Skip to main content

ಪ್ರೇಮದ ಕಾಣಿಕೆ

ಬರೆದಿದ್ದುFebruary 18, 2011
1ಅನಿಸಿಕೆ

ಬಟ್ಟ ಬಯಲಿನ ಬರಡು ಬದುಕಲಿದಿಟ್ಟ ನಡೆಯಿಟ್ಟು ಎನ್ನೆದೆಯಮೆಟ್ಟಿಲೇರಿದ ಎನ್ನ ಪಟ್ಟದರಸಿಬಳಲಿ ಬೆಂಡಾದಾಗ ನಿನ್ನುಸಿರಗಾಳಿಯ ಬೀಸಿ ತಂಪನೆರೆವಮುಂಗಾರು ಮಾರುತಎನ್ನ ಅಕಾಲಿಕ ಅಸಹನೆಯತೊಳೆದೋಡಿಸುವ ಸಹನಾ ನದಿತಳಮಳಗಳ ತಣಿಸುವ ತಪೋನಿಧಿಕಷ್ಟ ಕಾರ್ಪಣ್ಯಗಳ ಆಪೋಶನ ಮಾಡುವಶಾಂತ ಕರುಣಾ ಸಾಗರಪಟಪಟನೆ ಬಡಿದಾಡುವ ಹೃದಯ ಮಿಡಿತದಿಮಿಳಿತಗೊಂಡ ನಿನ್ನುಸಿರ ಹೆಸರಕಡೆಗಣಿಸಿದಲ್ಲೇ ಎನ್ನ ಕಡೆಗಾಲಮರೆತಾಗ ಅಡಗಲಿ ನನ್ನುಸಿರು ಇಗೋ ನನ್ನ ಪ್ರೇಮದ ಕಾಣಿಕೆಇಗೋ ನನ್ನ ಪ್ರೇಮದ ಕಾಣಿಕೆಧಿಕ್ಕರಿಸದೆ, ಕೆಕ್ಕೆರಿಸಿದೆಒಪ್ಪಿಸಿಕೋ ನನ್ನುಸಿರೊಡತಿ( ಸ್ವಲ್ಪ ತಡವಾಗಿ ಪ್ರೇಮಿಗಳ ದಿನಕ್ಕಾಗಿ ಬರೆದದ್ದು)  

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ವಸಂತ್ ಭಾನು, 02/20/2011 - 10:26

ಓ ಶರಣ್ ರೀ ಯಪ್ಪ.. ನಿಮ್ ಕವನ ಬಾರಿ ಛಲೋ ಅದೆರೀ.. ಪ್ರೇಮದ ಕಾಣಿಕೆ ಹೀಗೂ ಉಂಟ ಅನ್ಸೈತ್ರಿ... ನಾನಂತು ನಾಕೈದ್ ಬಾರಿ ಓದ್ಬುಟ್ಟೆ ಇದ್ನ ಬರೆದ ನಿಮ್ಗೆ ಅನಂತಾನಂತ ಧನ್ಯವಾದ ರೀ ............                                                              ವಸಂತ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.