Skip to main content

ಸಿ. ಅಶ್ವಥ್ ಇನ್ನಿಲ್ಲ. ನಾವಿನ್ನು ಇರೋದಾದ್ರೂ ಹೇಗೆ?

ಬರೆದಿದ್ದುDecember 29, 2009
3ಅನಿಸಿಕೆಗಳು

ಗಿಳಿಯು ಪಂಜರದೊಳಿಲ್ಲ ರಾಮ, ರಾಮ ಹೌದು ನಾವಿನ್ನು ಇರೋದಾದ್ರೂ ಹೇಗೆ ?
ಈ ವಿಧಿಯದೆಂಥಾ ಕ್ರೂರ ಲೀಲೆ? ರಾಜ್ ಕುಮಾರ್ ಕುಮಾರ್ ಹೋದ್ರು. ತೇಜಸ್ವಿ ಮಾಯವಾದ್ರು. ಈಗ ಸಿ ಅಶ್ವಥ್ ಕೂಡ ಇನ್ನಿಲ್ಲ, ನಾವಿನ್ನು ಹ್ಯಾಗಿರಬೇಕು ಹೇಳಿ.

ಅವರು ಧನಿಯೆತ್ತಿ ರೆರೆರೆ ರಾ........... ಎಂದು ಆಲಾಪ ತೆಗೆಯುತ್ತಿದ್ದರೆ ಕೇಳುತ್ತಿದ್ದವರ ಎಂದೆಯೆಲ್ಲೆಲ್ಲಾ ಮಿಂಚಿನ ಸಂಚಾರ. ಕನ್ನಡದ ಪತ್ರಕರ್ತರೊಮ್ಮೆ ಹೇಳಿದ್ದರು. ಸಿ. ಅಶ್ವಥ್ ಮನೆಗೆ ಹೋದರೆ ಕಂಚಿನ ಕಂಠ, ಹಿತ್ತಾಳೆ ಲೋಟದ ಕಾಫಿ, ಬಂಗಾರದ ಮನಸ್ಸು ಅವರ ಮನೆಯಲ್ಲಿ ಎಲ್ಲಾ ಹೆವಿ ಮೆಟಲ್ಸೇ.
ಅವರು ನಮ್ಮ ನಡುವೆತಂಬೂರಿ ಮೀಟುತ್ತಾ ಭವಾಬ್ದಿ ದಾಟಿಬಿಟ್ಟರು ಯಾವುದೇ ದುಃಖದ ಸನ್ನಿವೇಶವನ್ನು ಗೆಳೆಯರೊಡನೆ ಹಂಚಿಕೊಳ್ಳುವಾಗ ನೀ ಹಿಂಗ ನೋಡಬ್ಯಾಡ ನನ್ನ ಎಂದು ಚೀರಬೇಕೆನ್ನಿಸುತ್ತಿತ್ತು. ಜಾಲಿ ಬಾರಿನಲ್ಲಿ ಪೋಲಿ ಗೆಳೆಯರು ಕೂತಾಗ ಭಾವನೆ ಉಕ್ಕುಕ್ಕಿ ಹರಿದರಿ ಬಾಯಿಗೆ ಬರುತ್ತಿದ್ದುದು ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲ್ಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು

ನಾವಿನ್ನು ಯಾರೊಡನೆ ಭಾವನೆಗಳನ್ನು ಹಂಚಿಕೊಳ್ಳೋಣ ನೀವೇ ಹೇಳಿ?
ಅವರು ಅಕ್ಕಿಯಾರಿಸುವಾಗ ಚಿಕ್ಕ ನುಚ್ಚಿನ ನಡುವೆ ಎಂದು ಸ್ವರಗಳೊಡನೆ ಆಟವಾಡುತ್ತಿದ್ದರೆ ನಮ್ಮ ಕಣ್ಣಮುಂದೆ ನಮ್ಮ ಕಲ್ಪನಾ ಸುಂದರಿ ಮೈದಳೆಯುತ್ತಿತ್ತು. ಕೊನೆಗೆ ಪ್ರೇಮ ಪತ್ರ ಬರೆಯುವಾಗ ನನ್ನ ಓಲೆ ಓಲೆಯಲ್ಲ ಮಿಡಿವ ಒಂದು ಹೃದಯ ಎಂದು ಕೋಟ್ ಮಾಡಿದರೆ, ಕಿವಿಯಲ್ಲಿ ರಿಂಗಣಿಸುತ್ತಿದ್ದಿದ್ದು ಅಶ್ವಥ್ ರ ಕಂಚಿನ ಕಂಠ.
ಈಗ ನಮ್ಮ ಮನಸ್ಸಿಗೆ ನಾವೇ ಹೇಳಿಕೊಳ್ಳಬೇಕಾಗಿದೆ ಅತ್ತಾರೆ ಅತ್ತು ಬಿಡು ಹೊನಲು ಬರಲಿ, ನಕ್ಯಾಕ ಮರೆಸುತೀ ದುಃಖ, ಎವೆ ಬಿಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿ ಕಚ್ಚಿ ಹಿಡಿಯದಿರು ಬಿಕ್ಕ
ನಮ್ಮ ಮಧ್ಯೆಯೇ ಇದ್ದುಕೊಂಡು ಬಾರಿಸು ಕನ್ನಡ ಡಿಂಡಿಮವಾ ಎಂದು ನಮ್ಮೆಲ್ಲರ ಹೃದಯ ಶಿವನಾಗಿ ಮೆರೆದವರು ಇನ್ನಿಲ್ಲ. ನಾವಿನ್ನು ಹೇಗಿರೋದು ಸ್ವಾಮಿ?

ಭಾವಗೀತೆಗಳಾಗಲಿ, ಅನುಭಾವ ಗೀತೆಗಳಾಗಲಿ ಅದಕ್ಕೊಂದು ಜೀವ ತುಂಬುತ್ತಿದ್ದವರು.

ಹುಟ್ಟು ಹಬ್ಬಕ್ಕೆ wish ಮಾಡೋಣ ಅಂದು ಕೊಂಡರೆ ಅಷ್ಟರಲ್ಲಿ, ಹೇಳದೆ ಕೇಳದೆ ನಡೆದು ಬಿಟ್ಟರಲ್ಲ. ಇನ್ನು ಸುಗಮ ಸಂಗೀತ ಲೋಕಕ್ಕಾದ ನಷ್ಟವನ್ನು ತುಂಬೋರು ಯಾರು?

ಕಂಬನಿಗಳೊಂದಿಗೆ

ಬಾಲ ಚಂದ್ರ

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/29/2009 - 17:42

ಬಾಲಾ,
ಇರಬೇಕು. ಇದ್ದು ಬದುಕಲೇಬೇಕು.

ಬಾಲು, ನುಡಿ ನಮನದಲ್ಲೇ ಅವರು ಹಾಡಿರುವ ಗೀತೆಗಳನ್ನೆಲ್ಲ ನೆನಪಿಸಿದ್ದೀರಿ. ನಿಮ್ಮ ತಂತ್ರ ಚೆನ್ನಾಗಿದೆ. ಧನ್ಯವಾದಗಳು. ಹಾಗೆಯೆ ನನ್ನ ಕಾವ್ಯ ತರ್ಪಣವನ್ನೂ ಒಮ್ಮೆ ನೋಡಿ ದನಿಗೂಡಿಸಿ.

ಉಮಾಶಂಕರ ಬಿ.ಎಸ್ ಸೋಮ, 01/04/2010 - 18:17

ಅವರ ಹಾಡುಗಳನ್ನು ಕೇಳುತ್ತಾ ಅವರಿಗೆ ಶ್ರದಾಂಜಲಿ ಸಲ್ಲಿಸೋಣ ಬಾಲು ನಿಮ್ಮ ಲೇಖನ ಚೆನ್ನಾಗಿದೆ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.