Skip to main content

ಬ್ಲಾಗಿನಲ್ಲಿ ಸಿಕ್ಕ ಕೞಮಾಲು!

ಬರೆದಿದ್ದುApril 20, 2010
8ಅನಿಸಿಕೆಗಳು

ಅನುಭವಗಳು ಯಾವತ್ತೂ ಸ್ವಂತದ್ದು. ಆದರೆ ಯಾರೋ ಬರೆದ ಲೇಖನವನ್ನು ತನ್ನದೆಂದು ಹೇಳಿಕೊೞುವವರಿಗೆ ಏನೆನ್ನಬೇಕು? ಇಲ್ಲಿ ನೋಡಿ ಒಂದು ಉದಾಹರಣೆ.
೨೨ ಫೆಬ್ರವರಿ ೨೦೧೦ರಂದು ನಾನು ವಿಸ್ಮಯನಗರಿಯಲ್ಲಿ ಬರೆದ ಲೇಖನವೊಂದನ್ನು ಈ ಬ್ಲಾಗಿಗ ತನ್ನ ಹೆಸರಿನಲ್ಲಿ ಪ್ರಕಟಿಸಿಕೊಂಡಿದ್ದಾನೆ. ಇಂತಹವರಿಗೆ ಏನನ್ನೋಣ ಹೇಳಿ?
http://hegadal.blogspot.com/2010_02_01_archive.html
ಸಸ್ನೇಹ
ಬಾಲ ಚಂದ್ರ

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಉಮಾಶಂಕರ ಬಿ.ಎಸ್ ಮಂಗಳ, 04/20/2010 - 18:13

ನೀವು ಫೆ.೨೨ ರ ಪಿಸುಮಾತಿನಲ್ಲಿ ಪ್ರಕಟಿಸಿದ್ದರೆ ಆ ಭೂಪ ಫೆ ೨೪ರಂದು ಟಂಕಿಸಿದ್ದಾರೆ.
ಹೌದು ಬಾಲಣ್ಣ ಅದು ನಿಮ್ಮ ಲೇಖನವೇ. ಅದನ್ನು ರವೀಂದ್ರ ಹೆಗಡೇಹಾಳ್ ಎನ್ನುವವರು ಕದ್ದಿರುವುದು ಸ್ಪಷ್ಠ
ರಾಜೇಶ್ ಸರ್ ಇದಕ್ಕೇನಾದರೂ ಪರಿಹಾರವಿದೆಯೇ? ಯೋಚಿಸಿ ಸಾರ್

ರಾಜೇಶ ಹೆಗಡೆ ಮಂಗಳ, 04/20/2010 - 21:28

ಇದಕ್ಕೆ ಪರಿಹಾರ ಇದೆ ಉಮಾಶಂಕರ್ ಅವರೇ,
ನಾನು ಕೂಡ  ಲೇಖನ ಕಿತ್ತು ಹಾಕುವಂತೆ ಅಭಿಪ್ರಾಯ ಹಾಕಿದ್ದೇನೆ. ಕಾದು ನೋಡೋಣ.
ಇಲ್ಲದಿದ್ದರೆ ಬ್ಲಾಗ್ಗರ್.ಕಾಂ ಗೆ ದೂರು ನೀಡೋಣ.
ಬಾಲಚಂದರ್ ಅವರೇ,
ಚಿಂತಿಸಬೇಡಿ ನಿಮ್ಮ ಪಿಸುಮಾತಿನಿಂದ ಕದ್ದ ಲೇಖನ ಕಿತ್ತುಹಾಕುವಂತೆ ರವೀಂದ್ರ ಹೆಗಡೇಹಾಳ್ ಅವರಿಗೆ ಮನವಿ ಮಾಡಲಾಗಿದೆ. ಕಾದು ನೋಡೋಣ. ಕೃತಿಚೌರ್ಯ ಸಮಾಜಕ್ಕೆ ಅಂಟಿದ ಪಿಡುಗು. ಅನೇಕ ಕೃತಿಚೌರ್ಯ ಲೇಖನ ವಿಸ್ಮಯದಲ್ಲೂ ಕೆಲವರು ಹಾಕುತ್ತಿರುತ್ತಾರೆ. ಅದನ್ನು ಪತ್ತೆ ಮಾಡಿ ಕಿತ್ತುಹಾಕುವದೇ ಒಂದು ದೊಡ್ಡ ತಲೆನೋವು.
ರವೀಂದ್ರ ಹೆಗಡೇಹಾಳ್ ಅವರಿಗೆ ಮನವಿ ಪತ್ರ ಹೀಗಿದೆಃ
ನಮಸ್ಕಾರ ರವೀಂದ್ರ ಹೆಗಡೇಹಾಳ್ ಅವರೇ,

ನಿಮ್ಮ ಬ್ಲಾಗ್ ನಲ್ಲಿ ಇರುವ ಲೇಖನ ವಿಸ್ಮಯ ನಗರಿಯಿಂದ ಬಾಲಚಂದ್ರ ಅವರ ಪಿಸುಮಾತಿನಿಂದ ಕದ್ದಿದ್ದು ಸುಸ್ಪಷ್ಟ.
ಹೀಗೆ ಬೇರೆಯವರು ಬರೆದ ಲೇಖನ ಕದಿಯುವದು ಅಕ್ಷಮ್ಯ ಅಪರಾದವಾಗಿದೆ.
ದಯವಿಟ್ಟು ಈ ಲೇಖನ ಇಲ್ಲಿಂದ ಕಿತ್ತು ಹಾಕಬೇಕಾಗಿ ವಿನಂತಿ.
ಇಲ್ಲದಿದ್ದರೆ ಬ್ಲಾಗ್ಗರ್.ಕಾಂ ಗೆ ದೂರು ನೀಡಿ ನಿಮ್ಮ ಅಕೌಂಟ್ ಅನ್ನು ಬ್ಲಾಕ್ ಮಾಡಿಸಬೇಕಾಗುತ್ತದೆ. ಇದಕ್ಕೆ ಆಸ್ಪದ ನೀಡಬಾರದಾಗಿ ವಿನಂತಿ.

ವಂದನೆಗಳೊಂದಿಗೆ
ವಿಸ್ಮಯನಗರಿ.ಕಾಂ

ಉಮಾಶಂಕರ ಬಿ.ಎಸ್ ಮಂಗಳ, 04/20/2010 - 21:58

ಅನಂತಾನಂತ ಧನ್ಯವಾದಗಳು ರಾಜೇಶ್ ಸರ್

ಬಾಲ ಚಂದ್ರ ಧ, 04/21/2010 - 12:38

ಧನ್ಯವಾದಗಳು ರಾಜೇಶ್ ಸರ್,
ನನಗೆ ಬೆಂಬಲ ಸೂಚಿಸಿದ ರವಿವರ್ಮ್ ಹಾಗೂ ಉಮಾಶಂಕರ್ ಅವರಿಗೂ ಕೃತಜ್ನ
 
ಸಸ್ನೇಹ
ಬಾಲ ಚಂದ್ರ.

ರವಿವರ್ಮ್ ಧ, 04/21/2010 - 07:58

ಬಾಲಚಂದ್ರ ರವರೆ ನಿಮಗೆ ನನ್ನ ಬೆಂಬಲವಿದೆ, ಈ ರೀತಿಯ ಕದೀಮರಿಗೆ ತಕ್ಕ ಪಾಠ ಕಲಿಸಲೇಬೇಕು

Dhruva ಗುರು, 04/22/2010 - 15:13

ಜ್ಞಾನಶೂನ್ಯ ರವೀಂದ್ರ ಹೆಗಡೆಹಾಳ್ (ಮನೆಹಾಳ್). ಎಂಜಲು ತಿನ್ನುವ ನಾಯಿ ಕಾಗೆಗಳಿಗಿಂತ ಕಡೆಯಾಗಿ ಹೋದ.

ಬಾಲ ಚಂದ್ರ ಗುರು, 04/22/2010 - 18:30

ಚಂದ್ರು ಅವರೇ ಹೌದು  ಅದು ನನಗೆ ಸಿಕ್ಕಾಪಟ್ಟೆ ಇಷ್ಟ ಆಯಿತು ಅದಕ್ಕೆ  ಕದ್ದಿದ್ದು ಅಂತ ಕೊನೆಯಲ್ಲಿ ಹಾಕಿದ್ದಿನಲ್ಲ ?  ಓಕೆ ಬಿಡಿ ಅದನ್ನು ತೆಗೆದು ಹಾಕುತ್ತೇನೆ. ಇನ್ನು ಮೇಲೆ ಈ ತರಹ ಮಾಡುವುದಿಲ್ಲ .
 
   ವಂದನೆಗಳೊಂದಿಗೆ,
 ರವೀಂದ್ರ. ಬಿ. ಎಚ್.   
 
 
 ಇದು ರಾಜೇಶರವರ ಪ್ರಯತ್ನಕ್ಕೆ ಸಿಕ್ಕ ಜಯ.
ಸಸ್ನೇಹ
ಬಾಲ ಚಂದ್ರ

 

ರಾಜೇಶ ಹೆಗಡೆ ಗುರು, 04/22/2010 - 21:59

ಇದು ನಮ್ಮಿಬ್ಬರ ಪ್ರಯತ್ನಕ್ಕೆ ಸಿಕ್ಕ ಜಯ ಬಾಲಚಂದರ್ :)
 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.