Skip to main content

ಪ್ರಚಾರದ ಹುಚ್ಚು ಮತ್ತು ನಮ್ಮ ಮಂತ್ರಿಗಳೆಂಬ ಮಂದ ಮತಿಗಳು!!!

ಬರೆದಿದ್ದುMay 10, 2010
8ಅನಿಸಿಕೆಗಳು

ನಾಗಿದೆ ನಮ್ಮ ಮಂತ್ರಿ ಮಹೋದಯರಿಗೆ? ಮೊನ್ನೆ ಮೊನ್ನೆ ತಾನೆ ವಿದೇಶಾಂಗ ಸಚಿವ ಶಶಿ ತರೂರ‍್ ಅಂತೂ ತನ್ನದೇ ಆದ ಸರ್ಕಾರದ ನೀತಿಗಳ ಬಗ್ಗೆ ಅಂತೂ ಬಾಯಿಗೆ ಬಂದತದ್ದನ್ನು ಒದರಿ ಬಣ್ಣಗೇಡಿ ಯಾದದ್ದು ಎಲರಿಗೂ ತಿಳಿದದ್ದೆ. ಅದೇ ರೀತಿ ವಾಣಿಜ್ಯ ಸಚಿವ ಕಮಲ್ ನಾಥ್ ಮತ್ತು ಚಿದಂಬರಂ ನಡುವಿನ ವಿರಸ, ದೂರ ಸಂಪರ್ಕ ಸಚಿವ ರಾಜಾ ರವರ ರಗಳೆ ಒಂದೇ ಎರಡೇ? ಹೇಳುತ್ತಾ ಹೋದರೆ ಮುಗಿಯುವುದಿಲ್ಲವೇನೋ ಅನ್ನಿಸುತ್ತದೆ. ಅಂದಹಾಗೆ ಇದು ಬರೀ ಈಗಿನ ಸರ್ಕಾರದ್ದಷ್ಟೇ ಸಮಸ್ಯೆಯಲ್ಲ. ಬಿ.ಜೆ.ಪಿ ಸರ್ಕಾರದಲ್ಲಿ ಜಸ್ವಂಸಿಂಗ್ ಮತ್ತಿ ಎಲ್. ಕೆ. ಅಡ್ವಾಣಿ ಯವರ ವಿರಸವಂತೂ ಭಾರಿ ಜನಜನಿತ. ಇನ್ನು ಜನತಾಪರಿವಾರದ ಸರ್ಕಾರವಿದ್ದಾಗಲಂತೂ ಎಲ್ಲರೂ ಪ್ರಧಾನಮಂತ್ರಿಗಳೇ. ಇವತ್ತಿಗೆ ಹೊಸ ಸೇರ್ಪಡೆ ನಮ್ಮ ಕನ್ನಡಿಗರೇ ಆದ ಶ್ರಿ ಜೈರಾಂರಮೆಶ್ ರವರು ಅಷ್ಟೆ.
ತಾವೊಂದು ತುಂಬಾ ಜವಾಬ್ದಾರಿಯುತ ಸ್ಥಾನದಲ್ಲಿದ್ದೇವೆ, ನಮ್ಮ ಮಾತುಗಳನ್ನಾಗಲಿ, ನಮ್ಮ ನಡತೆಯನ್ನಾಗಲಿ ನಮ್ಮದೇಶವಷ್ಟೇ ಅಲ್ಲ, ಇಡೀ ಪ್ರಪಂಚವೇ ಗಮನಿಸುತ್ತದೆ, ಅಷ್ಟೇ ಅಲ್ಲ ನಮ್ಮ ಮಾತುಗಳು ನಮ್ಮ ದೇಶದ ಘನತೆಯನ್ನು ಗೌರವವನ್ನು ಕಾಪಾಡಬಲ್ಲವು/ ಹರಾಜು ಸಹ ಹಾಕಬಲ್ಲವು ಎಂಬ ಪರಿಜ್ನಾನವೂ ಇಲ್ಲದೇ ಆಚಾರವಿಲ್ಲದ ನಾಲಗೆಯನ್ನು ಹರಿಯಬಿಡುತ್ತಾರೆ. ಆಚಾರಮುಖ್ಯವಲ್ಲ ಪ್ರಚಾರ ಬೇಕೆನ್ನುವ ಜಾತಿಯವರು, ಇವರು ಮಾತನಾಡುವ ರೀತಿ ನೋಡಿದವರಾರಿಗಾದರೂ ಇವರ ಪ್ರಚಾರದ ಹುಚ್ಚು ಅರ್ಥವಾದೀತು
ಈಗ ಜೈರಾಂರಮೇಶ್ ಮತ್ತೊಮ್ಮೆ ಮಾಡಿರುವುದನ್ನು ಅದನ್ನೇ. ಇದೇನು ಅವರಿಗೆ ಹೊಸತಲ್ಲ, ಮೊನ್ನೆ, ಮೊನ್ನೆ ಯಾವುದೋ ವಿಶ್ವವಿದ್ಯಾನಿಲಯದ ಘಟಿಕೋತ್ಸವವೊಂದರಲ್ಲಿ ಭಾಷಣ ಮಾಡುವ ಮುನ್ನ ತಾವೇನೋ ಭಾರಿ ಸಮಾಜಸುಧಾರಕ, ಚಿಂತಕ ಎಂದು ತೋರಿಸುವ ಭರದಲ್ಲಿ ಪಾಪ ವಿಶ್ವವಿದ್ಯಾನಿಲಯದವರು ತೊಡಿಸಿದ್ದ ಗೌನನ್ನು ಕಿತ್ತೊಗೆದು "ನನಗೆ ಇನ್ನೂ ದಾಸ್ಯದಲ್ಲಿರಲು ಇಷ್ಟವಿಲ್ಲ ಅದಕ್ಕೆ ಗೌನನ್ನು ಕಿತ್ತೊಗೆಯುತ್ತಿದ್ದೇನೆ" ಅಂತ ಪೋಸು ಕೊಟ್ಟರು. ಆದರೆ "ಅಯ್ಯೋ ಅವಯ್ಯುಂಗೆ ಸೆಕೆಆಯ್ತಂತೆ ಅದ್ಕೆ ಗೌನ್ ಕಿತ್ತಾಕಿ ಶೋ ಕೊಡ್ತಾವ್ರೆ" ಅಂತ ಅಕ್ಕಪಕ್ಕದವರು ಮಾತನಾಡಿಕೊಂಡಿದ್ದು ಸಾಹೇಬರ ಕಿವಿಗೆ ಬೀಳಲೇಇಲ್ಲ. ಆದರೂ ತಮ್ಮ ಎಲುಬಿಲ್ಲದ ನಾಲಿಗೆಯನ್ನು ಕೋಪನ್ ಹೇಗನ್ ನ ಜಾಗತಿಕ ತಾಪಮಾನದಲ್ಲಿ ಮತ್ತೂ ಹೊರಳಾಡಿಸಿದರು. ಅಲ್ಲಿ ನಮ್ಮ ದೇಶದ ಗೌರವಕ್ಕೆ ಹೇಳಿಕೊಳ್ಳುವಂತಹ ಧಕ್ಕೆಯೇನೂ ಆಗದಿದ್ದರೂ ಅವರ ಮಾತಿನ ಮಹತ್ವದ ಅರಿವು ಜಗಜ್ಜಾಹೀರಾಯ್ತು.
ಹೋಗಲಿಲಿ ಅಂತಾ ಸುಮ್ಮನಿದ್ದರೆ ಇಂದು ಬೆಳಿಗ್ಗೆ ಅವರು ಚೀನಾ ಭೇಟಿಯವೇಳೆ ಉದುರಿಸಿದ್ದ ಅಣಿಮುತ್ತುಗಳು ಬಹಿರಂಗವಾಗಿವೆ. "ನಮ್ಮ ದೇಶದ ಗೃಹ ಇಲಾಖೆ ನಾಲಾಯಕ್ಕು, ಅದಕ್ಕೆ ಬುದ್ದಿಭ್ರಮಣೆಯಾಗಿದೆ" ಇತ್ಯಾದಿ, ಇತ್ಯಾದಿಯಾಗಿ ಮಾತನಾಡಿರುವುದು ಬೇರೆಲ್ಲೂ ಅಲ್ಲ. ಅದೂ ನಮ್ಮ ಮೇಲೆರಗಲು ಕಾಯುತ್ತಿರುವ ದೇಶದಲ್ಲಿ . ಅಲ್ಲಿ ಇಂತಹ ಮಾತುಗಳನ್ನಾಡಿದರೆ ಏನಾಗಿತ್ತದೆ ಎಂಬ ಸಣ್ಣ ಅರಿವೂ ಇಲ್ಲದ ಬುದ್ದಿಗೇಡಿಯೊಬ್ಬರನ್ನು ಒಂದು ಜವಾಬ್ದಾರಿಯುತ ಜಾಗದಲ್ಲಿ ಕೂರಿಸಿರುವ ನಾವೇ ಪುಣ್ಯವಂತರಲ್ಲವೇ?
ಇನಾದರೂ ತಾವು ಮಾತನಾಡುವಾಗ ಎಚ್ಚರವಹಿಸಿಮಾತನಾಡಿದರೆ ಒಳ್ಳೆಯದಲ್ಲವೇ? ರಮೇಶ್ ಸರ್.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ಎಂಬ ನಿಮ್ಮದೇ ನಾಡಿನ ಶರಣರು ಹೇಳಿದ್ದು ಬಹುಶಃ ಮರೆತುಹೋಯ್ತೇ?
ನಿಮಗಎಲ್ಲಿ ಗೊತ್ತಿರಬೇಕು ವಚನಗಳು, ಎಷ್ಟೇ ಆಗಲಿ ವಿದೇಶದಲ್ಲಿ ಕಲಿತವರಲ್ಲವೇ ನೀವು

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ಕೆಎಲ್ಕೆ ಮಂಗಳ, 05/11/2010 - 10:03

ಅತಿ ಪ್ರಾಮಾಣಿಕ, ಬುಧ್ಧಿವಂತ, ವಿವೇಕಿ ಎಂದು ಹೆಸರು ಪಡೆದಿರುವ ಜೈರಾಮ್ ರಮೇಶ್ ಇಂಥ ಮುಜುಗರದ ಸನ್ನಿವೇಶ ತಂದು ಒಡ್ಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಚೀನಾ ಬಗೆಗಿನ ಅವರ ಸೌಮ್ಯ ನೀತಿ ಎಲ್ಲರಿಗೂ ತಿಳಿದದ್ದೇ. ಅದು ಅವರ ಪುಸ್ತಕ " Making Sense of Chindia " ದಲ್ಲಿ ವ್ಯಕ್ತವಾಗಿದೆ. ಆದರೆ ಅವರ ಈ ವರ್ತನೆ ಅಸಮಾಧಾನಕರ.
ಅಂದಹಾಗೆ, ಅವರು ಕನ್ನಡದವರಾದರೂ, ಮಾತ್ರಭಾಶೆ ತಮಿಳು ಎಂಬುದು ನನ್ನ ತಿಳುವಳಿಕೆ, ನಿಜವೇ??

ತಿಮ್ಮೆಶ್ ಮಂಗಳ, 05/11/2010 - 11:05

ಈ ರಾಜಕೀಯ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಏನೂ ಬೇಕಾದರು ಮಾಡುತ್ತಾರೆ. ನಿಸ್ವಾರ್ಥಿ, ದೇಶಪ್ರೇಮಿ, ರಾಜಕಾರಣಿಗಳಿಂದ ಮಾತ್ರ ದೇಶದ ಉನ್ನತಿ ಸಾದ್ಯ. ಅದರೆ ಸದ್ಯ ಅಂತಹ ರಾಜಕಾರಣಿ ನಮ್ಮಲ್ಲಿ ಇಲ್ಲದಿರುವುದೇ ನಮ್ಮ ಸಮಸ್ಯೆ.

PANDURANGA ACHARYA ಮಂಗಳ, 05/11/2010 - 12:51

ಇಂತಹ ಹೇಳಿಕೆ ನಮ್ಮನ್ನಾಳುವ ಸರ್ಕಾರದ ಮಂತ್ರಿಗಳಿಂದ ಬಂದಿರುವುದು ಅನಪೇಕ್ಷಿತ. ಜನರನ್ನು ದಿಕ್ಕುತಪ್ಪಿಸುವ ಹಾಗೂ ವಿಷಯವಂಚಿಸುವ ತನ್ನ ನಿರ್ಧಾರಕ್ಕೆ ಬದ್ಧವಾದಂತಹ ಸರ್ಕಾರಗಳಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ. ಒಟ್ಟಿನಲ್ಲಿ ಸುದ್ದಿ ಮಾಧ್ಯಮಗಳಿಗೆ ಟಿ ಆರ್ ಪಿ ಹೆಚಿಸಿಲಕ್ಕೊೞಲು ಒಂದು ಒೞೆಯ ಸ್ಟೋರಿ ಅಷ್ಟೆ.
ಮೂರು ಬಿಟ್ಟವನು ಭಾರತದ ರಾಜಕಾರಣಿ ಆಗುತ್ತಾನೆಂಬುದು ಮತ್ತೊಮ್ಮೆ ಸಾಬೀತಾಯಿತು. ಇಂತಹ ಹೇಳಿಕೆಯನ್ನು ಚೀನ ಅಥವಾ ಪಾಕಿಸ್ತಾನದಂತಹ ರಾಷ್ಟ್ರಗಳ ರಾಜಕಾರಣಿಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ.

ಕೆಎಲ್ಕೆ ಮಂಗಳ, 05/11/2010 - 17:03

ತಿಮ್ಮೇಶ್/ಪಾಂಡುರಂಗಃ ನಿಮ್ಮಗಳ ಪ್ರತಿಕ್ರಿಯೆಯಲ್ಲಿ ಜೈರಾಮ್ ರಮೇಶ್ ಕೂಡ ನಾಲಾಯಕ್ ರಾಜಕಾರಣಿಗಳ ಸಾಲಿನಲ್ಲಿ ಸೇರಿರುವವರು ಎನ್ನುವ ಧಾಟಿಯಿದೆ. ಅದು ಸತ್ಯಕ್ಕೆ ದೂರ. ಅವರು ಚಿನಾ ದೇಶದಲ್ಲಿ ನೀಡಿದ ಹೇಳಿಕೆಯಬಗ್ಗೆ ನನಗೂ ವಿರೋಧವಿದೆ. ಅಂದಮಾತ್ರಕ್ಕೆ ಅವರು ಈ ರೀತಿಯ ತೆಗಳಿಕೆಗಳಿಗೆ ಖಂಡಿತಾ ಅರ್ಹರಲ್ಲ. ದೇಶ ಕಂಡ ಅಪರೂಪದ, ಪ್ರಾಮಾಣಿಕ, intellectual ಮಂತ್ರಿಗಳಲ್ಲಿ ಅವರೂ ಒಬ್ಬರು. MoEF ಎನ್ನುವ ಕೇಂದ್ರ ಖಾತೆ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ನಾನು ಹತ್ತಿರದಿಂದ ಬಲ್ಲೆ. ರಮೇಶ್ ಆ ಖಾತೆಯ ಮಂತ್ರಿಯಾದಮೇಲೆ ಅಲ್ಲಾದ ಬದಲಾವಣೆಗಳನ್ನೂ ಬಲ್ಲೆ.
ಅಂದಹಾಗೆ, "....ಬುದ್ದಿಗೇಡಿಯೊಬ್ಬರನ್ನು ಒಂದು ಜವಾಬ್ದಾರಿಯುತ ಜಾಗದಲ್ಲಿ ಕೂರಿಸಿರುವ..." ಎನ್ನುವಂತಹ ಸಾಲುಗಳನ್ನು ಉಮಾಶಂಕರರು ರಮೇಶ್ ಬಗ್ಗೆ ಬಳಸಿರುವುದು ಬೇಸರದ ಸಂಗತಿ.
 
 

ಉಮಾಶಂಕರ ಬಿ.ಎಸ್ ಮಂಗಳ, 05/11/2010 - 17:23

ಕೆ ಎಲ್ಕೆ ಸರ್,
ಮೊದಲಿಗೆ ನಿಮ್ಮ ಪ್ರತಿಕ್ರಿಯೆಗಳಿಗೆ ವಂದನೆಗಳು,
ಶ್ರೀ ಜೈ ರಾಂ ರಮೇಶ್ ದೇಶ ಕಂಡ ಅಪರೂಪದ, ಪ್ರಾಮಾಣಿಕ, intellectual ಮಂತ್ರಿಗಳಲ್ಲಿ ಒಬ್ಬರು. ಎಂಬ ನಿಮ್ಮ ಮಾತು ಸತ್ಯ. ಆದರೆ ಪದೇ ಪದೇ ಮಾಡಿದ ತಪ್ಪನ್ನು ಮಾಡುತ್ತಲೇ ಇರುವುದರಿಂದ ಮೇಲಿನ ಪದಪುಂಜ ಸರಿಯಾದ ಬಳಕೆ ಎನಿಸಿತು, ಅಲ್ಲದೇ ಅವರ ವಾಗ್ಝರಿ ಇಂದು ಮಧ್ಯಾನ್ಹವೂ ಮುಂದುವರಿದೇ ಇದೆ.
 ಚಿಕ್ಕಮಗಳೂರು ಅವರ ಸ್ವಂತ ಸ್ಥಳ

ಉಮಾಶಂಕರ ಬಿ.ಎಸ್ ಮಂಗಳ, 05/11/2010 - 17:26

ತಿಮ್ಮೇಶ್ ಮತ್ತು ಪಾಂಡುರಂಗ ಆಚಾರ್ಯರೆ ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

ವಿನಯ್_ಜಿ ಮಂಗಳ, 05/11/2010 - 18:57

ಉಮಾಶಂಕರ್ ರವರೆ,
ಕೆಲವೊಮ್ಮೆ ಅತೀ ಬುದ್ಧಿವಂತ ರಾಜಕಾರಣಿಗಳು ಸಹ ತಾವುಗಳು "ಮಂಗನ" ಕುಲದವರೆ ಎಂದು ಸಾರುವ ಪ್ರಯತ್ನ ಮಾಡುತ್ತಾರೆ. ಹೇಗಿದ್ದರೂ "ಮಾರ್ಕಟ" ಮನಸ್ಸು ತಾನೇ...! ಕಪಿ ಚೇಷ್ಟೆ ಇದದ್ದೇ ಬಿಡಿ... ಇವರ ಮಾತು,ಮಾಡುವ ಕೆಲಸ ಸಾಮನ್ಯರಿಗೆ ಮಜಾ ತಂದು ಕೊಡುವ ಸನ್ನಿವೇಶಗಳೇ...

ತಲೆಹರಟೆ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 05/15/2010 - 16:29

ಇಂದು ವಿಚಾರವಂತರಿಗಿಂತ ಪ್ರಚಾರವಂತರಿಗೆ ಹೆಚ್ಚು ಬೆಲೆ ಕೊಡುವ ಕಾಲ ಬಂದಿದೆ. ಹಿಂದೆ ಒೞೆ ಕೆಲಸ ಮಾಡಿದ್ರೆ ಒೞೆ ಹೆಸರು, ಪ್ರಚಾರ ಸಿಗ್ತಿತ್ತು. ಕೆಟ್ಟ ಕೆಲಸ ಮಾಡಿದ್ರೆ ಸ್ಥಾನ ಹಾಗೂ ಮಾನ ಎರಡೂ ಹೋಗ್ತಿತ್ತು. ಈಗ ಕಾಲ ಬದಲಾಗಿದೆ - ಏನೇ ಆಗ್ಲಿ, ಪ್ರಚಾರ ಬೇಕು - ಮಾಧ್ಯಮದವರಿಗೂ ಅಶ್ಟೆ- ತಮ್ಮ ಚಾನಲ್ಗಳ  TRP ಹೆಚ್ಚಿಸಲು ಇಂತಹವರ 'soundbites' ಗಳೇ ಬೇಕು. ಕಾಲಾಯ ತಸ್ಮೈ ನಮಹಃ.....
 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.