Skip to main content

ಮತ್ತೆ ಮುಂಗಾರು- ಪ್ರೇಮ ಕಥೆಯಲ್ಲದ ಪ್ರೇಮಕಥೆ

ಬರೆದಿದ್ದುAugust 10, 2010
7ಅನಿಸಿಕೆಗಳು

[img_assist|nid=6992|title=|desc=|link=node|align=left|width=150|height=198]ನಿರ್ಮಾಪಕ- ಇ ಕೃಷ್ಣಪ್ಪ
ನಿರ್ದೇಶನ,ಸಂಭಾಷಣೆ,ಚಿತ್ರಕಥೆ- ರಾಘವ್ ದ್ವಾರ್ಕಿ
ತಾರಾಗಣ- ಶ್ರೀನಗರ ಕಿಟ್ಟಿ, ರಚನಾ ಮಲ್ಹೋತ್ರ, ಏಣಗಿ ನಟರಾಜ್, ರವಿಶಂಕರ್
ಸಂಗೀತ-ಪಾಲ್ ರಾಜ್
ಛಾಯಾಗ್ರಹಣ- ಸುಂದರನಾಥ್ ಸುವರ್ಣ
ಇದೊಂದು ಸತ್ಯಕಥೆ ಆಧಾರಿತ ಚಲನಚಿತ್ರ. ಕೆಲ ವರ್ಶಗಳ ಹಿಂದೆ ಶಿವಮೊಗ್ಗದ ತೀರ್ಥಹೞಯಲ್ಲಿ ನಾರಾಯಣ ಮಂಡಗದ್ದೆ ಎಂಬ ವ್ಯಕ್ತಿಯೊಬ್ಬ ಅನಾಮತ್ತು ೨೩ವರ್ಶ ಪಾಕಿಸ್ತಾನದ ಖೈದಿಯಾಗಿ ಕಳೆದುಬಂದ ಕಥೆ ಎಲ್ಲರಿಗೂ ತಿಳಿದಿರಬಹುದು. ಅದೇ ಕಥೆಯ ಎಳೆಯನ್ನು ಹಿಡಿದು ರಾಘವ್ ಕಲಾತ್ಮಕ ಸ್ಪರ್ಶ ನೀಡಿದ್ದಾರೆ.
ನಾರಾಯಣ ಎಂಬುವ ಯುವಕ ಮೀನುಗಾರರ ದೋಣಿಯ ಒಬ್ಬ ಮೆಕಾನಿಕ್, ಒಬ್ಬ ಯುವ ಪ್ರೇಮಿ ಕೂಡ. ಮುಂಬೈನಲ್ಲಿ ಇವರು ಮೀನು ಹಿಡಿಯಲು ಹೊರಟ ದೋಣಿ ಚಂಡಮಾರುತಕ್ಕೆ ಸಿಕ್ಕಿ ಪಾಕಿಸ್ತಾನದ ಗಡಿ ಸೇರುತ್ತದೆ. ಅಲ್ಲಿ ಈ ದೋಣಿಯ ಹನ್ನೊಂದು ಜನರನ್ನು ಕೇವಲ ಭಾರತೀಯ ಹಿಂದೂಗಳೆಂಬ ಕಾರಣಕ್ಕಾಗಿ  ಚಿತ್ರಹಿಂಸೆ ನೀಡಿ ಬ್ಲಾಕ್ ಹೋಲ್ ಗೆ ತೞುತ್ತಾರೆ, ಇವರ ತಂಡದ ಏಕೈಕ ಮುಸ್ಲಿಂ ವ್ಯಕ್ತಿಯನ್ನು ಅವರ ಪರ ವಾದಿಸಿದ್ದಕ್ಕಾಗಿ ನಾಲಿಗೆ ಕತ್ತರಿಸುತ್ತಾರೆ. ಇಪ್ಪತ್ಮೂರು ವರ್ಶದ ಸುಧೀರ್ಘ ಅವಧಿಯನ್ನು ಗಾಳಿಯಿಲ್ಲದ, ಬೆಳಕಿಲ್ಲದ ಅನ್ನ ನೀರಿಲ್ಲದ ಕೊಳಕು ತುಂಬಿದ ಕತ್ತಲೆಯಲ್ಲಿ ಕೇವಲ ಬಿಡುಗಡೆಯ ಕನಸು ಕಾಣುತ್ತಾ ಬದುಕುವುದೇ ಚಿತ್ರದ ಸಾರ. ಪಾಕಿಸ್ತಾನದ ಧೂರ್ತ ಧೋರಣೆ ಈ ಚಿತ್ರದಲ್ಲಿ ಹಸಿಹಸಿಯಾಗಿ ಅನಾವರಣಗೊಂಡಿದೆ
ಚಿತ್ರದ ಎಷ್ಟೋ ದೃಶ್ಯಗಳು ಹಾಲಿವುಡು ಚಿತ್ರಗಳನ್ನು ನೆನಪಿಸಿದರೆ, ಕೆಲವು ದೃಶ್ಯಗಳು ಕಣ್ಣನ್ನು ಮಂಜಾಗಿಸುತ್ತದೆ. ರವಿಶಂಕರ್ ಅಭಿನಯ ಅಚ್ಚುಕಟ್ಟಾಗಿದೆ. ಏಣಗಿ ನಟರಾಜ್ ರನ್ನು ನೋಡಿದಾಗ ಹೆಮ್ಮಿಂಗ್ವೆಯ ಓಲ್ಡ್ ಮೆನ್ ಅಂಡ್ ಸೀ ಯ ಮುದುಕನ ನೆನಪಾಗುತ್ತದೆ. ಇನ್ನೂ ಕೆಲವು ಭಾಗಗಳು ಹೆನ್ರಿ ಶ್ಯಾರಿಯರ್ ನ ಪ್ಯಾಪಿಲಾನ್ ನ್ನು ನೆನಪಿಸಿದರೆ ಆಶ್ಚರ್ಯವೇನಿಲ್ಲ.
ನಾಯಕನ ತಾಯಿಯ ಪಾತ್ರ ಮತ್ತು ಸೆರೆಮನೆಯಲ್ಲಿ ಇವರ ಪಕ್ಕದ ಕೋಣೆಯ ಖೈದಿಯ ಅಗೋಚರ ಸಂಭಾಷಣೆ ಚಿತ್ರದ ಜೀವಾಳ. ಅಗೋಚರ ಖೈದಿಯಾಗಿ ಅಂಬರೀಷರ ದ್ವನಿಯಂತೂ ಅಧ್ಬುತ. 
ಬಿಡುಗಡೆಯಾಗಿ ಬಂದ ನಾಯಕ ತನ್ನ ಮನಗೆ ಹೋಗಿ ಅರಿಯದೇ ತನ್ನದೇ ತಿಥಿಯ ಊಟ ಮಾಡುವ ದೃಶ್ಯ ಮತ್ತು ಕತ್ತಲೆ ಕೋಣೆಯೊಳಗಿಂದ ಸೆರೆವಾಸಿಗಳು ಅನ್ನಕ್ಕಾಗಿ ಕೈ ಚಾಚುವ  ದಾರುಣ ದೃಶ್ಯಗಳಂತೂ ಎಂತಹವರದೂ ಎದೆ ಅಲ್ಲಾಡಿಸಿದದಿರದು.
ಕನ್ನಡದಲ್ಲಿ ಆಶಾ ಭೋಸ್ಲೆಯ ಹಾಡು ಮತ್ತು ಸುಂದರನಾಥ್ ಸುವರ್ಣರವರ ಛಾಯಾಗ್ರಹಣ ಚಿತ್ರದ ಹೈಲೈಟ್
ಒಟ್ಟಾರೆ ಹೇಳಬೇಕಾದರೆ ಒಮ್ಮೆ ನೋಡಲೇಬೇಕಾದ ಚಿತ್ರ. ತಪ್ಪಿಸಿಕೊೞದೇ ನೋಡಿ ಮತ್ತೆ ಮುಂಗಾರು.
ಅಪರೂಪಕ್ಕೆ ಕನ್ನಡದಲ್ಲಿ ಉತ್ತಮ ಚಿತ್ರ ಬಂದಾಗ ಬೆನ್ನು ತಟ್ಟದಿದ್ದರೆ, ಅದು ಅಕ್ಷಮ್ಯ ಅಪರಾಧ!
 
 

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

Umesha (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 08/12/2010 - 10:21

ಚಲನಚಿತ್ರದೊಷ್ಟೇ  ಸವಿಯಾಗಿದೆ  ನಿಮ್ಮ ಲೇಖನ

ಉಮಾಶಂಕರ ಬಿ.ಎಸ್ ಶುಕ್ರ, 08/13/2010 - 12:32

ಬಾಲಣ್ಣ,
ನಿಮ್ಮ ವಿಮರ್ಶೆಗಾದರೂ ಚಿತ್ರನೋಡಬೇಕಿನಿಸುತ್ತಿದೆ. ಈ ಭಾನುವಾರ ನೋಡಿಯೇಬಿಡುತ್ತೇನೆ.

Basavaraj G ಭಾನು, 08/15/2010 - 08:40

ಚಿತ್ರ ಬಂತು ಹೋಯಿತು. ಈ ಚಿತ್ರ ಚನ್ನಾಗಿರಬುಹುದು. ಆದರೆ ಸಿನಿಮಾ ಟೈಟಲ್ ಹಳಸಲು. ಮುಂಗಾರಿನ ಮಳೆ ಚಿತ್ರದ ಟೈಟಲ್ ಇಟ್ಟಿದ್ದಕ್ಕೆ ಚಿತ್ರ ಚನ್ನಾಗಿ ಓಡಿತು ಎನ್ನುವ ಭ್ರಮೆಯಲ್ಲಿ ಮತ್ತೆ ಅದೇ ರೀತಿಯ ಟೈಟಲ್ ನೀಡಿ, ಚಿತ್ರ ಬಿಡುಗಡೆಯಾದಗ ಪೂರ್ವಾಗ್ರಹ ಪೀಡಿತ ಪ್ರೇಕ್ಷಕ, ಇದು ಮುಂಗಾರು ಮಳೆ ಚಿತ್ರದ ಎರಡನೆ ಭಾಗ ಆಗಿರುಬಹುದೆಂದು ಚಿತ್ರ ವೀಕ್ಷಿಸದೆ ಹೋಗುವ ಸಂಭವ ಹೆಚ್ಚು. ಆದ್ದರಿಂದ ಚಿತ್ರಗಳಿಗೆ ಬೇರೆ ಬೇರೆ ಅನ್ವರ್ಥವಾಗುವಂತಹ ಟೈಟಲ್ ಇಟ್ಟರೆ ಉತ್ತಮ. ಕನ್ನಡ ಚಿತ್ರರಂಗದಲ್ಲಿ ಒಂದು ಟ್ರೆಂಡ್ ಯಶಸ್ಸು ಆಯಿತು ಅಂದರೆ ಅದೆ ಸೂತ್ರ ಇಟ್ಟುಕೊಂಡು ಸತಸತವಾಗಿ ಚಿತ್ರಗಳು ಬಿಡುಗಡೆಯಾಗುತ್ತಿವೆ. ಮತ್ತೆ ಮುಂಗಾರು ಟೈಟಲ್ ಇಡುವ ಟ್ರೆಂಡ್ನಿಂದ ಹೊರಬರಲಾಗದೆ ನಿರ್ದೇಶಕ ಜನಪ್ರಿಯತೆಯ ದೃಷ್ಠಿಯಿಂದ ಚಿತ್ರ ಜನರನ್ನು ತಲುಪಿಲ್ಲ. ಸದಾಭಿರುಚಿಯ ಚಿತ್ರಗಳು ಸೋಲುವುದೇ ಹೀಗೆ.  

priya pk ಶುಕ್ರ, 08/27/2010 - 19:00

ಚಿತ್ರ ನೊದಿಲ್ಲ  ಆದ್ರೆ ನಿಮ್ಮ ವಿಮರ್ಶೆ ನೊದಿದಮೆಲೆ ನೊದಲೆಬೆಕು ಅನ್ನಿಸ್ತ ಇದೆ

ರಾಜೇಶ ಹೆಗಡೆ ಶನಿ, 08/28/2010 - 20:57

ನಿಮ್ಮ ವಿಮರ್ಶೆ ಓದಿದ ನಂತರ ಚಿತ್ರ ನೋಡಲೇ ಬೇಕೆಂಬ ಹಂಬಲ ಹೆಚ್ಚಿರುವದಂತೂ ನಿಜ. ಇತ್ತೀಚೆಗಂತೂ ನಾನು ತೀರಾ ಸೆಲೆಕ್ಟಿವ್ ಆಗಿ ಫಿಲಂ ನೋಡುತ್ತಿರುವದರಿಂದ ಹೆಚ್ಚಿನ ಚಿತ್ರಗಳೆಲ್ಲ ಮಿಸ್ ಆಗುತ್ತಿವೆ.

ಸಂತೋಶ ಇನಾಮದಾರ್ ಶುಕ್ರ, 09/03/2010 - 18:06

ಚಿತ್ರ ಇನ್ನೂ ನೋಡಿಲ್ಲ.. ನಿಮ್ಮ ವಿಮರ್ಷೆ ಓದಿದಮೇಲೆ ನೋಡ್ಬೇಕು ಅನ್ನಿಸ್ತಿದೆ.ಆದ್ರೆ ಹಾಡುಗಳಂತೂ ಸೂಪರ್ ಕಣ್ರಿ. ಎಲ್ಲಾ ಕ್ಲಾಸಿಕ್ ಆಗಿವೆ. ಸಾಹಿತ್ಯನೂ ತುಂಬ ಚೆನ್ನಾಗಿದೆ.೫ out of ೫ for songs.. ಸಂತೋಷ 

Uma.H.S ಧ, 10/19/2011 - 09:53

Super Movie
 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.