Skip to main content

ಕೈ ಕೊಟ್ಟ ಹುಡುಗಿ : ಹುಡುಗನಿಂದ ನಿಶ್ಚಿತಾರ್ಥದ ವಜ್ರದುಂಗುರ ನಿಧಿ ಬೇಟೆಯಲ್ಲಿ ಬಹುಮಾನ !!

ಬರೆದಿದ್ದುJune 4, 2009
1ಅನಿಸಿಕೆ

ತಾನು ಮೆಚ್ಚಿದ ಹುಡುಗಿಯಿಂದ ನಿರಾಕರಿಸಲ್ಪಟ್ಟ ನ್ಯೂಜಿಲ್ಯಾಂಡಿನ ಅಂತೋನಿ ಗಾರ್ಡಿನರ್, 29 ವರ್ಷದ ಕಾಲ್ ಸೆಂಟರ್ ಉದ್ಯೋಗಿ ಖರೀದಿಸಿದ್ದ 1.5 ಲಕ್ಷ (5000 NZ$) ಬೆಲೆ ಬಾಳುವ ನಿಶ್ಚಿತಾರ್ಥದ ವಜ್ರದುಂಗುರವನ್ನು ಬಿಸಾಕಲು ಹೊಸ ಉಪಾಯ ಹುಡುಕಿದ್ದಾನೆ. ಅದುವೇ ನಿಧಿ ಬೇಟೆಯಲ್ಲಿ (Treasure Hunt) ಆ ಉಂಗುರವನ್ನು ಬಹುಮಾನವನ್ನಾಗಿ ಕೊಡುವದು.

ಈ ನಿಧಿ ಬೇಟೆಯನ್ನು ಭಾಗವಹಿಸಿ ವಜ್ರದುಂಗುರ ಹೆಕ್ಕಿಕೊಳ್ಳಲು ನೀವು ನ್ಯೂಜಿಲ್ಯಾಂಡಿನ ರಾಜಧಾನಿ ವೆಲ್ಲಿಂಗ್ ಟನ್ ಅಲ್ಲಿರಬೇಕು. ಈ ನಗರದಲ್ಲಿ ಒಂದು ಕಡೆ ವಜ್ರದುಂಗುರ ಅಡಗಿಸಿಡುತ್ತಾನೆ. ಬರುವ ಶನಿವಾರ ಬೆಳಿಗ್ಗೆ 8 ಗಂಟೆಗೆ ಟ್ವಿಟ್ಟರ್ ತಾಣದಲ್ಲಿ (http://twitter.com/donoogle_com) ಅಂತೋನಿ ಉಂಗುರ ಇರುವ ಜಾಗದ ಸುಳಿವು ಕೊಡಲಾರಂಭಿಸುತ್ತಾನೆ. ಸಂಜೆಯವರೆಗೂ ಯಾರಿಗೂ ಪತ್ತೆ ಹಚ್ಚಲು ಸಾಧ್ಯವಾಗದಿದ್ದರೆ ಅಲ್ಲಿಗೆ ಹೋಗುವ ದಾರಿಯನ್ನು ಹೇಳುತ್ತಾನೆ.

ಹಾಂಗ್ ಕಾಂಗ್ ನಲ್ಲಿ ಈ ಉಂಗುರವನ್ನು ಖರೀದಿಸಿದ್ದು ಆತನಿಗೆ ಹಿಂದಿರುಗಿಸಲು ಆಗಲಿಲ್ಲ. ಬೇರೆಯವರಿಗೆ ಮಾರಲು ಇಷ್ಟಪಡಲಿಲ್ಲ. ಅದಕ್ಕೇ ಈ ನಿಧಿ ಬೇಟೆ ಆಟ!

"ಇದು ತನಗೆ ತುಂಬಾ ದುರದೃಷ್ಟಕರ ಉಂಗುರ" ಅನ್ನುವದು ಗಾರ್ಡಿನರ್ ಅಭಿಪ್ರಾಯ.

ಉಂಗುರ ಯಾರಿಗೆ ಸಿಗುತ್ತೋ ಗೊತ್ತಿಲ್ಲ. ಆದರೆ ಆ ಮೆಚ್ಚಿದ ಹುಡುಗಿಯಂತೂ ಅಂತೋನಿಗೆ ಸಿಗುವದಿಲ್ಲ ಅಲ್ವಾ?

ಸುದ್ದಿ ಕೃಪೆಃ http://www.reuters.com

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

Kachcho ಸುಬ್ಬ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 06/05/2009 - 11:00

ಉಂಗುರದ ಜೊತೆ ಹುಡುಗೀನು ಸಿಗ್ತಾಳೆ ಅಂತಾದರೆ ಪ್ರಯತ್ನಿಸ ಬಹುದಿತ್ತೆನೋ.....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.