Skip to main content

ತತ್ವ ಜ್ನ್ಯಾನಿಯ ಅಳಲು

ಬರೆದಿದ್ದುApril 10, 2009
2ಅನಿಸಿಕೆಗಳು

ನಾನು ತುಂಬಾ ಸಜ್ಜನ ಸಾರ್,ಭಾರೀ ಭಾರೀ ಗ್ರಂಥಗಳೆಲ್ಲಾ
ನಮ್ಮ ಮನೆ ಕಪಾಟಿನ ತುಂಬಾ ಧೂಳು ತಿನ್ನುತ್ತಿದೆ
ಲೆಕ್ಚರು, ಡಾಕ್ಟರು, ಲಾಯರುಗಳು ಮಾತ್ರ ನನ್ನ ಮಿತ್ರರು
ನನ್ನ ವಿದ್ವತ್ಪೂರ್ಣ ಲೇಖನಗಳ ಬಗ್ಗೆ ಏನೆಂದು ಹೇಳಲಿ

ದೇಶದ ಎಲ್ಲಾ ಸಮಸ್ಯೆಗಳನ್ನು ನಾನು ಪರಿಹರಿಸಬಲ್ಲೆ ಸಾರ್
ನಮ್ಮ ಮನೆಯಲ್ ಮಾತ್ರ ಸೊಲ್ಪ ಪ್ರಾಬ್ಲಮ್ಮು
ಎಲ್ಲಾರ್ ಮನೇ ದೋಸೇನೂ ತೂತಲ್ವಾ
ಸಂಸಾರ ಅಂದ್ಮೇಲೆ ಎಲ್ಲಾ ಇದ್ದಿದ್ದೇ ಅಲ್ವಾ

ಕಾರ್ಮಿಕರನ್ನ ಯಾವತ್ತೂ ನಂಬಬೇಡೀ ಸಾರ್
ಭಿಕ್ಷುಕರಂತೂ ಈ ದೇಶದ ಅನಿಷ್ಟ
ಇವರೆಲ್ಲಾ ಸೇರ್ಕೊಂಡು ನಮ್ಮ ದೇಶದ ಹೆಸರನ್ನು
ಇಂಟರ್ ನ್ಯಾಷನಲ್ ಲೆವೆಲ್ಲಲ್ಲಿ ಹಾಳು ಮಾಡ್ತಾ ಇದಾರೆ ಸ್ವಾಮೀ

ಇಂಗ್ಲೀಷೇ ಬೆಸ್ಟು ಸಾರ್, ಈ ಕನ್ನಡ ಪ್ರೇಮ ಎಲ್ಲಾ ಬರೀ ನಾಟಕ
ಯಾವನಿಗೆ ಬೇಕು ಸಾರ್ ಈ ಹಬ್ಬಾ ಹರಿದಿನಾ ಎಲ್ಲಾ
ನಿಜ ಹೇಳ್ತೀನಿ ಕೇಳಿ ಸ್ವಾಮೀ
ಇದೆಲ್ಲಾ ಪುರೋಹಿತಶಾಹಿ ತಂತ್ರ

ನೋಡಿ ಸಾರ್, ಎಂಥಾ ಸಜ್ಜನ ನಾನು ಅಲ್ವಾ, ಆದ್ರೂನೂ
ಹೋದ್ ಕಡೇ ಎಲ್ಲಾ ನನ್ನ ಕೆಟ್ಟ ಕೆಟ್ಟಾ ಮಾತಲ್ಲಿ ಬೈತಾರೆ
ಬೋಳಿಮಗನೆ, ಸೂಳೆ ಮಗನೆ ಅಂದ್ರೂ ಪರವಾಗಿಲ್ಲ್ಲಾ
ಬುದ್ದಿ ಜೀವಿ ಬಂದ್ರು ನೋಡು ಅಂತಾರೆ

ಏನ್ಮಾಡ್ಲಿ ನೀವೇ ಹೇಳಿ ಸಾರ್

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ವಿಕ್ರಂ ಸೋಮ, 04/20/2009 - 14:21

ಏನ್ಮಾಡಕ್ಕಾಗುತ್ತೆ ಬಿಡಿ.
ನಿಮ್ಮಂಥೋರಿಗೆ ಇದು ಕಾಲ ಅಲ್ಲ :P

adithya prasad ಮಂಗಳ, 07/27/2010 - 15:34

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.