Skip to main content

ಭುಗಿಲೆದ್ದ ಅಪಸ್ವರ;ಅಲುಗಾಡುತ್ತಿದೆ ಯಡಿಯೂರಪ್ಪ ಕುರ್ಚಿ

ಇಂದ Muttige
ಬರೆದಿದ್ದುJune 2, 2009
3ಅನಿಸಿಕೆಗಳು

[img_assist|nid=4455|title=ಯುಡಿಯೂರಪ್ಪ|desc=|link=none|align=left|width=169|height=130]*"ಆಪರೇಷನ್ ಕಮಲ" ಮಾಡಿದ್ದ ಯಡ್ಡಿಗೇ ಆಪರೇಷನ್?
ಧಿಕಾರ ಎನ್ನುವುದು ಎಂಥವರನ್ನೂ ಹಾಳು ಮಾಡಬಲ್ಲದು.ಪಕ್ಷ ರಾಜಕಾರಣಕ್ಕೆ ಹೆಸರಾಗಿದ್ದ ಭಾರತೀಯ ಜನತಾ ಪಕ್ಷ ಅಧಿಕಾರದ ಮದದಲ್ಲಿ ತಾನಾಡಿದ್ದೆ ನಾಟಕ ಎಂಬ ಸ್ಥಿತಿಗೆ ಅದೇ ಪಕ್ಷದ ಶಾಸಕರು ಕಾರ್ಯಕರ್ತರೇ ಬ್ರೇಕ್ ಹಾಕಲು ಸನ್ನದ್ಧರಾಗಿದ್ದರೆ.ಮುಖ್ಯಮಂತ್ರಿ ಯಡಿಯೂರಪ್ಪ ಅವರ ವರ್ತನೆ,ಕುಟುಂಬ ರಾಜಕಾರಣ ನಿಲ್ಲಿಸಲು ಅವರದೇ ಪಕ್ಷದ ಶಾಸಕಲು,ಕೆಲ ಮಂತ್ರಿಗಳು ಯೋಜನೆ ಸಧ್ಯದಲ್ಲೇ ಕಾರ್ಯರೂಪಕ್ಕೆ ಬಂದರೆ ಯಡ್ಡಿಯ ಕಾಲ ಮುಗಿದಂತೆ. ಇಷ್ಟು ದಿನ ಕುರ್ಚಿ ಭದ್ರಗೊಳಿಸಲು "ಆಪರೇಷನ್ ಕಮಲ" ಮಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ತಾವು ಆರಂಬಿಸಿದ್ದ "ಆಪರೇಷನ್" ಗೆ ತಾವೇ ಬಲಿ ಬೀಳುವ ಸಂಭವ ಇದೆ.

ಕರ್ನಾಟಕದ ಜನತೆ ಅನೇಕ ನಿರೀಕ್ಷೆ, ಆಸೆ, ಅಭಿವೃದ್ಧಿಯ ಕನಸು ಹೊತ್ತು ರಾಜ್ಯದಲ್ಲಿ ಮೊದಲ ಬಾರಿಗೆ ಸಂಪೂರ್ಣ ಅಧಿಕಾರದ ಆಶೀರ್ವಾದ ನೀಡಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ನೀಡಿದ್ದರೆ,ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ ಮುಖ್ಯಮಂತ್ರಿಯಾಗಿ ಅನೇಕ ಮಂತ್ರಿಗಳು,ಕೆಳ ಮಟ್ಟದ ಕಾರ್ಯಕರ್ತರಿಂದ ಹಿಡಿದು,ಮಾಜಿ -ಹಾಲಿ ಶಾಸಕರನ್ನು ಕಡೆಗಣಿಸುತ್ತ ಬಂದಿದ್ದು ಜಗಜ್ಜಾಹೀರು.ಗಣೀ ದಣಿಗಳ ದುಡ್ಡು ಮತ್ತು ಅಧಿಕಾರದ ಅಮಲು ಮತ್ತು ಉಪ ಚುನಾವಣೆಯ ಗೆಲುವು ಎಲ್ಲವೂ ಯಡಿಯೂರಪ್ಪನವರಿಗೆ ತಮ್ಮ ಪರ ಜನ ಬೆಂಬಲ ಇದೆಯೆಂದು ಭಾವಿಸಿ ತಮ್ಮ ಮಾತೇ ಅಂತಿಮ,ತಮಗೆ ಸಿಕ್ಕ ಗೆಲುವು ಎಂದು ಭಾವಿಸುತ್ತ ಹೋದಂತೆ ಪಕ್ಷದಲ್ಲಿನ ನಿಷ್ಟಾವಂತರನ್ನು ಕಡೆಗಣಿಸಿದ್ದು ಮತ್ತು ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳದೇ ಹೋಗಿದ್ದು ಇಂದು ಯಡಿಯೂರಪ್ಪನವರ ಕುರ್ಚಿ ಅಲುಗಾಡಲು ಕಾರಣ.
ಮೊದಲೇ ಸಿಡುಕಿನ ಸ್ವಭಾವದ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಾಗಿನಿಂದ ಮಾಧ್ಯಮಗಳು ಅನೇಕ ಬಾರಿ ಬೆಳಕು ಚೆಲ್ಲುತ್ತಿದ್ದಂತೆ ತುಸು ಬದಲಾದಂತೆ ಕಂಡರೂ ಪಕ್ಷದಲ್ಲಿ ಇದು ಮುಂದುವರೆದಿತ್ತು ಎಂದು ಸನೀಹ ಮೂಲಗಳೇ ಹೇಳುತ್ತವೆ.ಮೊದಲು ಬಳ್ಳಾರಿ ಗಣಿ ದಣಿಗಳಾದ ಜನಾರ್ಧನ ರೆಡ್ಡಿ,ಕರುಣಾಕರ ರೆಡ್ಡಿ,ಶ್ರೀರಾಮುಲು ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುತ್ತಿದ್ದಂತೆ ಅಸಮಾಧಾನ ಭುಗಿಲೆದ್ದಿತ್ತು.ತದನಂತರ ಖಾತೆ ಹಂಚಿಕೆ ಆಗುತ್ತಿದ್ದಂತೆ ಎಲ್ಲರ ಖಾತೆಯಲ್ಲೂ ಮುಖ್ಯಮಂತ್ರಿ ಮತ್ತು ಮಕ್ಕಳು "ಕೈ" ಆಡಿಸುತ್ತಿದ್ದಂತೆ ಅಸಮಾಧಾನ ಚಿಗುರೊಡೆದಿತ್ತು.ಆದರೆ ಅಷ್ಟರಲ್ಲಿ ಯಡಿಯೂರಪ್ಪನವರ ಪ್ರಾಭಲ್ಯ ಹೆಚ್ಚಾಗಿತ್ತು.ಆದರೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಬಿ.ಜೆ.ಪಿಯಲ್ಲಿ ವರ್ಷ ತುಂಬುತ್ತಿದ್ದಂತೆ ಆಂತರಿಕ ಭಿನ್ನಮತ ಹೆಚ್ಚಾಗುತ್ತ ಸಾಗಿತ್ತು.ವರ್ಷಕ್ಕೂ ಮುನ್ನ ಮುಖಭಂಗವಾಗ ಬಾರದು ಎಂದು ಸುಮ್ಮನಿದ್ದವರು ಈಗ ಯಡ್ಡಿಗೇ ಆಪರೇಷನ್ ಗೆ ಮುಂದಾಗಿದ್ದಾರೆ.ಬಿ.ಜೆ.ಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾಗಿದ್ದ ಜನಾರ್ಧನ ರೆಡ್ಡಿ ಗ್ಯಾಂಗೇ ಇದಕ್ಕೂ ಸಾಥ್ ನೀಡಿದ್ದು, "ಬಿ.ಜೆ.ಪಿಯ ನಾಟಕಕ್ಕೆ" ಮತ್ತಷ್ಟು ಕಳೆ ತಂದಿದೆ.ಸಾರ್ವಜನಿಕವಾಗಿ ಮುಖ್ಯಮಂತ್ರಿ ಸಚಿವರ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಿರುವುದು, ಇತರ ಕಾರಣಗಳು ಅವರಿಗೆ ಮುಳುವಾಗುತ್ತಿದೆ.
ವರ್ಷತುಂಬಿದ ಹರ್ಷದಲ್ಲಿದ್ದ ಯಡಿಯೂರಪ್ಪನವರಿಗೆ ಅಂದೇ ರೆಡ್ಡಿ ಗ್ಯಾಂಗ್,ಈಶ್ವರಪ್ಪ ಸೇರಿದಂತೆ ಬಹುತೇಕ ಶಾಸಕರು ಕಾರ್ಯಕ್ರಮಕ್ಕೆ ಆಗಮಿಸದೇ ಕಹಿ ಊಣಿಸಿದ್ದರು.

ರಾಜ್ಯದಲ್ಲಿ ನಾಯಕತ್ವ ಬದಲಾಯಿಸಲು ತೊಡೆತಟ್ಟಿ ನಿಂತಿರುವ ಗ್ಯಾಂಗ್ ಗೆ ಕೆಲ ದೆಹಲಿ ನಾಯಕರ ಸಾಥ್ ಸಿಕ್ಕಿದ್ದು ಇವರ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ. ದೆಹಲಿ ನಾಯಕರಲ್ಲಿ ಒಳ್ಳೆ ಹಿಡಿತ ಇರುವ ರಾಜ್ಯಸಭಾ ಸದಸ್ಯ ವೆಂಕಯ್ಯ ನಾಯ್ಡು ಮತ್ತು ಥೀಂಕರ್ ಟ್ಯಾಂಕ್ ಅರುಣ್ ಜೇಟ್ಲಿ ಇವರ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಯಡ್ಡಿ ಕೆಳಗೆ ಇಳಿದರೆ ನಂತರ ಮುಖ್ಯಮಂತ್ರಿ ಯಾರು? ಈಗಾಗಲೇ ಅಪಸ್ವರ ಎತ್ತಿದ ಜಗದೀಶ್ ಶೆಟ್ಟರ್ ಅಥವಾ ಈಶ್ವರಪ್ಪನವರಿಗೆ ಒಲಿದು ಬರುವ ಸಂಭವ ಇದೆ. ಒಟ್ಟಿನಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತ ಕೆಲಸವಾಗದು ಎಂದು ಹೇಳುತ್ತ ಕಾಲ ಕಳೆಯುತ್ತಿದ್ದ ರಾಜ್ಯದಿಂದ ಆಗುವ ಅಭಿವೃದ್ಧಿಯನ್ನೂ ಜನತೆಗೆ ಕೊಡದೆ ಚುನಾವಣೆ ಹಿಂದೆ ಬಿದ್ದ ಬಿ.ಜೆ.ಪಿ. ಯಲ್ಲಿನ ಆಂತರಿಕ ಕಲರವ ಇಷ್ಟಕ್ಕೇ ಮುಗಿಸುವಲ್ಲಿ ಯಡ್ಡಿ ಸಫಲರಾಗುವವರೆ? ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ.

ಕರ್ನಾಟಕ ರಾಜ್ಯಕ್ಕೆ ವರ್ಷ ವರ್ಷ ನೂತನ ಮುಖ್ಯಮಂತ್ರಿಗಳನ್ನು ಕಾಣುವ ಅದೃಷ್ಟ!

ಲೇಖಕರು

Muttige

ಮೌನ ಮಾತಾದಾಗ..

.

ಅನಿಸಿಕೆಗಳು

ಗೆಂಡೆತಿಮ್ಮ (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/03/2009 - 12:29

ಯಡ್ಯೂರಪ್ಪನಂಗೆ ಹೀಂಗೆ ಎರಡು ಬೆರಳು ಕಾಣ್ಸಿ ಕೈಸನ್ನೆ ಮಾಡುದ್ರೆ ನಮ್ಕಡೆ ಬ್ಯಾರೆ ಅರ್ಥ ಬತ್ತದೆ.
ಈ ಭಿನ್ನಮತ ನೋಡಿ ಯಡ್ಯೂರಪ್ಪಂಗೆ ಯೇನೇನೋ ಅಗೊವಂಗಿದ್ಯಲ್ಲಾ.

ವಿನಯ್_ಜಿ ಧ, 06/03/2009 - 17:16

ನಿರೀಕ್ಷಿಸಿದಂತೆ ಬಿ.ಜೆ.ಪಿ ಸರ್ಕಾರ ಈ ನಾಡಿಗೆ ಏನೂ ಕೊಡಲು ಸಾಧ್ಯವಾಗಲಿಲ್ಲ. atleast ನಾವು ಒಂದು bottle ರಕ್ತ ಹಿಡಿದಿಟ್ಟುಕೊಂಡರೆ ಒಳ್ಳೆಯದು. ಏಕೆಂದರೆ ಈಗೀಗ ಯಡಿಯೂರಪ್ಪನವರು "ರಕ್ತದಲ್ಲಿ ಬರೆದು ಕೊಡುತ್ತೇನೆ..." ಅಂತ ಪದೇ-ಪದೇ ಹೇಳ್ತಾ ಇದ್ದಾರೆ. ಅವರ ರಕ್ತ sudden ಆಗಿ ಖಾಲಿ ಅಗ್ಬಿಟ್ಟರೇ ನಾವ್ ಆಮೇಲೆ ಏನು ಮಾಡೋದು??? ;)

ಮುಸ್ತಾಫ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 06/05/2009 - 13:53

ಬಹಳ ಚೆನ್ನಾಗಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.