Skip to main content

college days

ಇಂದ HEMA
ಬರೆದಿದ್ದುMarch 9, 2011
2ಅನಿಸಿಕೆಗಳು

ನಮ್ಮ ಜೀವನದಲ್ಲಿ ಬಾಲ್ಯದ ನೆನಪುಗಳೆ ಸಿಹಿ ಹೂರಣ ಏನೇ ಕಷ್ಟವಿದ್ದರೂ ಅದರಲ್ಲಿ ಸಿಹಿಯಾದ ನೆನಪಗಳನ್ನೆ ಮೆಲ್ಲಲು ಇಷ್ಟಪಡುತ್ತೆವೆ. ನಾನು ಹೈಸ್ಚೂಲ್ ವರೆಗೂ ನಮ್ಮ ಹಳ್ಳಿಯಲ್ಲೆ ಓದು ಮುಗಿಸಿದೆ. ತದನಂತರ , ಕಾಲೇಜು ಅಭ್ಯಾಸಕ್ಕಾಗಿ ದಿನವೂ ೬ ಮೈಲಿಗಳಷ್ಟು ಹೋಗಿಬರಬೇಕಿತ್ತು. ಆ ಹೞಿಗೆ ಯಾವುದೇ ರೀತಿಯ ವಾಹನ ಸೌಲಭ್ಯಗಳಿರಲಿಲ್ಲ. ನಾನು ನನ್ನ ಗೆಳತಿ ದಿನವೂ ನಡೆದೆ ಹೋಗಿಬರುತ್ತಿದ್ದೆವು.
ಆ ದಾರಿಯೋ ಕಲ್ಲು, ಮಣ್ಣು, ಮುೞುಗಳ ಆಕರವಾಗಿತ್ತೆಂದತೆ ಅತಿಶಯವಲ್ಲ. ಸ್ವಲ್ಪ ಎಚ್ಹರ ತಪ್ಪಿ ನಡೆದರೂ ಕಾಲು ಉಳುಕಿಸಿಕೊೞುವ ಸರದಿ ನಮ್ಮದಾಗುತ್ತಿತ್ತು, ಆದರೂ ಅಲ್ಲಿಯ ವಾತಾವರಣ ಬಹಳ ಹಿತವಾಗಿತ್ತು. ದಾರಿಯ ಎರಡೂ ಬದಿಯಲ್ಲಿ ಬೆಳೆದ ನೀಲಗಿರಿ, ಸರ್ವೆಮರಗಳು, ರಾಗಿ, ಭತ್ತದ ಗದ್ದೆಗಳು ತರಹೇವಾರಿ ತರಕಾರಿಯ ಗಿಡಗಳು, ಹೊಬೞಿಗಳು ಒಂದೇ ಎರಡೇ ತುಂಬಾ ಸುಂದರ....
ಸಂಜೆ ಮನೆಗೆ ಬರುವಾಗ ನಾನೊಬ್ಬಳೇ ಆ ೩ ಮೈಲಿ ದಾರಿ ಕ್ರಮಿಸಬೇಕಿತ್ತು ನಾನು ವಿಜ್ನ್~ನ ವಿಭಾಗದಲ್ಲಿದ್ದೇನಾದ್ದರಿಂದ ನನ್ನ ಕ್ಲಾಸ್`ಮುಗಿಯುವುದು ತಡವಾಗುತಿತ್ತು. ಆ ೨ ವರ್ಶಗಳ ನಿರಂತರ ಅನುಭವ ಬೆಚುವಂತದ್ದು. ಅದೇ ದಾರಿಯಲ್ಲಿ ಎರಡು ಸ್ಮಶಾನಗಳಿದ್ದವು ಒಂದೊಂದು ಒಂದು ಮೈಲಿಯ ಅಂತರದಲ್ಲಿ ಅಲ್ಲಿಗೆ ಸಮೀಪವಾಗುತ್ತಿಂದ್ದಂತೆ ಕೈ- ಕಾಲುಗಳು ನಡುಗುತ್ತಾ ಬೆವರುತ್ತಿದ್ದೆ. ಯಾಕೆಂದರೆ, ಅಲ್ಲೆಲ್ಲಾ ದೆವ್ವಗಳ ಮೇಲಿನ ನಂಬಿಕೆಗಳು ಹಾಗೂ ಕಥೆಗಳನ್ನು ದೊಡ್ಡವರ ಬಾಯಿಂದ ಕೇಳಿದ್ದೆ. ಒಂದು ದಿನ ಅದೇ ಸ್ಮಶಾನದ ಸಮೀಪವಿದ್ದ ಕೆರೆಯಲ್ಲಿ ತೇಲುತ್ತಿರುವ ತಲೆ ನೋಡಿ ಜ್ವರದಿಂದ ಬಳಲಿದ್ದೂ ಆಯಿತು ........ ಏನೇ ಆದರೂ ನನ್ನ ಪಿ.ಯು ಕಾಲೆಜ್ ಓದು ಮುಗಿಸಿದಾಗ ನನಗೆ ಅತೀವ ದುಃಖವಾಯಿತು. ಅಂದಿನಿಂದ ನಾನು ಕಾಯ್ದುಕೊಂಡಿದ್ದ ಆ ಪ್ರಕ್ರುತಿಯ ಜೊತೆಗಿನ ಗೆಳೆತನ ಮರೆಯಾಯಿತಲ್ಲಾ ಎಂದು ಹಲುಬಿದ್ದೆ.
ಆದರೆ ಜೀವನ ಎನ್ನುವುದು ಯಾವಾಗಲೂ ಹೊಸದಕ್ಕೆ ತೆರೆದುಕೂೞುವ ಬದುಕಲ್ಲವೇ? ಇಂದು ಕನ್ನಡದಲ್ಲಿ ಬರೆಯಬೇಕೆನ್ನುವ ಅತಿ ಆಸೆಯಿಂದ ಕೀಲಿಮನೆ ಕಲಿತು ಈ ಒಂ ದು ಪುಟ್ಟ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ತಮ್ಮ ಅಭಿಪ್ರಾಯಗಳು ನನಗೆ ದೊರೆತರೆ ಇನ್ನೂ ಬರೆಯಬೇಕೆಂಬ ಆಶೆ ಇದೆ. ಧನ್ಯವಾದಗಳು...

ಲೇಖಕರು

HEMA

nanu vivahite haagu udyogasthe nanage sahityadalli bahala aasakthi sampadavannu kaleda 20 dinagalinda odutiddene idu nanage thumba ishtavaaithu. yuva barahagaararige illi uttama avakasha kalpisiddare dhanyavaadagalu

ಅನಿಸಿಕೆಗಳು

ಒಬ್ಬ ಸಾಮಾನ್ಯ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/10/2011 - 09:39

ನಿಮ್ಮ ಬರೆಯುವ ಶೈಲಿ ತು೦ಬಾ ಚೆನ್ನಾದಿದೆ ಹೇಮಾ ಅವರೇಒಳ್ಳೆಯ ಅಭಿಪ್ರಾಯವಿರುವ ಮನಸ್ಸುಳ್ಳವರು ನಿಮ್ಮ ಬರಹವನ್ನು ಮೆಚ್ಚೇ ಮೆಚ್ಚುತ್ತಾರೆ"Really Student Life is Golden Life" ಅನ್ನೋದು ನೂರಕ್ಕೆ ನೂರು ಸತ್ಯ ರಿನಿಮ್ಮ ಬರಹ ತು೦ಬಾ ಇಷ್ಟವಾಯಿತುಯಾಕ೦ದ್ರೆ College Days ನನ್ನ Life ನಲ್ಲಿ ನನಗೇ ಬರಲೇ ಇಲ್ಲBye... ನಿಮ್ಮ ಬರಹ ಮು೦ದುವೆರೆಸಿ..

HEMA ಗುರು, 03/10/2011 - 11:07

ಗುರು ಅವರೇ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಇನ್ನೂ ಒೞೆಯ ಬರಹಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.