Skip to main content

ಮಳೆ ಬಂದಾಗ ನಿನ್ನ ನೆನಪು ಬರುವುದ್ಯಾಕೆ

ಬರೆದಿದ್ದುMay 19, 2009
2ಅನಿಸಿಕೆಗಳು

ಸುರಸ್ವಪ್ನವಿದ್ದ ,ಪ್ರತಿ ಬಿಂಬ ಬಿದ್ದ
ಉದ್ಭುದ್ದ ಶುದ್ದ ನೀರೆ,
ಎಚ್ಚೆತ್ತು ಎದ್ದ, ಆಕಾಶದುದ್ದ
ಧರೆಗಿಳಿಯಲಿದ್ದ ಧೀರೆ
ರಸಪೂರ ಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ

--ದ ರಾ ಬೇಂದ್ರೆ

ಣ್ಣ ಗಂಧದವಳೆ,

ಹೇಗಿದ್ದಿಯಾ?
ಬೆಂಗಳೂರಿಗೆ ಎರಡು ದಿನಗಳಿಂದ ಸ್ಪಟಿಕ ಸ್ನಾನ, ಲಾಲ್ ಬಾಗಿನ ತುಂಬಾ ತುಂಬಿರುವಂತ ಮಣ್ಣಿನ ವಾಸನೆ ಕಛೇರಿಯ ಒಳಗೆಲ್ಲಾ ಹರಡಿ ಮೈಯೊಳಗೇನೋ ಪುಳಕ, ಕುಳಿತ ಜಾಗಕ್ಕೇ ಕೇಳುವ ಧೋ ಎಂಬ ಮಂಗಳ ಗಾನ
ಕಿಟಕಿಯ ಬಳಿ ನಿಂತರೆ ಮಳೆ ಹನಿಗಳ ಅಕ್ಷತಾ ಸಿಂಚನ, ಪ್ರಕೃತಿ ಈ ಪರಿ ಹುಚ್ಚು ಹಿಡಿಸುತ್ತಿರಲು ಮನಸಿಗೆ ಕಾಮನ ಹೆದೆಯೇರಲು ಎಷ್ಟು ಹೊತ್ತು?
ಥಟ್ಟಂತಾ ನೆನಪಾಗಿದ್ದೇ ನೀನು, ಇದುವರೆಗೂ ಕಾಣ ಸಿಗದ ನಿನಗಾಗಿ ನಾನು ಪರಿತಪಿಸಿದ ಇರುಳುಗಳೇಷ್ಟೋ? ಚಂಗಲೆತ್ತಿದ ಹಗಲುಗಳೆಷ್ಟೋ? ಬಲ್ಲವರಾರು
ಪ್ರೀತಿ ಕಾಣಿಸುವರಲ್ಲಿ ಮಾತ್ರ ಮೂಡಬೇಕೆಂದು ನಿಯಮವೇನಿಲ್ಲವಲ್ಲ
ಇಂಥಾ ಅಮೂರ್ಥ ಪ್ರೀತಿಯನ್ನು ನೀನು ಹುಚ್ಚು ಎಂದು ಕರೆದರೆ ನನ್ನ ಅಭ್ಯಂತರವೇನೂ ಇಲ್ಲ, ಆದರೆ ಅಕಾಲ ಮಳೆ ನಿನ್ನ ನೆನಪಿನ ಕಿಡಿಯನ್ನು ಭಗ್ಗೆಂದು ಹೊತ್ತಿಸಿದ್ದು ಮಾತ್ರ ಸೂರ್ಯನಷ್ಟೇ ಸತ್ಯ

ವಾರುಣೀ , ತಾರಿಣಿ, ನಿತ್ಯ ವಿಹಾರಿಣಿ ಎಂದೆಲ್ಲಾ ನಿನ್ನನ್ನು ಕರೆಯುತ್ತಾ ಕುಳಿತಿರಲು ಸಮಯವಿಲ್ಲಾ

ಕೊನೆಯದಾಗಿ ಮಳೆ ಬಂದಾಗಲೆಲ್ಲಾ ನಿನ್ನ ನೆನೆಪು ಬರುವುದೇಕೆ ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ
ಉತ್ತರ ಗೊತ್ತಿದ್ದರೆ ಕನಸಿನಲ್ಲಿ ಬಂದು ತಿಳಿಸು

ನಿನ್ನ
ಮನದನ್ನ

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಪೂನಾವಾಲ (ಪ್ರಮಾಣಿಸಲ್ಪಟ್ಟಿಲ್ಲ.) ಧ, 05/20/2009 - 16:00

ಬಾಲಚಂದ್ರ ರವರೆ...

ದ.ರಾ. ಬೇಂದ್ರೆಯವರ ಕವನದ ಸಾಲುಗಳನ್ನು ಉದ್ಧರಿಸಿ ಬರೆದ ಈ ಲೇಖನ ಚೆನ್ನಾಗಿದೆ. ಈ ಕವನದ ಸಾಲುಗಳು ಬೇಂದ್ರೆಯವರ 'ಇಳಿದ ಬಾ ತಾಯೆ...' ಕವನದ ಸಾಲುಗಳಿರಬಹುದು. ಈ ಕವನದ ಎಲ್ಲಾ ಸಾಲುಗಳು ನಿಮ್ಮಲ್ಲಿದ್ದರೆ ದಯವಿಟ್ಟು ಪೂರ್ತಿ ಕವನವನ್ನು ಇಲ್ಲಿ ಪ್ರಕಟಿಸುತ್ತೀರಾ... ಇಡೀ ಕವನವನ್ನು ಓದಿ ಪುಳಕಗೊಳ್ಳಬೇಕೆಂಬ ಆಸೆಯಿದೆ. ದಯವಿಟ್ಟು ಪ್ರಕಟಿಸಿ.

ಬಾಲಚಂದ್ರ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 05/21/2009 - 09:30

ಪ್ರಿಯ ಪೂನಾವಾಲ,
ಈ ಸಾಲುಗಳು ಬೇಂದ್ರೆಯವರ "ಗಂಗಾವತರಣ" ಕವಿತೆಯಿಂದ ಕಡ ತಂದದ್ದು.
ಖಂಡಿತ ಪೂರ್ತಿ ಪದ್ಯವನ್ನು ಶೀಘ್ರದಲ್ಲೇ ಪ್ರಕಟಿಸುತ್ತೇನೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.