Skip to main content

ಸ್ಯಾಮ್ಸಂಗ್-ನ ಶಾಣ್ಯಾತನ

ಬರೆದಿದ್ದುJuly 31, 2009
noಅನಿಸಿಕೆ

ಸ್ಯಾಮ್ಸಂಗ್ ಕಂಪನಿಯು ತಮ್ಮ ಮೊಬೈಲ್ ಫೋನುಗಳ ಜಾಹೀರಾತಿಗಾಗಿ ಬೆಂಗಳೂರಿನ ಸುತ್ತೆಲ್ಲ ಕನ್ನಡದಲ್ಲಿ ದೊಡ್ಡದಾಗಿ ಬರೆದ ಹೋರ್ಡಿಂಗ್-ಗಳನ್ನು ನಿಲ್ಲಿಸುತ್ತಿದ್ದಾರೆ. "ಜೀವನವನ್ನು ಆನಂದಿಸಿರಿ" ಎಂಬ ಪಂಚ್-ಲೈನ್ ಹೊ೦ದಿರುವ ಈ ಹೋರ್ಡಿಂಗ್-ಗಳು ಜಾಹೀರಾತಿನ ಮೂಲಕ ಜನತೆಯನ್ನು ತಲುಪಲು ಸರಿಯಾದ ದಾರಿ ಯಾವುದು ಎಂದು ಸಾರಿ ಹೇಳುತ್ತಿವೆ.

ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಫೋನಿರುವ ಈ ಕಾಲದಲ್ಲಿ, ಮಾರಾಟ ಹೆಚ್ಚಿಸುವುದು ಕಷ್ಟವಾಗಿದೆ. "ಹೊಸದಾದ ವೈಶಿಷ್ಟ್ಯ-ಗಳನ್ನು ಹೊಂದಿರುವ ಫೋನನ್ನು ಬಳಸಿ" ಎಂದು ಜನರಿಗೆ ಅರಿವಾಗುವ ಹಾಗೆ ಸರಳ ರೀತಿಯಲ್ಲಿ ಹೇಳಿದರೆ, ಜನರಲ್ಲಿ ಆಸಕ್ತಿ ಹುಟ್ಟಿ ವ್ಯಾಪಾರ ಹೆಚ್ಚಿಸಬಹುದು ಎಂಬುದು ಸ್ಯಾಮ್ಸಂಗ್ ಚೆನ್ನಾಗಿ ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ.

ಈ ರೀತಿಯ ಜಾಹೀರಾತುಗಳಿಂದ, ತಮ್ಮ ವ್ಯಾಪಾರದಲ್ಲಿ ಲಾಭ ಹೆಚ್ಚಿಸಿಕೊಳ್ಳುತ್ತಾ, ಸ್ಯಾಮ್ಸಂಗ್ ಕ೦ಪನಿಯು ಇತರರಿಗೆ ಮಾದರಿಯಾಗಲೆಂದು ಹಾರೈಸೋಣ. ಸ್ಯಾಮ್ಸಂಗ್-ನವರು ತಮ್ಮ ಇತರೆ ಉತ್ಪನ್ನಗಳ ಜಾಹೀರಾತುಗಳಲ್ಲೂ ಮತ್ತು, ಟಿವಿ ಜಾಹೀರಾತುಗಳಲ್ಲೂ ಇದೇ ಮಾದರಿ ಉಪಯೋಗಿಸುವಂತೆ ಹುರಿದುಂಬಿಸೋಣ. ಬನ್ನಿ, ಇವರಿಗೆ ಮಿಂಚೆ ಬರೆದು ನಮ್ಮ ಅಭಿನಂದನೆಗಳನ್ನು ತಿಳಿಸೋಣ.

ಇವರ ಮಿಂಚೆ:
yuvraj.mehta@samsung.com (ಮಾಧ್ಯಮ ಸಂಪರ್ಕ ತಂಡ)

--
jaagruta graahakaru
ಜಾಗೃತ ಗ್ರಾಹಕರು

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.