Skip to main content

ಹಾವು ಏಣಿ ಆಟ ಆಡಿದ್ದೀರಾ !

ಬರೆದಿದ್ದುFebruary 26, 2010
1ಅನಿಸಿಕೆ

[img_assist|nid=6116|title=|desc=|link=node|align=center|width=600|height=494]
ಬೆಂಗಳೂರಿನ ರಸ್ತೆ ಯಲ್ಲಿ ಸಿಗ್ನಲ್ ಬೊರ್ಡು ಗಳದೇ ಕಾರುಬಾರು. ರಸ್ತೆಯ ಬದಿಯಲ್ಲಿ ಗತ್ತಿನಿಂದ ರಸ್ತೆ ಇಣುಕುತ್ತಾ ನಿಲ್ಲುವ ಬೊರ್ಡುಗಳು ದಿನವೂ ಚಿನ್ಹೆ ಬದಲಿಸುತ್ತವೆ.ಇನ್ನು ವೀಕೆಂಡ್ ಗೆ ಮಾತ್ರ ಬೈಕ್ ತುಗೊನ್ಡು ಬೀದಿಗೆ ಇಳಿಯುವ ನನ್ನಂಥವರಿಗೆ ಒಳ್ಳೆ ಅಗ್ನಿಪರೀಕ್ಷೆ . ಅದೇ ಪೋಲೀಸ್ ರಿಗೆ ಹಣ ದೋಚಲು ಸಿಗುವ ಮತ್ತೊಬ್ಬ ಪೆಕರ.ಬೆಂಗಳೂರಿನ ರಸ್ತೆಗಳು ಹಾವು ಏಣಿ ಆಟದ ದಾರಿಯ ಹಾಗೆ. ಅಲ್ಲಲ್ಲಿ ಹಾವಿನತೆ ಟ್ರಾಫಿಕ್ ಪೋಲೀಸ್ ರೂ ಕಾಯುತ್ತಾ ಕುಳಿತಿರುವರು.
ಮೆಜೆಸ್ಟಿಕ್ ಹತ್ತಿರದ ಟೂ ವೇ ಇದ್ದ ರೋಡ್ ವನ್ ವೇ ಅಂತ ಗೊತ್ತಾಗಿದ್ದು ಯಮಲೋಕದ ಕಿಂಕರ ನಂತೆ ಕೈ ಬೀಸುತ್ತಾ ಟ್ರ್ಯಾಫಿಕ್ ಇನ್ಸ್‌ಪೆಕ್ಟರ್ ನನ್ನ ಬೈಕ್ ನ್ನ ನಿಲ್ಲಿಸಿದಾಗಲೆ .
" ಅರೆ! ಮೊನ್ನೆ ತಾನೆ ಈ ರೋಡ್ ಟೂ ವೇ ಆಗಿತ್ತು .ಈಗ ವನ್ ವೇ ನಾ .ಅಯ್ಯೋ ಗೊತ್ತಿರ್ಲಿಲ್ಲ ಸರ್ " ನನ್ನ ಮುಗ್ಧತೆ ಅವರಿಗೆ ತಿಳಿಯಬಹುದು ಅಂತ ಅಂದ್ಕೊಂಡಿದ್ದೆ .
" ಏನಯ್ಯಾ ಬಂಗಳೂರಿನಲ್ಲಿ ಬೆಳಗ್ಗೆ ಇದ್ದ ರೂಲ್ಸ್ ಸಂಜೆ ಇರಲ್ಲ ನೀನು ಮೊನ್ನೆ ಬಗ್ಗೆ ಮಾತಾಡ್ತೀಯಲ್ಲ ..ಸಾಕು ಫೈನ್ ಕಟ್ಟು .." ಕೈಯಲ್ಲಿದ್ದ ಬ್ಲ್ಯಾಕ್ ಬೆರೀ ಅದುಮುತ್ತ ಫೈನ್ ಲೆಟರ್ ಕಿತ್ತು ಕೊಟ್ಟ.ಶುಧ್ಧ ಕನ್ನಡದಲ್ಲಿ ಮಾತಾಡಿದರೆ ನಮ್ಮ ಹುಡುಗ ಏನೋ ತಿಳಿಯದೇ ತಪ್ಪು ಮಾಡಿದೆ ಅಂತ ಅನುಕಂಪ ಸಿಗಬಹುದೇನೋ ಅಂದುಕೊಂಡಿದ್ದೆ. ಪ್ರಯೋಜನವಾಗಲಿಲ್ಲ.ಫ್ರೆಂಡ್ ನ್ನ ಕಳಿಸೊಕೆ ಮೆಜೆಸ್ಟಿಕ್ ಬಂದಿದ್ದಕ್ಕೆ ಒಳ್ಳೆ ಶಿಕ್ಷೆ ಆಗಿತ್ತು.
"ನೀನಾದ್ರೂ ವನ್ ವೇ ಇರೋ ಆ ಮಹಾ ಮಾರಿ ಬೋರ್ಡ್ ನ ನೋಡಬಾರದಾ" ಫ್ರೆಂಡ್ ಮೇಲೆ ಹಿಡಿ ಶಾಪ ಹಾಕ್ತಾ ಬೈಕ್ ಏರಿದೆ.
ಅವತ್ತಿನಿಂದ ನಾನು ಡಿಸೈಡ್ ಮಾಡಿದ್ದು ಒಂದೆ ,ಮುಂದೆ ನೋಡದ್ದಿದ್ದರೂ ಪರ್ವಾಗಿಲ್ಲ ಅಕ್ಕ ಪಕ್ಕ ಬೋರ್ಡ್ ಗಳ ಮೇಲೆ ಕಣ್ಣು ಹಾಯಿಸಬೇಕು ಅಂತ.

ಮೊನ್ನೆ ರವಿವಾರ ಥಿಯೇಟರ್ ವರ್ಕ್‌ ಶಾಪ್ ಗೆ ಸರಿಯಾಗಿ 10 30 ಗೆ ಇರಬೇಕು ಅನ್ನೋದು ತಟ್ಟನೆ ತಲೆಗೆ ಫ್ಲ್ಯಾಶ್ ಆಗಿದ್ದು 9 30 ಗೆ ಎದ್ದ ಮೇಲೆ . ಅದು ದೂರದ ಇಂದಿರಾ ನಗರ. ಉಹ್! ಬೇಗ ಬೇಗ ರೆಡಿ ಆಗಿ ( ರವಿವಾರವೂ ಈ ಗೊಳು ತಪ್ಪಲಿಲ್ಲ) ಬೈಕ್ ಎರಿದೆ. ಬೆಂಗಳೂರಿನ ಹಾಟ್ ಪ್ಲೇಸ್ ಎಂ ಜಿ ರೋಡ್ ಪಾಸ್ ಆಗ್ತಿದ್ದೆ ..ಈ ಹಾಳು ಮೆಟ್ರೊ ವರ್ಕ್ ಎಲ್ಲವನ್ನು ಸ್ಲೋ ಮಾಡಿತ್ತು. ಮೆಟ್ರೋ ಕಂಬಗಳು ನುಂಗಿದ್ದ ಅರ್ಧ ರೋಡ್ ದಲ್ಲಿ ದೊಡ್ಡ ತಿರುವು ಹಾಕಿದ ಮೇಲೆ ಸಿಗ್ನಲ್ ಲೈಟ್ ಕಣ್ಣು ಮುಚ್ಚಾಲೆ ಆಡುತ್ತಾ ಲಗುಬುಗನೆ ರೆಡ್ ಆಯಿತು.ಅದಕ್ಕೂ ನನ್ನ ಮೇಲೆ ಕೋಪ . ಅರೆ ನನ್ನ ಪಕ್ಕದ ಬಸ್ಸು ಹಿಂದಿನ ಕಾರು ಯಾವುದೇ ಮುಲಾಜಿಲ್ಲದೇ ಮುಂದೆ ನುಗ್ಗಿದವು.

"ಈ ಸಿಗ್ನಲ್ ಕೆಲಸ ಮಾಡಲ್ವಾ ಅಥವಾ ಈ ಮೆಟ್ರೋ ವರ್ಕ್ ಸಲುವಾಗಿ ಟ್ರಾಫಿಕ್ ಪೋಲೀಸ್ ಯಾವುದೋ ಮೂಲೆಯಲ್ಲಿ ನಿಂತು ಕೈಯಿಂದ ಸನ್ನೆ ಮಾಡುತ್ತಾ ನಿಯಂತ್ರಿಸುತ್ತಿರುವನಾ. ಇವರೆಲ್ಲ ನುಗ್ಗುತ್ತಿರುವದನ್ನು ನೋಡಿದರೆ ಬಹುಶಹ ಸಿಗ್ನಲ್ ಸುಮ್ಮನೆ ಇರೋದು ಅನಿಸುತ್ತೆ"
ಮನಸ್ಸು ಥಿಂಕ್ ಮಾಡೋ ಹೊತ್ತಿಗೆ ನನ್ನ ಬೈಕ್, ಮಾಲೀಕನ ಇಚ್ಛೆ ಮೊದಲೇ ತಿಳಿದುಕೊ0ಡು ರೆಡ್ ಲೈಟ್ ಧಿಕ್ಕರಿಸಿ ರೋಡ್ ಕ್ರಾಸ್ ಮಾಡಿಯಾಗಿತ್ತು.

"ಓ ಭೇಷ್ ಡಿಯರ್ ನೀನು ನೊಡು ನನ್ನ ಪರ್ಫೆಕ್ಟ್ ಫ್ರೆಂಡ್" ಖುಷಿಯಿಂದ ಬೈಕ್ ಮುಂದಿನ ಧೂಳು ಒರೆಸುತ್ತಾ ರೇಸ್ ಮಾಡಿದೆ .ಪಕ್ಕದಲ್ಲಿ ಪಲ್ಸರ್ ನನಗಿಂತ ಮುಂದೆ ಹೋಗಿ ನನ್ನ ಮುಂದೆ ಬಂತು ನಿಂತಿತು.

ಟ್ರಾಫಿಕ್ ಪೋಲೀಸ್ ನನ್ನ ಅಡ್ಡಗಟ್ಟಿದ್ದ!!

ನನಗೆ ಏನು ತಿಳಿಯದೆ ಬೈಕನಿಂದ ಇಳಿದೆ .

"ಏನಯ್ಯಾ ರೆಡ್ ಲೈಟ್ ಕಾಣ್ಸಲ್ವಾ " ಪೋಲೀಸ್ ನಿಗೆ ಖುಷಿಯೋ ಖಿಷಿ ಸಿಕ್ಕ ಬಲಿಯನ್ನು ಬೇಟೆಯಾಡೋಕೆ.

"ಓಹ್ ಸರ್.. ಅಲ್ಲಿ ಸಿಗ್ನಲ್ ಇದೆಯಾ.ನಾನು ವರ್ಕ್ ಆಗಲ್ಲ ಅಂದುಕೊಂಡಿದ್ದೆ " ಗೊತ್ತಿತ್ತು ಜಾರಿಕೊಳ್ಳಲು ಸಾದ್ಯವಿಲ್ಲ ಅನ್ನೋದು.ಆದ್ರೆ ಪ್ರಯತ್ನ ಮಾಡೋದ್ರಲ್ಲಿ ತಪ್ಪೇನಿಲ್ಲ.

"ಹಾ ಹಾ.. ಒಳ್ಳೆ ಜೋಕು ಆಡ್ತೀಯಾ. ಅಷ್ಟು ದೊಡ್ಡ ಲೈಟ್ ಮಿನುಗೋದು ಕಾಣಿಸಲ್ವಾ" ಪೋಲೀಸ್ ನಿಗೆ ಖುಷಿಯಾಗಿತ್ತು ಬೆಳಗ್ಗೆ ಬೆಳಗ್ಗೆ ನೇ ಒಳ್ಳೇ ಸಂಪಾದನೆ ಶುರು ಅಂತ.

"ಆದ್ರೆ ನನಗಿಂತ ಹಿಂದೆ ಇದ್ದ ಬಸ್ಸು ಕಾರು ಎಲ್ಲ ಪಾಸ್ ಆಯ್ತಲ್ಲ..ಸೋ ನಂಗೆ ಏನು ಗೊತ್ತಾಗದೇ ಕ್ರಾಸ್ ಮಾಡಿದೆ ಸರ್" ನನ್ನಿಂದ ನೂರು ರೂಪಾಯಿ ಕೈ ಜಾರುವುದಂತೂ ಆ ಬ್ರಹ್ಮನಿ0ದಲೂ ತಪ್ಪಿಸಲು ಸಾದ್ಯವಿರಲಿಲ್ಲ .ನಾನು ಆಸೆ ಬಿಟ್ಟೆ.

"ಲೈಸೆನ್ಸ್ ತೋರಿಸು" ಕೈಯಲ್ಲಿನ ಬುಕ್ ಪೇಜ್ ತಿರುವುತ್ತಾ ಸಿಗ್ನಲ್ ಕ್ರಾಸ್ ಮಾಡಿದ ಫೈನ್ ಜೊತೆಗೆ ಬೇರೆ ಏನಾದ್ರೂ ಲೋಪ ಸಿಗುತ್ತಾ ನೋಡುತ್ತಿದ್ದ. ಫೈನ್ ಮೇಲೆ ಫೈನ್ ಕಟ್ಟಬಹುದಲ್ಲ.

"ಹ್ಮ್!! ಕೋರಮಂಗಲ ಲೈಸೆನ್ಸ್! ಕೋರಮಂಗಲದವರು ತಪ್ಪು ಮಾಡೋದು ಕಡಿಮೆ"

ಅಷ್ಟು ಅನ್ನೋದು ತಡ ನಾನು ಅದೇ ಅನುಕಂಪದ ಲಾಭ ಪಡೆಯೋಕೆ ಪ್ರಯತ್ನಿಸಿದೆ.
"ಭಲೇ ಕಿಲಾಡಿ ಕಣೋ ನೀನು.ಪ್ರಯತ್ನಿಸು ಬಿಡಬೇಡ" ಕುರಿ ಬಲಿ ಕೊಡೋದಕ್ಕಿನ್ತ ಮುಂಚೆ ಹಾರ ಹಾಕಿ ಪೂಜೆ ಮಾಡೋ ಥರ ಮನಸ್ಸು ನನ್ನ ಹುರುದುಂಬಿಸಿ ಅಖಾಡಕ್ಕೆ ನೊಕಿತು.

"ನಾನು ಸಹ ರೂಲ್ಸ್ ಅಂದ್ರೆ ರೂಲ್ಸ್. ಈ ಥರ ತಪ್ಪು ಮಾಡಲ್ಲ..ಇವತ್ತು ಏನೋ ನನ್ನ ಪಕ್ಕದ ಕಾರು ನಂಬಿ ದಾಟಿದೆ ಸರ್"

"ಹೋಗ್ಲಿ ಬಿಡು. 100 ರೂಪಾಯಿ ಬಿಚ್ಚು ಬೇಗ" ಫೈನ್ ಲೆಟರ್ ಹರಿಯದೆ ಹಣ ಕೇಳುವುದು ನೋಡಿದರೆ ಆತ ತನ್ನ ಜೇಬಿಗೆ ಇಳಿಸೊದು ಖಾತ್ರಿಯಾಯಿತು.
ಇನ್ನು ಆಗಲ್ಲ ಸುಮ್ಮನೆ ಹಣ ಕೊಟ್ಟು ಬೇಗ ಗುರಿ ಸೇರೋದು ಒಳ್ಳೆದು ಅಂತ ನನ್ನ ವಾಲೆಟ್ ಬಿಚ್ಚಿದೆ.

ಒಂಟಿ ನೋಟು ಅವಿತು ಕುಳಿತಿತ್ತು .ಎ ಟಿ ಎಮ್ ನಿಂದ ಹಣ ತಗೆಯೋದು ಮರೆತಿದ್ದೆ .

" ಸರ್ ನೋ ಮನೀ "
ಈ ಥರದ ನೆಪಗಳು ಪೋಲೀಸ್ ರಿಗೆ ಮಾಮೂಲಿ.ನನಗೆ ಹಣ ತರೋಕೆ ಕಳಿಸೊದು ಗ್ಯಾರಂಟಿ.ಅಕ್ಕ ಪಕ್ಕದಲ್ಲಿ ಯಾವುದಾದರೂ ಎ ಟಿ ಎಮ್ ಗಳು ಇವೆಯಾ ಸುತ್ತ ಮುತ್ತ ಕಣ್ಣು ಹಾಯಿಸಿದೆ.

"ಮೇಲೆ ಸಿಗ್ನಲ್ ಕ್ರಾಸ್ ಮಾಡಿ ಈಗ ಫೈನ್ ಕಟ್ಟೋಕೆ ಹಣವೂ ಇಲ್ಲ ಅಂತಿಯಲ್ಲ.ಎಷ್ಟು ಇದೆ ನಿನ್ ಹತ್ರ ಈಗ"

"10 ರೂಪಾಯಿ"

ಬೆಳಗ್ಗೆ ಎದ್ದು ಯಾರ ಮುಖ ನೋಡಿದೆನೋ ಆತ ಮನಸ್ಸಿನಲ್ಲೆ ಬಯ್ದುಕೊಳ್ಳುತ್ತಿದ್ದ ಅನಿಸುತ್ತೆ.
ಸ್ವಲ್ಪ ಹೊತ್ತು ಯೋಚಿಸಿ ನನ್ನ ಹತ್ತಿರ ಇದ್ದ 10 ರೂಪಾಯಿಯನ್ನು ಮಾರ್ಕೆಟ್ ನಲ್ಲಿ ಚಾಲ್ತಿ ಇಲ್ಲದ ನೊಟು ನೊಡುವ ಹಾಗೆ ದುರುಗುಟ್ಟಿದ . ಅವರದ್ದು ಏನಿದ್ದರೂ 50 100 ರೂಪಾಯಿಯ ವ್ಯವಹಾರ. ಏನೋ ಲೆಕ್ಕ ಹಾಕುತ್ತಿರುವಂತೆ ಕೆಲ ಕಾಲ ಹಾಗೆ ನಿಂತ.
ನಾನು ಸಾದ್ಯ ಆದಷ್ಟು ಪೇಚೆ ಮುಖ ಮಾಡಿ ನಿಂತಿದ್ದೆ. ಥಿಯೇಟರ್ ಆರ್ಟಿಸ್ಟ್ ಆಗಿರೊದು ಈಗ ಕೆಲಸಕ್ಕೆ ಬಂದಿತ್ತು.

"ಆಯ್ತು ಅದೇ 10 ರುಪೀಸ್ ಕೊಡು .ಚೆನ್ನಾಗಿ ಮಾತಾಡ್ತೀಯಾ "
ಈ ಥರ ಸಿಗ್ನಲ್ ಕ್ರಾಸ್ ಮಾಡಬೇಡ ಅಂತ ವೇದವಾಕ್ಯ ಹೇಳ್ತಾನೇ ಅಂದುಕೊಂಡೆ ಆದರೆ ಆ ಮಾತೇನು ಹೊರಬರಲಿಲ್ಲ. ಎಲ್ಲರೂ ಸಿಗ್ನಲ್ ಚಾಚೂ ತಪ್ಪದೇ ಪಾಲಿಸಿದರೆ ಅವರ ಜೇಬಿಗೆ ಕತ್ತರಿ ಅಲ್ವಾ.

"ತುಗೊಳ್ಳಿ" ನಾನು ಉಳಿದ 10 ರೂಪಾಯಿಯನ್ನು ಕೊಟ್ಟು ಬರಿದಾದ ವಾಲೇಟ್ ಜೇಬಿಗೆ ತುರುಕಿದೆ.

"ನೀನು ಕಾಫೀ ಟೀ ಗೆ ಎನ್ ಮಾಡ್ತೀಯಾ. ನಿನ್ನ ವಾಲೇಟ್ ಖಾಲಿ ಆಯ್ತಲ್ಲಾ"

ಮುಂದೆ ಎ ಟಿ ಎಮ್ ನಲ್ಲಿ ತಗೊಂಡ್ರೆ ಆಯ್ತು ಅಂತ ಹೇಳಬೇಕು ಅಂತ ಮಾಡಿದ್ದೆ .

"ಹೋಗ್ಲಿ ಬಿಡಿ ಸರ್.ಸಿಗ್ನಲ್ ಕ್ರಾಸ್ ಮಾಡಿದ ತಪ್ಪಿಗೆ ನಂಗೆ ಪನಿಶ್ ಮೆಂಟ್ " ಮುಗುಳ್ನಗುತ್ತಾ ಬೈಕೆ ಏರಿದೆ.

"ಇದೊಂದು ಸಲ ಬಿಡ್ತೀನಿ ಮುಂದಿನ ಸಲ ಹೀಗೆ ಸಿಕ್ಕರೆ ಫೈನ್ ಖಂಡಿತ. ತುಗೊ ನಿನ್ನ 10 ರೂಪೀಸ್ " ಜೇಬು ಸೇರಿದ ಹಣ ವಾಪಸ್ ನನ್ನ ಕಡೆ ಮುಖ ಮಾಡಿತ್ತು. ಜೇಬಿನಲ್ಲಿದ್ದ ನೂರು ರೂಪಾಯಿಯ ಕಂತುಗಳ ಮದ್ಯೆ ನನ್ನ ಹತ್ತು ರೂಪಾಯಿ ಹೆದರಿತ್ತೆನೊ.ಆಗಲೆ ಜಾಸ್ತಿ ಮುದುಡಿತ್ತು.

" ಓ ಥ್ಯಾಂಕ್ಸ್ ಸರ್ " ನನ್ನನು ನಾನೇ ನಂಬದಾದೆ.

10 ರೂಪಾಯಿ ಜೇಬಿಗಿಳಿಸಿ ಮುಗುಳ್ನಗುತ್ತಾ ಜಾಗ ಕಿತ್ತೆ .
ಮರಳಿ ವಾಪಸು ನೋಡುವ ಗೋಜಿಗೂ ಹೋಗಲಿಲ್ಲ.ಕ್ಷಣ ಮಾತ್ರದಲ್ಲಿ ಹಾವು, ಏಣಿಯಾಗಿದ್ದು ಅಚ್ಚರಿ ಮೂಡಿಸಿತ್ತು.
http://hisudhir007.blogspot.com/

ಅನಿಸಿಕೆಗಳು

shweta (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 04/18/2010 - 20:44

ITS SO FUNNY..............Smile.. IDU NIJAVAGLU HAVU YENI AATANE.......................... 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.