Skip to main content

ವಯಸ್ಸಿನ ಹುಡುಗರು ಆಕಾಶ ನೋಡುತ್ತಾ ಕುಳಿತಿರುತ್ತಾರೆ, ಯಾಕೆ?

ಬರೆದಿದ್ದುMay 30, 2009
6ಅನಿಸಿಕೆಗಳು

ಸ್ಯಾಂ ಆಕಾಶ ನೋಡುತ್ತಾ ಕುಳಿತಿದ್ದ
ಸ್ಯಾಂ ನ ಪೂರ್ತಿ ಹೆಸರು ಸ್ಯಾಮ್ ಕ್ಸೇವಿಯರ್ ಕ್ರಿಷ್ಟೋಫರ್ . ನಮಗೆಲ್ಲಾ ಅವನು ಮೆಚ್ಚಿನ ಸ್ಯಾಂ (ಕೋಪ ಬಂದಾಗ ಲೋಫರ್, ಚಪ್ಪರ್ ಇತ್ಯಾದಿ ಇತ್ಯಾದಿ)
ಸದಾ ಚಟುವಟಿಕೆಯಾಗಿರುವ ಹುಡುಗ ಹೀಗೆ ಆಕಾಶ ನೋಡುತ್ತಾ ಕುಳಿತ್ತಿದ್ದರೆ ನಮಗೆ ಹೇಗೆನ್ನಿಸಬೇಡ, ಕೈಲಿದ್ದ ಸಿಗರೇಟನ್ನು ನೆಲಕ್ಕೆಸೆದು ನಾನು ಕೇಳಿದೆ
ಆಕಾಶ ನೋಡುತ್ತಲೇ ಉತ್ತರಿಸಿದ
ಮಗಾ, ನಮ್ಮ ಡ್ರೀಂ ಗರ್ಲ್ ಯಾವಾಗ ಸಿಗಬಹುದು ಮಗಾ?
ನಮ್ಮ ಗ್ಯಾಂಗ್ ಅರ್ಧ ಘಂಟೆ ತೆಗೆದು ಕೊಂಡರು, ನಗು ನಿಲ್ಲಿಸಲು. ನಾವೆಲ್ಲಾ ಈ ಹಂತವನ್ನು ಮೀರಿ ಬಹಳ ವರ್ಷಗಳಾಗಿತ್ತು ( ಅಥವಾ ಹಾಗೆಂದುಕೊಂಡಿದ್ದೆವು)

ನಾನು ಇನ್ನೊಂದು ಸಿಗರೇಟು ಹಚ್ಚುತ್ತಾ ಹೇಳಿದೆ "ನೋಡು ಮರೀ, ಇಂಥಾ ಹುಚ್ಚಾಟ ಎಲ್ಲಾ ಬಿಟ್ಭಿಡು, ಇನ್ನು ಏಳೋ,ಎಂಟೋ ವರ್ಷಕ್ಕೆ ನಿಮ್ಮ ಮನೆಯಲ್ಲೇ ಯವ್ದಾದ್ರು ಹುಡುಗಿ ನೋಡಿ ಮದುವೆ ಮಾಡ್ತಾರೆ, ಆಮೇಲೆ ಮಕ್ಕಳನ್ನು ಮಾಡುತ್ತಾ(?) ಹಾಯಾಗಿರು"

ಒಮ್ಮೆಲೆ ಸ್ಯಾಂ ಸಿಡಿದು ಬಿದ್ದ
ಹಾಗಾದ್ರೆ ನೀವೆಲ್ಲಾ ಯಾಕೆ ಹುಡ್ಗೇರ್ಹಿಂದೆ ಅಲೀತೀರೋ ಲೋಪರ್ಗಳಾ, ನಿಮಗೆಲ್ಲಾ ಕನಸಿನ ಕನ್ಯೆ ಅಂತ ಯಾರೂ ಇಲ್ವೇ ಇಲ್ವಾ? ಪ್ರಮಾಣ ಮಾಡಿ ಹೇಳಿ. ಅಂದ
ಯಾಕೊ ನನ್ನ ಬುಡಕ್ಕೇ ಬಂತು ಅಂದುಕೊಂಡೆ
ನಿಧಾನವಾಗಿ ಹೇಳಿದೆ, ನಮಗೂ ಎಲ್ಲಾ ಕನಸಿನ ಕನ್ಯೆ ಅಂತ ಇದ್ದಾರೆ ಆದ್ರೆ ಅವರು ಸಿಗ್ತಾರೆ ಅಂತ ನಾವು ನಿಂತರಾ ಭ್ರಮೆ ಇಟ್ಕಂಡಿಲ್ಲ

ಸ್ಯಾಂ ತತ್ವಜ್ಞಾನಿಯಂತೆ ನಕ್ಕ, ಬಡ್ಡಿ ಮಕ್ಳಾ ನೀವೆಲ್ಲಾ ಎನೋ ಸಾಚಾಗಳಲ್ಲಾ ಸುಮ್ನೆ ಉಪಾಯ ವೇದಾಂತ ಹೋಡಿತೀರಿ ಅಷ್ಟೆ
ಕುಣಿಯಕ್ಕಾಗ್ದಿರೋ ಸೂಳೆ ನೆಲ ಡೊಂಕು ಅಂದ್ಲಂತೆ, ಆ ಬ್ರಹ್ಮ ಒಬ್ಬೊಬ್ಬರ ಹಣೇಲಿ ಒಂದೊಂದು ಹೆಸರು ಬರ್ದಿರ್ತಾನೆ, ನಿಮ್ಗೆ ಹುಡ್ಕೊ ತಾಕತ್ತಿಲ್ಲ ಅಷ್ಟೆ.
ನಾನು ಸಿಗರೇಟನ್ನು ನೆಲಕ್ಕೆ ಹಾಕಿ ತುಳಿದು ಅಸಹನೆಯಿಂದ ಹೊಸಕಿ ಹಾಕಿದೆ
ಅವನ ಮುಂದೆ ಕುಳಿತು ಧೃಢವಾದ ದನಿಯಲ್ಲಿ ಹೇಳಿದೆ, ಹಾಗಾದ್ರೆ ನಿನ್ನ ಡ್ರೀಂ ಗರ್ಲ್ ಸಿಕ್ಕೇ ಸಿಕ್ತಾಳೆ ಅಂತಿಯಾ?
"ಖಂಡಿತಾ" ಅವನು ತಕ್ಷಣ ಉತ್ತರಿಸಿದ
"ಹಾಗಾದ್ರೆ ನನ್ನದೊಂದಷ್ಟು ಪ್ರಶ್ನೆಗಳಿವೆ ಉತ್ತರಿಸ್ತಿಯಾ? " ಕೇಳಿದೆ
"ಏನ್ ಬೇಕಾದ್ರು ಕೇಳು " ಸವಾಲು ಹಾಕುವನಂತೆ ಹೇಳಿದ
ಸರಿ ಹಾಗಿದ್ರೆ ಕೇಳು ನಿನಗೆಂತಾ ಹುಡುಗಿ ಬೇಕು? ಕೇಳಿದೆ
ಕಣ್ಣು ಮುಚ್ಚಿಕೊಂಡು ಧ್ಯಾನಸ್ಥನಾದ, ನನಗೆ ಭಯವಾಗತೊಡಗಿತು

"ನಿಮ್ಮದ್ಯಾವ ಜಾತಿ" ಕೊನೆಗೆ ನಾನೇ ಮೌನ ಮುರಿದು ಅವನನ್ನು ಧ್ಯಾನದಿಂದ ಎಬ್ಬಿಸಿದೆ
"ನಿನಗ್ಗೊತ್ತಿಲ್ವಾ? ಕ್ರಿಶ್ಚಿಯನ್ಸ್, ಕ್ಯಾಥಲಿಕ್ ಕ್ರಿಶ್ಚಿಯನ್ಸ್" ಎಂದ
ಸರಿ ಭಾರತದಲ್ಲಿ ಕ್ರಿಶ್ಚಿಯನ್ಸ್ ಸಂಖ್ಯೆ ಕೇವಲ ಹದಿಮೂರೋ, ಹದಿನಾಲ್ಕೋ ಪರ್ಸೇಂಟು. ನೀನು ಬೇರೆ ಜಾತಿಯಲ್ಲಿ ಮದುವೆಯಾಗಕ್ಕೆ ರೆಡಿ ಇದಿಯಾ ತಾನೆ? ಕೇಳಿದೆ
"ನಾನು ರೆಡಿ ಮಗಾ ಆದ್ರೆ ನಮ್ಮಪ್ಪ, ನಮ್ಮಮ್ಮ ಗೊತ್ತಲ್ಲಾ ನಿಂಗೆ" ಸಣ್ಣಗೆ ನಸುಗಿದ
ನಾನು " ಇರಲಿ ಬಿಡು ನಿಮ್ಮವರಲ್ಲೇ ಭಾಳಷ್ಟು ಸುಂದರಿಯರು ಸಿಕ್ತಾರೆ, ಅಂಧ್ಹಾಂಗೆ ಸುಂದರಿಯರು ಅಂದಾಗ ನೆನೆಪಾಯ್ತು, ನಿನ್ನ ಹುಡುಗಿ ನೋಡಕ್ಕೆ ಹ್ಯಾಗಿರಬೇಕು?" ಅಂತ ಕೇಳಿದೆ
ಮತ್ತೆ ಕಣ್ಣು ಮುಚ್ಚಿ ಧ್ಯಾನಸ್ಥನಾಗಿ ವಿವರಿಸತೊಡಗಿದ
"ಬೆಳಗಿನ ಮಂಜು ಮೈತಳೆದು ಬಂದಂತಿರಬೇಕು. ಕೆನ್ನೆ ಕೆಂದಾವರೆಯಂತಿರಬೇಕು. ಮುಗ್ಧತೆಯೇ ಮೈವೆತ್ತು ಬಂದಂತಿರಬೇಕು" ವಿವರಿಸತೊಡಗಿದ.
ನನಗೆ ಈ ನನ್ಮಗ ಯಾವಾಗ ಕವಿಯಾದ ಎಂದು ಕಂಫ್ಯೂಸ್ ಆಗತೊಡಗಿತು
'ಹೋಲ್ಡಾನ್' ಅವನ ಮಾತನ್ನು ಅರ್ಧದಲ್ಲೇ ತಡೆದು 'ಶಾರ್ಟಾಗಿ ಹೇಳೋ' ಅಂದೆ
ಆದರೂ ಅರ್ಧ ಘಂಟೆ ತೆಗೆದುಕೊಂಡ, ವಿವರಿಸಲು
'ಸರಿ ಯಾಕೊ ನಿನ್ನ ಹುಡುಗಿ ಸಿಗೋದು ಡೌಟು ಅವಳು ಈ ಲೋಕದಲ್ಲೇ ಇರಲು ಸಾಧ್ಯವಿಲ್ಲ ಅನ್ಸುತ್ತೆ' ಅಂದೆ
ಒಮ್ಮೆ ನನ್ನನ್ನು ಜಿಗುಪ್ಸೆಯಿಂದ ನೋಡಿ ಸುಮ್ಮನಾದ
ಸರಿ ಅಂಥವರು ಇದ್ದರು ಎಲ್ಲೋ ಕೋಟಿಗೆ ನೂರು ಜನ ಇರಬಹುದು, ಅದರಲ್ಲು ನಿಮ್ಮ ಜನರಲ್ಲಿ ಒಂದು ಇಪ್ಪತ್ತು ಜನ ಸಿಗಬಹುದು' ಎಂದೆ
ಅವನ ಮುಖ ಬೆಳಗಿತು
ಸರಿ ಭಾವುಕತೆಯಲ್ಲಿ ಹ್ಯಾಗಿರಬೇಕು' ಮತ್ತೊಂದು ಪ್ರಶ್ನೆ ಎಳೆದೆ
ಮಗದೊಮ್ಮೆ ಧ್ಯಾನಸ್ಥನಾದ, ( ಈ ಬಾರಿ ಸಮಾಧಿ ಸ್ಥಿತಿಗಿಳಿದಂತೆ ಕಾಣಿಸುತಿತ್ತು)
ಕರುಣೆಯಿಂದ ಅವನನ್ನೊಮ್ಮೆ ನೋಡಿ ಅವನನ್ನು ಎಬ್ಬಿಸಿದೆ
ಸ್ಯಾಂ ಹೇಳತೊಡಗಿದ
'ಮಳೆ ಬಂದಾಗ ನವಿಲಿನಂತೆ ಕುಣಿಯಬೇಕು, ನೀರು ಕಂಡಾಗ ಮಕ್ಕಳಂತೆ ಆಡಬೇಕು, ಸಂಜೆ ಕೆಂಪನ್ನು ಕಂಡಾಗ ಬೇಲೂರ ಶಿಲ್ಪದಂತೆ ನಾಚಬೇಕು.....................ರೆಹ್ನಾ ಹೈ ತೇರೆ ದಿಲ್ ಮೆ ಚಿತ್ರದ ನಾಯಕಿಯ ಹಾಗಿರಬೇಕು .......................
ಈ ಬಾರಿ ಅರ್ಧ ಘಂಟೆಯಾದರೂ ಅವನ ವರ್ಣನೆ ಮುಗಿಯುವ ಹಾಗೆ ಕಾಣಲಿಲ್ಲ , ಇದನ್ನೆಲ್ಲಾ ಕೇಳುತ್ತಾ ಕುಳಿತಿದ್ದ ನಮ್ಮ ಹುಡುಗರ ಮುಖ ನಿಜಕ್ಕೂ ಕರುಣಾಜನಕವಾಗಿತ್ತು

ಕೊನೆಗೊಮ್ಮೆ ಅವನು ಸುಮ್ಮನಾದಾಗ ನಾನು ಹೇಳಿದೆ ' ಸರಿ ನಿನ್ನ ಮೊದಲ ಅರ್ಹತೆ ಹೊಂದಿರುವ ಆ ಇಪ್ಪತ್ತು ಜನ ಹುಡುಗಿಯರಲ್ಲಿ ಹದಿನೇಳು ಜನರನ್ನು ತೆಗೆದು ಹಾಕು' ಎಂದೆ
ಅವನ ಮುಖ ವಿರಕ್ತ ಸನ್ಯಾಸಿಯಂತೆ ನಿರ್ಭಾವುಕವಾಗಿತ್ತು
ನನಗೆ ಅವನನ್ನು ನೋಡಿ ಕರುಳು ಕಿತ್ತು ಬರುವಂತಾಯಿತು (?) ಹೇಗಿದ್ದ, ಹೇಗಾಗಿಬಿಟ್ಟ

ಸರಿ ಇನ್ನು ಏನಾದರೂ ಅರ್ಹತೆಗಳಿರಬೇಕೆನಪ್ಪಾ? ಕೇಳಿದೆ
ಈ ಬಾರಿ ಧ್ಯಾನಸ್ಥನಾಗಲಿಲ್ಲಾ, ಜಾಗೃತನಾದಂತೆ ಕಂಡು ಬಂತು
ವಿವರಿಸತೊಡಗಿದ
ನಮ್ಮ ಅಪ್ಪ ಅಮ್ಮಂಗೆ ಹೊಂದಿಕೊಂಡು ಹೋಗಬೇಕು, ಚೆನ್ನಾಗಿ ಅಡುಗೆ ಮಾಡಬೇಕು, ಸಂಗೀತ ಕಲಿತಿರಬೇಕು , ಸದಾ ಚಟುವಟಿಕೆಯಿಂದ ಓಡಾಡುತ್ತಾ ನಗುನಗುತ್ತಾ................................

ನನ್ನ ಅರ್ಧ ಪ್ಯಾಕು ಸಿಗರೇಟು ಭಸ್ಮೀಭೂತವಾದನಂತರ ಅವನ ವರ್ಣನೆ ಮುಗಿಯಿತು

ನಾನು ಕಣ್ಣೀರು ಸುರಿಸುವುದೊಂದು ಬಾಕಿ ಇತ್ತು , ಅವನು ಮಾತ್ರ ಆಕಾಶ ನೋಡುತ್ತಲೇ ಕುಳಿತಿದ್ದ , ನನಗ್ಯಾಕೋ ಆ ಸಮಯದಲ್ಲಿ ಒಬ್ಬ ಒಳ್ಳೆ ಮನಶಾಸ್ತ್ರಜ್ನನಿಗೆ ಇವನನ್ನು ತೋರಿಸಬೇಕೆಂದು ತೀವ್ರವಾಗಿ ಅನಿಸಿತು

ಸರಿ ನಿನ್ನ ಎಲ್ಲಾ ವರ್ಣನೆಯಂತಿರುವ, ಎಲ್ಲಾ ಅರ್ಹತೆ ಹೊಂದಿರುವ ಹುಡುಗಿ ಇಡೀ ಭೂಮಂಡಲಕ್ಕೆ ಒಬ್ಬಳು ಸಿಗಬಹದು' ಎಂದೆ

ಅವನ ಮುಖ ನೂರು ಕ್ಯಾಂಡಲಿನ ಬಲ್ಪಿನಂತೆ , ಅತ್ಯುತ್ಸಾಹದಿಂದ ಹೊಳೆಯತೊಡಗಿತು
ಗೆದ್ದ ದನಿಯಲ್ಲಿ ಹೇಳಿದ ' ನಾನು ಅಂಥವಳಿಗೇ ಹುಡುಕುತ್ತಾ ಇರೋದು, ಒಬ್ಬಳಾದ್ರು ಇದ್ದಾಳಲ್ಲಾ' ಎಂದು, ಈಗೇನಂತಿ ಎಂಬಂತೆ ನನ್ನ ಮುಖ ನೋಡಿದ

ನಾನು ಸಿಗರೇಟಿನ ಕೊನೆಯ ಜುರಿಕೆ ಎಳೆದು ನೆಲೆಕ್ಕೆಸೆದೆ, ಗಂಭೀರವಾಗಿ ಮೇಲಕ್ಕೆದ್ದೆ , ಕುರಿ ತಾನಾಗೇ ಹಳ್ಳಕ್ಕೆ ಬಿದ್ದಿತ್ತು
ನಿಧಾನವಾಗಿ ಹೇಳಿದೆ

ಖಂಡಿತಾ ಇದ್ದಾಳೆ, ಆದ್ರೆ ಅವಳು ನೀನ್ಯಾವ ರಾಜಕುಮಾರ ಅಂತ ನಿನ್ನ ಒಪ್ಕೋತಾಳೆ, ಅವಳ ಬೇಡಿಕೆ ಸಾವಿರ ಇರವಹುದು, ನಿನಗಿಂತಾ ಒಳ್ಳೇ ಹುಡುಗನ್ನ ಹುಡಿಕ್ಕೋತಾಳೆ' ಎಂದೆ

ನಮ್ಮ ಹುಡುಗರು ನಗು ತಾಳಲಾರದೆ ನೆಲದ ಮೇಲೆ ಬಿದ್ದು ಹೊರಳಾಡಿಬಿಟ್ಟುರು, ಒಂದಿಬ್ಬರ ಕಣ್ಣಿನಲ್ಲಿ ನೀರೂ ಬಂತು

ಪಾಪ ಅವತ್ತು ಆಕಾಶ ನೋಡಲು ನೋಡಲು ಶುರು ಮಾಡಿದ ಸ್ಯಾಂ ಇನ್ನೂ ತಲೆ ತಗ್ಗಿಸಿಲ್ಲ

ಈಗ ಗೊತ್ತಾಯ್ತಾ ವಯಸ್ಸಿಗೆ ಬಂದ ಹುಡುಗರು ಆಕಾಶ ಯಾಕೆ ನೋಡ್ತಾರೆ ಅಂತ?

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ವಿಕ್ರಂ ಮಂಗಳ, 06/02/2009 - 11:10

ಸೂಪರ್ರಾಗಿದೆ!!!!!!! 8) 8) 8)

ಆದ್ರೂ ಪಾಪ, ನಿಮ್ ಸ್ಯಾಮ್ ಗೆ ಅವನ 'ಕನಸಿನ ಕನ್ಯೆ' ಅವನ ಮುಂದೇ ಬಂದ್ರೂ ನೋಡಕ್ಕಾಗದ ಹಾಗೆ ಆಕಾಶ ತೋರಿಸಿ ನಿಲ್ಲಿಸ್ಬಿಟ್ರಲ್ಲಾ. :( . ಕತ್ತು ಕೆಳಗಿಳಿಸೋದಕ್ಕೆ ಹೇಳಿ, Atleast ಅರ್ಧ ಕನಸಾದ್ರೂ ನನಸಾಗ್ಲಿ :P ;)

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/02/2009 - 15:30

ನನಗೆ ಎನದ್ರು ಸಿಕ್ಕೆದರೆ ನಿಮ್ಮ ನಿಮ್ಮ e mail ಗೆ ಕಲಿಸುತೆನೆ

ವಿನಯ್_ಜಿ ಧ, 06/10/2009 - 18:33

ಈ ಹುಡುಗರೇ ಇಷ್ಟೇ ಬಾಲ ಚಂದ್ರ , ಬರೀ ಕನಸ್ಸು ಕಾಣುತ್ತ, ಆಕಾಶ ನೋಡ್ತಾನೇ ಕಾಲ ಕಳೆದು ಬಿಡ್ತಾರೆ...! "ಮರಳಿ ಯತ್ನವ ಮಾಡು" ... ಹೇಗೋ ಇದೆಯಲ್ಲಾ... ಚೆನ್ನಾಗಿ ಬರೆದಿದ್ದೀರಿ ನೀವು... :)

ಬಾಲ ಚಂದ್ರ ಶುಕ್ರ, 06/12/2009 - 17:49

ಧನ್ಯವಾದಗಳು ವಿನಯ್

aridra ಮಂಗಳ, 06/16/2009 - 14:04

ನಿಮ್ಮ ಬರವಣಿಗೆಯ ಧಾಟಿ ಚೆನ್ನಾಗಿದೆ. ಮಾಮೂಲು ಸಂಭಾಷಣೆಯನ್ನೇ ರಸವತ್ತಾಗಿ ಬರೆದಿದ್ದೀರಿ. ಒಳ್ಳೇ ಫ್ಲೋ ಇದೆ.

ಬಾಲ ಚಂದ್ರ ಮಂಗಳ, 06/16/2009 - 14:25

ಧನ್ಯವಾದಗಳು ಆರಿದ್ರ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.