Skip to main content

ಗುರಿಯ ದಾರಿ

ಬರೆದಿದ್ದುMarch 9, 2011
noಅನಿಸಿಕೆ

ಎಂದೋ ಹಿಂದೊಮ್ಮೆ ಮೀಸೆ ಚಿಗುರುವ ಮುನ್ನ ಗೀಚಿದ್ದ ಕವನ, ಮೊನ್ನೆ ಮನೆ ಬದಲಾಯಿಸುವ ಮುನ್ನ ದೊರಕಿತು.ಅದನ್ನೇ ಯಥಾವತ್ತಾಗಿ ಇಲ್ಲಿಡುತ್ತಿದ್ದೇನೆನನ್ನ ಗುರಿಯ ದಾರಿಗೆ ನೀನೆ ಮೆಟ್ಟಿಲುನಿನ್ನ ದುಃಖ ಸುಖಗಳಿಗೆ ನನ್ನೆದೆಯೆ ನಿನಗೆ ತೊಟ್ಟಿಲುನಡೆವ ಮುಂದೆ ಮುಂದೆ ಸಾಗುತಹೊಸ ಬಾಳೊಂದ ಜೊತೆಯಾಗಿ ಕಟ್ಟಲುಕನಸುಗಳ ಉಡುಗೆಯುಟ್ಟ ಮನಗಳಿರಲುನನಸುಗಳ ಏಣಿ ಅಣಿಯಾಗಿರಲುಎಷ್ಟು ಹೊತ್ತು ಆಕಾಶ ಮುಟ್ಟಲು?ಆಯಾಸವಾದೊಡೆ ನಿನ ನಗುವಿನ ಪನ್ನೀರುಸಂತಸಕೆ ನೆನಹುಗಳ ಮೃಷ್ಠಾನ್ನದ ಬುತ್ತಿಸಂಕಟಕೆ ಸಾಂತ್ವಾನ.ನಡೆ ಮುಂದೆ ಸಾಗೋಣ ಎಲ್ಲವ ಮರೆತುಎಲ್ಲ ನೋವ ಮರೆತು, ಎಲ್ಲರೊಳು ಬೆರೆತುಸಾಗೋಣ ನಿರಂತರಗುರಿಯ ತೀರ ಇನ್ನೇನು ಬರಿ ಮಾರು ದೂರನಮ್ಮನ್ನು ಸೇರಲು ಆ ಗುರಿಗೂ ಕಾತರಸೇರಲು ಗುರಿಯ ದಾರಿ ಎಲ್ಲ ಕಟ್ಟಳೆಗಳ ಮೀರಿ 

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.