Skip to main content

ಕಾಫಿ, ಸಿಗರೇಟು ಮತ್ತು ಸಾಕ್ಷಾತ್ಕಾರ

ಬರೆದಿದ್ದುApril 3, 2009
6ಅನಿಸಿಕೆಗಳು

ಕಾಫಿಯ ಮೊದಲ ಗುಟುಕು
ಮತ್ತು ಸಿಗರೇಟಿನ ಕೊನೆಯ ಜುರಿಕೆ
ಸ್ವರ್ಗ ಸಮಾನ ಎಂಬುವರು
ಅನುಭವಿಸಿದವರು

ಕಾಫಿಯ ಮೊದಲ ಗುಟುಕು
ಬಿಸಿಯಿರುವಾಗಲೇ ಚೆಂದ
ತಾರುಣ್ಯದ ಹಾಗೇ
ಆಗಲೇ ಸವಿದು ಬಿಡಬೇಕು

ಸಿಗರೇಟು ಕೂಡ ಅಷ್ಟೇ
ಅಂಟಿದ ಕೂಡಲೇ ಬಗ್ಗೆಂದು
ಎದೆಯೊಳಗೆಲ್ಲಾ ಹದವಾದ ಹೊಗೆ
ಮತ್ತೆ ಉಸಿರಿನೊಡನೆ ಹೊರಗೆ

ಕಪ್ಪು ಬರಿದಾಗಿ, ಸಿಗರೇಟು ಉರಿದು
ಹೋಗಿ, ಆಮೇಲೇನಿದೆ ಗೆಳೆಯಾ
ವೃದ್ದಾಪ್ಯ ಬರೀ ಕೆಮ್ಮು ನೋವು
ಆಮೇಲೆ ಎಲ್ಲಾ ಹೊಗೆ

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/07/2009 - 13:33

ಕವನದಲ್ಲೆಲ್ಲಾ ಬರೀ ಕಾಫಿ-ಸಿಗರೇಟಿನ ಘಾಟು...!

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/07/2009 - 14:39

ಹೀಗೆ ಕಾಫೀ + ಸಿಗರೇಟು ಕುಡ್ಡರೆ
ಮನೆ ಮುಂದೆ ಹೊಗೆ ಹಾಕ್ತರೆ... :)

ವಿ ಸೂ : ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ

ಚಂದ್ರ ಮಂಗಳ, 04/07/2009 - 16:01

ಸಿಗರೇಟು ಸೇಧು ವವರಿಗೆ ಸ್ವಲ್ಪ ಜ್ಞಾಪಿಸಿ ದಂತಯ್ತು
ಧನ್ಯವಾದಗಳು

venkatesha (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/07/2009 - 17:21

aha! what a good poem yar.. am a smoker before i used to smoke daily a pack cigarettes now i reduced it to 3 a day. but i never over drunk tea r cofee, only weekly r monthly,

but am smoking since 1990 and in process of being free from nicotene..

smoking is really very bad and dangerous..

ಗೆಂಡೆತಿಮ್ಮ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/09/2009 - 12:34

ಈ ಯಂಕ್ಟೆಸ ಬಾರಿ ಬುದ್ವಂತ. ಮಾಡಕ್ಕೇನೂ ಕೆಲ್ಸ ಇಲ್ಲ. ಅದಕ್ಕೇ ಇಲ್ಬಂದ ಮು.. ಕೆತ್ತ್ ತವ್ನೆ.

ಲೋ ಯಂಕ್ಟೆಸಾ , ಯೆಲ್ಲಿ ಯೇನ್ ಮಾಡ್ಬಕು ಅಂತ ಹೇಳ್ಕೊಡವ್ರ್ಯಾರೂ ಇಲ್ವೇನೋ ನಿಂಗೆ? ಇದೇನು ಆರ್ಕುಟ್ಟು ಅಂದ್ಕಂಡ್ಯಾ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.