Skip to main content

ಎನ್ನ ಏಕಾಂತದಲಿ ಕೈ ಹಿಡಿದು ನಡೆಸಿದ ಮಹಾನುಭಾವ.

ಬರೆದಿದ್ದುDecember 29, 2009
5ಅನಿಸಿಕೆಗಳು

[img_assist|nid=5783|title=ಸಿ.ಅಶ್ವತ್|desc=|link=none|align=left|width=102|height=150]ನು ಬರೀಬೇಕು ಎಂಬುದೇ ತಿಳೀತಿಲ್ಲ. ಅಷ್ಟೊಂದು ಭಾವುಕವಾಗಿದೆ ಮನಸ್ಸು. ಸಿ. ಅಶ್ವತ್ ಇನ್ನಿಲ್ಲ ಅಂತ ಸುದ್ದಿ ಕೇಳಿದ ತಕ್ಷಣ ಯಾವುದರಲ್ಲೂ ಆಸಕ್ತಿ ಇಲ್ಲದಂತಾಗಿಬಿಟ್ಟಿದೆ. ಹೆತ್ತವರನ್ನೇ ಕಳೆದುಕೊಂಡುಬಿಟ್ಟೆನೇನೋ ಎಂಬಷ್ಟು ಸಂಕಟವಾಗ್ತಿದೆ. ನನಗೆ ಸುಮಾರಾಗಿ ಸಂಗೀತ ಬಗ್ಗೆ ತಿಳಿದಾಗಿನಿಂದಲೂ ನಾನು ಅವರ ಅಭಿಮಾನಿ. ನನಗೆ ಯಾವುದೆ ರೀತಿಯ ಕಷ್ಟ, ಸಮಸ್ಯೆ, ನೋವು ಎದುರಾದರೂ ಒಂಟಿಯಾಗಿ ಕೂತು ಅಶ್ವತ್ ರವರ ಹಾಡುಗಳನ್ನು ಕೇಳುತ್ತಿದ್ದೆ. ನಾನು ಯಾವ ಮಟ್ಟಕ್ಕೆ ಅವರನ್ನು ಅವಲಂಬಿಸಿದ್ದೆನೆಂದರೆ ಕೇಳಬೇಕೆನಿಸಿದಾಗ ಅವರ ಹಾಡುಗಳು ಸಿಗಲಿಲ್ಲ ಅಂದರೆ ಸಾಕು ಆ ಹಾಡು ಬರುತ್ತಿಲ್ಲವಾದುದರಿಂದಲೇ ನನಗೆ ಈ ಕಷ್ಟ ಇದೆ ಅಂತ ನಿರ್ಧರಿಸಿಬಿಡುತ್ತಿದ್ದೆ.

ಕೆಲಸಕ್ಕಾಗಿ ಅಲೆಯುತ್ತಾ, ನೆಲೆ ಕಂಡುಕೊಳ್ಳೋಕೆ ಒದ್ದಾಡ್ತಾ ಭವಿಷ್ಯದ ಬಗ್ಗೆ ಭರವಸೆ ಶೂನ್ಯವಾದಾಗ ರವಿಬೆಳಗೆರೆಯ ಬಾಟಮ್ ಐಟಮ್ ಮತ್ತು ಅಶ್ವತ್ ರವರ ಹಾಡುಗಳು ನನಗೆ ದಿಕ್ಕು ತೋರಿಸಿದ್ದವು. ಎಷ್ಟೇ ನೋವಿದ್ದರೂ ಒಂದರ್ಧ ಘಂಟೆ ಅವರ ಹಾಡುಗಳನ್ನು ಕೇಳಿಬಿಟ್ಟರೆ ಸಾಕು ನಾನು ಈ ಮೊದಲು ಹಾಗೆ ಇರಲಿಲ್ಲವೆನೋ ಎಂಬಂತೆ ಹುಷಾರಾಗಿಬಿಡುತ್ತಿದ್ದೆ.
ಬಯಸಿದ್ದು ಕೈ ತಪ್ಪಿದಾಗ..
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣ ಬಲ್ಲೆನೆ ಒಂದು ದಿನ
ಕಡಲನೂ ಕೂಡಬಲ್ಲೆನೆ ಒಂದು ದಿನ

ಈ ಹಾಡನ್ನು ಅದೆಷ್ಟು ಸಾವಿರ ಸಲ ಕೇಳಿದ್ದೀನೋ ಗೊತ್ತಿಲ್ಲ.

ಪ್ರೀತಿಯ ಗೆಳತಿ ನನ್ನಿಂದ ಹೊರಟು ನಿಂತಾಗ ನನ್ನ ಗೆಳೆಯನ ಭುಜದ ಮೇಲೆ ತಲೆಯಿಟ್ಟು ಯಾವ ಹಾಡು ಕೇಳ್ತಿದ್ದೆ ಗೊತ್ತಾ..

ಹೇಳಿ ಹೋಗು ಕಾರಣ, ಹೋಗುವಾ ಮುನ್ನ..

ತಮಾಷೆಗೆ .. ಸುಬ್ಬಾಭಟ್ಟರ ಮಗಳೇ ಇದ್ದೇ ಇತ್ತು.

ಅಶ್ವತ್ ಸಾರ್.... ಒಮ್ಮೆ ಹಂಸಲೇಖರವರು ನಿಮ್ಮ ಬಗ್ಗೆ ಮಾತಾಡ್ತಾ ಹೇಳ್ತಿದ್ದರು ಸಿ. ಅಶ್ವತ್ ರವರು ಇಲ್ಲದ ಯಾವುದೇ ಸುಗಮ ಸಂಗೀತ ಕಾರ್ಯಕ್ರಮ ಅಪರಿಪೂರ್ಣ ಅಂತ. ಹೌದು ಸಾರ್ ನೀವಿಲ್ಲದೇ ಯಾವ ಸಭೆಯೂ ಪರಿಪೂರ್ಣ ಅಲ್ಲ. ನೀವಿಲ್ಲದೇ ನನ್ನಂತಹ ಅದೆಷ್ಟೋ ಮಂದಿ ಇವತ್ತು ದಿಕ್ಕುತೋಚದಂತಾಗಿಬಿಟ್ಟಿದ್ದೇವೆ. ನೀವು ನಮ್ಮೊಂದಿಗಿಲ್ಲ ಅನ್ನೋದನ್ನು ನಂಬೋಕೆ ಆಗ್ತಿಲ್ಲ. ಇಷ್ಟು ದಿನ ನಮ್ಮ ನೋವಿನಲ್ಲಿ, ಕಷ್ಟದಲ್ಲಿ , ಖುಷಿಯಲ್ಲಿ ನೀವಿರುತ್ತಿದ್ದಿರಿ. ಇನ್ನು ಮುಂದೆ ನಿಮ್ಮ ನೆನಪೇ ನಮಗೆ ನೋವು ತರಲಿದೆ ಗೊತ್ತಾ..?

ನದಿ ತೀರದಲ್ಲಿ ಒಂದು ರಾಮನ ಭಕ್ತ ಒಂದು ಕಪ್ಪೆ ಇತ್ತಂತೆ, ಒಮ್ಮೆ ರಾಮ ನೀರು ಕುಡಿಯಲೋಸುಗ ತನ್ನ ಬಿಲ್ಲನ್ನು ತೀರದಲ್ಲಿಟ್ಟು, ಬಾಣಗಳನ್ನು ದಂಡಗೆ ನೆಟ್ಟು ಹೋದನಂತೆ. ನೀರು ಕುಡಿದು ಬಂದ ಮೇಲೆ ತನ್ನ ಬಾಣಕ್ಕೆ ಆ ಕಪ್ಪೆ ಸಿಕ್ಕಿಕೊಂಡು ಸಾಯುವ ಸ್ಥಿತಿಯಲ್ಲಿತಂತೆ ಆಗ ರಾಮ ನಾನು ಬಾಣ ನೆಟ್ಟಾಗಲೇ ಕೂಗಬಾರದಿತ್ತೆ ಎಂದನಂತೆ ಅದಕ್ಕೆ ಕಪ್ಪೆ ನಾನು ಕಷ್ಟದಲ್ಲಿದ್ದಾಗ ರಾಮನನ್ನು ನೆನೆಯುತ್ತಿದ್ದೆ, ಈಗ ರಾಮನೇ ಕಷ್ಟ ಕೊಟ್ಟರೆ ಯಾರನ್ನ ನೆನೆಯಲಿ.
ಸಧ್ಯ ಕಪ್ಪೆಯ ಸ್ಥಿತಿಯೇ ನನ್ನದು. Off course ಈಗಲೂ ನಾನು ಅವರ ಹಾಡುಗಳನ್ನು ಕೇಳಬಹುದು ಆದರೆ ಹಾಡುಗಳನ್ನು ಕೇಳುವಾಗ ಅವುಗಳ ಯಜಮಾನ ನೆನಪಾದರೆ, ಆ ನೆನಪು ಕಣ್ಣೀರು ತಂದರೆ ನನ್ನ ಮನಸಿಗೆ ಸಮಾಧಾನ ಹೇಳೋರ್ಯಾರು..?
ತುಂಬಾ ನೋವಾಗ್ತಿದೆ ಸಾರ್ . ನನ್ನ ಅಳುವನ್ನು ಇಷ್ಟುದಿನ ನೀವು ತಡೆದಿದ್ದೀರಿ ಈಗ ನನಗೆ ದಿಕ್ಕು ತೋಚುತ್ತಿಲ್ಲ. ಪ್ಲೀಸ್ ನನ್ನ ಮನ್ನಿಸಿಬಿಡಿ ಸಾರ್ ಇದೊಂದು ಸಲ ಅತ್ತುಬಿಡ್ತೀನಿ...??????????

ಹೇಳೀ ಹೋಗು ಕಾರಣ.... ಹೋಗುವಾ ಮುನ್ನಾ.........!!!!

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಕೆಎಲ್ಕೆ ಮಂಗಳ, 12/29/2009 - 16:00

ನಿಜ ಶ್ರೀನಿವಾಸ್. ಅವರು ಆಸ್ಪತ್ರೆಯಲ್ಲಿ ಮಲಗಿ ವಾರಗಳೇ ಆಗಿದ್ದರೂ, ತಿರುಗಿ ಬಂದೇ ಬರುತ್ತಾರೆ ಎಂಬ "ಹೋಪ್" ಇತ್ತು. ಸುದ್ದಿ ತಿಳಿದಾಗಿನಿಂದ ಮನಸ್ಸೆಲ್ಲ ಕಸಿವಿಸಿಯಾದಂತೆ ಏನೋ ತಳಮಳವಾಗುತ್ತಿತ್ತು. ಈ ನಿಮ್ಮ ಆರ್ದ್ರ ಲೇಖನ ಓದಿ ಬೇಸರ ಇಮ್ಮಡಿಯಾಗುತ್ತಿದೆ. ದೇವರು ಅವರನ್ನು ಮತ್ತೆ ಕನ್ನಡ ನಾಡಿನಲ್ಲಿ ಹುಟ್ಟಿಸಲಿ!!

ಕೇವಲ ಹಿಂದಿ ಗಾಯಕರಿದ್ದರಷ್ಟೇ ಜನ ಸೇರುತ್ತಾರೆ!! ಎಂದು ಕೊಂಡಿದ್ದ ನಮಗೆ "ಕನ್ನಡವೇ ಸತ್ಯ" ಎಂಬ ಡಿಂಡಿಮ ಭಾರಿಸಿ ಕನ್ನಡಿಗರ ಕನ್ನಡತನವನ್ನು ಬಡಿದೆಬ್ಬಿಸಿದ 'ಗಾನ ಗಾರುಡಿಗ' "ನಮ್ಮ ನಡುವೆ ಇಲ್ಲಾ!!" ಎನ್ನುವುದನ್ನೂ ಕಲ್ಪಿಸಿಕೊಳ್ಳಲೂ ಸಹ ಆಗುತ್ತಿಲ್ಲ ಶ್ರೀನಿವಾಸ್

ಅನಾಮಿಕ2 (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 01/03/2010 - 11:37

ನೀವು ಹೇಳುವುದು ತು0ಬಾ ನಿಜ. ಅವರ "ಈಗೇಕೆ ಆ ನೆನಪು ಬಂದೆನ್ನ ಕಾಡಿದೆ... ಎದೆಯ ಆಳದಲ್ಲಿ ವಿಷಾದ ಮೂಡಿದೇ..." ಅ0ತ ಹಾಡಿದಾಗ ಎ0ಥಹ ಭಗ್ನ ಪ್ರೇಮಿಗೊ ತಡೆಯಲಾಗುವುದಿಲ್ಲ. ಅವರು "ಕುರುಡು ಕಾಂಚಾಣ ಕುಣಿಯುತಲಿತ್ತು..."ಆ0ತ ಹಾಡುವಾಗ ಜೀವನದ ಸತ್ಯ ಮನಸ್ಸಿಗೆ ಮುಟ್ಟದಿರುವುದಿಲ್ಲ. "ಬದುಕು ಮಾಯೆಯ ಮಾಟ..." ಅ0ತ ಹಾಡುವಾಗ ಅವರು ಹೋದ ದುಖ ತಟ್ಟದೆ ಇರುವುದಿಲ್ಲ.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 01/10/2010 - 18:21

ತುಂಬಾ ಬೇಜಾರಾಯ್ತು.

venkatb83 ಶುಕ್ರ, 02/25/2011 - 18:21

ನಿಜವಾದ ಅರ್ಥದಲ್ಲಿ ಅವರೊಬ್ಬ ಮಹಾನ್ ಗಾಯಕ, ಸುಗಮ ಸಂಗೀತವನ್ನ  ಮತ್ತು ಶಿಶುನಾಳ ಶರೀಫಾರನ್ನ  ಮತ್ತೆ ನಮ್ಮ ಕಣ್ ಮುಂದೆ ತಂದ ನಿಲ್ಸಿದ್ದು.. ಅವರ ಸಾಧನೆ  ದೊಡ್ಡದು.. ಕನ್ನಡ ನಾಡಿಗೆ ಅವ್ರ
ಸಾವು
ದೊಡ್ಡ ಹೊಡೆತ.. ಅವ್ರ ಆತ್ಮಕ್ಕೆ ಶಾಂತಿ ಸಿಗಲಿ.. ಮತ್ತೊಮ್ಮೆ ಆ  ಗಾಯಕ ಹುಟ್ಟಿ ಬರಲಿ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.