Skip to main content

ನಿಂಗೊಂದು ಪ್ರೇಮಪತ್ರ ಬರೆಯೋಕೆ ನಂಗಾಸೆ

ಬರೆದಿದ್ದುJune 15, 2009
9ಅನಿಸಿಕೆಗಳು

ನ್ನಡಿಗರು ಬಹಳ ಭಾವುಕರು, ಪ್ರೇಮ ಪತ್ರ ಬರೆಯುವುದಲ್ಲಿ ನಿಪುಣರು, ಆದರೆ ಮೊಬೈಲು,ಮಿಂಚಂಚೆಗಳು ಬಂದು ಪತ್ರವೆಂಬ ಸುಂದರ ಸಂದೇಶ ಮಾಧ್ಯಮವನ್ನು ನುಂಗಿ ಹಾಕಿರುವುದು ವಿಷಾದದ ಸಂಗತಿ. ಆದರೆ ಇನ್ನೂ ಪ್ರೇಮಪತ್ರ ಬರೆಯುವ ಖಯಾಲಿಯುಳ್ಳವರಿಗೆ ಸಹಾಯ ಮಾಡುವ ಸಲುವಾಗಿ ಕೆಲವು ಶಾಯರಿಗಳನ್ನ ಹಾಗೂ ಭಾವ ಗೀತೆಯ ಸಾಲುಗಳನ್ನು ಇಲ್ಲಿ ನೀಡುತ್ತಿದ್ದೇನೆ, ಯಾರು ಬೇಕಾದರೂ ಇದನ್ನು ತಮ್ಮ ಪತ್ರದಲ್ಲಿ ಕೋಟ್ ಮಾಡಿಕೊಳ್ಳಬಹುದು

ಒಂದು ಖಾಸಪತ್ರದ ಹಾಗೆ ಇದು ನಿಮ್ಮನ್ನು ತಲುಪಲಿ

ನನ್ನ ಓಲೆ, ಓಲೆಯಲ್ಲ
ಮಿಡಿವ ಒಂದು ಹೃದಯ
* * *

ನಿನ್ನ ಪ್ರೀತಿಗೆ ಅದರ ರೀತಿಗೆ
ಕಣ್ಣ ಹನಿಗಳೇ ಕಾಣಿಕೆ
ಹೊನ್ನ ಚಂದಿರ ನೀಲಿ ತಾರೆಗೆ
ಹೊಂದಲಾರದ ಹೋಲಿಕೆ
* * *

ಹೋಗು ಮನಸೇ ಹೋಗು,
ನಲ್ಲೆ ಇರುವಲ್ಲಿ ಹೋಗು
ಕೇಳು ಮೌನಕೇನು ಕಾರಣ
ಹೇಳು ಇದೆಂಥ ಜೀವನ
* * *

ಎಲೇ ಕೆಂಚಿ ತಾರೇ
ನಮ್ಮನೀ ತನಕ ಬಾರೆ
ನೀ ಬಾರದೇ ಹೋದರೆ
ನಾ ಕೆರೆ ಬಾವಿ ಪಾಲೆ
* * *

ಖುದರತ್ ನೇ ದೀ ಆಂಖೇ
ಚಸ್ಮಾ ಕ್ಯೋಂ ಲಗಾತೀ ಹೋ?
ಬಚಪನ್ ಸೇ ರಹೀ ಹಮಾರಿ ಸಾಥ್
ಅಬ್ ಕ್ಯೂಂ ಶರ್ಮಾತೀ ಹೋ?
* * *

ಜಿಂದಗೀ ನೆ ದೀ ಹವಾ
ತೋಡಿಸೀ ದುವಾ ಉಠಾ
ಔರ ಆಗ್ ಜಲ್ ಗಯಿ
ತೇರಿ ಮೇರಿ ದೋಸ್ತಿ ಪ್ಯಾರಮೇ ಬದಲ್ ಗಯೀ
* * *

ನಹಾನ ಹೈ ತೊ ನದಿಯೊ ಮೆ ಆವೊ
ಕಿನಾರೆ ಮೆ ಕ್ಯಾ ರಖಾ ಹೈ
ಪ್ಯಾರ್ ಕರನಾ ಹೈ ತೊ ಬಾಹೋ ಮೈ ಆವೊ
ಇಷಾರೆ ಪೆ ಕ್ಯಾ ರಖಾ ಹೈ
* * *

ಹಲ್ವಾ ಖಾಯ ಜಾತಾ ಹೈ ಚಮಚ್ ಸೆ
ಹಾಥೋಂಸೆ ನಹೀ
ಪ್ಯಾರ್ ಕಿಯಾ ಜಾತಾ ಹೈ ದಿಲ್ ಸೆ
ಬಾತೋಂಸೆ ನಹೀ
* * *

ಚಾಂದ್ ಕೋ ಗರೂರ್ ಹೈ
ಕಿ ಮೇರಿ ಚಾಂದನೀ ಮೆ ನೂರ್ ಹೈ
ಹಮ್ ಕಿಸ್ ಪೆ ಗರೂರ್ ಕರೇ
ಮೇರೆ ಚಾಂದನೀ ಹಮ್ ಸೇ ದೂರ್ ಹೈ
* * *

ನನ್ನ ಪ್ರೇಮದ ಪರಿಯ ನೀನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನನ್ನೊಲುಮೆ ನಿನ್ನ ಕಂಡು
* * *

ನನ್ನೊಳು ನಾ , ನಿನ್ನೊಳು ನೀ
ಒಲಿವ ಮುಂತೆಂದು ನಾ ನೀ
ನಿನ್ನೊಳು ನಾ, ನನ್ನೊಳು ನೀ
ಒಲಿದ ಮೇಲೆಂತು ನಾ ನೀ

ಇದೇ ಒಲವಿನ ಸರಿಗಮಪದನೀ
* * *

ಇಷ್ಟವಾಗಿದ್ದರೆ ತಿಳಿಸಿ
ಇನ್ನಷ್ಟು ಸಾಲುಗಳೊಂದಿಗೆ ಬರುತ್ತೇನೆ

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/16/2009 - 16:00

ಇದರಲ್ಲಿ ಅಂಥದೇನು ಇಲ್ಲ . ಚಿತ್ರ ಗೀತೆಯ ಸಾಲುಗಳನ್ನು ಬಳಸಿ ಪ್ರೇಮಪತ್ರ ಬರೆಯಬೇಕೆಂದಿದ್ದರೆ ಹತ್ತೇಕೆ, ಸಹಸ್ರ ಇದೆ.( ಹಿಂದಿ ಕವನಗಳಲ್ಲಿ ಸಾಕಷ್ಟು ಕಾಗುಣಿತ ದೋಷಗಳೂ ಇವೆ ಎಂಬುದನ್ನು ಗಮನಿಸಿ). ನೀವು ಬರೆದಿದ್ದಿರೆಂದು ವಿನಯ್. ಜಿ. ಕೂಡ ಬರೆಯುತ್ತಾರೆ....ನಂತರ ಅವರ ಅಭಿಮಾನಿಗಳು.....ಹೀಗೆ ವಿಸ್ಮಯ ಸಿನಿಮಾ ಹಾಡುಗಳೇ ತುಂಬಿದ ಪ್ರೇಮ ಪತ್ರಗಳನ್ನು ಮುದ್ದೆ ಕಟ್ಟಿ ಬಿಸಾಕುವ ಕಸದ ತೊಟ್ಟಿ ಆದೀತು!!
ನೀವು ಒಳ್ಳೆಯ ಬರಹಗಾರರು, ತುಸು ಕಲಾತ್ಮಕತೆ ಕೂಡ ಇದೆ....ಪ್ರೇಮಪತ್ರಕ್ಕೆ ಆ ಕಲಾತ್ಮಕ ಟಚ್ ನೀಡಿದರೆ ಓಕೆ...ಅದನ್ನು ಬಿಟ್ಟು ಈ ಹಳೆ ಚಾಳಿ ಏಕೆ??

ಬಾಲ ಚಂದ್ರ ಧ, 06/17/2009 - 09:36

ನಿಮ್ಮ ಅಭಿಪ್ರಾಯ ಹಾಗೂ ಕಾಳಜಿಗಾಗಿ ಧನ್ಯವಾದಗಳು ಗಂಧ
ಆದರೆ ನಾನಿಲ್ಲಿ ಕೊಟ್ಟಿರುವುದು ಚಿತ್ರಗೀತೆಗಳನ್ನಲ್ಲ, ಇಂದಿನ ಯುವಕರು ಮರೆಯುತ್ತಿರುವ ಭಾವಗೀತೆಯ ಸಾಲುಗಳನ್ನು.
ಇದನ್ನು ಹಳೆಚಾಳಿಯ ಮುಂದುವರಿಕೆ ಎಂದು ಕರೆಯುವುದಾದರೆ ಮೊಬೈಲು,ಮಿಂಚಂಚೆಗಳ ನಡುವೆ ಪ್ರೇಮಪತ್ರ ಬರೆಯುವುದನ್ನೂ ಹಾಗೇ ಕರೆಯಬೇಕಾಗುತ್ತದಲ್ಲವೇ? ಆಗ ಒಂದು ಜನಾಂಗದ ಅದ್ಭುತ ಕ್ರಿಯಾಶೀಲತೆ ನಶಿಸಿಹೋಗುವುದಿಲ್ಲವೇ?

ಸಸ್ನೇಹ
ಬಾಲ ಚಂದ್ರ

ಗಂಧ ಅವರು ಹೇಳಿರೋದು ಸರಿ ಬಾಲ ಚಂದ್ರ... ಈ ಥರಾ 'ಸುಮಧುರ ಮರೆಯಲಾರದ ಹಾಡುಗಳ ಪಟ್ಟಿ' ಮಾಡಿ ವಿಸ್ಮಯವನ್ನು ತುಂಬಿಸೋದು ಒಳ್ಳೇ ವಿಚಾರ ಅಲ್ಲ. ಈ ಥರದ ಕೆಲಸಗಳಿಗೆ (ಅಂದರೆ ಹಳೆಯ ಸಾಹಿತ್ಯವನ್ನೆಲ್ಲ ಯೂನಿಕೋಡ್ ನ ಆರ್ಕೈವ್ ಆಗಿಸೋಕೆ) ಕನ್ನಡ ಕಸ್ತೂರಿ ಡಾಟ್ ಕಾಂ ನಂತಹ ಪ್ರಯತ್ನಗಳಿವೆ. ವಿಸ್ಮಯವೇನಿದ್ದರೂ ಸ್ವಪ್ರಯತ್ನಗಳಿಗೆ, ವಿಚಾರ ವಿಮರ್ಶೆಗಳಿಗೆ, ಚಿಂತನ ಮಂಥನಗಳಿಗೆ ಮೀಸಲಾಗಿರಬೇಕು...

ನೀವು ಒಳ್ಳೆಯ ಬರಹಗಾರರು, ತುಸು ಕಲಾತ್ಮಕತೆ ಕೂಡ ಇದೆ.... ನೀವು ಮಾಡಿದಿರಿ ಅಂತಾ ಇನ್ನೂ ಹತ್ತು ಜನ ಇಂಥವೇ ನೂರು ನೂರು ಸಾಲುಗಳನ್ನು ಬರೆದು ವಿಸ್ಮಯವನ್ನು ತುಂಬಿಸಿಬಿಟ್ಟರೆ ಹೇಗಾದೀತು ಯೋಚಿಸಿ...

ಕಿಟ್ಟಿ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/16/2009 - 16:27

ಹಾಯ್ ಬಾಲು,
ಪ್ರಯತ್ನ ಚೆನ್ನಾಗಿದೆ, ಸಲ್ಪ ಹಿಂದಿ ಕಾಗುಣಿತ ದೋಷವಿದೆ ಕೂಡ.... ಅದರೆ ಗಂಧ ಹೇಳಿದ ಅಂತ ಬರೆಯುವುದನ್ನು ನಿಲ್ಲಿಸಬೇಡಿ.... ಎಕೆಂದರೆ ಒಂಒಮ್ಮೆ " ಹಳೆ ಚಾಳಿ " ಗಳು ಕೂಡ ಚೆನ್ನಾಗಿ ಇರುತ್ತವಂತೆ... :) keep writing :)

ಬಾಲ ಚಂದ್ರ ಧ, 06/17/2009 - 09:38

ಧನ್ಯವಾದಗಳು ಕಿಟ್ಟಿ
ಕಾಗುಣಿತ ದೋಷದ ಬಗ್ಗೆ ಗಮನ ಹರಿಸುತ್ತೇನೆ

ಸಸ್ನೇಹ
ಬಾಲ ಚಂದ್ರ

ಬಾಲ ಚಂದ್ರ ಧ, 06/17/2009 - 12:01

ಸರಿ ಶಿವು,
ಓದುಗರ ಒತ್ತಾಯದ ಮೇರೆಗೆ ಈ ಪ್ರಯತ್ನವನ್ನು ಇಲ್ಲಿಗೇ ಕೈ ಬಿಡಲಾಗಿದೆ :D
ಧನ್ಯವಾದಗಳು ಶಿವು, ಧನ್ಯವಾದಗಳು ಗಂಧ

ಸಸ್ನೇಹ
ಬಾಲ ಚಂದ್ರ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/18/2009 - 11:10

tumba hasya n arthagarbitavagi keep it up ok

Amaresh B. yagari (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/25/2010 - 21:41

 Nanu amrpremi nanage prem pattra Bareyuvadandare balu preeti

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 06/20/2010 - 11:05

ರೊಸೆ ಇಸ್ ರೆದ್
ರೆದ್ ಇಸ್ ಮ್ಯ್ ಹೆಅರ್ತ್
ಮ್ಯ್ ಹೆಅರ್ತ್ ಇಸ್ ಯೌ ಮಮಥ gggggggggggggggg

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.