಸಲಿಂಗಿಯೋ ಮತ್ತೇನೋ ಅವರ ವಿವಾದಗಳೆಲ್ಲವನ್ನೂ ತಕ್ಕಡಿಯ ಒಂದು ಭಾಗಕ್ಕಿಟ್ಟರೆ ಮತ್ತೊಂದರಲ್ಲಿ ಅವರ ಸಮಾಜಸೇವೆಗಳನ್ನಿಟ್ಟು ತೂಗಿದರೆಅವರ ವಿವಾದಗಳೆಲ್ಲವೂ ಗೌಣವಾಗಿಬಿಡುತ್ತವೆ. ಅದೇ ಕಾರಣಗಳಿಂದ ಸತ್ಯ ಸಾಯಿ ಬಾಬರವರು ಇತರ ಸ್ವಾಮೀಜಿಗಳಿಗಿಂತ ಬೇರೆಯಾಗಿಯೇ ನಿಲ್ಲುತ್ತಾರೆ. ಇಂದಿನ ಅದೆಷ್ಟೋ ಮಠಾಧೀಶರು ದುಡ್ಡುಮಾಡುವ ದಂದೆಗಿಳಿದು, ಮೀಟರ್ ಬಡ್ಡಿಕೋರರು, ರಿಯಲ್ ಎಸ್ಟೇಟ್ ದಲ್ಲಾಳಿಗಳನ್ನು ನಾಚಿಸುವಂತ "ವ್ಯವಹಾರಸ್ಥ" ರಾಗಿದ್ದರೆ, ಮತ್ತೆ ಕೆಲವರು ರಾಜಕೀಯದಲ್ಲಿ ತಲೆ ತೂರಿಸಿ ’ಮರಿ ವಿದಾನಸೌಧ’ ದಂತಿದ್ದರೆ, ಜಾತಿಯ ಹೆಸರೇಳಿ ಜಾತಿಗೊಂದು ಮಠ ಕಟ್ಟಿ, ತಿಂದು ದುಂಡಗಾಗಿರುವುದಲ್ಲದೆ, ಧರ್ಮೋಪದೇಶದಿಂದ ಕೆಟ್ಟವರನ್ನು ಸರಿದಾರಿಗೆ ತರುವ ಬದಲು ಮೋಹಕ್ಕೆ ಬಲಿಯಾಗಿ ಅರಿಷಡ್ವರ್ಗಗಳನ್ನು ಮೆಟ್ಟಲಾರದೆ ಕಾಮದಾಹಿಗಳಾದರೆ, ಮತ್ತೆ ಕೆಲವರು ನಿಯತ್ತಿನಿಂದ ಪೀಠ ತ್ಯಜಿಸಿ ಸಂಸಾರಿಗಳೂ ಆಗಿದ್ದಾರೆ, ಇನ್ನು ಕೆಲವರು ಯೋಗಾಯೋಗದ ’ಯೋಗಿ’ಗಳಾಗಿದ್ದರೆ ಮತ್ತೆಕೆಲವರು ಶಾಂತಿ ಶಾಂತಿ ಎನ್ನುತ್ತಾ ಕಾಸು ಕಿತ್ತುಕೊಂಡು ಬದುಕುವುದನ್ನು ಕಲಿಸಿಕೊಡುತ್ತಿದ್ದರೆ. ಅದೆಲ್ಲೋ ನಮ್ಮ ಸಿದ್ಧಗಂಗೆಯ ಶಿವಕುಮಾರ ಸ್ವಾಮಿಗಳಂತಹವರು ಅನ್ನ ದಾಸೋಹ, ಅಕ್ಷರ ದಾಸೋಹ ಎನ್ನುತ್ತಾ ನಿಸ್ವಾರ್ಥದ ಸಮಾಜ ಸೇವೆಗೈಯುತ್ತಿದ್ದಾರೆ. ಇವರೆಲ್ಲರಿಗಿಂತಲೂ ಬಾಬ ಭಿನ್ನವಾಗಿ ನಿಲ್ಲುವುದು ತಮ್ಮ ವಿಶಿಷ್ಠ ಸಮಾಜ ಸೇವೆಗಳಿಂದ ಎನ್ನುವುದರಲ್ಲಿ ಅತಿಶಯೋಕ್ತಿಯೇನಲ್ಲ.
ಇಂದು ಒಬ್ಬ ವೈದ್ಯ ಅದರಲ್ಲೂ ಒಬ್ಬ ಸ್ಪೆಷಲಿಸ್ಟ ತನ್ನ ಸ್ಟೆತಾಸ್ಕೋಪನ್ನು ಪೇಶಂಟಿನ ಎದೆಯಮೇಲಿಟ್ಟು ಕೆಳಗಿಳಿಸುವುದಕ್ಕೆ ಇನ್ನೂರೋ ಐನೂರೋ ಶುಲ್ಕ ವಿಧಿಸುತ್ತಾರೆ. ಇನ್ನು ಯಾವುದಾದರು ಆಪರೇಶನ್ನು ಅಂದರೆ ಮುಗಿದೇ ಹೋಯ್ತು ಲಕ್ಷವಾದರೂ ಜೇಬಿಗೆ ಭಾರವಾಗುವುದು ಗ್ಯಾರಂಟಿ, ಅದರಲ್ಲೂ ಹೃದಕ್ಕೆ ಸಂಬಂಧಿಸಿದ ಕಾಯಿಲೆಗಳೆಂದರೆ ಲಕ್ಷಗಳೆಲ್ಲಾ ಅಲಕ್ಷ್ಯ. ಅವೆಲ್ಲವೂ ಸಿರಿವಂತರ ಕಾಯಿಲೆಗಳೆಂದು ಬಡವರಿಗೆ ಬಂದರೆ ಸಾವೇ ಗತಿ ಎನ್ನುವಂತಹ ಸಂದರ್ಭದಲ್ಲಿ ಔಷದೋಪಚಾರದ ಸಹಿತ ಆಪರೇಷನ್ನು ಸೇರಿದಂತೆ ಎಲ್ಲವನ್ನೂ ಮುಗಿಸಿ ಆ ರೋಗಿ ಗುಣಮುಖರಾಗುವವರೆಗೂ ಎಲ್ಲವನ್ನೂ ಉಚಿತವಾಗಿ ಕೊಡುವುದು ಸಾಮಾನ್ಯದ ಮಾತಲ್ಲ!!! ಕೋಟ್ಯಾಂತರ ಖರ್ಚಾಗುವ ಇಂಜಿನಿಯರಿಂಗ್ ಹಾಗು ವೈದ್ಯಕೀಯ ಸೀಟುಗಳನ್ನು ಉಚಿತವಾಗಿ ಅಂಕಗಳ ಆಧಾರದ ಮೇಲೆ ಹಂಚಿ ಅವರ ವಿದ್ಯಾಭ್ಯಾಸದ ಸಂಪೂರ್ಣ ಖರ್ಚುವೆಚ್ಚ ಭರಿಸುವುದು ಸುಲುಭದ ಮಾತಲ್ಲ. ಹುಲ್ಲು ಕಡ್ಡಿಯೂ ಬೆಳೆಯದಂತಹ ಅನಂತಪುರವೆಂಬ ರಾಯಲ ಸೀಮೆಯ ಜಿಲ್ಲೆಗೆ ನೀರೊದಗಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತ ಸರ್ಕಾರಕ್ಕೆ ಸವಾಲೆಸೆದು ನೀರೊದಗಿಸಿದ್ದು ಇದೇ ಬಾಬಾ ರವರ ಇಚ್ಚಾಶಕ್ತಿಯ ಪವಾಡ. ಇಂದಿಗೂ ಸಹ ಪ್ರಪಂಚದಾದ್ಯಂತ ಇರುವ ಅವರ ಸಾವಿರಾರು ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲವೂ ಉಚಿತ. " ಓಹೋ !! ಅದರಲ್ಲೇನು ಬಾಬ ಪವಾಡವಿಲ್ಲ!! ಸೇವೆ ಸಲ್ಲಿಸುವ ಸಮಾನ ಮನಸ್ಕರಿಂದ ಎಲ್ಲವೂ ಉಚಿತವಾಗಿದೆಯೇ ಹೊರತು ಬಾಬಾ ಪವಾಡದಿಂದಲ್ಲ" ಎನ್ನುವ ಸಿನಿಕರಿಗೂ ಸಹ ಗೊತ್ತಿರುತ್ತದೆ ಅಂತಹ ಸಮಾನ ಮನಸ್ಕರನ್ನು ಒಗ್ಗೂಡಿಸುವ ಶಕ್ತಿ ಇದ್ದದ್ದೂ ಬಾಬ ರವರಿಗೆ ಮಾತ್ರ.
ಅಂತಹ ಪವಾಡ ಪುರುಷನನ್ನು ಕಳೆದುಕೊಂಡ ಭಾರತದ ಸಮಾಜ ನಿಜಕ್ಕೂ ಬಡವಾಗಿದೆ. ಬಡವ - ಬಲ್ಲಿದ, ರಾಜಕಾರಣಿ - ಸಾಮಾನ್ಯ ಮಾನವ ಎಲ್ಲರನ್ನೂ ಸಮಚಿತ್ತದಿಂದ ಕಾಣುತ್ತ, ಉಳ್ಳವರಿಂದ ಸಂಗ್ರಹಿಸಿ ಸಮಾಜದ ಹಿತಕ್ಕಾಗಿ ದುಡಿದ ’ಸತ್ಯ ಸಾಯಿ ಬಾಬಾ’ರವರಂತಹವರು ಇಂದಿನ ಸ್ವಾರ್ಥ ಸಮಾಜಕ್ಕೆ ನಿಜಕ್ಕೂ ಅವಶ್ಯಕ.
ಅದಕ್ಕಾದರೂ ಮತ್ತೆ ಹುಟ್ಟಿ ಬಾ ಬಾ!!!
ಸಾಲುಗಳು
- Add new comment
- 959 views
ಅನಿಸಿಕೆಗಳು
ಹೌದು ಉಮಾಶಂಕರ್ ರವರೆ, ಅವರ
ಹೌದು ಉಮಾಶಂಕರ್ ರವರೆ, ಅವರ ವ್ಯಕ್ತಿತ್ವವೇ ಅಂತಹದ್ದು.... ಅವರ "ಕುಖ್ಯಾತಿ" ಗಳನ್ನ ಒಂದುಕಡೆಇಟ್ಟು ಅವರ ಸಮಾಜಸೇವೆಯನ್ನ ಮಾತ್ರ ಪರಿಗಣಿಸಿದರೆ ಯಾರೂ ಮಾದಲಾಗದಂತಹ ಸಾಧನೆ ಅವರದ್ದು. ಬಹುಶಃ ಅಂತಹ ವ್ಯಕ್ತಿತ್ವಕ್ಕೆ ಏನೋ ಲಕ್ಷಾಂತರ ಜನರು ಅವರ ಅಗಲಿಕೆಯ ನೋವನ್ನು ಭರಿಸುತ್ತಿದ್ದಾರೆ. ಬಾಬರವರ ಮಹಾಸಮಾಧಿಯ ಸಂದರ್ಭದಲ್ಲಿ ಸಮಯೋಚಿತವಾಗಿದೆ ನಿಮ್ಮ ಲೇಖನ...
-- ವಿನಯ್
ಹೌದು ಉಮಾಶಂಕರ್ ರವರೆ, ಅವರ
ಹೌದು ಉಮಾಶಂಕರ್ ರವರೆ, ಅವರ ವ್ಯಕ್ತಿತ್ವವೇ ಅಂತಹದ್ದು.... ಅವರ "ಕುಖ್ಯಾತಿ" ಗಳನ್ನ ಒಂದುಕಡೆಇಟ್ಟು ಅವರ ಸಮಾಜಸೇವೆಯನ್ನ ಮಾತ್ರ ಪರಿಗಣಿಸಿದರೆ ಯಾರೂ ಮಾದಲಾಗದಂತಹ ಸಾಧನೆ ಅವರದ್ದು. ಬಹುಶಃ ಅಂತಹ ವ್ಯಕ್ತಿತ್ವಕ್ಕೆ ಏನೋ ಲಕ್ಷಾಂತರ ಜನರು ಅವರ ಅಗಲಿಕೆಯ ನೋವನ್ನು ಭರಿಸುತ್ತಿದ್ದಾರೆ. ಬಾಬರವರ ಮಹಾಸಮಾಧಿಯ ಸಂದರ್ಭದಲ್ಲಿ ಸಮಯೋಚಿತವಾಗಿದೆ ನಿಮ್ಮ ಲೇಖನ...
-- ವಿನಯ್
//ಹೌದು!! ಸಾಯಿ ಬಾಬ ಪವಾಡ
//ಹೌದು!! ಸಾಯಿ ಬಾಬ ಪವಾಡ ಪುರುಷನೋ, ಡಂಬಾಚಾರಿಯೋ, ಕೊಲೆಗಡುಕನೋ, ಸಲಿಂಗಿಯೋ ಮತ್ತೇನೋ ಅವರ ವಿವಾದಗಳೆಲ್ಲವನ್ನೂ ತಕ್ಕಡಿಯ ಒಂದು ಭಾಗಕ್ಕಿಟ್ಟರೆ ಮತ್ತೊಂದರಲ್ಲಿ ಅವರ ಸಮಾಜಸೇವೆಗಳನ್ನಿಟ್ಟು ತೂಗಿದರೆಅವರ ವಿವಾದಗಳೆಲ್ಲವೂ ಗೌಣವಾಗಿಬಿಡುತ್ತವೆ.//ಖಂಡಿತ ನಿಜ. ನಿಸ್ವಾರ್ಥದ ಸಮಾಜಸೇವೆ ಎಲ್ಲದಕ್ಕಿಂತ ಹೆಚ್ಚು. ಅದನ್ನು ಮಾಡದಿರುವವರಿಗೆ ಇವರ ಮೇಲೆ ಚಕಾರವೆತ್ತುವ ಹಕ್ಕಿಲ್ಲ.
ಮೂರ್ತಿ ಸರ್, ವಿನಯ್ ಸರ್ ನಿಮ್ಮ ಪ
ಮೂರ್ತಿ ಸರ್, ವಿನಯ್ ಸರ್ ನಿಮ್ಮ ಪ್ರತಿಕ್ರಿಯೆಗಳಿಗೆ ಅನಂತಾನಂತ ಧನ್ಯವಾದಗಳು