Skip to main content

ಶಂಭೋ 'ಶಂಕರ' 'IPS' ಮಹಾಭಯಂಕರ!! -ಚಿತ್ರ ವಿಮರ್ಶೆ

ಬರೆದಿದ್ದುMay 31, 2010
5ಅನಿಸಿಕೆಗಳು

[img_assist|nid=6638|title=ಶಂಕರ್ IPS ಚಿತ್ರದ ಒಂದು ದೃಶ್ಯ|desc=|link=node|align=left|width=570|height=404]ಹೀಗೊಂದು ಉದ್ಗಾರ "ಶಂಕರ್ IPS" ಎಂಬ ಚಿತ್ರ ಪ್ರಾರಂಭವಾದಗ ನಿಮ್ಮ ಬಾಯಿಂದ ಹೊರಟರೆ ಚಿತ್ರ ಮುಗಿದರೂ ನಿಲ್ಲುವುದಿಲ್ಲ.
ಇತ್ತೀಚೆಗೆ ಮಾಧ್ಯಮಗಳಲ್ಲಿ ವಿವಾದವೆಬ್ಬಿಸುತ್ತಿರುವ ಕಾರಣಗಳೇನು? ಎಂಬ ಕುತೂಹಲ ತಣಿಸಲು ಚಿತ್ರನೋಡಲು ನೀವೇನಾದರು ಕುಳಿತರೆ ''ಪಿಗ್ಗಿ" ಬೀಳುವುದು ಗ್ಯಾರಂಟಿ.
ಪೊಲೀಸ್ ಅಧಿಕಾರಿ ಶಂಕರ್ ರೇಪ್ ಮಾಡುವವರ, ಮಹಿಳೆಯರ ಮುಖದ ಮೇಲೇ ಆಸಿಡ್ ಹಾಕುವವರ ವಿರುದ್ಧ ಇರುವವನು. ಕಾನೂನಿನಿಂದ ಮಾಡಲಾಗದ್ದನ್ನು ತನ್ನ ರಿವಾಲ್ವರ್‌ನ ಗುಂಡಿನಿಂದ ಮಾಡುವವನು. ಅಂಥವನಿಗೆ  ಅಪರಾಧಿಗಳನ್ನು ಕೊನೆಗೊಳಿಸಲು ‘ಎನ್‌ಕೌಂಟರ್’ ಸುಲಭದ ದಾರಿ. ತಲೆ-ಬುಡವಿಲ್ಲದ ಕಥೆ, ಭಯಾನಕ ಸಂಗೀತ, ಸಾಯಿಪ್ರಕಾಶ್ ರವರಿಗೆ ಸೆಡ್ಡು ಹೊಡೆಯುವ ನಾಯಕನ 'ಡೈಲಾಗ್ ಡಿಲವರಿ' ಮಧ್ಯ ಸ್ವಲ್ಪ ಹೊತ್ತು ವಿಜಯ್ ರವರ 'ಖಂಡ' ಪ್ರಯಾಸ. ಇವಿಷ್ಟು "ಶಂಕರ್ IPS" ಚಿತ್ರದ ಹೈಲೈಟ್ಸ್.
ನಿರ್ದೇಶಕ ರಮೇಶ್ ರವರ ಸಂಭಾಷಣೆ ವಿಜಯ್ ಅಭಿಮಾನಿಗಳ ಶಿಳ್ಳೆ ಗಿಟ್ಟಿಸುತ್ತವೆ, ಅವರು ಸಂಭಾಷಣೆಗೆ ಕೊಟ್ಟಷ್ಟು ಒತ್ತನ್ನು ಕಥೆಗೆ, ನಿರೂಪಣೆಗೆ ಕೊಟ್ಟಿದ್ದರೆ ಸ್ವಲ್ಪವಾದರೂ ಉತ್ತಮವಾಗಿರುತ್ತಿತ್ತೇನೋ.
ವಿಜಯ್ ರವರು ಸಾಹಸದೃಶ್ಯಗಳಲ್ಲಿ ಮಿಂಚುವಷ್ಟು ಅಬಿನಯದಲ್ಲಿ ದುನಿಯಾ ಹ್ಯಾಂಗೋವರ್ ನಿಂದ ಹೊರಬಂದಂತಿಲ್ಲ ಎನ್ನುವುದು ಅವರು ಹೇಳುವ ಮೊದಲ ಸಂಭಾಷಣೆಯಲ್ಲಿಯೇ ತಿಳಿದುಬಿಡುತ್ತದೆ.
ಇನ್ನು ನಾಯಕಿಯರೆಂಬ ಬಣ್ಣದಬೆಡಗಿಯರು ಬಳುಕುವುದರಲ್ಲೇ ಕಾಲಕಳೆದುಬಿಡುತ್ತಾರೆ. ಇದ್ದುದ್ದರಲ್ಲೇ ಅವಿನಾಶ್, ಶೋಭರಾಜ್ ಮನದಲ್ಲಿ ಉಳಿಯುತ್ತಾರೆ. ಇನ್ನು ರಂಗಾಯಣ ರಘು ಅವರು ಚಿತ್ರದ ನಿಜವಾದ ಹೀರೋ ಮತ್ತು ವಿಲನ್ ಎರಡೂ ಆಗಿದ್ದಾರೆ ಎಂದರೆ ತಪ್ಪಿಲ್ಲ. ಸಿಗರೇಟ್ ಕಂಪನಿಯ ಜಾಹಿರಾತಿಗೆ ಫೋಸು ಕೊಡುವವರಹಾಗೆ 'ದಂ' ಎಳೆಯುವ ವಿಜಿಗಿಂತ ಜಾಸ್ತಿ ರಘುಅವರೆ ಮಿಂಚುತ್ತಾರೆ. ಚಿತ್ರಕ್ಕೆ ಸಂಗೀತ ಮತ್ತು ಹಾಡುಗಳು ಪೂರಕವಾಗುವ ಬದಲು ಮಾರಕವಾಗಿವೆ.
ಒಟ್ಟಿನಲ್ಲಿ ಒಂದಕ್ಕೊಂದು ಸಂಬಂಧವಿಲ್ಲದ ದೃಶ್ಯಗಳು, ನಿಧಾನವಾಗಿ ಚಲಿಸುವ ಕಥೆಯಿಂದಾಗಿ ಬೇಸರ ಹುಟ್ಟಿಸುತ್ತದೆ. ಈ ಶೈಲಿಯ ಸಿನಿಮಾಗಳು ಬಹು ಹಿಂದೆಯೇ ತೀರಿಕೊಂಡಿವೆ ಎಂದು ನಿರ್ದೇಶಕರಿಗೆ ಗೊತ್ತಿದ್ದಂತಿಲ್ಲ. ಆಗಷ್ಟೇ ಮಾಡಿದ ಬಿಸಿ ಅಡುಗೆಯಿಂದಲೇ ಪ್ರೇಕ್ಷಕರನ್ನು ಸೆಳೆಯುವುದು ಕಷ್ಟವಾಗಿರುವಾಗ ತೀರ ಹಳಸಲಾಗಿರುವ ಕಥೆಯನ್ನು ಯಾರೂ ಮೂಸಿಯೂ ನೋಡುವುದಿಲ್ಲ.
ಕನ್ನಡ ಚಿತ್ರರಂಗವನ್ನು ಆ "ಶಂಕರ"ನಿಂದಲೂ ಕಾಪಾಡಲು ಸಾಧ್ಯವಿಲ್ಲ!!!!

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ವಿನಯ್_ಜಿ ಧ, 06/02/2010 - 12:42

ವಿಜಯ್ ಇನ್ನೂ "ದುನಿಯ" ಗುಂಗಿನಿಂದ ಹೊರಬಂದಿಲ್ಲ ಉಮಾಶಂಕರ್ ರವರೆ, ಅದಕ್ಕೆ ನಾನು ಅವರ ಚಿತ್ರ "ಜಂಗ್ಲಿ" ನೋಡಿದ ಮೇಲೆ ಇನ್ನೂ ಮುಂದೆ ಅವರ ಯಾವ ಚಿತ್ರವ ನೋಡುವ ಮನಸ್ಸು ಮಾಡುವುದಿಲ್ಲ...! ಕೇವಲ ಸುದ್ಧಿಯಿಂದಲೇ ಪ್ರಸಿದ್ಧಿಯಾಗವ ಇಂತಹ ಚಿತ್ರಗಳ ಬಗ್ಗೆ ಹೇಳಲು ಇನ್ನೇನು ತಾನೇ ಉಳಿದಿದೆ ಹೇಳಿ... -- ವಿನಯ್

ನಿಮ್ಮ ಮಾತು ನಿಜ ವಿನಯ್ ಸರ್ ವಿಜಯ್ ಅವರಿಗೆ ಹೀರೋ ಆಗಬೇಕೆನಿಸಿದೆಯೇ ಹೊರತು "ನಟ" ಆಗಬೇನಿಸಿದ್ದಂತಿಲ್ಲ

Basavaraj G ಸೋಮ, 06/07/2010 - 19:16

ಉಮಾಶಮಂಕರರವರೆ ಪ್ರಪಮಂಚ ವೈವಿಧ್ಯಮಯ ನಾನು ನೀವು ತಿಳಿದುಕೊಂಡಷ್ಟು ಸರಳವಾಗಿಲ್ಲ. ಮಾನವ ಸಂಕೀರ್ಣ ಗುಣಗಳನ್ನು ಹೊಂದಿದವನ್ನು. ಪ್ರತಿಯೊಬ್ಬ ವ್ಯಕ್ತಿ ತನದೆ ಆದ ಹವಾಸ್ಯಗಳನ್ನು ಹೊಂದಿದ್ದನೆ, ಅದೆ ರೀತಿ ಒಂದೇ ತೆರನಾದ ಗುಣ ಲಕ್ಷಣಗಳನ್ನು ಹೊಂದಿರುವ ಜನರು ಇರುತ್ತಾರೆ. ಭಾರತದಲ್ಲಿ ಈ ರೀತಿ ಒಂದೇ ತೆರನಾದ ಗುಣಲಕ್ಷಣಗಳನ್ನು ಹೊಂದಿರುವ ಜನರ ಗುಂಪು ಜಾಸ್ತಿ. ಸಿನಿಮಾ ನಟರಿಗೆ ದೇವಾಲಯ ನಿರ್ಮಿಸುವುದು ಅವರನ್ನು ದೇವರಂತೆ ಪೂಜಿಸುವುದು. ಈ ರೀತಿಯ ವರ್ತನೆ ಹೆಚ್ಚಿರುವುದು ತಮಿಳು ಮತ್ತು ತೆಲುಗು ಜನರಲ್ಲಿ. ಎನ್.ಟಿ.ರಾಮರಾವ್ ರನ್ನು ದೇವರಂತೆ ಪೂಜಿಸಿದರು ಆಂದ್ರದ ಜನ. ಖುಷ್ಬೂಗೆ ದೇವಸ್ಥಾನ ನಿರ್ಮಿಸಿದರು ತಮಿಳು ಜನ. ತೆಲುಗಿನಲ್ಲಿ ಬರುವ ಶಂಕರ್ ಐ.ಪಿ.ಎಸ್. ತರದ ನೊರಾರು ಸಿನಿಮಾಗಳನ್ನು ಕನ್ನಡ ಮಂದಿ ಮುಗಿದುಬಿದ್ದು ನೋಡುತ್ತಾರೆ. ಉದಾಃ ಬಾಲಕೃಸಷ್ಣರವರ ನರಸಿಂಹರೆದಡ್ಡಿ, ಚಿರಂಜೀವಿಯ ಮೃಗಾ, ನಾಗರ್ಜುನನ ಮಾಸ್ ಇತ್ಯಾದಿ. ಇದಕ್ಕೆ ಕಾಲಮಾನ. ಏನೆ ಇರಲಿ ಜನಕ್ಕೆ ಬೇಕಾಗುದದುನ್ನು ನೀಡಿ ಹಣ ಮಾಡುವುದು ಸಿನಿಮಾದವರ ವೃತ್ತಿ. ಇಂತಹ ಸಿನಿಮಾಗಳನ್ನು ಮನೋರಂಜನೆಗೆ ಮಾಡುವಂತಹ ಅಡಗೋಲಜ್ಜಿ ಕತೆಗಳಿದಂತೆ. ಯಂಡಮೂರಿಯ್ವರ ಕಾದಂಬರಿಗಳಿದ್ದಂತೆ. ಇವಗಳ ಕಾಲಾವಧಿ ಸೀಮಿತ. ಈ ಚಿತ್ರಗಳನ್ನು ನೋಡಿ ಚಿತ್ರ ಮಂದಿರದಲ್ಲಿಯೇ ಮರೆತು ಬರಬೇಕು. ಇವುಗಳನ್ನು ವಿಮರ್ಶಿಸುವ ಅವಶ್ಯಕತೆ ಇರುವುದಿಲ್ಲ. ವಿಮರ್ಶಿಸುವ ಗುಣಮಟ್ಟದವು ಇವುಗಳಲ್ಲ. ಇವುಗಳಿ ಅವುಗಳದೆ ಆದ ವೀಕ್ಷಕ ಗುಂಪು ಇರುತ್ತದೆ. ಇನ್ನೂ ಮುಂದೆ ಮನಸಿನಲ್ಲಿ ಉಳಿಬಹುದಾಂತಹ ಚಿತ್ರಗಳನ್ನು ವಿಮರ್ಶಿಸಿ.

ಉಮಾಶಂಕರ ಬಿ.ಎಸ್ ಮಂಗಳ, 06/08/2010 - 21:33

ಪ್ರಿಯ ಬಸವರಾಜ್ ರವರೆ
ಮೊದಲಿಗೆ ಹೆಚ್ಚು ಕಡಿಮೆ ನನ್ನ ಲೇಖನಕ್ಕಿಂತಲೂ ಉದ್ದವಾದ ಅಭಿಪ್ರಾಯ ನೀಡಿದ್ದಕ್ಕೆ ಧನ್ಯವಾದಗಳು. ನೀವೇ ಹೇಳಿದಂತೆ "ಪ್ರಪಮಂಚ ವೈವಿಧ್ಯಮಯ ನಾನು ನೀವು ತಿಳಿದುಕೊಂಡಷ್ಟು ಸರಳವಾಗಿಲ್ಲ". ಆದ್ದರಿಂದ ನನಗೆ ಇಷ್ಟವಿಲ್ಲದ್ದನ್ನು ಇಷ್ಟವಿಲ್ಲ ಎಂದೂ, ಇಷ್ಟವಾದ್ದನ್ನು ಇಷ್ಟ ಅಂತಲೂ ಹೇಳಿದ್ದೇನೆ, ನೀವೇ ಹೇಳುವಂತೆ ಏನೆ ಇರಲಿ ಜನಕ್ಕೆ ಬೇಕಾಗುದದುನ್ನು ನೀಡಿ ಹಣ ಮಾಡುವುದು ಸಿನಿಮಾದವರ ವೃತ್ತಿ, ಕಾಸು ಕೊಟ್ಟ ಜನಕ್ಕೆ ಮೋಸವಾಗಬಾರದೆಂಬ ಒಳ್ಳೆಯ ಮನಸ್ಸಿನಿಂದ ಈ ವಿಮರ್ಶೆಯನ್ನು ಪ್ರಕಟಿಸಿದ್ದೇನೆ. ಅದೇ ರೀತಿ ಮನಸಿನಲ್ಲಿ ಉಳಿಬಹುದಾಂತಹ ಚಿತ್ರಗಳು ಕನ್ನಡದಲ್ಲಿ ಸಧ್ಯಕ್ಕೆ ಬರುತ್ತವೆಂದು ನನಗನಿಸುತ್ತಿಲ್ಲ ಬಂದಾಗ ಖಂಡಿತವಾಗಿಯೂ ವಿಮರ್ಶಿಸುತ್ತೇನೆ.
ನಿಮ್ಮ
ಉಮಾಶಂಕರ

ವಿ.ಎಂ.ಶ್ರೀನಿವಾಸ ಸೋಮ, 06/21/2010 - 15:11

ಬಸವರಾಜರವರೇ ಚಿರಂಜೀವಿಯವರ ಹಿಟ್ ಸಿನಿಮಾ ಮೃಗಾ ಅಂತ ಹೇಳಿದ್ದೀರಿ.! ಅದು ತಪ್ಪು. ಅದು ಮೃಗಾ ಅಲ್ಲ,ಮೃಗರಾಜ ಆದರೆ ಇದು ತೋಪು ಸಿನಿಮಾ. ಸತ್ಯಾಂಶಗಳು ಮರೆಯಾಗಬಾರದು ಸಾರ್.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.