Skip to main content

ವಿಸ್ಮಯಕ್ಕೊಂದು ಬಿನ್ನಹ

ಬರೆದಿದ್ದುJune 30, 2010
6ಅನಿಸಿಕೆಗಳು

ಪ್ರಿಯ ರಾಜೇಶ್ ಹೆಗಡೆಯವರಿಗೆ ಆತ್ಮೀಯ ವಂದನೆಗಳು,
ವಿಸ್ಮಯನಗರಿ ಕನ್ನಡ ಓದುಗರ ಮೆಚ್ಚಿನ ತಾಣವಾಗುತ್ತಿರುವುದು ಸಂತಸದ ಸಂಗತಿ. ಇದೇ ಧಾಟಿಯಲ್ಲಿ ವಿಸ್ಮಯ ಒಂದು ವರ್ಷ ಯಶಸ್ವಿಯಾಗಿ ಪೂರೈಸಿ ಎಡೆಬಿಡದೆ ಓಡುತ್ತಿದೆ.
ಇಂತಹ ಸಂದರ್ಭದಲ್ಲಿ ವಿಸ್ಮಯ ನಗರಿಗೆ ನನ್ನದೊಂದು ಸಣ್ಣ ಸಲಹೆ. ಸಾಧ್ಯವಾದರೆ ಇದನ್ನು ಕಾರ್ಯರೂಪಕ್ಕೆ ತರಬಹುದು.
ವಿಸ್ಮಯ ನಗರಿಯ ಜನಪ್ರಿಯ ಬರಹಗಾರರ ಎಲ್ಲಾ ಬರಹಗಳು ಸಾಮಾನ್ಯವಾಗಿ ಏಕರೂಪಿ ಚಿಂತನಾ ಲಹರಿಯಿಂದ, ಮನೋಭಾವದಿಂದ ಕೂಡಿರುತ್ತದೆ. ಇದಕ್ಕೆ ತದ್ವಿರುದ್ದವಾಗಿ ಎಲ್ಲೋ ಶಿವಕುಮಾರ್, ತೇಜಸ್ವಿನಿ ಹೆಗಡೆ ಯಂತಹವರು ಮಾತ್ರ ಬೇರೆ ಬೇರೆ ವಿಷಯಗಳ ಮೇಲೆ ವಿಭಿನ್ನ ಧಾಟಿಯ ಲೇಖನ ಬರೆಯುತ್ತಾರೆ.
ಯಾಕೋ ಇತ್ತೀಚೆಗೆ ಉತ್ತಮ ಲೇಖನಗಳ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ ಎನ್ನಿಸುತ್ತಿದೆ, ಅಲ್ಲದೇ ಏಕತಾನತೆಯಿಂದ ನನ್ನಂತಹ ಓದುಗರು ಬೇಸತ್ತಿರುವುದು ಸ್ಪಷ್ಟ.
ಈ ಹಿಂದೆ ಮನೋಹರ ಗ್ರಂಥಮಾಲೆ, ಮಯೂರ ಮಾಸಪತ್ರಿಕೆ " ಖೋ" ಎಂಬ ವಿಶಿಷ್ಟ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದರು. ಇದನ್ನು ವಿಸ್ಮಯದಲ್ಲು ಕೂಡ ತರಬಾರದೇಕೆ?
ಯಾವುದಾದರೂ ನಿಗದಿದ ವಿಷಯದ ಮೇಲೆ ಕಥೆ ಬರೆಯುವಂತೆ ಪ್ರೇರೇಪಿಸುವುದು, ಅದರ ಒಂದು ಭಾಗವನ್ನು ಒಬ್ಬ ಲೇಖಕ ಬರೆದರೆ ಉಳಿದ ಭಾಗವನ್ನು ಮತ್ತೊಬ್ಬರು ಮುಂದುವರೆಸುವುದು. ಇದು ಖೋ ಪ್ರಯೋಗದ ಸಂಕ್ಷಿಪ್ತ ವಿವರಣೆ. ಇದರಿಂದ ಹಲವಾರು ರೀತಿಯ ಚಿಂತನಾ ಲಹರಿಗಳು, ಪದ ಪ್ರಯೋಗಗಳು, ನುಡಿಕಟ್ಟು, ಅನಿರೀಕ್ಷಿತ ತಿರುವುಗಳು ಒಂದೇ ಕಥೆಯಲ್ಲಿ ದೊರೆತು, ಅದು ಓದುಗರಿಗೆ ರಸದೌತಣವಾಗುವುದರಲ್ಲಿ ಸಂದೇಹವಿಲ್ಲ.
ಇಂತಹ ಪ್ರಯೋಗವನ್ನು ಕೈಗೊಂಡರೆ ಈ ಕೆಳಕಂಡ ಸಲಹೆಗಳನ್ನು ತಾವು ಆದೇಶಿಸಬಹುದು
೧) ಪ್ರತಿಬಾರಿಯೂ ವಿಶಿಷ್ಟ ಸ್ವಾರಸ್ಯ ವಿಷಯವನ್ನು ಕಥೆಗಾಗಿ ಸೂಚಿಸುವುದು.
೨)"ಮೊದಲು ಬಂದವರಿಗೆ ಮೊದಲು ಆದ್ಯತೆ" ಪ್ರಕಾರ ಮೇಲಧಿಕಾರಿಯವರು ಇಷ್ಟ ಪಟ್ಟವರಿಗೆ ಅದನ್ನು ಮುಂದುವರೆಸುವಂತೆ ಸೂಚನೆ
೩) ಕಥೆ ನಿಯಮಿತ ಕಂತು ,ನಿಯಮಿತ ವ್ಯಾಪ್ತಿಗೊಳಪಟ್ಟಿರಬೇಕು  ಹಾಗೂ ಲೇಖಕರ ಸಂಖ್ಯೆ  ೬/೭ ಇರಬಹುದು
೪) ಸೂಚಿತ ಸಮಯದೊಳಗೆ ಕಥೆ ಮುಂದುವರೆಸದಿದ್ದರೆ ಅವರಿಗೆ ಕೋಕ್ ನೀಡಿ ಬೇರೆಯವರಿಗೆ ಖೋ
ಈ ಸಲಹೆಯನ್ನು ಮನಗಾಣುವಿರೆಂದು ನಂಬಿದ್ದೇನೆ
ಸಸ್ನೇಹ
ಬಾಲ ಚಂದ್ರ
 

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಶಿವಕುಮಾರ ಕೆ. ಎಸ್. ಗುರು, 07/01/2010 - 16:33

ಐಡಿಯಾ ಚೆನ್ನಾಗಿದೆ!

ಮೇಲಧಿಕಾರಿ ಗುರು, 07/01/2010 - 21:59

ನಮಸ್ಕಾರ ಬಾಲ ಚಂದ್ರ ಅವರೇ,
ಖಂಡಿತ ಇದನ್ನು ಕಾರ್ಯರೂಪಕ್ಕೆ ತರುವದು ಸಾಧ್ಯವಿದೆ. ಶೀಘ್ರದಲ್ಲೇ ಈ ಪ್ರಯತ್ನ ನಡೆಸಲಾಗುವದು. ಇದಕ್ಕೆ ಲೇಖಕರ ಬೆಂಬಲ ಸಹ ಬೇಕು.

SANTOSHKUMAR M… ಮಂಗಳ, 07/13/2010 - 22:08

ಮೇಲಾಧಿಕಾರಿಯವರೆ,
ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಬೆ೦ಬಲವಿದೆ. ದಯವಿಟ್ಟು ಹೊಸ ಪ್ರಯೋಗಗಳು ಬರಲಿ..
 

ಬಾಲ ಚಂದ್ರ ಅವರೆ,
ಆಸಕ್ತಿಕರ ಸಲಹೆ. ಪ್ರಯತ್ನಿಸಿದರೆ ಉತ್ತಮ. ಧನ್ಯವಾದಗಳು.

ಉಮಾಶಂಕರ ಬಿ.ಎಸ್ ಗುರು, 07/08/2010 - 23:12

ಹೌದು ಬಾಲು/ ರಾಜೇಶ್ ಸರ್! ಐಡಿಯಾ ಚೆನ್ನಾಗಿದೆ ಅನ್ನಿಸುತ್ತದೆ, ಎಲ್ಲಾ ವಿಸ್ಮಯನಗರಿಗರೂ ಕುತೂಹಲದ ವಿಷಯವೇ!!

rekha (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/18/2011 - 16:02

anisike and abiraya galu thmuba chenagive..thanks

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.