Skip to main content

ಕತ್ತಲೆಯ ಅಲೆಮಾರಿ

ಬರೆದಿದ್ದುFebruary 21, 2011
2ಅನಿಸಿಕೆಗಳು

ಕಣ್ಣಿಂದ ಮಿಂಚು ಹರಿಸಿಕುಡಿನೋಟದಿ ಕೊಂದವಳೆಖಾಲಿಯಿಲ್ಲದ ಮನವನಿತ್ಯ ಕಾಡುವ ನಯನಾಂಗಿ!!ನನ್ನ ಮನವೇನೋ ಬೆತ್ತಲೆಆದರೆ ಬೆಳಕು ಕಾಣದಷ್ಟು ಕತ್ತಲೆದಾರಿ ದೀವಿಗೆಗೂ ಉಸಿರಿಲ್ಲಬದುಕು ಸಾಕೆಂಬ ಹಂಬಲಮೂಡಲೂ ಸ್ಥಳವಿಲ್ಲಇನ್ನು ಈಸಬೇಕೆಂಬ ಆಸೆಯಾದರೂಕುಡಿಯೋಡೆವುದೆಲ್ಲಿಂದ?ಬರಡು ತಿಟ್ಟನುತ್ತಿ, ಮೊಳಕೆ ಕಾಳಬಿತ್ತಿದರೂ ಜೀವಜಲವಿಲ್ಲದೆಬದುಕ ಸೆಲೆಯುಂಟೆ?ಹಂಬಲವಿಲ್ಲದ ಮನ,ಛಲವಿಲ್ಲದಾ ಪ್ರೀತಿಬಲ್ಲಿದಗೆ ದಕ್ಕುವುದುಂಟೆ?ಎಲ್ಲೆಯೊಳಗೆ ಬದುಕಲುನೂರಾರು ದಾರಿಎಲ್ಲೆ ಮೀರಿದ ಬದುಕು ನಿಸ್ಸತ್ವ!!ಕಲ್ಲ ಕೆತ್ತಿ, ಸುಡು ಬಿಸಲಲ್ಲಿ ನೆತ್ತಿಯಅಡವಿಟ್ಟು ಬಿಸುಲುಣಿಸದೆ ನಿನ್ನ ಸಾಕುವೆಇಚ್ಚೆಯಿದ್ದೊಡೆ ಕೊಚ್ಚೆಯದಾಟಿ ಬಾ!!ಸ್ವಚ್ಚವಾಗಿ ಬದುಕೋಣನಂಬಿಕೆಯೇ ನೆರಳುಅನುಮಾನವೇ ಉರುಳುನಿನಗಾಗಿ ಕಾದಿರುವೆ ಹಗಲಿರುಳುತಿಮಿರವನೋಡಿಸಿಶುದ್ಧ ಬೆಳಕಲ್ಲಿ ಬಾಳೋಣ ಬಾ!! ಇತಿ ನಿನ್ನ ದಾರಿಕಾಯುವ ಕತ್ತಲೆಯ ಅಲೆಮಾರಿ

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

Daya Sagar ಸೋಮ, 03/07/2011 - 18:29

ಮಗಾ,ನಾವು ಕತ್ತಲೆಯಲ್ಲಿ ಮಾತ್ರ ಅಲೆಮಾರಿಗಳಲ್ಲ,ಬೆಳಕಲ್ಲಿ ಉರೊರು ತಿರುಗೊ ಅಲೆಮಾರಿಗಳು,ಮನೆ,ಮಠ,ಹೆ೦ಡತಿ,ಮಕ್ಕಳನ್ನ ಬಿಟ್ಟು ತಿರುಗೊ ಒ೦ಥರಾ ಸ್ಟಾ೦ಡರ್ಡ್ ಅಲೆಮಾರಿಗಳು.

ಉಮಾಶಂಕರ ಬಿ.ಎಸ್ ಸೋಮ, 03/07/2011 - 21:35

ಹೌದು ಗುರುವೇ ಟೈ ಕಟ್ಕಂಡು ಬೈಕ್ ಮೇಲೆ ಅಲೆಯೋ ನಾವು ಸ್ಟಾಂಡರ್ಡ್ ಅಲೆಮಾರಿಗಳೇವಿಸ್ಮಯ ನಗರಿಗೆ ಸ್ವಾಗತ ಗುರುಗಳಿಗೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.